Latest Updates
-
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ
ಕುತ್ತಿಗೆ ಮೇಲಿನ ಕಪ್ಪು ಕಲೆ ನಿವಾರಿಸಲು 'ಶಿಯಾ ಬಟರ್' ಬಳಸಿ
ಕುತ್ತಿಗೆಯ ಭಾಗದಲ್ಲಿ ಕಪ್ಪು ಕಲೆಗಳು ಕಂಡು ಬರುವುದು ಸಾಮಾನ್ಯವಾಗಿದೆ. ಈ ಕಪ್ಪು ಕಲೆಗಳಿಂದ ಶರೀರದ ಸೌಂದರ್ಯಕ್ಕೆ ಧಕ್ಕೆಯಾಗಿ ಒಂದು ರೀತಿಯ ಕಸಿವಿಸಿಯನ್ನು ಅನುಭವಿಸುವಂತಾಗುತ್ತದೆ. ಕುತ್ತಿಗೆಯ ಮೇಲಿನ ಕಪ್ಪು ಕಲೆಗಳು ಉಂಟಾಗಲು ಕಾರಣಗಳೇನು ಹಾಗೂ ಅವನ್ನು ಸುಲಭವಾಗಿ ನಿವಾರಿಸುವುದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
ಕುತ್ತಿಗೆಯ ಮೇಲೆ ಕಪ್ಪು ಕಲೆಗಳು ಒಂದೇ ದಿನದಲ್ಲಿ ಆಗಿ ಬಿಡುವುದಿಲ್ಲ. ಇವು ನಿಧಾನವಾಗಿ ಬೆಳೆಯುತ್ತ ಕಡು ಕಪ್ಪು ವರ್ಣ ತಾಳುತ್ತವೆ. ಆರಂಭದಲ್ಲಿ ಕುತ್ತಿಗೆಯ ಬಳಿ ತುಸು ಕಪ್ಪು ಕಾಣಿಸಿದಾಗ ಅದನ್ನು ಸಾಮಾನ್ಯವಾಗಿ ನಾವೆಲ್ಲ ನಿರ್ಲಕ್ಷಿಸುತ್ತೇವೆ. ಮುಖದ ಸೌಂದರ್ಯಕ್ಕೆ ಫೇಸ್ ವಾಶ್, ಟೋನರ್, ಮಾಯಿಶ್ಚರೈಸರ್, ಸ್ಕ್ರಬ್ಸ್, ಫೇಸ್ ಪ್ಯಾಕ್ ಹೀಗೆ ಇನ್ನೂ ಏನೇನೋ ಬಳಸುತ್ತೇವೆ. ಆದರೆ ಕುತ್ತಿಗೆಯ ಬಗ್ಗೆ ಮಾತ್ರ ನಾವು ಯಾವತ್ತೂ ಇಷ್ಟು ಲಕ್ಷ್ಯ ವಹಿಸುವುದೇ ಇಲ್ಲ. ಕುತ್ತಿಗೆಯ ಭಾಗದ ಚರ್ಮವನ್ನು ಸಹ ಲೋಶನ್, ಮಾಯಿಶ್ಚರೈಸರ್ ಹಚ್ಚಿ ನಿಯಮಿತವಾಗಿ ಮಸಾಜ್ ಮಾಡುವುದರಿಂದ ಮುಖ ಹಾಗೂ ಕುತ್ತಿಗೆಯ ಬಣ್ಣಗಳೆರಡೂ ಒಂದೇ ರೀತಿಯಾಗುವುದರಿಂದ ಸೌಂದರ್ಯ ವೃದ್ಧಿಯಾಗುತ್ತದೆ.

ಕುತ್ತಿಗೆಯ ಮೇಲಿನ ಕಪ್ಪು ಕಲೆಗಳನ್ನು ಮನೆಯಲ್ಲೇ ಕೆಲ ವಿಧಾನಗಳ ಮೂಲಕ ಕಡಿಮೆ ಮಾಡಿಕೊಳ್ಳ ಬಹುದಾಗಿದೆ. ಅದರಲ್ಲೂ ಶಿಯಾ ಬಟರ್ ಬಳಸುವ ವಿಧಾನ ಜನಪ್ರಿಯವಾಗಿದೆ. ಶಿಯಾ ಎಂಬುದು ಆಫ್ರಿಕಾದಲ್ಲಿ ಹೆಚ್ಚಾಗಿ ಬೆಳೆಯುವ ಒಂದು ಜಾತಿಯ ಗಿಡವಾಗಿದೆ. ಇದರ ಕಾಯಿಯಲ್ಲಿರುವ ಫ್ಯಾಟ್ ಅಂಶವನ್ನೇ ಶಿಯಾ ಬಟರ್ ಎಂದು ಕರೆಯಲಾಗುತ್ತದೆ.
ಕಪ್ಪು ಕಲೆ ನಿವಾರಣೆಗೆ ಶಿಯಾ ಬಟರ್ ಬಳಸುವ ವಿಧಾನ
ಈ ಕೆಳಗೆ ತಿಳಿಸಿದ ವಿಧಾನ ಬಳಸಿ ಶಿಯಾ ಬಟರ್‌ನ ಮಸಾಜ್ ಕ್ರೀಂ ತಯಾರಿಸಿ ಅದನ್ನು ಶೇಖರಿಸಿಟ್ಟು ಬೇಕೆಂದಾಗಲೆಲ್ಲ ಉಪಯೋಗಿಸಬಹುದು.
ಶಿಯಾ ಬಟರ್ ಕ್ರೀಂ ತಯಾರಿಸಲು ಬೇಕಾದ ಸಾಮಗ್ರಿಗಳು
*4 ಟೇಬಲ್ ಚಮಚೆ ಶಿಯಾ ಬಟರ್*1 ಟೇಬಲ್ ಚಮಚೆ ಮೊಸರು*
ಅರ್ಧ ಚಮಚೆ ಅರಿಶಿನ
*1 ಟೇಬಲ್ ಚಮಚೆ ನಿಂಬೆ ರಸ
*1 ಟೇಬಲ್ ಚಮಚೆ ವಿಟಮಿನ್ 'ಇ' ಎಣ್ಣೆ
ತಯಾರಿಸುವ ವಿಧಾನ
*ಚಿಕ್ಕ ಬಟ್ಟಲಿನಲ್ಲಿ ಶಿಯಾ ಬಟರ್ ಹಾಕಿಕೊಳ್ಳಿ.
*ಇದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ
*ನಂತರ ಅರಿಶಿನ ಪುಡಿ ಸೇರಿಸಿ ಮಿಕ್ಸ್ ಮಾಡಿ
*ಇದಕ್ಕೆ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
*ಕೊನೆಗೆ ವಿಟಮಿನ್ ಇ ಎಣ್ಣೆ ಸೇರಿಸಿ ಒಮ್ಮೆ ಬ್ಲೆಂಡ್ ಮಾಡಿಕೊಳ್ಳಿ
*ಹೀಗೆ ತಯಾರಾದ ಶಿಯಾ ಬಟರ್ ಮಸಾಜ್ ಕ್ರೀಂ ಅನ್ನು ಗಾಳಿಯಾಡದ ಬಾಟಲಿಗೆ ತುಂಬಿಸಿ ಶೇಖರಿಸಿ ಇಡಿ.
ಶಿಯಾ ಬಟರ್ ಕ್ರೀಂ ಬಳಸುವುದು
ತಯಾರಿಸಿದ ಶಿಯಾ ಬಟರ್ ಕ್ರೀಂ ಅನ್ನು ಕುತ್ತಿಗೆಯ ಭಾಗಕ್ಕೆ ಚೆನ್ನಾಗಿ ಹಚ್ಚಿಕೊಳ್ಳಬೇಕು. 15 ರಿಂದ 20 ನಿಮಿಷ ಹಾಗೆಯೇ ಇರಲು ಬಿಟ್ಟು ನೀರಿನಿಂದ ತೊಳೆದುಕೊಳ್ಳಬೇಕು. ಪ್ರತಿ ದಿನ ಈ ವಿಧಾನ ಬಳಸುವುದರಿಂದ ಬೇಗನೆ ಕುತ್ತಿಗೆಯ ಭಗದಲ್ಲಿನ ಕಪ್ಪು ಕಲೆಗಳು ಮಾಯವಾಗುತ್ತವೆ.
ಶಿಯಾ ಬಟರ್ ಹೇಗೆ ಕೆಲಸ ಮಾಡುತ್ತದೆ?
ಕಪ್ಪು ಕಲೆ ನಿವಾರಣೆಗೆ ಸಹಕಾರಿಯಾಗುವ ಅರಿಶಿನ, ವಿಟಮಿನ್ ಇ, ಮೊಸರು, ನಿಂಬೆ ಹಾಗೂ ಶಿಯಾ ಬಟರ್‌ಗಳನ್ನು ಒಳಗೊಂಡಿರುವ ಮಸಾಜ್ ಕ್ರೀಂ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಶಿಯಾ ಬಟರ್‌ನಲ್ಲಿರುವ ತೇವಾಂಶ ಗುಣ ಹಾಗೂ ಪೋಷಕಾಂಶಗಳಿಂದ ಚರ್ಮ ಮೃದು ಹಾಗೂ ಕಾಂತಿಯುತವಾಗುತ್ತದೆ. ಇದು ಚರ್ಮದ ನೈಸರ್ಗಿಕ ಬಣ್ಣವನ್ನು ಮರುಸ್ಥಾಪಿಸಿ ಕಪ್ಪು ಕಲೆಗಳು ಮಾಯವಾಗುವಂತೆ ಮಾಡುತ್ತದೆ.
ಇನ್ನು ಮೊಸರಿನಲ್ಲಿರುವ ಎಂಝೈಮ್ ಸಹ ಚರ್ಮದ ಮೇಲಿನ ಕಪ್ಪು ಕಲೆ ನಿವಾರಿಸಿ ನೈಜ ವರ್ಣ ಬರಲು ಸಹಕಾರಿಯಾಗಿದೆ. ಮೊಸರಿನಿಂದ ಚರ್ಮ ಕೋಮಲವಾಗುತ್ತದೆ. ಅರಿಶಿನ ಪುಡಿಯಿಂದ ಚರ್ಮಕ್ಕೆ ಕಾಂತಿ ಹಾಗೂ ಹೊಳಪು ಬರುತ್ತದೆ. ಅಲ್ಲದೆ ಕುತ್ತಿಗೆಯ ಭಾಗದಲ್ಲಿ ಕಾಣಿಸಿಕೊಳ್ಳುವ ಕಪ್ಪು ಕಲೆಗಳನ್ನು ನಿವಾರಿಸಲು ಅರಿಶಿನ ಅತ್ಯಂತ ಉತ್ತಮ ಔಷಧಿಯಾಗಿದೆ. ವಿಟಮಿನ್ ಇ ನಲ್ಲಿರುವ ಎಂಝೈಮಗಳಿಂದ ಚರ್ಮದ ಡಿ ಪಿಗ್ಮೆಂಟೇಶನ್ ಉಂಟಾಗಿ ಕಪ್ಪು ಕಲೆಗಳು ಕಡಿಮೆಯಾಗುತ್ತವೆ. ವಿಟಮಿನ್ ಇ ಸಹ ಚರ್ಮಕ್ಕೆ ಹೊಳಪು ನೀಡಿ ಚರ್ಮವನ್ನು ಮೃದುವಾಗಿಸುತ್ತದೆ.



Click it and Unblock the Notifications

