Latest Updates
-
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!
ಅಡುಗೆಮನೆಯ 'ಅಡುಗೆ ಸೋಡಾ' ಮೊಡವೆಗೆ ಪರ್ಫೆಕ್ಟ್ ಮನೆಮದ್ದು
ಹೆಣ್ಣಿಗೆ ಸೌಂದರ್ಯವೆಂಬುದು ಕಲಶಪ್ರಾಯವಿದ್ದಂತೆ. ಹೆಣ್ಣು ಸೌಂದರ್ಯಕ್ಕೆ ಇನ್ನೊಂದು ಹೆಸರು ಎಂದು ಹೇಳುತ್ತಾರೆ. ಮುಖದಲ್ಲಿ ಸಣ್ಣ ಕಲೆಯಿದ್ದರೂ ಅದು ಹೆಣ್ಣಿನ ಸೌಂದರ್ಯಕ್ಕೆ ಧಕ್ಕೆಯುಂಟುಮಾಡಿದಂತೆ. ಹಿಂದಿನಿಂದಲೂ ಶಾಸ್ತ್ರ ಪುರಾಣಗಳಲ್ಲಿ ಸೌಂದರ್ಯದ ವಿಷಯ ಬಂದರೆ ಮೊದಲು ಬರುವ ಮಾತೇ ಹೆಣ್ಣಿನ ಸೌಂದರ್ಯವಾಗಿದೆ. ಆದರೆ ಇಂದಿನ ಕಲುಷಿತ ವಾತಾವರಣ ಮತ್ತು ನೈಸರ್ಗಿಕ ಹಾನಿಗಳಿಂದ ಹೆಣ್ಣಿನ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತಿದೆ.
ಹಿಂದೆ ಇದ್ದ ನೈಸರ್ಗಿಕ ವಸ್ತುಗಳನ್ನು ಇಂದು ಸೌಂದರ್ಯದ ವಿಷಯದಲ್ಲಿ ಬಳಸಲಾಗುತ್ತಿಲ್ಲ. ಮೊದಲೆಲ್ಲಾ ಚಿಕ್ಕ ಪುಟ್ಟ ಅಂತೆಯೇ ದೊಡ್ಡ ದೊಡ್ಡ ಸೌಂದರ್ಯ ಸಮಸ್ಯೆಗಳಿಗೂ ಮನೆಮದ್ದುಗಳನ್ನೇ ಬಳಸುತ್ತಿದ್ದರು. ಆದರೆ ಇಂದು ಅಂತವ ವಸ್ತುಗಳೂ ದೊರಕುತ್ತಿಲ್ಲ ಮತ್ತು ಅದನ್ನೆಲ್ಲಾ ಮಾಡುವುದಕ್ಕೂ ಇಂದು ಸಮಯ ಇಲ್ಲದಂತಾಗಿದೆ. ಅದಾಗ್ಯೂ ನಿಮ್ಮ ಮುಖದಲ್ಲಿನ ಮೊಡವೆ, ಕಲೆಗಳನ್ನು ನೀವು ನಿವಾರಿಸಬೇಕು ಎಂದಾದಲ್ಲಿ ಮನೆಮದ್ದುಗಳನ್ನೇ ನೀವು ಅನುಸರಿಸಬೇಕು.

ಇಂದಿನ ಲೇಖನದಲ್ಲಿ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ಸೋಡಾದಂತಹ ಮನೆಮದ್ದನ್ನು ಸರಳವಾಗಿ ಬಳಸಿಕೊಂಡು ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಅಡುಗೆ ಮತ್ತು ಸ್ವಚ್ಛತೆಗಾಗಿ ನಾವು ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾವನ್ನು ಬಳಸುತ್ತೇವೆ ಇದರ ಜೊತೆಗೆ ನಿಮ್ಮ ಸೌಂದರ್ಯ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಕೂಡ ಅಡುಗೆ ಸೋಡಾವನ್ನು ಬಳಸಬಹುದಾಗಿದೆ.
ಆ್ಯಂಟಿ ಇನ್‌ಫ್ಲಾಮೇಟರಿ ಅಂಶಗಳನ್ನು ಬೇಕಿಂಗ್ ಸೋಡಾ ಒಳಗೊಂಡಿದ್ದು ಮೊಡವೆ, ಕಲೆಗಳು, ದದ್ದುಗಳನ್ನು ಇದು ಹೋಗಲಾಡಿಸುತ್ತದೆ. ನೈಸರ್ಗಿಕ ಎಕ್ಸ್‌ಫೋಲಿಯೇಂಟ್‌ನಂತೆ ಇದು ಕೆಲಸ ಮಾಡುತ್ತದೆ ಮತ್ತು ಮೃತಕೋಶಗಳನ್ನು ನಿವಾರಿಸುತ್ತದೆ. ಹಾಗೂ ಆರೋಗ್ಯಪೂರ್ಣ ತ್ವಚೆಯನ್ನು ನಿಮಗೆ ದಯಪಾಲಿಸುತ್ತದೆ. ತ್ವಚೆಯಿಂದ ಹೆಚ್ಚುವರಿ ಎಣ್ಣೆಯಿಂದ ಇದು ಹೀರಿಕೊಳ್ಳುತ್ತದೆ ಮತ್ತು ಮೊಡವೆ ಹಾಗೂ ಗಾಯಗಳ ಗುರುತುಗಳನ್ನು ನಿವಾರಿಸುತ್ತದೆ. ಬೇಕಿಂಗ್ ಸೋಡಾ ಬಳಸಿಕೊಂಡು ಮೊಡವೆ ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ ಮತ್ತು ಲಿಂಬೆ ರಸ
ತ್ವಚೆಯನ್ನು ಸಂಕುಚಿಸಲು ಲಿಂಬೆ ಸಹಾಯ ಮಾಡುತ್ತದೆ ಹಾಗೂ ಜಿಡ್ಡಿನ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಮತ್ತು ತ್ವಚೆಯ ಇನ್‌ಫ್ಲಾಮೇಶನ್‌ಗೆ ಕಾರಣವಾಗಿರುವ ಅಂಶಗಳನ್ನು ದೂರ ಮಾಡುತ್ತದೆ.
ಸಾಮಾಗ್ರಿಗಳು
* ಬೇಕಿಂಗ್ ಸೋಡಾ
* 1 ಚಮಚ ಲಿಂಬೆ ರಸ
* 2 ಚಮಚ ನೀರು
ಮಾಡುವುದು ಹೇಗೆ
1. ಬೇಕಿಂಗ್ ಸೋಡಾ ಮತ್ತು ಲಿಂಬೆ ರಸವನ್ನು ಮಿಶ್ರ ಮಾಡಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ.
2. ನಿಮ್ಮ ಸ್ವಚ್ಛ ಮುಖಕ್ಕೆ ಈ ಲೇಯರ್ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ.
3. ನಂತರ ಅದನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.
4. ಕೊನೆಗೆ, ನಿಮ್ಮ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ ಮತ್ತು ಮಸಾಜ್ ಮಾಡಿ.
5. ವಾರದಲ್ಲಿ 2-3 ಬಾರಿ ಇದನ್ನು ಪುನರಾವರ್ತನೆ ಮಾಡಿ.

ಬೇಕಿಂಗ್ ಸೋಡಾ ಮತ್ತು ಜೇನು
ಜೇನು ನೈಸರ್ಗಿಕ ಮಾಯಿಶ್ಚರೈಸರ್ ಎಂದೆನಿಸಿದ್ದು ಇದು ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ. ಜೇನಿನಲ್ಲಿರುವ ಬ್ಲೀಚಿಂಗ್ ಅಂಶಗಳು ಮೊಡವೆಯಿಂದ ಉಂಟಾದ ಕಲೆಯನ್ನು ನಿವಾರಿಸುತ್ತದೆ.
ಸಾಮಾಗ್ರಿಗಳು
* 1 ಚಮಚ ಬೇಕಿಂಗ್ ಸೋಡಾ
* 1 ಚಮಚ ಜೇನು
* ಬಟ್ಟೆ
ಮಾಡುವುದು ಹೇಗೆ
* ಜೇನು ಮತ್ತು ಬೇಕಿಂಗ್ ಸೋಡಾವನ್ನು ಪೇಸ್ಟ್‌ನಂತೆ ಮಾಡಿ.
* ನಿಮ್ಮ ಮುಖವನ್ನು ತೊಳೆದುಕೊಳ್ಳಿ ಮತ್ತು ಕಲೆಯಿರುವ ಜಾಗದಲ್ಲಿ ಇದನ್ನು ಹಚ್ಚಿ
* ಬಟ್ಟೆಯನ್ನು ತೆಗೆದುಕೊಂಡು ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಅದ್ದಿ.
* ಪೇಸ್ಟ್ ಹಚ್ಚಿರುವಲ್ಲಿ ಈ ಬಟ್ಟೆಯನ್ನು ಇಡಿ.
* 5 ನಿಮಿಷ ಹಾಗೆಯೇ ಬಿಡಿ ಮತ್ತು ಪೇಸ್ಟ್ ತೆಗೆಯಲು ಈ ಬಟ್ಟೆಯನ್ನು ಬಳಸಿ.
* ಕೊನೆಗೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

ಬೇಕಿಂಗ್ ಸೋಡಾ ಮತ್ತು ಆ್ಯಪಲ್ ಸೀಡರ್ ವಿನೇಗರ್
ಆ್ಯಪಲ್ ಸೀಡರ್ ವಿನೇಗರ್ ತ್ವಚೆಯ ಪಿಎಚ್ ಬ್ಯಾಲೆನ್ಸ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಇದು ತ್ವಚೆಯನ್ನು ಬಿಗಿಗೊಳಿಸುತ್ತದೆ.
ಸಾಮಾಗ್ರಿಗಳು
* 1 ಚಮಚ ಆ್ಯಪಲ್ ಸೀಡರ್ ವಿನೇಗರ್
* 1 ಚಮಚ ಬೇಕಿಂಗ್ ಸೋಡಾ
ಮಾಡುವುದು ಹೇಗೆ
*ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಮಿಶ್ರ ಮಾಡಿಕೊಂಡು ಪೇಸ್ಟ್ ತಯಾರಿಸಿ
*ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ
*ನೀರಿನಿಂದ ಮುಖ ತೊಳೆದುಕೊಳ್ಳಿ
*ಆ್ಯಪಲ್ ಸೀಡರ್ ವಿನೇರ್ ಮತ್ತು ನೀರನ್ನು ಮಿಶ್ರ ಮಾಡಿ ಹಾಗೂ ಮರುದಿನ ಬೆಳಗ್ಗೆ ಇದನ್ನು ಮುಖಕ್ಕೆ ಹಚ್ಚಿ.
*ನಿಮ್ಮ ಮುಖಕ್ಕೆ ಬಟ್ಟೆಯಿಂದ ಮಸಾಜ್ ನೀಡಿ
*ಬಟ್ಟೆಯು ಮುಖದಲ್ಲಿ 15-20 ನಿಮಿಷ ಹಾಗೆಯೇ ಇರಲಿ. ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ.

ಬೇಕಿಂಗ್ ಸೋಡಾ ಮತ್ತು ಆಲೀವ್ ಆಯಿಲ್
ಯಾವುದೇ ರೀತಿಯ ಅಲರ್ಜಿಯಿಂದ ತ್ವಚೆಯನ್ನು ಸಂರಕ್ಷಿಸಲು ಆಲೀವ್ ಆಯಿಲ್ ಸಹಕಾರಿ ಇದು ತ್ವಚೆಯನ್ನು ಮೃದುವಾಗಿಸುತ್ತದೆ.
ಸಾಮಾಗ್ರಿಗಳು
* 1 ಚಮಚ ಬೇಕಿಂಗ್ ಸೋಡಾ
* 1 ಚಮಚ ಆಲೀವ್ ಆಯಿಲ್
ಮಾಡುವುದು ಹೇಗೆ
*ಬೇಕಿಂಗ್ ಸೋಡಾ ಮತ್ತು ಆಲೀವ್ ಆಯಿಲ್ ಅನ್ನು ಮಿಶ್ರ ಮಾಡಿ ಪೇಸ್ಟ್ ಮಾಡಿಕೊಳ್ಳಿ
*ಕಲೆ ಇರುವ ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ ಮತ್ತು ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ
*15 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ
* ಪ್ರತೀ ದಿನ ನೀವು ಇದನ್ನು ಪುನರಾವರ್ತಿಸಬಹುದು.

ಬೇಕಿಂಗ್ ಸೋಡಾ ಮತ್ತು ಓಟ್‌ಮೀಲ್
ಓಟ್‌ಮೀಲ್ ತ್ವಚೆಯಿಂದ ಉತ್ಪಾದನೆಯಾಗುವ ಹೆಚ್ಚುವರಿ ಜಿಡ್ಡನ್ನು ಇದು ನಿಯಂತ್ರಿಸುತ್ತದೆ ಮತ್ತು ತ್ವಚೆಯನ್ನು ಮೊಡವೆ ಮುಕ್ತಗೊಳಿಸುತ್ತದೆ.
ಸಾಮಾಗ್ರಿಗಳು
*1 ಚಮಚ ಓಟ್‌ಮೀಲ್
* 1 ಚಮಚ ಬೇಕಿಂಗ್ ಸೋಡಾ
ತಯಾರಿಸುವ ವಿಧಾನ
* ಓಟ್‌ಮೀಲ್, ಬೇಕಿಂಗ್ ಸೋಡಾ ಮತ್ತು ನೀರನ್ನು ಜೊತೆಯಾಗಿ ಮಿಶ್ರ ಮಾಡಿಕೊಳ್ಳಿ.
* ಮೊಡವೆ, ಕಲೆ ಇರುವ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ.
* 15 ನಿಮಿಷಗಳ ನಂತರ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ
* ಕೊನೆಗೆ ನಿಮ್ಮ ಮುಖವನ್ನು ಮಾಯಿಶ್ಚರೈಸರ್‌ನಿಂದ ಮಸಾಜ್ ಮಾಡಿಕೊಳ್ಳಿ.



Click it and Unblock the Notifications