Latest Updates
-
ಉಪ್ಪಿನಕಾಯಿ, ಹಪ್ಪಳ ಇಷ್ಟನಾ? ಎಚ್ಚರ! ಹೃದಯದ ಆರೋಗ್ಯಕ್ಕಾಗಿ ಅಡುಗೆಯಲ್ಲಿ ಈ ಬದಲಾವಣೆ ಮಾಡಲೇಬೇಕು -
ಅಮೆಜಾನ್ ಸೇಲ್ ಮುಗಿಯಲು ಕೆಲವೇ ಗಂಟೆ ಬಾಕಿ: ಈ ಬ್ಯೂಟಿ ಮತ್ತು ಫ್ಯಾಷನ್ ಡೀಲ್ಸ್ ಮಿಸ್ ಮಾಡ್ಬೇಡಿ! -
ತೀವ್ರ ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಆರೋಗ್ಯವಾಗಿರಲು ಈ ಸುರಕ್ಷತಾ ಕ್ರಮಗಳನ್ನು ಮಿಸ್ ಮಾಡ್ಬೇಡಿ! -
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ! -
ಬಿಸಿಲಿಗೆ ಬಾಲ್ಕನಿ ಗಿಡಗಳು ಬಾಡುತ್ತಿವೆಯೇ? ಈ 5 ಸರಳ ಟ್ರಿಕ್ಸ್ ಬಳಸಿ ಗಿಡಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಿ! -
ಹಾಲಿನ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಹಾಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಈ ಪರ್ಯಾಯ ಆಹಾರಗಳೇ ದಾರಿ! -
ರೆಡ್ ಕಾರ್ಪೆಟ್ ಮೇಲೆ ಸದ್ದು ಮಾಡುತ್ತಿರುವ 'ಸೀರೆ-ಗೌನ್' ಮ್ಯಾಜಿಕ್: 2026ರ ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ! -
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್!
ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ಹಸಿರು ಸೇಬುಹಣ್ಣಿನ ಫೇಸ್ ಮಾಸ್ಕ್
ಹಸಿರು ಸೇಬುಹಣ್ಣಿನಲ್ಲಿ ಮಾನವನ ದೇಹಕ್ಕೆ ಬೇಕಾಗುವ ಅಗತ್ಯ ಪೋಷಕಾಂಶಗಳು ಮತ್ತು ಮಿನರಲ್ ಗಳಿವೆ, ಇವುಗಳು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವು ನೀಡುತ್ತದೆ.ಹಸಿರು ಸೇಬು ಹಣ್ಣುಗಳು ಜೀರ್ಣಕ್ರಿಯೆ ಮತ್ತು ಚರ್ಮವನ್ನು ಪುನರುಜ್ಜೀವನಗೊಳಿಸಲು ಸಹಕಾರಿಯಾಗಿದೆ. ನಮಗೆಲ್ಲರಿಗೂ ಈ ಲಾಭಗಳ ಬಗ್ಗೆ ಚೆನ್ನಾಗಿಯೇ ತಿಳಿದಿದೆ .ಆದರೆ ಹಸಿರು ಸೇಬುಹಣ್ಣುಗಳು ನಿಮ್ಮ ಚರ್ಮವನ್ನು ಬಾಹ್ಯವಾಗಿ ಕೂಡ ಸೌಂದರ್ಯಗೊಳಿಸಲು ನೆರವಾಗುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.
ವಿಟಮಿನ್ ಸಿ ಅಂಶವು ಹಸಿರು ಸೇಬು ಹಣ್ಣಿನಲ್ಲಿದ್ದು ಇದು ಚರ್ಮದ ಆರೋಗ್ಯ ಬಹಳ ಒಳ್ಳೆಯದು. ಇದು ಚರ್ಮದ ಸ್ಥಿತಿಸ್ಥಾಪಕತ್ವ ಗುಣವನ್ನು ಹೆಚ್ಚಿಸಲು ಮತ್ತು ಆ ಮೂಲಕ ಕೋಲಾಜಿನ್ ಉತ್ಪಾದನೆಯನ್ನು ಹೆಚ್ಚಿಸುವ ಕೆಲಸವನ್ನು ನಿರ್ವಹಿಸುತ್ತವೆ. ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮವನ್ನುರಕ್ಷಿಸುವ ಕೆಲಸವನ್ನು ಹಸಿರು ಸೇಬು ಹಣ್ಣುಗಳು ಮಾಡುತ್ತವೆ ಯಾಕೆಂದರೆ ಇದರಲ್ಲಿ ತಾಮ್ರದ ಅಂಶವಿರುತ್ತದೆ. ಹಸಿರು ಸೇಬು ಹಣ್ಣಿನಲ್ಲಿ ವಿಟಮಿನ್ ಎ ಇದ್ದು, ಇದು ಚರ್ಮದ ಕ್ಯಾನ್ಸರ್ ಉಂಟು ಮಾಡುವ ಜೀವಕೋಶಗಳ ವಿರುದ್ಧ ಹೋರಾಡುತ್ತದೆ. ಹಾಗಾದ್ರೆ ಹಸಿರು ಸೇಬುಹಣ್ಣನ್ನು ಬಳಸಿ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಮೃದುವಾಗಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಹೊಳೆಯುವ ತ್ವಚೆಗಾಗಿ ಹಸಿರು ಸೇಬುಹಣ್ಣುಗಳು
ಹಸಿರು ಸೇಬು ಹಣ್ಣು ಸಾಕಷ್ಟು ವಿಟಮಿನ್ ಅಂಶವನ್ನು ಹೊಂದಿರುತ್ತದೆ ಮತ್ತು ಚರ್ಮವು ಪುನರ್ಜ್ಜೀವನಗೊಳ್ಳಲು ಸಹಾಯಕವಾಗಿದೆ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ನೆರವಿಗೆ ಬರುತ್ತದೆ. ಇದು ನಿಮ್ಮ ಚರ್ಮವನ್ನು ತಾಜಾವಾಗಿ ಇರುತ್ತದೆ ಮತ್ತು ಕಳೆಗುಂದಲು ಬಿಡುವುದಿಲ್ಲ ಜೊತೆ ಒತ್ತಡಕ್ಕೆ ಸಿಲುಕಿದಂತೆ ಕಾಣಲು ಬಿಡುವುದಿಲ್ಲ. ಮನೆಯಲ್ಲೇ ಹೊಳೆಯುವ ತ್ವಚೆ ಪಡೆಯಲು ಈ ಮನೆಮದ್ದನ್ನು ಬಳಕೆ ಮಾಡಬಹುದು.
ಬೇಕಾಗುವ ಪದಾರ್ಥಗಳು
• 1 ಹಸಿರು ಸೇಬುಹಣ್ಣು
• 1 ಲೋಟ ನೀರು
ಬಳಕೆ ಮಾಡುವ ವಿಧಾನ ಹೇಗೆ?
1. ಹಸಿರು ಸೇಬು ಹಣ್ಣುನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ಆದರೆ ಸಿಪ್ಪೆಯನ್ನು ತೆಗೆಯಬೇಡಿ.
2.ಸ್ವಲ್ಪ ನೀರನ್ನು ಸೇರಿಸಿ ಎರಡನ್ನೂ ಒಟ್ಟಿಗೆ ಬ್ಲೆಂಡ್ ಮಾಡಿ.
3. ಇದನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿ ಮತ್ತು 15 ನಿಮಿಷ ಹಾಗೆಯೇ ಬಿಡಿ.
4. 15 ನಿಮಿಷದ ನಂತರ, ತಣ್ಣನೆಯ ನೀರಿನಿಂದ ತೊಳೆಯಿರಿ ಮತ್ತು ನೀವು ಮೊದಲ ಬಳಕೆಯಲ್ಲಿಯೇ ಮಹತ್ವವಾದ ಬದಲಾವಣೆಯನ್ನು ನಿಮ್ಮ ಚರ್ಮದಲ್ಲಿ ಕಾಣಲು ಸಾಧ್ಯವಿದೆ.
ಹಸಿರು ಸೇಬು ಹಣ್ಣು, ಜೇನುತುಪ್ಪ ಮತ್ತು ನಿಂಬೆರಸದ ಮಾಸ್ಕ್
ಹಸಿರು ಸೇಬು ಹಣ್ಣಿನಲ್ಲಿ ಸ್ಯಾಲಿಸಿಲಿಕ್ ಆಸಿಡ್ ಅಂಶವಿದ್ದು, ಇದು ಮೊಡವೆಗಳು ಮತ್ತು ಆಕ್ನೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ.ಈ ಹಸಿರು ಸೇಬು ಹಣ್ಣಿನ ಪ್ಯಾಕ್ ಬ್ಲ್ಯಾಕ್ ಸ್ಪಾಟ್ಸ್ ಮತ್ತು ಆಕ್ನೆ ಕಲೆಗಳನ್ನು ತೆಗೆಯಲ ನೆರವಿಗೆ ಬರುತ್ತದೆ. ವಾರಕ್ಕೆ ಎರಡು ಬಾರಿ ಈ ಪ್ಯಾಕ್ ನ್ನು ಬಳಕೆ ಮಾಡಿ ಮತ್ತು ಉತ್ತಮ ಫಲಿತಾಂಶ ಪಡೆಯಿರಿ.
ಬೇಕಾಗುವ ಪದಾರ್ಥಗಳು :
• 1 ಹಸಿರು ಸೇಬು ಹಣ್ಣು
• 1 ಟೀ ಸ್ಪೂನ್ ಜೇನುತುಪ್ಪ
• 1 ಟೀ ಸ್ಪೂನ್ ನಿಂಬೆ ರಸ
ಬಳಕೆ ಮಾಡುವ ವಿಧಾನ ಹೇಗೆ?
1. ಹಸಿರು ಸೇಬು ಹಣ್ಣನ್ನು ತೆಗೆದುಕೊಳ್ಳಿ ಮತ್ತು ಗ್ರೈಂಡ್ ಮಾಡಿ
2. ಹಸಿರು ಸೇಬು ಹಣ್ಣನ್ನು ಹಿಂಡಿ ಅದರ ರಸ ತೆಗೆಯಿರಿ
3.ಅದಕ್ಕೆ ಒಂದು ಟೀ ಸ್ಪೂನ್ ಜೇನುತುಪ್ಪ ಮತ್ತು 1 ಟೀ ಸ್ಪೂನ್ ನಿಂಬೆ ರಸವನ್ನು ಸೇರಿಸಿ
4. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ
5.ಈ ಮಿಶ್ರಣವನ್ನು ನಿಮ್ಮ ಮುಖ ಮತ್ತು ಸಮಸ್ಯೆಯಾದ ಚರ್ಮಕ್ಕೆ ಅಪ್ಲೈ ಮಾಡಿಮತ್ತು 20 ನಿಮಿಷ ಹಾಗೆಯೇ ಬಿಡಿ.
0 6. ತಣ್ಣನೆಯ ನೀರಿನಿಂದ 20 ನಿಮಿಷದ ನಂತರ ತೊಳೆಯಿರಿ.
ಹಸಿರು ಸೇಬು ಹಣ್ಣು ಮತ್ತು ಜೇನುತುಪ್ಪದ ಫೇಸ್ ಮಾಸ್ಕ್
ಹಸಿರು ಸೇಬು ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳ ನೈಸರ್ಗಿಕವಾಗಿ ಚರ್ಮವು ಹೊಳೆಯುವಂತೆ ಮಾಡುತ್ತದೆ. ಇದರಲ್ಲಿ ಟಾನಿಕ್ ಆಸಿಡ್ ಇರುತ್ತದೆ ಮತ್ತು ಇದು ಚರ್ಮವನ್ನು ಮೃದು ಮತ್ತು ಸಮತಟ್ಟು ಮಾಡಲು ಸಹಕಾರಿಯಾಗಿದೆ.ಉತ್ತಮ ಫಲಿತಾಂಶಕ್ಕಾಗಿ ಈ ಬ್ರೈಟನಿಂಗ್ ಮಾಸ್ಕ್ ನ್ನು ವಾರಕ್ಕೆ ಒಂದು ಬಾರಿ ಬಳಕೆ ಮಾಡಬಹುದಾಗಿದೆ.
ಬೇಕಾಗುವ ಪದಾರ್ಥಗಳು :
• ಹಸಿರು ಸೇಬು ಹಣ್ಣಿನ ಸಿಪ್ಪೆಗಳು
• 1 ಟೀ ಸ್ಪೂನ್ ಜೇನುತುಪ್ಪ
ಬಳಕೆ ಮಾಡುವ ವಿಧಾನ ಹೇಗೆ?
1. ಈ ಫೇಸ್ ಮಾಸ್ಕ್ ತಯಾರಿಸಲು ನಿಮಗೆ ಹಸಿರು ಸೇಬು ಹಣ್ಣಿನ ಸಿಪ್ಪೆಗಳು ಬೇಕಾಗುತ್ತದೆ.
2. ಹಸಿರು ಸೇಬು ಹಣ್ಣಿನ ಸಿಪ್ಪೆ ತೆಗೆಯಿರಿ ಮತ್ತು ಸಿಪ್ಪೆಯನ್ನು ಬ್ಲೆಂಡ್ ಮಾಡಿ ಮತ್ತು ಪೇಸ್ಟ್ ತಯಾರಿಸಿಕೊಳ್ಳಿ.
3. ಅದಕ್ಕೆ 1 ಟೀ ಸ್ಪೂನ್ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ.
4. ಈ ದಪ್ಪನೆಯ ಮಿಶ್ರಣವನ್ನ ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ.
5. 15 ನಿಮಿಷದ ನಂತರ, ಹದವಾಗಿ ಬೆಚ್ಚಗಿರುವ ನೀರಿನಿಂದ ತೊಳೆಯಿರಿ.
ಹಸಿರು ಸೇಬುಹಣ್ಣು ಮತ್ತು ಓಟ್ ಮೀಲ್ ಮಾಸ್ಕ್
ಹಸಿರು ಸೇಬು ಹಣ್ಣಿನಲ್ಲಿರುವ ಹೈಡ್ರೇಟಿಂಗ್ ಏಜೆಂಟ್ ಗಳು ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಮಾಯ್ಚರೈಸ್ ಆಗಿರುವಂತೆ ನೋಡಿಕೊಳ್ಳುತ್ತದೆ..ಇದುನಿಮಗೆ ಮೃದುವಾದ, ಮಾಯ್ಚರೈಸ್ ಆಗಿರುವ ಮತ್ತು ಆರೋಗ್ಯಕರವಾಗಿರುವ ಚರ್ಮವನ್ನು ಒದಗಿಸುತ್ತದೆ. ಹಾಗಾಗಿ ನಿಯಮಿತವಾಗಿ ಈ ಫೇಸ್ ಪ್ಯಾಕ್ ಬಳಕೆ ಮಾಡುವುದು ನಿಮ್ಮ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಬೇಕಾಗುವ ಪದಾರ್ಥಗಳು :
• ½ ಹಸಿರು ಸೇಬು ಹಣ್ಣು
• 1 ಸ್ಪೂನ್ ಓಟ್ ಮೀಲ್
• 1 ಸ್ಪೂನ್ ಜೇನುತುಪ್ಪ
• 1 ಸ್ಪೂನ್ ಮೊಟ್ಟೆಯ ಹಳದಿ ಭಾಗ
ಬಳಕೆ ಮಾಡುವ ವಿಧಾನ ಹೇಗೆ?
1. ಹಸಿರು ಸೇಬು ಹಣ್ಣನ್ನು ಅರೆಯಿರಿ
2. ಓಟ್ ಮೀಲ್ ನ್ನು ಬ್ಲೆಂಡ್ ಮಾಡಿ ಪೌಡರ್ ತಯಾರಿಸಿಕೊಳ್ಳಿ.
3. ಓಟ್ ಮೀಲ್ ಪೌಡರ್ ಮತ್ತು ಅರೆದಿಟ್ಟುಕೊಂಡಿರುವ ಹಸಿರು ಸೇಬು ಹಣ್ಣನ್ನು ಮಿಶ್ರಣ ಮಾಡಿ
4. ನಂತರ 1 ಸ್ಪೂನ್ ಜೇನುತುಪ್ಪ ಮತ್ತು ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ ಚೆನ್ನಾಗಿ ಕಲಸಿ
5. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ.
6. 15 ನಿಮಿಷದ ನಂತರ ತಣ್ಣನೆಯನ ನೀರಿನಿಂದ ವಾಷ್ ಮಾಡಿ ಮತ್ತು ಹಾಗೆಯೇ ಮುಖವನ್ನು ಒಣಗಲು ಬಿಡಿ.
7. ವಾರಕ್ಕೆ ಎರಡು ಬಾರಿ ಈ ಕ್ರಮವನ್ನು ಅನುಸರಿಸಿ ಮತ್ತು ಉತ್ತಮ ಫಲಿತಾಂಶ ಪಡೆಯಿರಿ.



Click it and Unblock the Notifications