Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆಯಲ್ಲೇ ತಯಾರಿಸಿಕೊಳ್ಳುವ ಬ್ಲೂ ಬೆರ್ರಿ ಫೇಸ್ ಮಾಸ್ಕ್‌ಗಳಿವು
ಭಾರತದಲ್ಲಿ ಸ್ವಲ್ಪ ಕಡಿಮೆಯಾಗಿಯೇ ಕಾಣಿಸಿಕೊಳ್ಳುವ ಬ್ಲೂ ಬೆರ್ರಿ ಹಣ್ಣಗಳು ವಿಟಮಿನ್ ಸಿ ಮತ್ತು ಎ ಅಂಶಗಳ ಆಗರವಾಗಿದ್ದು ಆಂಟಿ ಆಕ್ಸಿಡೆಂಟ್ ಗಳಿಂದ ಶ್ರೀಮಂತವಾಗಿರುತ್ತದೆ.ಇದನ್ನು ಸೇವಿಸುವುದರಿಂದಾಗಿ ಹೇಗೆ ನಮ್ಮ ದೇಹದ ಆರೋಗ್ಯಕ್ಕೆ ಇದು ಉಪಯೋಗಕಾರಿಯೋ ಅದೇ ರೀತಿ, ಹೊರಗಿನಿಂದ ಚರ್ಮಕ್ಕೆ ಬಳಕೆ ಮಾಡಿದರೂ ಕೂಡ ಆಶ್ಚರ್ಯಕರವಾದ ಪರಿಣಾಮಗಳನ್ನು ಉಂಟುಮಾಡಿ ಚರ್ಮದ ಆರೋಗ್ಯವನ್ನು ಕಾಪಾಡುವುದಕ್ಕೆ ಸಹಾಯಕವಾಗಿರುತ್ತದೆ.
ಬ್ಲೂ ಬೆರ್ರಿ ಒಂದು ಉತ್ತಮ ಹಣ್ಣಾಗಿದ್ದು ಹಲವಾರು ರೀತಿಯ ಚರ್ಮದ ಕಾಯಿಲೆಗಳನ್ನು ಉದಾಹರಣೆಗೆ ಚರ್ಮ ಬಿಳಚಿಕೊಳ್ಳುವುದು, ಮೊಡವೆಗಳು, ಆಕ್ನೆ, ಮತ್ತು ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುವುದು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಅದರ ಜೊತೆಗೆ ಚರ್ಮದಲ್ಲಿರುವ ಎಣ್ಣೆಯ ಮಟ್ಟವನ್ನು ಕಡಿಮೆಗೊಳಿಸಿ, ಸರಿಯಾದ ರೀತಿಯ ಸ್ವಚ್ಛನೆಯ ಮತ್ತು ಆರೋಗ್ಯಕರವಾದ ಚರ್ಮವನ್ನು ಕಾಯ್ದುಕೊಳ್ಳುವುದಕ್ಕೆ ಇದು ಸಹಕಾರಿಯಾಗುತ್ತದೆ. ಈ ಲೇಖನದಲ್ಲಿ ನಾವು ಹೇಗೆ ಮನೆಯಲ್ಲೇ ಕೆಲವು ಪದಾರ್ಥಗಳನ್ನ ಬ್ಲೂ ಬೆರ್ರಿ ಜೊತೆಗೆ ಸೇರಿಸಿ ಫೇಸ್ ಮಾಸ್ಕ್ ತಯಾರಿಸಿಕೊಳ್ಳುವುದು ಮತ್ತು ಅದನ್ನು ಬಳಕೆ ಮಾಡುವುದು ಎಂಬ ಬಗ್ಗೆ ತಿಳಿಸಿಕೊಡಲಿದ್ದೇವೆ. ನಿಮಗೂ ಚರ್ಮದ ಸಮಸ್ಯೆಗಳಿದ್ದರೆ ಖಂಡಿತ ಇದರ ಬಳಕೆಯನ್ನು ಮಾಡಿ ನೋಡಿ.. ಬ್ಲೂ ಬೆರ್ರಿಯನ್ನು ಚರ್ಮಕ್ಕೆ ಹೇಗೆ ಬಳಕೆ ಮಾಡುವುದು ಎಂಬುದನ್ನು ತಿಳಿಯಲು ಮುಂದೆ ಓದಿ.

ಬ್ಲೂ ಬೆರ್ರಿ ಮತ್ತು ಮೊಸರಿನ ಫೇಸ್ ಮಾಸ್ಕ್
ಬೇಕಾಗುವ ಸಾಮಗ್ರಿಗಳು:
• 5-6 ಬ್ಲೂ ಬೆರ್ರಿ
• ಗ್ರೀಕ್ ಯೋಗರ್ಟ್ ಅಥವಾ ಮೊಸರು
ತಯಾರಿಸಿಕೊಳ್ಳುವ ವಿಧಾನ ಹೇಗೆ?
1. ಮೊದಲಿಗೆ, ಬ್ಲೂ ಬೆರ್ರಿಯನ್ನು ತೊಳೆದು ಸ್ವಚ್ಛಗೊಳಿಸಿ. ನಂತರ ಅದನ್ನು ಅರೆದು ಪೇಸ್ಟ್ ತಯಾರಿಸಿಕೊಳ್ಳಿ. 2. ನಂತರ, ಆ ಬ್ಲೂ ಬೆರ್ರಿ ಪೇಸ್ಟಿಗೆ ಮೊಸರು ಅಥವಾ ಗ್ರೀಕ್ ಯೋಗರ್ಟ್ ನ್ನು ಸೇರಿಸಿ
3. ಒಮ್ಮೆ ತೊಳೆದ ಮುಖಕ್ಕೆ ಈ ಪೇಸ್ಟನ್ನು ಸಮನಾಗಿ ಅಪ್ಲೈ ಮಾಡಿ.
4. ಸುಮಾರು 20 ನಿಮಿಷ ಆ ಪೇಸ್ಟ್ ನಿಮ್ಮ ಮುಖದಲ್ಲಿ ಇರಲಿ, ನಂತರ ತಣ್ಣನೆಯ ನೀರಿನಿಂದ ತೊಳೆಯರಿ.
ಬ್ಲೂ ಬೆರ್ರಿ ಮತ್ತು ನಿಂಬೆಯ ರಸ ಫೇಸ್ ಮಾಸ್ಕ್
ಬೇಕಾಗುವ ಸಾಮಗ್ರಿಗಳು:
• 3-4 ಬ್ಲೂ ಬೆರ್ರಿ
• ಓಟ್ಸ್
• 2-3 ಬಾದಾಮಿಗಳು
• ನಿಂಬೆಯ ರಸ
ತಯಾರಿಸಿಕೊಳ್ಳುವ ವಿಧಾನ ಹೇಗೆ?
1. ಮೊದಲಿಗೆ, ಓಟ್ ಮೀಲ್ ಮತ್ತು ಬಾದಾಮಿಯನ್ನು ಚೆನ್ನಾಗಿ ಪೌಡರ್ ಮಾಡಿಕೊಳ್ಳಿ.
2. ಒಂದು ಸ್ವಚ್ಛವಾದ ಬೌಲಿಗೆ ಈ ಬಾದಾಮಿ ಮತ್ತು ಓಟ್ ಮೀಲ್ ನ ಪೌಡರ್ ನ್ನು ಸೇರಿಸಿ.
3. ನಂತರ ಬ್ಲೂ ಬೆರ್ರಿಗಳನ್ನು ಸ್ವಚ್ಛಗೊಳಿಸಿ ಮತ್ತು ಅರೆದು ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ.
4. ಬ್ಲೂ ಬೆರ್ರಿ ಪೇಸ್ಟನ್ನು ಓಟ್ಸ್ ಮತ್ತು ಬಾದಾಮಿ ಪೌಡರ್ ಗೆ ಸೇರಿಸಿ ಚೆನ್ನಾಗಿ ಕಲಸಿ.
5. ಅಂತಿಮವಾಗಿ , ಒಂದು ನಿಂಬೆಹಣ್ಣನ್ನು ಕತ್ತರಿಸಿ ಅದರ ರಸವನ್ನು ಹಿಂಡಿ ಕೆಲವು ಹನಿಗಳನ್ನು ಆ ಮಿಶ್ರಣಕ್ಕೆ ಸೇರಿಸಿe.
6. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮುಖಕ್ಕೆ ಸಮನಾಗಿ ಅಪ್ಲೈ ಮಾಡಿಕೊಳ್ಳಿ
7. ಈ ಮಾಸ್ಕ್ ನ್ನು ಸುಮಾರು 15 ನಿಮಿಷ ನಿಮ್ಮ ಮುಖದಲ್ಲಿ ಇಟ್ಟುಕೊಳ್ಳಿ. ನಂತರ ಹದವಾಗಿ ಬೆಚ್ಚಗಿರುವ ನೀರಿನಲ್ಲಿ ತೊಳೆಯಿರಿ. ಎಣ್ಣೆಯುಕ್ತ ತ್ವಚೆ ಇರುವವರಿಗೆ ಈ ಮಾಸ್ಕ್ ಹೇಳಿ ಮಾಡಿಸಿರುವುದಾಗಿದೆ.
ಬ್ಲೂ ಬೆರ್ರಿ ಮತ್ತು ಅರಿಶಿನದ ಪುಡಿಯ ಫೇಸ್ ಮಾಸ್ಕ್
ಬೇಕಾಗುವ ಸಾಮಗ್ರಿಗಳು:
• 5-6 ಬ್ಲೂ ಬೆರ್ರಿ
• ಚಿಟಿಕೆ ಅರಿಶಿನದ ಪುಡಿ
• ಕೆಲವು ಹನಿ ನಿಂಬೆಯ ರಸ
ತಯಾರಿಸಿಕೊಳ್ಳುವ ವಿಧಾನ ಹೇಗೆ?
1. ಬ್ಲೂಬೆರಿಯನ್ನು ಅರೆದು ಪೇಸ್ಟ್ ತಯಾರಿಸಿಕೊಳ್ಳಿ
2. ತಾಜಾವಾಗಿ ಹಿಂಡಿದ ನಿಂಬೆಯ ರಸದ ಕೆಲವು ಹನಿಗಳನ್ನು ಇದಕ್ಕೆ ಸೇರಿಸಿ.
3. ನಂತರ, ಅದಕ್ಕೆ ಚಿಟಿಕೆ ಅರಿಶಿನವನ್ನು ಸೇರಿಸಿ ಚೆನ್ನಾಗಿ ಕಲಸಿ. ಆದರೆ ಅತಿಯಾಗಿ ಅರಿಶಿನವನ್ನು ಸೇರಿಸಬೇಡಿ. ಯಾಕೆಂದರೆ ಇದು ನಿಮ್ಮ ಮುಖದಲ್ಲಿ ಹಳದಿ ಬಣ್ಣವನ್ನು ಹಾಗೆಯೇ ಉಳಿಸಿ ಬಿಡಬಹುದು.
4.ಈ ಮಿಶ್ರಣವನ್ನ ನಿಮ್ಮ ಮುಖಕ್ಕೆ ಅಪ್ಲೈ ಮಾಡಿ ಮತ್ತು 20 ನಿಮಿಷದ ನಂತರ ತೊಳೆಯಿರಿ.
5. 20 ನಿಮಿಷದ ನಂತರ ಹದವಾಗಿ ಬೆಚ್ಚಗಿರುವ ನೀರಿನಲ್ಲಿ ಮುಖವನ್ನು ತೊಳೆಯಿರಿ.
ಬ್ಲೂ ಬೆರ್ರಿ ಮತ್ತು ಅಲವೀರಾದ ಫೇಸ್ ಮಾಸ್ಕ್
ಕಣ್ಣಿನ ಕಪ್ಪು ವರ್ತುಲವನ್ನು ತೆಗೆಯಲು ಈ ಫೇಸ್ ಮಾಸ್ಕ್ ಅತ್ಯದ್ಭುತವಾಗಿ ಕೆಲಸ ಮಾಡುತ್ತದೆ.
ಬೇಕಾಗುವ ಸಾಮಗ್ರಿಗಳು:
• ಬ್ಲೂ ಬೆರ್ರಿ
• ಅಲವೀರಾ ಎಲೆಗಳು
ತಯಾರಿಸಿಕೊಳ್ಳುವ ವಿಧಾನ ಹೇಗೆ?
1. ತಾಜಾ ಅಲವೀರಾ ಎಲೆಯನ್ನು ತೆಗೆದುಕೊಳ್ಳಿ
2.ಕತ್ತರಿಸಿ ಅದನ್ನು ತೆರೆಯಿರಿ ಮತ್ತು ಅದರಲ್ಲಿರುವ ಜೆಲ್ ನ್ನು ಹೊರತೆಗೆಯಿರಿ
3. ಈಗ ಅದಕ್ಕೆ ಬ್ಲೂಬೆರ್ರಿಯನ್ನು ಸೇರಿಸಿ ಮತ್ತು ಎರಡನ್ನೂ ಒಟ್ಟಿಗೆ ಬ್ಲೆಂಡ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ
4. ಈಗ ಇದನ್ನು ನಿಮ್ಮ ಕಣ್ಣಿನ ಸುತ್ತ ಅಪ್ಲೈ ಮಾಡಿಕೊಳ್ಳಿ ಮತ್ತು ಕೆಲವು ಸಮಯದವರೆಗೂ ಅದು ಹಾಗೆಯೇ ಇರಲಿ.
5. ನಂತರ ಬಿಸಿಯಾದ ನೀರಿನಿಂದ ತೊಳೆಯಿರಿ.
ಬ್ಲೂ ಬೆರ್ರಿ, ಜೇನುತುಪ್ಪ ಮತ್ತು ಆಲಿವ್ ಎಣ್ಣೆಯ ಫೇಸ್ ಮಾಸ್ಕ್
ಬೇಕಾಗುವ ಸಾಮಗ್ರಿಗಳು:
• ¼ ನಷ್ಟು ಬ್ಲೂ ಬೆರ್ರಿಗಳು
• 1 ಟೇಬಲ್ ಸ್ಪೂನ್ ಆಲಿವ್ ಎಣ್ಣೆ
• 1 ಟೇಬಲ್ ಸ್ಪೂನ್ ಜೇನುತುಪ್ಪ
ತಯಾರಿಸಿಕೊಳ್ಳುವ ವಿಧಾನ ಹೇಗೆ?
1. ¼ ಕಪ್ ಬ್ಲೂಬೆರ್ರಿಗೆ, 1 ಟೇಬಲ್ ಸ್ಪೂನ್ ಆಲಿವ್ ಎಣ್ಣೆ ಮತ್ತು 1 ಟೇಬಲ್ ಸ್ಪೂನ್ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ
2. ದಪ್ಪನೆಯ ಪೇಸ್ಟ್ ತಯಾರಾಗುವವರೆಗೆ ಬ್ಲೆಂಡ್ ಮಾಡಿ.
3. ಈ ಪೇಸ್ಟ್ ನ್ನು ನಿಮ್ಮ ಮುಖಕ್ಕೆ ಸಮಪ್ರಮಾಣದಲ್ಲಿ ಅಪ್ಲೈ ಮಾಡಿ ಮತ್ತು 20 ನಿಮಿಷ ಹಾಗೆಯೇ ಬಿಡಿ.
4.20 ನಿಮಿಷದ ನಂತರ ಹದವಾಗಿ ಬೆಚ್ಚಗಿರುವನ ನೀರಿನಲ್ಲಿ ಮುಖವನ್ನು ತೊಳೆಯಿರಿ
5. ಈ ಬ್ಲೂ ಬೆರ್ರಿ ಮಾಸ್ಕ್ ನಿಮ್ಮ ಚರ್ಮವನ್ನು ಪೋಷಿಸಲು ನೆರವಿಗೆ ಬರುತ್ತದೆ.
ಆಂಟಿ ಏಜಿಂಗ್ ಬ್ಲೂಬೆರ್ರಿ ಮಾಸ್ಕ್
ಬೇಕಾಗುವ ಸಾಮಗ್ರಿಗಳು:
• ¼ ಕಪ್ ನಷ್ಟು ಬ್ಲೂ ಬೆರ್ರಿ
• ¼ ಟೇಬಲ್ ಸ್ಪೂನ್ ಅಲವೀರಾ ಜೆಲ್
• ¼ ಟೇಬಲ್ ಸ್ಪೂನ್ ಆಲಿವ್ ಎಣ್ಣೆ
• ¼ ಟೇಬಲ್ ಸ್ಪೂನ್ ಜೇನುತುಪ್ಪ
ತಯಾರಿಸಿಕೊಳ್ಳುವ ವಿಧಾನ ಹೇಗೆ?
1. ಮೊದಲಿಗೆ, ಮೇಲಿನ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಅರೆಯಿರಿ ಮತ್ತು ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ.
2. ಈಗ, ಈ ಪೇಸ್ಟನ್ನು ನಿಮ್ಮ ಮುಖ ಸಮವಾಗಿ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಹಾಗೆಯೇ ಬಿಡಿ.
3. 20 ನಿಮಿಷದ ನಂತರ ಹದವಾಗಿ ಬೆಚ್ಚಗಿರುವನ ನೀರಿನಿಂದ ತೊಳೆಯಿರಿ.
4.ಈ ರೆಮಿಡಿಯನ್ನು ನೀವು ಎರಡು ವಾರಗಳಿಗೆ ಒಮ್ಮೆ ಬಳಕೆ ಮಾಡಿದರೆ ಖಂಡಿತ ವಯಸ್ಸಿನ ಕಾರಣದಿಂದ ನಿಮ್ಮ ಮುಖದಲ್ಲಿ ಕಾಣಿಸಿಕೊಳ್ಳುವ ನೆರಿಗೆಗಳು, ಕಪ್ಪು ಕಲೆಗಳು, ಪಿಗ್ಮೆಂಟೇಷನ್ ಸಮಸ್ಯೆ ನಿವಾರಣೆಯಾಗುತ್ತದೆ.



Click it and Unblock the Notifications