ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಆಲಿವ್ ಎಣ್ಣೆ ಬಳಕೆ ಮಾಡುವುದು ಹೇಗೆ ?

By Sushma Charhra

ಆಲಿವ್ ಎಣ್ಣೆಯಿಂದ ಹಲವಾರು ರೀತಿಯ ಆಶ್ಚರ್ಯಕರವಾದ ಚರ್ಮದ ಆರೋಗ್ಯದ ಲಾಭಗಳಿವೆ. 5000 ವರ್ಷಗಳ ಹಿಂದಿಗೆ ಅನಾದಿ ಕಾಲದ ಈಜಿಪ್ಟ್ ಮಂದಿ ಈ ಎಣ್ಣೆಯನ್ನು ಕಂಡು ಹಿಡಿದರು ಮತ್ತು ಇದರ ಪೋಷಕಾಂಶ ಭರಿತ ಗುಣಗಳಿಂದಾಗಿ ಇದರ ಬಳಕೆ ಮಾಡಲು ಪ್ರಾರಂಭಿಸಿದರು. ನಿಮಗೆಲ್ಲ ಕ್ಲಿಯೋಪಾತ್ರ ಗೊತ್ತಿರಬಹುದು. ಆಕೆ ಸೌಂದರ್ಯದ ಖನಿ ಎಂದೇ ಪ್ರಸಿದ್ಧಳಾಗಿರುವವರು. ಆಕೆ ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳಲು, ಚರ್ಮದ ಕಾಂತಿ ವೃದ್ಧಿಸಿಕೊಳ್ಳಲು ಈ ಎಣ್ಣೆಯನ್ನು ಬಳಕೆ ಮಾಡುತ್ತಿದ್ದಳು ಎಂದು ಹೇಳಲಾಗುತ್ತದೆ.

ಆಲಿವ್ ಎಣ್ಣೆಯು ಚರ್ಮದ ಕಂಡೀಷನ್ ನ್ನು ಅಭಿವೃದ್ಧಿ ಪಡಿಸುತ್ತದೆ ಮತ್ತು ಶುಷ್ಕ ತ್ವಚೆ, ನೆರಿಗೆಗಳು, ಚರ್ಮದಲ್ಲಿ ಉರಿಯೂತ ಮತ್ತು ಕೆಂಪಗಾಗುವುದು, ಬ್ಲಾಕ್ ಹೆಡ್ಸ್ ಗಳ ನಿವಾರಣೆ, ವೈಟ್ ಹೆಡ್ಸ್ ಗಳ ನಿವಾರಣೆಗೆ, ಸತ್ತ ಜೀವಕೋಶಗಳನ್ನು ತೆಗೆದು ಹಾರುವುದು, ಚರ್ಮವನ್ನು ಮೃದು ಗೊಳಿಸುವುದು, ಮತ್ತು ಚರ್ಮದ ರಂದ್ರಗಳನ್ನು ನಿವಾರಿಸುವುದು ಇತ್ಯಾದಿ ಹಲವಾರು ಆರೋಗ್ಯಕಾರಿ ಚರ್ಮಕ್ಕೆ ಅಗತ್ಯವಿರುವ ಲಾಭಗಳನ್ನು ಆಲಿವ್ ಆಯಿಲ್ ಮಾಡುತ್ತದೆ.

olive oil

ಇಷ್ಟೆಲ್ಲ ಇರುವಾಗ ಯಾಕೆ ನೀವು ಸುಮ್ಮನೆ ರಾಸಾಯನಿಕ ವಸ್ತುಗಳಿಗೆ , ನಿಮ್ಮ ಚರ್ಮದ ಕೆಮಿಕಲ್ ಪದಾರ್ಥಗಳಿಗಾಗಿ ಹಣ ವೆಚ್ಚ ಮಾಡುತ್ತೀರಿ. ಯಾವುದೇ ದುಷ್ಪರಿಣಾಮಗಳೂ ಇಲ್ಲದೆ ಚರ್ಮಕ್ಕೆ ಉತ್ತಮ ಲಾಭಗಳನ್ನು ಆಲಿವ್ ಆಯಿಲ್ ನೀಡುವಾಗ ಯಾಕೆ ರಾಸಾಯನಿಕ ಪದಾರ್ಥಗಳು ಬೇಕು ಅಲ್ಲವೇ? ನಿಮ್ಮ ಸೌಂದರ್ಯ ಚಿಕಿತ್ಸೆಗಳಿಗೆ ಆಲಿವ್ ಆಯಿಲ್ ಬಳಸುವುದರಿಂದಾಗಿ ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ನಾವಿಲ್ಲಿ ಚರ್ಮಕ್ಕೆ ಆಲಿವ್ ಆಯಿಲ್ ನಿಂದ ಹೇಗೆಲ್ಲಾ ಲಾಭಗಳನ್ನು ಪಡೆಯಬಹುದು ಮತ್ತು ಅದರ ಚಿಕಿತ್ಸಕಾ ಕ್ರಮಗಳು ಹೇಗೆ , ಯಾವ ರೀತಿ ಮಾಸ್ಕ್ ಗಳನ್ನು ಯಾವೆಲ್ಲ ಪದಾರ್ಥಗಳನ್ನು ಸೇರಿಸಿ ತಯಾರಿಸಿಕೊಂಡು ಬಳಸಬೇಕು ಎಂಬ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ನೀವು ಈ ಮ್ಯಾಜಿಕಲ್ ಗುಣಗಳನ್ನು ಕೇಳಿ ಆಶ್ಚರ್ಯ ಪಡಬಹುದು..ಹಾಗಾದ್ದರೆ ಲೇಖನದ ಮುಂದಿನ ಭಾಗವನ್ನು ತಪ್ಪದೇ ಓದಿ..

ಚರ್ಮದ ಆರೋಗ್ಯ ಹೆಚ್ಚಿಸಲು ಆಲಿವ್ ಎಣ್ಣೆಯ ಪ್ರಯೋಜನಗಳು
ಆಲಿವ್ ಎಣ್ಣೆಯು ಚರ್ಮದ ನೈಸರ್ಗಿಕ ಎಣ್ಣೆಗಳ ರಾಸಾಯನಿಕ ರಚನೆಗೆ ಸರಿಹೊಂದಿಸುತ್ತದೆ. ಇದು ಚರ್ಮಕ್ಕೆ ಹೊಳಪನ್ನು ಮಾತ್ರವಲ್ಲದೇ ಚರ್ಮದ ತೊಂದರೆಗಳು ಬಿಳಿ ಕೂದಲು, ಕಪ್ಪು ಕೂದಲು, ಮೊಡವೆ, ಕಲೆಗಳು ಇತ್ಯಾದಿಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಈಗ ನಾವು ಚರ್ಮದ ಆರೋಗ್ಯಕ್ಕೆ ಯಾವೆಲ್ಲ ಲಾಭಗನ್ನು ಆಲಿವ್ ಎಣ್ಣೆ ನೀಡುತ್ತದೆ ಎಂದು ತಿಳಿಸಲಿದ್ದೆವೆ

*ಆಂಟಿ ಆಕ್ಸಿಡೆಂಟ್ ಗಳಿಂದ ಸಂಪದ್ಭರಿತ

ಒಲೀಕ್ ಆಸಿಡ್ ಮತ್ತು ಸ್ಕ್ವಾಲೆನ್ ಗಳು ಆಲಿವ್ ಎಣ್ಣೆಯಲ್ಲಿ ಕಂಡುಬರುವ ಆಂಟಿ ಆಕ್ಸಿಡೆಂಟ್ ಗಳು. ಇವು ಚರ್ಮಕ್ಕೆ ವಯಸ್ಸಾಗುವ ಪ್ರಕ್ರಿಯೆಯ ವೇಗವನ್ನು ವರ್ಧಿಸುವ ಸ್ವತಂತ್ರ ರಾಡಿಕಲ್ ಗಳ ಹಾನಿಕಾರಕ ಪರಿಣಾಮದಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.ಆಂಟಿ ಆಕ್ಸಿಡೆಂಟ್ ಗಳಿಂದ ಸಂಪದ್ಭರಿತವಾಗಿರುವ ಆಲಿವ್ ಎಣ್ಣೆಯು ನಿಮ್ಮ ಚರ್ಮದ ಸಂಪೂರ್ಣ ರಕ್ಷಣೆಯ ಜವಾಬ್ಧಾರಿಯನ್ನು ಹೊತ್ತುಕೊಳ್ಳುತ್ತದೆ ಮತ್ತು ನಿಮ್ಮ ಚರ್ಮಕ್ಕೆ ಅಗತ್ಯ ಪೋಷಕಾಂಶಗಳನ್ನೂ ಒದಗಿಸುತ್ತದೆ.

*ಇದೊಂದು ಅದ್ಭುತ ಮಾಯ್ಚರೈಸರ್

ಆಲಿವ್ ಎಣ್ಣೆಯು ಒಂದು ಅಧ್ಬುತವಾದ ಮಾಯ್ಚರೈಸರ್ ಆಗಿದೆ ಯಾಕೆಂದರೆ ಇದರಲ್ಲಿ ಅಗತ್ಯ ಫ್ಯಾಟಿ ಆಸಿಡ್ ಗಳಿವೆ ಮತ್ತು ಚರ್ಮದ ಸ್ಥಿತಿಸ್ಥಾಪಕತ್ವ ಗುಣವನ್ನು ಕಾಪಾಡುವ ತಾಕತ್ತನ್ನು ಹೊಂದಿದೆ. ಆ ಮೂಲಕ ಇದು ಚರ್ಮದ ಮೃದುತ್ವ ಮತ್ತು ನಯವಾದ ಮತ್ತು ಹೊಳೆಯುವ ಗುಣಗಳನ್ನು ಹೆಚ್ಚಿಸುತ್ತದೆ. ಯಾಕೆಂದರೆ ಇದು ನೈಸರ್ಗಿಕ ಮಾಯ್ಚರೈಸರ್ ಆಗಿದ್ದು, ಚರ್ಮವನ್ನು ಹೈಡ್ರೇಟ್ ಆಗಿಡಲು ಮತ್ತು ಚಳಿಗಾಲದಲ್ಲಿ ಚರ್ಮವು ಡ್ರೈ ಆಗುವುದನ್ನು ತಡೆಯಲು ಸಹಕರಿಸುತ್ತದೆ.

*ಚರ್ಮದ ರಂದ್ರಗಳನ್ನು ತಡೆಯುತ್ತದೆ

ಎಣ್ಣೆ ತ್ವಚೆಯು ಆಕ್ನೆ ಮತ್ತು ಮೊಡಲೆಗಳಿಗೆ ಕಾರಣವಾಗಿರುತ್ತದೆ ಮತ್ತು ಬ್ಲಾಕ್ ಹೆಡ್ಸ್ ಗಳು ಕೂಡ ಚರ್ಮದಲ್ಲಿ ಬರುವಂತೆ ಮಾಡುತ್ತದೆ. ಇದನ್ನು ಪರಿಹರಿಸಿಕೊಳ್ಳಲು ಇರುವ ಅಧ್ಬುತ ಮಾರ್ಗವೆಂದರೆ ಆಲಿವ್ ಎಣ್ಣೆಯ ಬಳಕೆ. ಆಲಿವ್ ಎಣ್ಣೆಯು ಹೆಚ್ಚಿನ ಎಣ್ಣೆಯು ಚರ್ಮದಲ್ಲಿ ಇರದಂತೆ ಮಾಡುತ್ತದೆ ಮತ್ತು ಸತ್ತ ಜೀವಕೋಶಗಳು, ರಂದ್ರಗಳನ್ನು ನಿವಾರಿಸುತ್ತದೆ. ಆ ಮೂಲಕ ಚರ್ಮದ ಕಾಂತಿ ಹೆಚ್ಚಳವಾಗುತ್ತದೆ.

*ಚರ್ಮಕ್ಕೆ ಕಾಂತಿ ನೀಡಲು ಸಹಾಯ ಮಾಡುತ್ತೆ

ಶುಷ್ಕವಾದ, ಕಳಾಹೀನವಾದ, ಜೋತುಬಿದ್ದ ಮತ್ತು ನಿಮ್ಮ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುವ ಚರ್ಮವನ್ನು ಸರಿಪಡಿಸಲು ಆಲಿವ್ ಎಣ್ಣೆಯನ್ನು ಬಳಸುವುದು ಸೂಕ್ತ ಮಾರ್ಗವಾಗಿದೆ. ನೀವು ನಿಮ್ಮ ಚರ್ಮಕ್ಕೆ ಆಲಿವ್ ಆಯಿಲ್ ಬಳಕೆ ಮಾಡುವುದರಿಂದಾಗಿ ಹಲವು ಲಾಭಗಳನ್ನು ಪಡೆಯಬಹುದು. ಇದರಲ್ಲಿರುವ ಶ್ರೀಮಂತ ವಿಟಮಿನ್ ಗಳು, ಪೋಷಕಾಂಶಗಳು, ಫ್ಯಾಟಿ ಆಸಿಡ್ ಗಳು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ನೆರವಾಗುತ್ತದೆ.

*ಚರ್ಮದ ಜೀವಕೋಶಗಳ ಪುನರ್ಸೃಷ್ಟಿ

ವಿಟಮಿನ್ ಇ, ಪಾಲಿಫೀನಾಲ್ಸ್, ಮತ್ತು ಫ್ಲೇವನಾಯ್ಡ್ ಗಳು ಆಲಿವ್ ಎಣ್ಣೆಯಲ್ಲಿ ಇರುವುದರಿಂದಾಗಿ ಚರ್ಮದ ಜೀವಕೋಶಗಳ ಪುನರ್ ಸೃಷ್ಟಿಗೆ ಸಹಾಯ ಮಾಡುತ್ತದೆ. ಆ ಮೂಲಕ ಚರ್ಮದ ಹೊಳೆಯುವಿಕೆಗೆ ಮತ್ ಆರೋಗ್ಯಕ್ಕೆ ನೆರವು ನೀಡುತ್ತದೆ.

*ಚರ್ಮದ ಊರಿಯೂತ ಸಮಸ್ಯೆಗೆ ಪರಿಹಾರ

ಆಲಿವ್ ಎಣ್ಣೆಯು ಉರಿಯೂತ ಸಮಸ್ಯೆಯನ್ನು ನಿವಾರಿಸುವ ಗುಣವನ್ನು ಹೊಂದಿದೆ ಮತ್ತು ಆಂತರಿಕವಾಗಿ, ಬಾಹ್ಯವಾಗಿ ನಿಮ್ಮ ಚರ್ಮದ ಉರಿಯೂತದ ಸಮಸ್ಯೆಯನ್ನು ನಿವಾರಿಸುತ್ತದೆ. ವಾವ್ ! ಆಲಿವ್ ಎಣ್ಣೆಯ ಲಾಭಗಳು ಚರ್ಮಕ್ಕೆ ಇಷ್ಟೊಂದು ಇದೆ ಎಂದರೆ ನಿಜಕ್ಕೂ ಆಶ್ಚರ್ಯಕರ . ಹಾಗಾಗಿ ನೀವು ಯಾವಾಗ ಸೌಂದರ್ಯ ಚಿಕಿತ್ಸೆ ಪಡೆಯುತ್ತೀರೋ ಆಗ ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ ಬಳಕೆ ಮಾಡುವುದನ್ನು ಮರೆಯಬೇಡಿ..ಯಾಕೆ ಈ ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ ನ್ನೇ ಬಳಕೆ ಮಾಡಬೇಕು ಎಂದು ನೀವು ಪ್ರಶ್ನಿಸಬಹುದು..ಯಾಕೆಂದರೆ, ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ ನ್ನು ಎಣ್ಣೆಯಿಂದ ಮತ್ತೆ ರಿಫೈಂಡ್ ಮಾಡಲಾಗಿರುವುದಿಲ್ಲ ಮತ್ತು ಇದು ಪರಿಶುದ್ಧವಾಗಿರುತ್ತದೆ ಅಷ್ಟೇ ಅಲ್ಲ ಹಲವಾರು ನ್ಯೂಟ್ರೀಷಿಯಷ್ ಆಯಿವ್ ಕೂಡ ಇದಾಗಿರುತ್ತದೆ. ಆರೋಗ್ಯಕಾರಿಯಾದ, ಸುಂದರವಾದ ಮತ್ತು ಮೃದುವಾದ ತ್ವಚೆಯನ್ನು ಪಡೆಯಲು ಇದನ್ನು ಹಲವಾರು ರೀತಿಯಲ್ಲಿ ಬಳಕೆ ಮಾಡಬಹುದು ಹೇಗೆ ಎಂಬುದನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಓದಿ.

*ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ - ಶುಷ್ಕ ತ್ವಚೆ ಹೊಂದಿರುವವರಿಗೆ :

ಒಂದು ಅತ್ಯುದ್ಭುತವಾದ ಆಲಿವ್ ಆಯಿಲ್ ನ ಲಾಭವೆಂದರೆ ಶುಷ್ಕ ತ್ವಚೆ ಇರುವವರಿಗೆ ಇದರಿಂದ ಮುಕ್ತಿ ಸಿಗುತ್ತದೆ.

ಬೇಕಾಗುವ ವಸ್ತುಗಳು :
• 1 ಟೇಬಲ್ ಸ್ಪೂನ್ ಆಲಿವ್ ಎಣ್ಣೆ
• ಬಿಸಿ ನೀರು
• ಮುಖದ ಬಟ್ಟೆ

ಮಾಡುವ ವಿಧಾನ ::
. ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆಯನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಮುಖ್ಯವಾಗಿ ಹಣೆ, ಕೆನ್ನೆ ಮತ್ತು ಮೂಗಿನ ಭಾಗದಲ್ಲಿ ತಿಕ್ಕಬೇಕು.
. ಬಿಸಿ ನೀರಿನಲ್ಲಿ ಮುಖಕ್ಕೆ ಬಳಸುವ ಬಟ್ಟೆಯನ್ನು ಅದ್ದಿ ಮತ್ತು ಧಅನ್ನು ನಿಮ್ಮ ಮುಖಕ್ಕೆ ನಿಧಾನವಾಗಿ ಒತ್ತಿಕೊಳ್ಳಿ. ಅದು ರೂಮಿನ ಹವಾಮಾನಕ್ಕೆ ಬರುವವರೆಗೆ ಹಾಗೆ ಪ್ರೆಸ್ ಮಾಡುತ್ತಲೇ ಇರಿ.
. ಬಟ್ಟೆಯನ್ನು ತೆಗೆಯಿರಿ ಮತ್ತು ನೀರಿನಲ್ಲಿ ಮತ್ತೆ ತೊಳೆಯಿರಿ. ಆದರೆ ಮತ್ತೆ ಬಟ್ಟೆಯಿಂದ ಮುಖಕ್ಕೆ ಒತ್ತಬೇಡಿ. ಬದಲಾಗಿ ಎಣ್ಣೆಯ ಮೇಲ್ಪದರವನ್ನು ಉಜ್ಜಿ ಬಟ್ಟೆಯ ಸಹಾಯದಿಂದ ತೆಗೆಯಿರಿ.
. ಪೇಪರ್ ಟವೆಲ್ ಬಳಸಿ, ನಿಮ್ಮ ಮುಖನ್ನು ಒಣಗಿಸಿ
. ನೀವು ಈ ರೀತಿ ಪ್ರತಿ ದಿನ ಬೆಳಿಗ್ಗೆ ಮತ್ತು ರಾತ್ರಿ ಬಳಕೆ ಮಾಡಬಹುದು.

*ಆಲಿವ್ ಆಯಿಲ್ ಮತ್ತು ನಿಂಬೆಯ ರಸ - ತ್ವಚೆಯ ಬಣ್ಣ ಬಿಳಿಗೊಳಿಸಲು

ನಿಂಬೆಯ ರಸವು ಆಸ್ಟ್ರಿಏಜೆಂಟ್ ಗುಣಗಳನ್ನು ಹೊಂದಿದ್ದು, ಇದು ರಂದ್ರಗಳನ್ನು ತಡೆಯಲು ಮತ್ತು ತ್ವಚೆಯನ್ನು ಬಿಳಿಗೊಳಿಸಲು ನೆರವಾಗುತ್ತದೆ. ಇದು ಮುಖವು ಕೆಂಪಗಾಗುವುದು ಮತ್ತು ಊರಿಯೂತ ಸಮಸ್ಯೆಗೆ ಪರಿಹಾರ ನೀಡಬಲ್ಲದು, ಯಾಕೆಂದರೆ ಇದರಲ್ಲಿ ಆಂಟಿಸೆಪ್ಟಿಕ್ ಗುಣಗಳೂ ಕೂಡ ಇರುತ್ತದೆ.

ಬೇಕಾಗುವ ವಸ್ತುಗಳು :
• 1 ಟೇಬಲ್ ಸ್ಪೂನ್ ಆಲಿವ್ ಆಯಿಲ್
• 1 ಟೇಬಲ್ ಸ್ಪೂನ್ ನಿಂಬೆಯ ರಸ

ಮಾಡುವ ವಿಧಾನ ::
• ಒಂದು ಬೌಲ್ ನಲ್ಲಿ, ಒಂದು ಟೇಬಲ್ ಸ್ಪೂನ್ ಆಲಿವ್ ಎಣ್ಣೆ ಮತ್ತು ಒಂದು ಟೇಬಲ್ ಸ್ಪೂನ್ ನಿಂಬೆಯ ರಸವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ,
• ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿ ಮತ್ತು ವೃತ್ತಾಕಾರದಲ್ಲಿ 1 ರಿಂದ 2 ನಿಮಿಷ ಮಸಾಜ್ ಮಾಡಿ.
• ಅರ್ಧ ಗಂಟೆ ನಿಮ್ಮ ಮುಖದಲ್ಲಿ ಇದು ಹಾಗೆಯೇ ಇರಲಿ ನಂತರ ಬಿಸಿ ನೀರಿನಿಂದ ಮುಖವನ್ನು ತೊಳೆಯಿರಿ.
• ವಾರಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡಬಹುದು.

*ಆಲಿವ್ ಆಯಿಲ್ ಮತ್ತು ಮೊಟ್ಟೆ , ಜೇನುತುಪ್ಪ - ಹೊಳೆಯುವ ತ್ವಚೆಗಾಗಿ

ಜೇನುತುಪ್ಪವು ಸ್ವಾಭಾವಿಕ ಹ್ಯೂಮಕ್ಟಂಟ್ ಆಗಿದ್ದು ಚರ್ಮವನ್ನು ಹೈಡ್ರೇಟೆಡ್ ಮತ್ತು ಆರ್ದ್ರತೆಯಿಂದ ಇಡಲು ಸಹಾಯ ಮಾಡುತ್ತದೆ.ಈ ಫೇಸ್ ಮಾಸ್ಕ್ ನಿಮ್ಮ ಚರ್ಮದ ಸ್ಥಿತಿಸ್ಥಾಪಕತ್ವ ಗುಣವನ್ನು ಕಾಪಾಡಲು ಮತ್ತು ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಚರ್ಮವು ಪುನಃ ಹೊಸದಾಗಿ ಸೃಷ್ಟಿಯಾಗಲು ನೆರವಾಗುತ್ತದೆ.
ಮೊಟ್ಟೆಯ ಹಳದಿ ಭಾಗವು ಹಲವು ಪೋಷಕಾಂಶಗಳಿಂದ ಕೂಡಿದ್ದು, ಇದು ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ಚರ್ಮವನ್ನು ಮತ್ತೆ ಬೆಳೆಯಲು ನೆರವು ನೀಡುತ್ತದೆ ಅಷ್ಟೇ ಅಲ್ಲ, ಹೊಳೆಯುವ ತ್ವಚೆಯನ್ನು ನೀಡುವ ಸಾಮರ್ಥ್ಯ ಇದಕ್ಕಿದೆ.

ಬೇಕಾಗುವ ವಸ್ತುಗಳು :
• 1 ಟೇಬಲ್ ಸ್ಪೂನ್ ಆಲಿವ್ ಆಯಿಲ್
• 1 ಟೀ ಸ್ಪೂನ್ ಜೇನುತುಪ್ಪ
• 1 ಮೊಟ್ಟೆಯ ಹಳದಿ ಭಾಗ

ಮಾಡುವ ವಿಧಾನ ::
• ಒಂದು ಬೌಲ್ ನಲ್ಲಿ ಒಂದು ಟೇಬಲ್ ಸ್ಪೂನ್ ಆಲಿವ್ ಆಯಿವ್ 1 ಟೀ ಸ್ಪೂನ್ ಜೇನುತುಪ್ಪ ಮತ್ತು ಒಂದು ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ ಮತ್ತು ಚೆನ್ನಾಗಿ ಕಲಸಿ
• ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿ 15-20 ನಿಮಿಷ ಹಾಗೆಯೇ ಬಿಡಿ.
• ಈಗ ಇದನ್ನು ಬಿಸಿಯಾದ ನೀರಿನಿಂದ ತೊಳೆಯಿರಿ
• ವಾರಕ್ಕೆ ಎರಡು ಬಾರಿ ಈ ಮಾಸ್ಕ್ ನ್ನು ಬಳಸಿ

ಆಲಿವ್ ಎಣ್ಣೆ ಮತ್ತು ಹರಳೆಣ್ಣೆ - ಮೃದು ತ್ವಚೆಗಾಗಿ

ಹರಳೆಣ್ಣೆಯು ಯಾವಾಗ ಆಲಿವ್ ಎಣ್ಣೆಯೊಂದಿಗೆ ಸೇರಿಸಲ್ಪಡುತ್ತೋ ಆಗ ನಿಮಗೆ ನಿಮ್ಮ ಚರ್ಮದ ನೈಸರ್ಗಿಕ ಎಣ್ಣೆಯನ್ನು ಕಾಯ್ದುಕೊಳ್ಳಲು ನೆರವು ನೀಡುತ್ತದೆ..ಇದು ಚರ್ಮದ ಜೀವಕೋಶಗಳನ್ನು ಪಳಗಿಸುತ್ತದೆ ಮತ್ತು ಆ ಮೂಲಕ ಚರ್ಮವನ್ನು ಹೊಳೆಯುವಂತೆ ಮಾಡಿ ಮೃದುವಾಗಿಸಿ ಕಾಂತಿಯುತ ತ್ವಚೆ ನಿಮ್ಮದಾಗುವಂತೆ ಮಾಡುತ್ತದೆ.

ಬೇಕಾಗುವ ವಸ್ತುಗಳು :
• 1 ಟೀ ಸ್ಪೂನ್ ಆಲಿವ್ ಆಯಿಲ್
• 1 ಟೀ ಸ್ಪೂನ್ ಹರಳೆಣ್ಣೆ
• ಮುಖಕ್ಕೆ ಬಟ್ಟೆ
• ಬಿಸಿ ನೀರು

ಮಾಡುವ ವಿಧಾನ ::
• ಒಂದು ಬೌಲ್ ನಲ್ಲಿ, ಎಲ್ಲಾ ಪದಾರ್ಥಗಳನ್ನು ಸೇರಿಸಿ ಮತ್ತುಮಸಾಜ್ ಮಾಡಿ. ವೃತ್ತಾಕಾರದಲ್ಲಿ ಎರಡರಿಂದ ಮೂರು ನಿಮಿಷ ಹಾಗೆಯೇ ಮಾಡಿ.
• 10 ನಿಮಿಷ ನಿಮ್ಮ ಚರ್ಮದಲ್ಲಿ ಎಣ್ಣೆಯಂಶ ಇರುವಂತೆ ನೋಡಿಕೊಳ್ಳಿ. ನಂತರ ಬಿಸಿಯಾದ ಬಟ್ಟೆಯಿಂದ ಮುಖವನ್ನು ಉಜ್ಜಿ ತೊಳೆಯರಿ.
• ಇದನ್ನು ವಾರಕ್ಕೆ ಮೂರರಿಂದ ನಾಲ್ಕು ಬಾರಿ ಮಾಡಿ ಮತ್ತು ಸಾಫ್ಟ್ ಆದ, ಹೊಳೆಯುವ ತ್ವಚೆಯನ್ನು ಪಡೆದುಕೊಳ್ಳಿ.
ಆಲಿವ್ ಆಯಿಲ್ ನಿಂದ ಸೌಂದರ್ಯ ಚಿಕಿತ್ಸೆ ಪಡೆಯುವುದರಿಂದಾಗಿ ಉತ್ತಮ ತ್ವಚೆಯನ್ನು ಪಡೆಯಬಹುದು ಮತ್ತು ಪ್ರತಿಯೊಬ್ಬರು ಇದನ್ನು ಟ್ರೈ ಮಾಡಿ ನೋಡಬಹುದು. ಹಾಗಾಗಿ ಮಹಿಳೆಯರೇ ಕೇವಲ ಆಲಿವ್ ಆಯಿಲ್ ಬಳಸಿ ಅಡುಗೆ ಮಾಡುವುದು ಮಾತ್ರವಲ್ಲ, ಆಲಿವ್ ಆಯಿಲ್ ನಿಂದ ನಿಮ್ಮ ಚರ್ಮವನ್ನೂ ರಕ್ಷಿಸಿಕೊಳ್ಳಿ....

English summary

how-to-use-olive-oil-for-skin-care

Olive oil has amazing health and skin benefits. This nutritious oil was discovered by the ancient Egyptians over 5000 years ago. Did the Egyptians use it back then? Well, Cleopatra did, and olive oil was one of the reasons for her beautiful and glowing skin. Olive oil helps to improve the skin conditions, like it helps to treat dry skin, reduces wrinkles, soothes redness and inflammation, removes blackheads and whiteheads, exfoliates the dead skin cells, and makes the skin soft, smooth and supple.
X
Desktop Bottom Promotion