Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಸೌಂದರ್ಯ ಹೆಚ್ಚಿಸಲು ಮನೆಮದ್ದುಗಳು, ಕಡಲೆ ಹಿಟ್ಟಿನ ಫೇಸ್ ಮಾಸ್ಕ್
ಸೌಂದರ್ಯ ಪಡೆಯುವ ಸಲುವಾಗಿ ಮತ್ತು ತ್ವಚೆಯ ಪುನಶ್ಚೇತನಕ್ಕಾಗಿ ಹಲವಾರು ರೀತಿಯ ಕ್ರೀಮ್ ಗಳು, ಲೋಷನ್, ಫೇಸ್ ಮಾಸ್ಕ್ ಇತ್ಯಾದಿಗಳನ್ನು ಬಳಸುತ್ತೇವೆ. ಇದೆಲ್ಲವೂ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವುದು. ಇದಕ್ಕೆ ಹಣ ನೀಡಿದರೆ ಹೆಚ್ಚು ಶ್ರಮ ವಹಿಸಬೇಕಿಲ್ಲ. ಆದರೆ ಇಂತಹ ರೆಡಿಮೇಡ್ ಉತ್ಪನ್ನಗಳನ್ನು ತಯಾರು ಮಾಡುವಾಗ ಅವುಗಳಿಗೆ ಹಲವಾರು ರೀತಿಯ ರಾಸಾಯನಿಕಗಳನ್ನು ಬೆರೆಸಿರುತ್ತಾರೆ. ಇಂತಹ ರಾಸಾಯನಿಕಗಳು ದೇಹದ ಮೇಲೆ ಅಡ್ಡಪರಿಣಾಮಗಳನ್ನು ಬೀರುವುದು. ರಾಸಾಯನಿಕಯಕ್ತ ಉತ್ಪನ್ನಗಳ ಬದಲಿಗೆ ಕೆಲವು ಮನೆಯಲ್ಲೇ ತಯಾರಿಸಿದ ಸೌಂದರ್ಯವರ್ಧಕಗಳನ್ನು ಬಳಸಿಕೊಂಡರೆ ಅದರಿಂದ ತ್ವಚೆಗೂ ಹೆಚ್ಚಿನ ಕಾಂತಿ ಸಿಗುವುದು. ಕಡಲೆಹಿಟ್ಟನ್ನು ಸೌಂದರ್ಯವರ್ಧಕವಾಗಿ ಬಳಸುವುದು ಹೇಗೆ ಎಂದು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಿ.

ಕಡಲೆಹಿಟ್ಟು ಚರ್ಮದ ಬಣ್ಣ ಬಿಳಿಯಾಗಿಸುವುದು?
ಕಡಲೆಹಿಟ್ಟು ಭಾರತದಲ್ಲಿ ಹೆಚ್ಚಾಗಿ ಪ್ರತಿಯೊಂದು ಅಡುಗೆ ಮನೆಯಲ್ಲೂ ಕಾಣಸಿಗುವುದು. ಹಲವಾರು ಖಾದ್ಯಗಳಿಗೆ ಇದು ರುಚಿ ನೀಡುವುದು ಮಾತ್ರವಲ್ಲದೆ ಸೌಂದರ್ಯಕ್ಕೂ ಇದು ತುಂಬಾ ಪರಿಣಾಮಕಾರಿ. ಇದು ಚರ್ಮದ ಪಿಎಚ್ ಮಟ್ಟವನ್ನು ಕಾಪಾಡಿಕೊಂಡು ಹೋಗುವುದು ಮಾತ್ರವಲ್ಲದೆ ಕಲೆಗಳು, ಮೊಡವೆ ನಿವಾರಣೆ ಮಾಡಿ ಕಾಂತಿ ನೀಡುವುದು. ಬಿಸಿಲಿನಿಂದ ಆಗಿರುವ ಕಲೆಗಳು ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆಯುವ ಕಡಲೆಹಿಟ್ಟು ಚರ್ಮಕ್ಕೆ ಕಾಂತಿ ಹಾಗೂ ಪುನರುಜ್ಜೀವನಗೊಳಿಸುವುದು. ಇದನ್ನು ಮಾಸ್ಕ್ ರೂಪದಲ್ಲಿ ಬಳಸಿಕೊಂಡು ಚರ್ಮದ ಕಾಂತಿ ಹೆಚ್ಚಿಸಬಹುದು. ಅದು ಹೇಗೆ ಎಂದು ತಿಳಿಯಿರಿ.
ಕಡಲೆಹಿಟ್ಟು ಮತ್ತು ಮೊಸರು
ಹೇಗೆ ತಯಾರಿಸುವುದು?
*ಇದು ಕಲೆಗಳನ್ನು ನಿವಾರಣೆ ಮಾಡಿ ಕಾಂತಿ ನೀಡುವುದು.
*ಇದಕ್ಕಾಗಿ ಒಂದು ಚಮಚ ಕಡಲೆಹಿಟ್ಟು ಮತ್ತು ಸ್ವಲ್ಪ ಮೊಸರು ಬೇಕು.
*ಎರಡು ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿ.
*ಪೇಸ್ಟ್ ನ್ನು ದಪ್ಪ ಮಾಡಲು ಮೊಸರನ್ನು ಸರಿಯಾಗಿ ಸೇರಿಸಿ.
*ಮುಖವನ್ನು ಶುದ್ಧಗೊಳಿಸಿದ ಬಳಿಕ ಇದನ್ನು ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ.
*ಇದರ ಬಳಿಕ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ.
ಕಡಲೆಹಿಟ್ಟು ಮತ್ತು ಹಸಿಹಾಲು
ತಯಾರಿಸುವ ವಿಧಾನ
ನಿಮ್ಮದು ಒಣ ಚರ್ಮವಾಗಿದ್ದರೆ ಈ ಮಾಸ್ಕ್ ನಿಮಗೆ ನೆರವಾಗುವುದು. ಇದು ಒಣ ಚರ್ಮ ನಿವಾರಣೆ ಮಾಡುವುದು ಮಾತ್ರವಲ್ಲದೆ, ಚರ್ಮಕ್ಕೆ ಪೋಷಣೆ ನೀಡಿ, ಕಾಂತಿ ವೃದ್ಧಿಸುವುದು.
*ಕಡಲೆಹಿಟ್ಟು ಮತ್ತು ಹಾಲನ್ನು ಮಿಶ್ರಣ ಮಾಡಿಕೊಂಡು ಮುಖದ ಮೇಲೆ ಪದರವಾಗಿ ಹಚ್ಚಿಕೊಳ್ಳಿ.
*15-20 ನಿಮಿಷ ಕಾಲ ಇದನ್ನು ಹಾಗೆ ಬಿಡಿ ಮತ್ತು ಸಾಮಾನ್ಯ ನೀರಿನಿಂದ ತೊಳೆಯಿರಿ.
ಕಡಲೆಹಿಟ್ಟು ಮತ್ತು ಟೊಮೆಟೊ ರಸ
ತಯಾರಿಸುವ ವಿಧಾನ
ಮುಖದ ಮೇಲೆ ಇರುವ ಯಾವುದೇ ರೀತಿಯ ಕಲೆ, ಮೊಡವೆ ಮತ್ತು ಗಾಯದ ಗುರುತುಗಳಿಗೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.
* ಮಧ್ಯಮ ಗಾತ್ರ ಟೊಮೆಟೊ ತುಂಡುರಿಸಿಕೊಂಡು ಇದರ ರಸ ತೆಗೆಯಿರಿ.
* 2-3 ಚಮಚ ಕಡಲೆಹಿಟ್ಟನ್ನು ಇದಕ್ಕೆ ಬೆರೆಸಿ.
* ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಗುಳ್ಳೆಗಳು ಬರದಂತೆ ನೋಡಿಕೊಳ್ಳಿ.
* ಮುಖ ಸ್ವಚ್ಛ ಮಾಡಿಕೊಂಡು ಪೇಸ್ಟ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.
* ಇದನ್ನು 20 ನಿಮಿಷ ಕಾಲ ಒಣಗಲು ಬಿಡಿ.
* ಸಾಮಾನ್ಯ ನೀರಿನಿಂದ ತೊಳೆಯಿರಿ.
ಕಡಲೆಹಿಟ್ಟು ಮತ್ತು ಲಿಂಬೆರಸ
ತಯಾರಿಸುವ ವಿಧಾನ
ಈ ಪ್ಯಾಕ್ ನ್ನು ಹೆಚ್ಚಾಗಿ ಚರ್ಮದ ಕಾಂತಿ ಮತ್ತು ಆರೋಗ್ಯಕ್ಕೆ ಬಳಸಲಾಗುವುದು. ಕಡಲೆಹಿಟ್ಟು ಚರ್ಮಕ್ಕೆ ಪೋಷಣೆ ನೀಡುವುದು ಮತ್ತು ಲಿಂಬೆಯಲ್ಲಿ ಇರುವಂತಹ ವಿಟಮಿನ್ ಸಿಯು ಚರ್ಮದಲ್ಲಿರುವ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಚರ್ಮದ ಬಣ್ಣವು ಬಿಳಿಯಾಗಿಸುವುದು.
* 1 ಚಮಚ ಕಡಲೆಹಿಟ್ಟಿಗೆ ಕೆಲವು ಹನಿ ಲಿಂಬೆರಸ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ.
* ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
ಕಡಲೆಹಿಟ್ಟು, ಹಾಲು ಮತ್ತು ಅರಶಿನ
ತಯಾರಿಸುವ ವಿಧಾನ
* ಈ ಮೂರರ ಮಿಶ್ರಣವು ಗಾಯದ ಗುರುತು, ಮೊಡವೆ ಹಾಗೂ ಕಲೆಗಳನ್ನು ನಿವಾರಣೆ ಮಾಡಲು ಪರಿಣಾಮಕಾರಿ. ಅರಶಿನ ಮತ್ತು ಹಾಲು ಚರ್ಮಕ್ಕೆ ಪೋಷಣೆ ನೀಡಿ, ಚರ್ಮದ ಕಾಂತಿ ವೃದ್ಧಿಸುವುದು.
* ಒಂದು ಚಮಚ ಕಡಲೆಹಿಟ್ಟು, ಕೆಲವು ಹನಿ ಹಸಿ ಹಾಲು ಮತ್ತು ಒಂದು ಚಿಟಿಕೆ ಅರಶಿನ ಜತೆಯಾಗಿ ಮಿಶ್ರಣ ಮಾಡಿಕೊಳ್ಳಬೇಕು.
* ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಗುಳ್ಳೆಗಳು ಬರದಂತೆ ನೋಡಿ.
* ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ.
* 15 ನಿಮಿಷ ಬಳಿಕ ನೀರಿನಿಂದ ಮುಖ ತೊಳೆಯಿರಿ.
ಕಡಲೆಹಿಟ್ಟು ಮತ್ತು ಕಿತ್ತಳೆ ಸಿಪ್ಪೆಯ ಹುಡಿ
ತಯಾರಿಸುವ ವಿಧಾನ
ಈ ಮಾಸ್ಕ್ ಸತ್ತ ಚರ್ಮವನ್ನು ಕಿತ್ತುಹಾಕಿ ಕಾಂತಿಯನ್ನು ನೀಡುವುದು. ಕಿತ್ತಳೆಯು ಚರ್ಮಕ್ಕೆ ಕಾಂತಿ ನೀಡುವ ಗುಣ ಹೊಂದಿದೆ.
* ಒಂದು ಚಮಚ ಕಿತ್ತಳೆ ಸಿಪ್ಪೆ ಹುಡಿಯನ್ನು ಒಂದು ಚಮಚ ಕಡಲೆಹಿಟ್ಟಿಗೆ ಬೆರೆಸಿಕೊಳ್ಳಿ.
* ಇದಕ್ಕೆ ಕೆಲವು ಹನಿ ಹಾಲು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
* ಇದನ್ನು ಮುಖಕ್ಕೆ ಪದರವಾಗಿ ಹಚ್ಚಿಕೊಳ್ಳಿ.
* ಕೈಬೆರಳುಗಳನ್ನು ಬಳಸಿಕೊಂಡು ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿಕೊಳ್ಳಿ.
* 15 ನಿಮಿಷ ಹಾಗೆ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆಯಿರಿ.
ಕಡಲೆಹಿಟ್ಟು, ಬಾದಾಮಿ ಎಣ್ಣೆ ಮತ್ತು ಹಾಲಿನ ಫೇಸ್ ಪ್ಯಾಕ್
ಬೇಕಾಗುವ ಸಾಮಗ್ರಿಗಳು
*3 ಚಮಚ ಕಡಲೆಹಿಟ್ಟು
*1 ಚಮಚ ಹಾಲು
* ½ ಚಮಚ ಬಾದಾಮಿ ಎಣ್ಣೆ
ವಿಧಾನ
*ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ಒಂದು ಪಾತ್ರೆಗೆ ಹಾಕಿಕೊಂಡು ಮಿಶ್ರಣ ಮಾಡಿ ಮತ್ತು ಮುಖವನ್ನು ಸ್ವಚ್ಛ ಮಾಡಿಕೊಂಡು ಹಚ್ಚಿಕೊಳ್ಳಿ.
* 15 ನಿಮಿಷ ಬಿಟ್ಟು ಮುಖ ತೊಳೆಯಿರಿ.
* ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಇದನ್ನು ಬಳಸಿ.
ಮೊಡವೆಯ ಸಮಸ್ಯೆ ಇದ್ದರೆ ಕಡಲೆಹಿಟ್ಟು ಗಂಧದ ಹುಡಿ ಮತ್ತು ಹಾಲು
ಮೊಡವೆ ನಿವಾರಿಸುವಲ್ಲಿ ಕಡಲೆಹಿಟ್ಟು ತುಂಬಾ ಪರಿಣಾಮಕಾರಿಯಾಗಲಿದೆ. ಒಂದು ಚಮಚ ಕಡಲೆಹಿಟ್ಟು, ಗಂಧದ ಹುಡಿ ಮತ್ತು ಹಾಲನ್ನು ಬೆರೆಸಿಕೊಳ್ಳಿ. ಇದಕ್ಕೆ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಒಂದು ಹಿಡಿಯಷ್ಟು ಅರಿಶಿನವನ್ನು ಇದಕ್ಕೆ ಸೇರಿಸಿಕೊಳ್ಳಬಹುದು. ಒಳ್ಳೆಯ ಫಲಿತಾಂಶ ಪಡೆಯಲು ನಿಯಮಿತವಾಗಿ ಇದನ್ನು ಬಳಸಿಕೊಳ್ಳಿ.
ಹಾಲು ಹಾಗೂ ಕಡಲೆ ಹಿಟ್ಟು
ಒಂದು ಚಮಚ ಔಟ್ಸ್ ಅನ್ನು ಹಾಲಿನಲ್ಲಿ ಐದು ನಿಮಿಷ ನೆನೆಸಿ. ಚಮಚದ ಸಹಾಯದಿಂದ ಇದನ್ನು ಮೆತ್ತಗಾಗಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಕಡಲೆ ಹಿಟ್ಟನ್ನು ಸೇರಿಸಿ. ನಿಮ್ಮ ಮುಖಕ್ಕೆ ಈ ಸ್ಕ್ರಬ್ ಹಚ್ಚಿರಿ. ನಂತರ ವೃತ್ತಾಕಾರವಾಗಿ ಐದು ನಿಮಿಷ ಮಸಾಜ್ ಮಾಡಿಕೊಳ್ಳಿ. ಇದು ಮೃತಕೋಶವನ್ನು ನಿವಾರಿಸುತ್ತದೆ ಮತ್ತು ತ್ವಚೆಯಲ್ಲಿನ ಕೊಳಕನ್ನು ಹೋಗಲಾಡಿಸುತ್ತದೆ.



Click it and Unblock the Notifications













