Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಯವಾದ ಸುಂದರ ತ್ವಚೆಗೆ ವಾಲ್ ನಟ್ ಸ್ಕ್ರಬ್ ಮಾಡುವುದು ಹೇಗೆ?
ಮನುಷ್ಯನ ದೇಹದ ಚರ್ಮದಲ್ಲಿ ಹಲವಾರು ವಿಧಗಳಿವೆ ಎಂದು ತಿಳಿದಿರುವ ವಿಚಾರ. ಇದರಲ್ಲಿ ಎಣ್ಣೆಯಂಶವಿರುವ ಜಿಡ್ಡಿನ ಚರ್ಮ, ಸೂಕ್ಷ್ಮ ಚರ್ಮ ಮತ್ತು ಒಣ ಚರ್ಮವು ಪ್ರಮುಖವಾಗಿರುವುದು. ಇದರಲ್ಲಿ ಒಣಚರ್ಮದ ಸಮಸ್ಯೆಯು ತುಂಬಾ ಕಠಿಣವಾಗಿರುವುದು. ಯಾಕೆಂದರೆ ಒಣ ಚರ್ಮವಿರುವಂತವರಲ್ಲಿ ಸತ್ತ ಚರ್ಮದ ಕೋಶಗಳು ಎದ್ದು ಬರುವುದು. ಇದು ತುಂಬಾ ಕಿರಿಕಿರಿ ಉಂಟು ಮಾಡುವುದು. ಆದರೆ ಕೆಲವೊಂದು ಮನೆಮದ್ದುಗಳು ಎಲ್ಲದಕ್ಕೂ ಪರಿಹಾರ ನೀಡುವುದು.
ನಾವು ಸಾಮಾನ್ಯವಾಗಿ ತಿನ್ನುವಂತಹ ವಾಲ್ ನಟ್(ಆಕ್ರೊಡ)ನ್ನು ಬಳಸಿಕೊಂಡು ಒಣಚರ್ಮದ ನಿವಾರಣೆ ಮಾಡಿ, ನಯ ಹಾಗೂ ಸುಂದರ ಚರ್ಮವನ್ನು ಪಡೆಯಬಹುದು. ವಾಲ್ ನಟ್ ನ್ನು ಚರ್ಮದ ಆರೈಕೆಯಲ್ಲಿ ಬಳಸಿಕೊಳ್ಳಬಹುದು. ವಾಲ್ ನಟ್ ನಲ್ಲಿ ವಿಟಮಿನ್ ಗಳು, ಪೋಷಕಾಂಶಗಳು, ಪ್ರೋಟೀನ್ ಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇದು ಕೂದಲು ಹಾಗೂ ತ್ವಚೆಗೆ ತುಂಬಾ ಪರಿಣಾಮಕಾರಿಯಾಗಿದೆ. ವಾಲ್ ನಟ್ ತುಂಬಾ ಸಣ್ಣದಾಗಿದ್ದರೂ ಇದರಲ್ಲಿ ಒಳ್ಳೆಯ ಗುಣಗಳು ತುಂಬಿ ಹೋಗಿವೆ. ಇದು ಚರ್ಮವನ್ನು ಪುನರ್ಯೌವನಗೊಳಿಸುವುದು ಮತ್ತು ಪೋಷಣೆ ನೀಡುವುದು.

ನಯ ಹಾಗೂ ಸುಂದರ ಚರ್ಮವನ್ನು ಪಡೆಯಲು ನೀವು ಮನೆಯಲ್ಲೇ ವಾಲ್ ನಟ್ ನ ಸ್ಕ್ರಬ್ ಬಳಸಿ ಕೊಳ್ಳಬಹುದು. ವಾಲ್ ನಟ್ ಅಥವಾ ವಾಲ್ ನಟ್ ನ ತೈಲದ ಫೇಸ್ ಪ್ಯಾಕ್ ಕೂಡ ಮಾಡಬಹುದು. ಎಂದು ತಿಳಿಯಿರಿ.
ಚರ್ಮಕ್ಕೆ ವಾಲ್ ನಟ್ ನ ಲಾಭಗಳು
ವಿಟಮಿನ್ ಗಳು, ಪ್ರಮುಖ ಪೋಷಕಾಂಶಗಳು ಮತ್ತು ವಯಸ್ಸಾಗುವ ಲಕ್ಷಣ ತಡೆಯುವ ಗುಣಗಳು ಹೊಂದಿರುವಂತಹ ವಾಲ್ ನಟ್ ನ್ನು ಹೆಚ್ಚಿನ ಮಹಿಳೆಯರು ತಮ್ಮ ಸೌಂದರ್ಯದ ಆರೈಕೆಯಲ್ಲಿ ಬಳಸಿಕೊಳ್ಳುವರು. ನೀವು ತ್ವಚೆಯ ಆರೈಕೆಯಲ್ಲಿ ವಾಲ್ ನಟ್ ನ್ನು ಬಳಸಿಕೊಂಡರೆ ಅದರಿಂದ ಚರ್ಮಕ್ಕೆ ಸಿಗುವಂತಹ ಅದ್ಭುತವಾದ ಲಾಭಗಳ ಬಗ್ಗೆ ನೀವು ಇಲ್ಲಿ ತಿಳಿಯಿರಿ.
• ಚರ್ಮಕ್ಕೆ ಹಾನಿಯುಂಟು ಮಾಡುವ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಇದರಿಂದ ಚರ್ಮವು ಯೌವನಯುತವಾಗಿರುವುದು.
• ಒಣಚರ್ಮಕ್ಕೆ ಶಮನ ನೀಡುವುದು ಮತ್ತು ಸುಂದರ ಹಾಗೂ ಮೃಧು ಚರ್ಮ ನೀಡುವುದು.
• ಉರಿಯೂತ ವಿರೋಧಿ ಗುಣಗಳನ್ನು ಹೊಂದಿರುವ ವಾಲ್ ನಟ್ ಚರ್ಮದ ಉರಿಯೂತ ತಡೆಯುವುದು.
• ಬಿಸಿಲಿನಿಂದ ಆಗುವಂತಹ ಹಾನಿ ಹಾಗೂ ಹಾನಿಕಾರ ಯುವಿ ಕಿರಣಗಳಿಂದ ಇದು ಚರ್ಮಕ್ಕೆ ರಕ್ಷಣೆ ನೀಡುವುದು.
• ವಾಲ್ ನಟ್ ಚರ್ಮಕ್ಕೆ ವಯಸ್ಸಾಗುವುದನ್ನು ವಿಳಂಬಗೊಳಿಸುವುದು.
• ಚರ್ಮಕ್ಕೆ ಮೊಶ್ಚಿರೈಸ್ ಮತ್ತು ಪೋಷಣೆ ನೀಡುವುದು. ಇದರಿಂದ ಚರ್ಮವು ಆರೋಗ್ಯಕಾರಿ ಮತ್ತು ಕಾಂತಿಯನ್ನು ಪಡೆಯುವುದು.
• ಕಣ್ಣಿನ ಸುತ್ತಲಿನ ಕಪ್ಪು ವೃತ್ತಗಳ ನಿವಾರಣೆ ಮಾಡುವುದು ಮತ್ತು ಊದಿದ ಕಣ್ಣುಗಳ ನಿವಾರಿಸುವುದು.
ಮನೆಯಲ್ಲೇ ವಾಲ್ ನಟ್ ಸ್ಕ್ರಬ್ ತಯಾರಿ ಹೇಗೆ?
ಈ ಕೆಳಗೆ ವಾಲ್ ನಟ್ ನ್ನು ಬಳಸಿಕೊಂಡು ಮಾಡಬಹುದಾದ ಸ್ಕ್ರಬ್ ಗಳ ಬಗ್ಗೆ ತಿಳಿಸಿಕೊಡಲಾಗಿದೆ. ಇದು ಹೇಗೆ ಮಾಡುವುದು ಮತ್ತು ಅದಕ್ಕೆ ಬಳಸುವ ಸಾಮಗ್ರಿಗಳು ಯಾವುದು ಎಂದು ತಿಳಿಯಿರಿ.
ವಾಲ್ ನಟ್ ಮತ್ತು ಸಕ್ಕರೆ ಸ್ಕ್ರಬ್
• 4-5 ವಾಲ್ ನಟ್ ಗಳು
• 2 ಚಮಚ ಓಟ್ಸ್- ಸ್ವಲ್ಪ ಹುಡಿ ಮಾಡಿರುವುದು.
• 1 ಚಮಚ ಜೇನುತುಪ್ಪ
• 1 ಚಮಚ ಆಲಿವ್ ತೈಲ
• 3 ಚಮಚ ಸಕ್ಕರೆ
ತಯಾರಿಸುವ ವಿಧಾನ
• ಸಣ್ಣ ಪಿಂಗಾಣಿಯಲ್ಲಿ ಜಜ್ಜಿರುವಂತಹ ವಾಲ್ ನಟ್ ಮತ್ತು ಓಟ್ಸ್ ಹುಡಿ ಹಾಕಿ.
• ಇದಕ್ಕೆ ಜೇನುತುಪ್ಪ ಹಾಕಿಕೊಂಡು ಮೂರನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
• ಇದಕ್ಕೆ ಆಲಿವ್ ತೈಲ್ ಹಾಕಿ ಮತ್ತು ಇದರ ಬಳಿಕ ಮತ್ತೆ ಸರಿಯಾಗಿ ಮಿಶ್ರಣ ಮಾಡಿ.
• ಅಂತಿಮವಾಗಿ ಸಕ್ಕರೆ ಹಾಕಿಕೊಳ್ಳಿ ಮತ್ತು ಎಲ್ಲವನ್ನು ಮತ್ತೆ ಮಿಶ್ರಣ ಮಾಡಿ.
• ವಾಲ್ ನಟ್ ಸ್ಕ್ರಬ್ ಈಗ ಹಚ್ಚಿಕೊಳ್ಳಲು ತಯಾರಾಗಿದೆ.
• ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
• ಬೇಕಾದಷ್ಟು ಪ್ರಮಾಣದಲ್ಲಿ ವಾಲ್ ನಟ್ ಸ್ಕ್ರಬ್ ತೆಗೆದುಕೊಳ್ಳಿ ಮತ್ತು ಬೆರಳುಗಳನ್ನು ಬಳಸಿಕೊಂಡು ಮುಖದ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ. 5-10 ನಿಮಿಷ ಕಾಲ ನಿಧಾನವಾಗಿ ಸ್ಕ್ರಬ್ ಮಾಡುತ್ತಲಿರಿ.
• ನೀವು ಇದನ್ನು ತಣ್ಣೀರಿನಿಂದ ತೊಳೆಯುವ ಮೊದಲು ಐದು ನಿಮಿಷ ಹಾಗೆ ಬಿಡಿ.
• ಒಳ್ಳೆಯ ಫಲಿತಾಂಶ ಪಡೆಯಲು ಪ್ರತಿನಿತ್ಯ ನೀವು ಈ ಸ್ಕ್ರಬ್ ನ್ನು ಬಳಸಿಕೊಳ್ಳಿ.
ವಾಲ್ ನಟ್ ಮತ್ತು ಮೊಸರಿನ ಸ್ಕ್ರಬ್
ಬೇಕಾಗುವ ಸಾಮಗ್ರಿಗಳು
- 3-4 ವಾಲ್ ನಟ್
- 2 ಚಮಚ ಮೊಸರು
- 1 ಚಮಚ ಜೇನುತುಪ್ಪ
ವಿಧಾನ
• ಒಂದು ಪಿಂಗಾಣಿಯಲ್ಲಿ ಜಜ್ಜಿಕೊಂಡಿರುವ ವಾಲ್ ನಟ್ ಮತ್ತು ಜೇನುತುಪ್ಪ ಹಾಕಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
• ಈಗ ಮೊಸರು ಹಾಕಿಕೊಳ್ಳಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ.
• ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಚರ್ಮದ ರಂಧ್ರಗಳು ತೆರೆದುಕೊಲ್ಳುವುದು.
• ಬೇಕಾದಷ್ಟು ಪ್ರಮಾಣದಲ್ಲಿ ಈ ಸ್ಕ್ರಬ್ ನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿಕೊಂಡು ಸುಮಾರು 5-10 ನಿಮಿಷ ಕಾಲ ಮಸಾಜ್ ಮಾಡಿ.
• ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಂಡರೆ ರಕ್ತಸಂಚಾರವು ಉತ್ತಮವಾಗುವುದು ಮತ್ತು ಇದೇ ವೇಳೆ ರಕ್ತ ಸಂಚಾರ ನಿಯಂತ್ರಿಸುವುದು.
• ವಾಲ್ ನಟ್ ಮತ್ತು ಮೊಸರಿನ ಸ್ಕ್ರಬ್ ನ್ನು ಬಳಸಿಕೊಂಡ ಬಳಿಕ ನೀವು ತಣ್ಣೀರಿನಿಂದ ಮುಖ ತೊಳೆಯಿರಿ. ಯಾಕೆಂದರೆ ಇದರಿಂದ ಚರ್ಮದ ರಂಧ್ರಗಳು ಮುಚ್ಚುವುದು.
• ವಾರದಲ್ಲಿ ಮೂರು ಸಲ ಬಳಸಿಕೊಂಡರೆ ನಿಮಗೆ ಬೇಕಿರುವ ಫಲಿತಾಂಶ ಸಿಗುವುದು. ಇದು ಧೂಳು, ಕೊಳೆ ಮತ್ತು ಚರ್ಮದಲ್ಲಿನ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಕಲೆ ನಿವಾರಿಸುವುದು.



Click it and Unblock the Notifications
