Latest Updates
-
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ!
ಬ್ಲ್ಯಾಕ್ ಹೆಡ್ಸ್ ಹಾಗೂ ಮೊಡವೆಯ ಸಮಸ್ಯೆಗೆ ಆಲೂಗಡ್ಡೆ ಫೇಸ್ ಪ್ಯಾಕ್
ತರಕಾರಿಗಳಲ್ಲಿ ತನ್ನದೇ ಆಗಿರುವಂತಹ ವಿಶೇಷ ಸ್ಥಾನ ಪಡೆದುಕೊಂಡಿರುವಂತಹ ಬಟಾಟೆಯು ಸೌಂದರ್ಯವರ್ಧಕವಾಗಿಯು ಕೆಲಸ ಮಾಡುವುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಹೌದು, ಆಲೂಗಡ್ಡೆ ಯಲ್ಲಿರುವ ಹಲವಾರು ರೀತಿಯ ಪೋಷಕಾಂಶಗಳು, ಪ್ರೋಟೀನ್ ಗಳು ಮತ್ತು ವಿಟಮಿನ್ ಗಳಿಂದಾಗಿ ಇದು ಸೌಂದರ್ಯದ ಆರೈಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಮೊಡವೆ, ಬ್ಲ್ಯಾಕ್ ಹೆಡ್ ಸಹಿತ ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡುವುದು.

ಆಲೂಗಡ್ಡೆಯಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಸಿ ಹಾಗೂ ವಿಟಮಿನ್ ಬಿ ಇದೆ. ವಿಟಮಿನ್ ಸಿ ಯಿಂದ ಕಾಲಜನ್ ಬಲಗೊಳ್ಳುವುದು ಮತ್ತು ದೇಹವನ್ನು ಉಷ್ಣತೆ, ಒತ್ತಡ ಇತ್ಯಾದಿಗಳಿಂದ ಆಗಿರುವಂತಹ ಹಾನಿಯಿಂದ ತಪ್ಪಿಸುವುದು. ವಿಟಮಿನ್ ಬಿಯು ಇನ್ನೊಂದು ಕಡೆಯಿಂದ ಕೋಶಗಳ ಪರಿವರ್ತನೆಗೆ ನೆರವಾಗುವುದು. ಇದು ಆರೋಗ್ಯಕಾರಿ ಡಿಎನ್ ಎ ಉತ್ಪತ್ತಿ ಮತ್ತು ಮೊಡವೆ ಹಾಗೂ ಚರ್ಮದಲ್ಲಿನ ಇತರ ಕಲೆಗಳನ್ನು ನಿವಾರಣೆ ಮಾಡುವುದು. ಹಸಿ ಆಲೂಗಡ್ಡೆಯಿಂದ ಸೌಂದರ್ಯದ ಆರೈಕೆ ಮಾಡಿಕೊಳ್ಳುವುದು ಹೇಗೆ ಎಂದು ಈ ಲೇಖನದ ಮೂಲಕ ನಾವು ತಿಳಿದುಕೊಳ್ಳುವ.

ಮೊಡವೆ ಹಾಗೂ ಕಲೆಗಳ ನಿವಾರಣೆಗೆ ಆಲೂಗಡ್ಡೆ ರಸ
ಬೇಕಾಗುವ ಸಾಮಗ್ರಿಗಳು
•ಒಂದು ಹಸಿ ಆಲೂಗಡ್ಡೆ
•ಒಂದು ತೆಳುವಾದ ಬಟ್ಟೆ
ವಿಧಾನ
•ಹಸಿ ಆಲೂಗಡ್ಡೆ ತೆಗೆದುಕೊಂಡು ಅದನ್ನು ತೊಳೆದು, ಸಿಪ್ಪೆ ತೆಗೆಯಿರಿ.
•ಒಂದು ಪಿಂಗಾಣಿ ತೆಗೆದುಕೊಂಡು ಬಟಾಟೆಯನ್ನು ತುರಿಯಿರಿ.
•ತೆಳುವಾದ ಬಟ್ಟೆ ಮೇಲೆ ತುರಿದ ಆಲೂಗಡ್ಡೆ ಹಾಕಿ ಮತ್ತು ಇದರ ರಸ ತೆಗೆಯಿರಿ. ಕೈ ಬಳಸಿಕೊಂಡು ಬಟಾಟೆಯ ರಸ ತೆಗೆಯಬಹುದು.
•ಒಂದು ಪಿಂಗಾಣಿಯಲ್ಲಿ ರಸ ಹಾಕಿಕೊಳ್ಳಿ ಮತ್ತು ಇದನ್ನು 10-15 ನಿಮಿಷ ಕಾಲ ಫ್ರಿಡ್ಜ್ ನಲ್ಲಿಡಿ.
•ಒಂದು ಹತ್ತಿ ಉಂಡೆ ಬಳಸಿಕೊಳ್ಳಿ ಮತ್ತು ಆಲೂಗಡ್ಡೆ ರಸದಲ್ಲಿ ಅದನ್ನು ಅದ್ದಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮೊಡವೆ ಹಾಗೂ ಮೊಡವೆಯ ಕಲೆಗಳು ಇರುವ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಿ.
•ಈ ಪ್ರಕ್ರಿಯೆಯನ್ನು ನೀವು ಪುನರಾವರ್ತಿಸಿ. ಬಳಿಕ ತಣ್ಣಗಿನ ಅಥವಾ ಸಾಮಾಣ್ಯ ನೀರಿನಿಂದ ಮುಖ ತೊಳೆದು, ಶುದ್ಧವಾದ ನೀರಿನಿಂದ ಮುಖ ಒರೆಸಿಕೊಳ್ಳಿ.
ಇದನ್ನು ನೀವು ದಿನದಲ್ಲಿ ಎರಡು ಸಲ ಪ್ರತಿನಿತ್ಯವು ಮಾಡಿದರೆ ಅದರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗುವುದು. ಪ್ರತಿನಿತ್ಯ ನೀವು ಇದನ್ನು ಬಳಸಿಕೊಂಡರೆ ಆಗ ಎರಡನೇ ವಾರದಲ್ಲಿ ಕಲೆಗಳು ಮುಖದಿಂದ ಮಾಯವಾಗುವುದನ್ನು ನೋಡಬಹುದು. ಬಟಾಟೆ ರಸವು ಕಪ್ಪು ಕಲೆಗಳನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ನಿವಾರಿಸಲು ಆಲೂಗಡ್ಡೆ ಕ್ಯೂಬ್ ಗಳು
ಬೇಕಾಗುವ ಸಾಮಗ್ರಿಗಳು
• 1 ಹಸಿ ಬಟಾಟೆ
• 1 ಚಮಚ ಆ್ಯಪಲ್ ಸೀಡರ್ ವಿನೇಗರ್
• ಆಲೂಗಡ್ಡೆ ಕ್ಯೂಬ್ ಗಳನ್ನು ಫ್ರೀಡ್ಜ್ ಮಾಡಲು ಬೇಕಾಗುವಷ್ಟು ನೀರು
ತಯಾರಿಸುವ ವಿಧಾನ
•ಹಸಿ ಆಲೂಗಡ್ಡೆ ತೆಗೆದುಕೊಂಡು ಇದನ್ನು ತೊಳೆಯಿರಿ ಮತ್ತು ಸಿಪ್ಪೆ ತೆಗೆದು, ತುಂಡು ಮಾಡಿಕೊಳ್ಳಿ.
• ಈಗ ಆಲೂಗಡ್ಡೆ ತುಂಡುಗಳು ಹಾಗೂ ಆ್ಯಪಲ್ ಸೀಡರ್ ವಿನೇಗರ್ ನ್ನು ಬ್ಲೆಂಡರ್ ಗೆ ಹಾಕಿಕೊಂಡು ರುಬ್ಬಿಕೊಳ್ಳಿ.
•ದಪ್ಪಗಿನ ಪೇಸ್ಟ್ ಪಡೆದುಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಹಾಕಿ ಮತ್ತು ಇದನ್ನು ಐಸ್ ಟ್ರೇಗೆ ಹಾಕಿ.
•3-4 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ. ಇದು ಐಸ್ ಕ್ಯೂಬ್ ನಂತಾಗಲಿ.
•ಮುಖವನ್ನು ಸರಿಯಾಗಿ ತೊಳೆಯಿರಿ ಮತ್ತು ಟವೆಲ್ ನಿಂದ ಒರೆಸಿಕೊಳ್ಳಿ.
•ಈಗ ನೀವು ಆಲೂಗಡ್ಡೆ ಕ್ಯೂಬ್ ಅನ್ನು ಐಸ್ ಟ್ರೇಯಿಂದ ತೆಗೆದುಕೊಂಡು ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ಗಳು ಇರುವಂತಹ ಜಾಗಕ್ಕೆ ಉಜ್ಜಿಕೊಳ್ಳಿ.
•ಸಂಪೂರ್ಣ ಒಂದು ವಾರಕ್ಕೆ ನೀವು ಆಲೂಗಡ್ಡೆ ಕ್ಯೂಬ್ ನ್ನು ಸಂಗ್ರಹಿಸಿಟ್ಟುಕೊಳ್ಳಿ. ಈ ವಿಧಾನವನ್ನು ದಿನದಲ್ಲಿ ಎರಡು ಅಥವಾ ಮೂರು ಸಲ ಬಳಸಿಕೊಂಡರೆ ಆಗ ಪರಿಣಾಮಕಾರಿ ಫಲಿತಾಂಶ ಪಡೆಯಬಹುದು.
ಇದು ಚರ್ಮಕ್ಕೆ ಪುನರ್ಯೌವನವನ್ನು ನೀಡುವುದು. ಇಷ್ಟು ಮಾತ್ರವಲ್ಲದೆ 10-12 ದಿನಗಳಲ್ಲಿ ಬ್ಲ್ಯಾಕ್ ಹೆಡ್ ಮತ್ತು ವೈಡ್ ಹೆಡ್ ನಿವಾರಣೆ ಮಾಡುವುದು.

ಕಪ್ಪ ಕಲೆಗಳೂ ಮತ್ತು ಮೊಡವೆ ನಿವಾರಣೆಗೆ ಆಲೂಗಡ್ಡೆ ಸಿಪ್ಪೆ
ಬೇಕಾಗುವ ಸಾಮಗ್ರಿಗಳು
1 ಹಸಿ ಆಲೂಗಡ್ಡೆ
1 ಸಿಪ್ಪೆ ತೆಗೆಯುವ ಸಾಮಗ್ರಿ
ತಯಾರಿಸುವ ವಿಧಾನ
•ಹಸಿ ಆಲೂಗಡ್ಡೆ ತೆಗೆದುಕೊಂಡು ಅದನ್ನು ಸರಿಯಾಗಿ ತೊಳೆದುಕೊಂಡ ಬಳಿಕ, ಸರಿಯಾಗಿ ತೊಳೆದುಕೊಂಡು ಒಣಗಿಸಿ.
•ಸಿಪ್ಪೆ ತೆಗೆಯು ಸಾಮಗ್ರಿ ತೆಗೆದುಕೊಂಡು ಅದರಿಂದ ಆಲೂಗಡ್ಡೆಯ ಸಿಪ್ಪೆ ತೆಗೆಯಿರಿ ಮತ್ತು ಸಿಪ್ಪೆಯನ್ನು ಒಂದು ಪಿಂಗಾಣಿಗೆ ಹಾಕಿ.
•ಸಿಪ್ಪೆಯನ್ನು ಕೈಯಲ್ಲಿ ಹಿಡಿದುಕೊಂಡು ಅದನ್ನು ನಿಮ್ಮ ಮುಖದಕ್ಕೆ ಸರಿಯಾಗಿ ಉಜ್ಜಿಕೊಳ್ಳಿ. ಮೊಡವೆ ಹಾಗೂ ಕಪ್ಪು ಕಲೆಗಳು ಇರುವಂತಹ ಜಾಗಕ್ಕೆ ಇದನ್ನು ಸರಿಯಾಗಿ ಉಜ್ಜಿಕೊಳ್ಳಿ.
•15-20 ನಿಮಿಷ ಕಾಲ ಮುಖದ ಮೇಲೆ ಹಾಗೆ ಇರಲಿ ಮತ್ತು ಬಳಿಕ ಒಣಗಲಿ.
•ಇದು ಒಣಗಿದ ಬಳಿಕ ಮುಖವನ್ನು ತಣ್ಣಗಿನ ಅಥವಾ ಸಾಮಾನ್ಯ ನೀರಿನಿಂದ ತೊಳೆಯಿರಿ. ಇದರ ಬಳಿಕ ತಾಜಾ ಟವೆಲ್ ನಿಂದ ಒರೆಸಿಕೊಳ್ಳಿ.
ನೀವು ನಿಯಮಿತವಾಗಿ ಈ ಪ್ರಕ್ರಿಯೆಯನ್ನು ಪ್ರತಿನಿತ್ಯ ದಿನದಲ್ಲಿ 2-3 ಸಲ ಹೀಗೆ ಮಾಡಿ. ಒಂದೇ ವಾರದಲ್ಲಿ ಕಪ್ಪು ಕಲೆಗಳು ಮತ್ತು ಮೊಡವೆ ನಿವಾರಣೆಯಾಗುವುದನ್ನು ನೀವು ಕಾಣುವಿರಿ.



Click it and Unblock the Notifications
