Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಒಣ ಬ್ರಶ್ ನಿಂದ ಸೌಂದರ್ಯವೃದ್ಧಿಸುವುದು ಹೇಗೆ?
ಸೌಂದರ್ಯದ ಆರಾಧಕರಾಗಿರುವಂತಹ ಮಹಿಳೆಯರಿಗೆ ಸೌಂದರ್ಯದ ವೃದ್ಧಿಗೆ ಏನಾದರೂ ಹೊಸತು ಸಿಕ್ಕಿದರೆ ಅದನ್ನು ತಕ್ಷಣ ಪ್ರಯೋಗಿಸಿ ಬಿಡುವರು. ಇತ್ತೀಚಿನ ದಿನಗಳಲ್ಲಿ ಒಣ ಬ್ರಶ್ ನಿಂದ ಮೈ ತೊಳೆಯುವಂತಹ ಟ್ರೆಂಡ್ ತುಂಬಾ ಜನಪ್ರಿಯವಾಗುತ್ತಿದೆ. ರೂಪದರ್ಶಿಯರಿಂದ ಹಿಡಿದು ಸೌಂದರ್ಯತಜ್ಞರ ತನಕ ಪ್ರತಿಯೊಬ್ಬರು ಇದರ ಪ್ರಯೋಗದಲ್ಲಿ ತೊಡಗಿಕೊಂಡಿದ್ದಾರೆ. ದಿನೇ ದಿನೇ ಇದು ತನ್ನ ಜನಪ್ರಿಯತೆ ಹೆಚ್ಚಿಸುತ್ತಿದೆ. ಒಣ ಬ್ರಶ್ ನಿಂದ ಚರ್ಮದ ಆರೈಕೆ ಉತ್ತಮವಾಗಿ ಮಾಡಬಹುದು. ನೀವು ಕೂಡ ಈ ವಿಧಾನವನ್ನು ಬಳಸಲು ಕಾತರರಾಗಿದ್ದರೆ ಆಗ ಈ ಲೇಖನ ನೀವು ಓದಲೇಬೇಕು.
ಚರ್ಮಕ್ಕೆ ಒಣ ಬ್ರಶ್ ಎಷ್ಟು ಅಗತ್ಯವೆಂದು ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದೆ.
ಇದು ಚರ್ಮವನ್ನು ನಯವಾಸಿಸಿ, ಬಣ್ಣ ಬಿಳಿಯಾಗಿಸುವುದು ಮಾತ್ರವಲ್ಲದೆ ಇನ್ನು ಹಲವಾರು ರೀತಿಯ ಲಾಭಗಳು ಇದರಿಂದ ನಿಮಗೆ ಸಿಗಲಿದೆ. ಇದು ತುಂಬಾ ಪರಿಣಮಕಾರಿ ಹಾಗೂ ಅಗ್ಗದ ಚಿಕಿತ್ಸೆಯಾಗಿರುವ ಕಾರಣದಿಂದಾಗಿ ಸ್ಪಾಗೆ ಹೋಗಿ ದುಡ್ಡು ಖರ್ಚು ಮಾಡಬೆಕೆಂದಿಲ್ಲ. 10-15 ನಿಮಿಷ ಸ್ನಾನಕ್ಕೆ ಮೊದಲು ನೀವು ಇದನ್ನು ಬಳಸಬಹುದು. ಸುಂದರ ಚರ್ಮ ನೀಡಲು ಒಣ ಬ್ರಶ್ ಯಾವ ರೀತಿ ನಿಮಗೆ ನೆರವಾಗಲಿದೆ ಎಂದು ತಿಳಿಯಿರಿ.

1.ಸೆಲ್ಯೂಲೈಟ್ ಕುಗ್ಗಿಸುವುದು
ವಿಶ್ವದಲ್ಲಿ ಹೆಚ್ಚಿನ ಮಹಿಳೆಯರನ್ನು ಕಾಡುವ ಸಮಸ್ಯೆಯೆಂದರೆ ಅದು ಸೆಲ್ಯೂಲೈಟ್. ಚರ್ಮದ ಅಡಿಯಲ್ಲಿ ಹುದುಗಿರುವಂತಹ ಕೊಬ್ಬು ಆಳದ ಪದರಗಳಿಗೆ ಹೋಗುವಾಗ ಇದು ಮೂಡುವುದು. ಬೊಕ್ಕೆಗಳು ತೊಡೆ ಹಾಗೂ ಪೃಷ್ಠಗಳ ಭಾಗದಲ್ಲಿ ಮೂಡುವುದು. ಒಣ ಬ್ರಶ್ ನಿಂದ ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಉತ್ತಮಪಡಿಸಬಹುದು ಮತ್ತು ಇದರಿಂದ ಸೆಲ್ಯೂಲೈಟ್ ಕಡಿಮೆ ಮಾಡಬಹುದು. ಬೇರೆ ಔಷಧಿಗಳ ಬದಲಿಗೆ ನೀವು ಒಣಬ್ರಶ್ ನ್ನು ಬಳಸುವುದು ಉತ್ತಮ.
2.ಸತ್ತ ಚರ್ಮ ಕಿತ್ತೊಗೆಯುವುದು
ಚರ್ಮವು ಶುದ್ಧ ಹಾಗೂ ಸೋಂಕುರಹಿತವಾಗಿರಲು ಸತ್ತ ಚರ್ಮವನ್ನು ಕಿತ್ತೊಗೆಯುವುದು ಅತೀ ಮುಖ್ಯವಾಗಿದೆ. ಇನ್ನೊಂದು ಬದಿಯಲ್ಲಿ ಸತ್ತ ಚರ್ಮವನ್ನು ಕಿತ್ತೊಗೆಯದೆ ಇದ್ದರೆ ಆಗ ನಿಸ್ತೇಜ ಚರ್ಮ ಸಮಸ್ಯೆ ಬರುವುದು. ಇದರಿಂದ ಸತ್ತ ಚರ್ಮದ ಕೋಶಗಳು, ಧೂಳು, ಅತಿಯಾದ ಎಣ್ಣೆ ಮತ್ತು ಚರ್ಮದ ರಂಧ್ರಗಳಲ್ಲಿ ಇರುವ ವಿಷವನ್ನು ಹೊರಹಾಕಲು ಒಣಬ್ರಶ್ ಅತೀ ಉತ್ತಮ. ಸತ್ತ ಚರ್ಮದ ಕೋಶ ಕಿತ್ತೊಗೆಯುವುದರಿಂದ ತಾಜಾ ಹಾಗೂ ಶುದ್ಧ ಚರ್ಮವು ಬರುವುದು.
3.ಬಣ್ಣ ವೃದ್ಧಿಸುವುದು
ನಿಮ್ಮ ದೈನಂದಿನ ಚರ್ಮದ ಆರೈಕೆಯಲ್ಲಿ ಒಣಬ್ರಶ್ ನ್ನು ಒಳಪಡಿಸಲು ಇನ್ನೊಂದು ಕಾರಣವಿದೆ. ಇದು ನಿಮ್ಮ ಚರ್ಮದ ಬಣ್ಣವನ್ನು ಬಿಳಿಯಾಗಿಸುವುದು. ನಿಸ್ತೇಜ ಚರ್ಮವು ನಿಮಗೆ ಮುಜುಗರ ಉಂಟು ಮಾಡುವುದು. ಇದರಿಂದ ಹೆಚ್ಚಿನವರು ಕ್ರೀಮ್ ಗಳ ಮೊರೆ ಹೋಗುವರು. ಒಣ ಬ್ರಶ್ ನಿಂದ ಚರ್ಮದ ಆರೈಕೆ ಮಾಡಿದರೆ ಆಗ ರಕ್ತದ ಪರಿಚಲನೆಯು ಉತ್ತಮವಾಗಿ ಕಪ್ಪು ಕಲೆಗಳು ನಿವಾರಣೆಯಾಗಿ ಬಣ್ಣವು ಬಿಳಿಯಾಗುವುದು.
4.ಒಳಗೆ ಬೆಳೆದಿರುವ ಕೂದಲು ತೆಗೆಯುವುದು
ಕೈ ಹಾಗೂ ಕಾಲುಗಳ ಕೂದಲನ್ನು ತೆಗೆಯಲು ಶೇವ್ ಮಾಡುವಂತಹ ಮಹಿಳೆಯರಲ್ಲಿ ಸಾಮಾನ್ಯವಾಗಿ ಒಳಗಿನಿಂದ ಕೂದಲು ಬೆಳೆಯುವ ಸಮಸ್ಯೆ ಕಂಡುಬರುವುದು. ಇದು ತುಂಬಾ ಕೆಟ್ಟದಾಗಿ ಕಾಣಿಸುವುದು ಮಾತ್ರವಲ್ಲದೆ ಇದನ್ನು ತೆಗೆಯುವುದು ತುಂಬಾ ಕಷ್ಟ. ಪ್ರತಿನಿತ್ಯ ನೀವು ಒಣಬ್ರಶ್ ಬಳಸಿದರೆ ಆಗ ಒಳಗಿನಿಂದ ಕೂದಲು ಬೆಳೆಯುವ ಸಮಸ್ಯೆ ನಿವಾರಣೆ ಮಾಡಬಹುದು. ಇದು ಒಳಗಿನಿಂದ ಕೂದಲು ಬೆಳೆಯುವುದನ್ನು ತಡೆಯುವುದು.
ಸರಿಯಾದ ವಿಧಾನದ ಮೂಲಕ ಒಣ ಬ್ರಶ್ ಬಳಸುವುದು ಹೇಗೆ ಮತ್ತು ಪರಿಣಾಮಕಾರಿಯಾಗಲು ಇದನ್ನು ಹೇಗೆ ಪಾಲಿಸಬೇಕು ಎಂದು ತಿಳಿಯಿರಿ.
ಚರ್ಮಕ್ಕೆ ಬ್ರಶ್ ಮಾಡುವುದು ಹೇಗೆ
*ಸ್ನಾನಕ್ಕೆ ತೆರಳು ಮೊದಲು ನೀವು ಬ್ರಶ್ ತೆಗೆದುಕೊಂಡು ಅದರಿಂದ ಪಾದಗಳನ್ನು ಉಜ್ಜಿಕೊಳ್ಳಿ.
*ವೃತ್ತಾಕಾರದಲ್ಲಿ ಬ್ರಶ್ ನ್ನು ಉಜ್ಜಿ ಮತ್ತು ಕಾಲಿನ ಕಡೆಗೆ ಇದನ್ನು ಸಾಗಿಸಿ.
* ದೇಹದ ಇತರ ಭಾಗಗಳನ್ನು ಬ್ರಶ್ ನಿಂದ ಉಜ್ಜಿ.
*ತುಂಬಾ ಸೂಕ್ಷ್ಮವಾಗಿರುವ ಚರ್ಮದ ಭಾಗಗಳಲ್ಲಿ ಮೆತ್ತಗೆ ಬ್ರಶ್ ಉಜ್ಜಿ.
* ಹೀಗೆ ಮಾಡಿದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.
ಪಾಲಿಸಬೇಕಾದ ನಿಯಮಗಳು
•ತುಂಬಾ ಮೃಧುವಾಗಿರುವಂತಹ ಬ್ರಶ್ ನ್ನು ಬಳಸಿಕೊಳ್ಳಿ.
•ದೊಡ್ಡ ಹಿಡಿ ಇರುವಂತಹ ಬ್ರಶ್ ಬಳಸಿಕೊಳ್ಳಿ. ಇದರಿಂದ ಆರಾಮವಾಗಿ ಉಜ್ಜಬಹುದು.
•ಕೆಳಗಿನಿಂದ ಆರಂಭಿಸಿ ಮೇಲಿನ ಭಾಗಕ್ಕೆ ಬನ್ನಿ.
•ದಿನದಲ್ಲಿ ಒಂದು ಸಲ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.
•ಬ್ರಶ್ ನಿಂದ ಉಜ್ಜಿಕೊಂಡ ಬಳಿಕ ಸ್ನಾನ ಮಾಡಿಕೊಳ್ಳಿ. ಇದರಿಂದ ಕಲ್ಮಶ ಮತ್ತು ವಿಷಕಾರಿ ಅಂಶಗಳು ಹೊರಹೋಗುವುದು.
•ಸೋಂಕು ಬರದಂತೆ ತಡೆಯಲು ಬ್ರಶ್ ನ್ನು ಸ್ವಚ್ಛವಾಗಿಡಿ.
ಒಣ ಬ್ರಶ್ ನಿಂದ ಚರ್ಮವನ್ನು ಉಜ್ಜಿಕೊಂಡರೆ ಆಗುವ ಲಾಭಗಳ ಬಗ್ಗೆ ನೀವು ಈಗ ತಿಳಿದುಕೊಂಡಿದ್ದೀರಿ. ಇದನ್ನು ನಿಮ್ಮ ದೈನಂದಿನ ಚರ್ಮದ ಆರೈಕೆಯ ಭಾಗವಾಗಿಸಿದರೆ ತುಂಬಾ ಒಳ್ಳೆಯದು.



Click it and Unblock the Notifications











