Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಸೌಂದರ್ಯ ಹೆಚ್ಚಿಸಲು ಅಜ್ಜಿಯಂದಿರ ಕಾಲದ ನೈಸರ್ಗಿಕ ಫೇಸ್ ಪ್ಯಾಕ್‌ಗಳು
ನಮ್ಮ ಹಿರಿಯರ ಸೌಂದರ್ಯ ನೋಡಿದರೆ ಕೆಲವೊಂದು ಸಲ ಹೊಟ್ಟೆ ಉರಿಯುವುದು ಇದೆ. ಯಾಕೆಂದರೆ ಅವರು ಯಾವುದೇ ಮೇಕಪ್ ಇಲ್ಲದೆಯೂ ತುಂಬಾ ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದರು. ಮೇಕಪ್, ಕ್ರೀಮ್ ಗಳು ಇಲ್ಲದೆ ಇರುವಂತಹ ಕಾಲದಲ್ಲಿಯೂ ಅವರು ತಮ್ಮ ತ್ವಚೆಯನ್ನು ತುಂಬಾ ಆರೋಗ್ಯಕರ ಹಾಗೂ ಕಾಂತಿಯುತವಾಗಿ ಕಾಪಾಡಿಕೊಂಡಿದ್ದರು. ಬಿಸಲಿನಲ್ಲಿ ದಿನವಿಡಿ ಕೆಲಸ ಮಾಡುತ್ತಲಿದ್ದರೂ ಅವರ ತ್ವಚೆ ಮಾತ್ರ ಹಾಗೆ ಇರುತ್ತಲಿತ್ತು. ಬಿಸಿಲಿನಿಂದ ಆಗಿರುವಂತಹ ಕಲೆ, ಮೊಡವೆ, ಸುಟ್ಟ ಗಾಯ, ಒಣ ಚರ್ಮ ಇತ್ಯಾದಿಗಳಿಗೆ ಅವರಲ್ಲಿ ನೈಸರ್ಗಿಕದತ್ತವಾಗಿರುವಂತಹ ಕೆಲವೊಂದು ಮನೆಮದ್ದುಗಳು ಇದ್ದವು.

ಇವರು ಅಡುಗೆ ಮನೆಯಲ್ಲೇ ಸಿಗುವಂತಹ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಅದರಿಂದ ಅದ್ಭುತವಾಗಿರುವ ಫಲಿತಾಂಶ ಪಡೆಯುತ್ತಲಿದ್ದರು. ಇಂದಿನ ದಿನಗಳಲ್ಲಿ ಹಲವಾರು ರೀತಿಯ ಕ್ರೀಮ್ ಗಳು ಲಭ್ಯವಿದ್ದರೂ ನಮ್ಮ ತ್ವಚೆ ಮಾತ್ರ ಹಾನಿಗೀಡಾಗಿದೆ. ಇದಕ್ಕೆ ಕಾರಣಗಳು ಹಲವು. ಈ ಲೇಖನದಲ್ಲಿ ನೈಸರ್ಗಿಕದತ್ತ ಕೆಲವು ಮನೆಮದ್ದುಗಳ ಬಗ್ಗೆ ಹೇಳಿಕೊಡಲಿದ್ದೇವೆ. ಇದನ್ನು ನೀವು ಬಳಸಿಕೊಂಡು ತ್ವಚೆಯ ಕಾಂತಿ ಹೆಚ್ಚಿಸಬಹುದು. ಇದನ್ನು ಓದುತ್ತಾ ಸಾಗಿ.

ಕೇಸರಿ ಫೇಸ್ ಪ್ಯಾಕ್
- 3-4 ಎಸಲು ಕೇಸರಿ
- 1 ಚಮಚ ಹಾಲು
- 1 ಚಮಚ ಸಕ್ಕರೆ
- ಕೆಲವು ಹನಿ ತೆಂಗಿನೆಣ್ಣೆ
ತಯಾರಿಸುವ ವಿಧಾನ
*ಎರಡು ಚಮಚ ನೀರು ಹಾಕಿಕೊಂಡು ಕೇಸರಿಯನ್ನು ರಾತ್ರಿ ನೆನೆಸಿಡಿ.
*ಬೆಳಗ್ಗೆ ಇದಕ್ಕೆ ಹಾಲು, ಸಕ್ಕರೆ ಮತ್ತು ತೆಂಗಿನೆಣ್ಣೆ ಹಾಕಿ.
*ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ.
*ಈ ಮಿಶ್ರದಲ್ಲಿ ಹತ್ತಿ ಉಂಡೆ ಅದ್ದಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ.
*15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ತಣ್ಣೀರಿನಿಂದ ತೊಳೆಯಿರಿ.
*ವಾರದಲ್ಲಿ 2-3 ಸಲ ಇದನ್ನು ಬಳಸಿಕೊಳ್ಳಿ.

ಮುಲ್ತಾನಿ ಮಿಟ್ಟಿ ಮತ್ತು ಲಿಂಬೆರಸದ ಪ್ಯಾಕ್
ಬೇಕಾಗುವ ಸಾಮಗ್ರಿಗಳು
*2 ಚಮಚ ಮುಲ್ತಾನಿ ಮಿಟ್ಟಿ
*ಒಂದು ಚಿಟಿಕೆ ಅರಶಿನ ಹುಡಿ
*½ ಚಮಚ ಶ್ರೀಗಂಧದ ಹುಡಿ.
*ಲಿಂಬೆರಸ
ಬಳಸುವುದು ಹೇಗೆ
*ಒಂದು ಶುದ್ಧವಾಗಿರುವ ಪಿಂಗಾಣಿಯಲ್ಲಿ ಮುಲ್ತಾನಿ ಮಿಟ್ಟಿ, ಅರಶಿನ ಹುಡಿ ಮತ್ತು ಶ್ರೀಗಂಧದ ಹುಡಿ ಹಾಕಿಕೊಂಡು ಮಿಶ್ರಣ ಮಾಡಿ.
*ಕೆಲವು ಹನಿ ಲಿಂಬೆರಸವನ್ನು ಇದಕ್ಕೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ ನಯವಾದ ಪೇಸ್ಟ್ ಮಾಡಿ.
*ಇದನ್ನು ಈಗ ಮುಖಕ್ಕೆ ಹಚ್ಚಿಕೊಳ್ಳಿ.
*ಮುಖದಲ್ಲಿ ಇದು ಹಾಗೆ ಒಣಗಲಿ.
*ತಣ್ಣೀರಿನಿಂದ ತೊಳೆಯಿರಿ ಮತ್ತು ಮುಖ ಒರೆಸಿಕೊಳ್ಳಿ.

ಮೊಸರು ಮತ್ತು ಕಡಲೆಹಿಟ್ಟಿನ ಪ್ಯಾಕ್
*ಬೇಕಾಗುವ ಸಾಮಗ್ರಿಗಳು
*2 ಚಮಚ ಕಡಲೆಹಿಟ್ಟು
*1 ಚಮಚ ಮೊಸರು
*1 ಚಮಚ ಜೇನುತುಪ್ಪ
*ಅರಿಶಿನ ಹುಡಿ
ತಯಾರಿಸುವ ವಿಧಾನ
*ಮೊಸರು, ಕಡಲೆಹಿಟ್ಟು, ಜೇನುತುಪ್ಪ ಮತ್ತು ಅರಶಿನವನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿ.
*ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ.
*15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ ಮತ್ತು ಒಣಗಲು ಬಿಡಿ.
*ಇದನ್ನು ವಾರದಲ್ಲಿ ಒಂದು ಸಲ ಬಳಸಿದರೆ ಕಾಂತಿಯುತ ತ್ವಚೆ ನಿಮ್ಮದಾಗುವುದು.

ಅರಿಶಿನ ಮತ್ತು ಕೊತ್ತಂಬರಿ ಸೊಪ್ಪಿನ ಫೇಸ್ ಪ್ಯಾಕ್
*ಬೇಕಾಗುವ ಸಾಮಗ್ರಿಗಳು
*2 ಚಮಚ ಅರಶಿನ ಹುಡಿ
*ಒಂದು ಹಿಡಿ ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ
*ಕೊತ್ತಂಬರಿ ಸೊಪ್ಪನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ.
*ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ಅರಶಿನ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.
*ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ.
*ಬೆಳಗ್ಗೆ ತಣ್ಣೀರಿನಿಂದ ತೊಳೆಯಿರಿ.

ಮೆಂತೆಯ ಫೇಸ್ ಪ್ಯಾಕ್
*ಬೇಕಾಗುವ ಸಾಮಗ್ರಿಗಳು
*2-3 ಚಮಚ ಮೆಂತ್ಯೆ ಕಾಳುಗಳು
ತಯಾರಿಸುವ ವಿಧಾನ
*ರಾತ್ರಿ ಮೆಂತ್ಯೆ ಕಾಳುಗಳನ್ನು ನೀರಿಗೆ ಹಾಕಿ ನೆನೆಸಿಡಿ.
*ಬೆಳಗ್ಗೆ ಇದನ್ನು ತೆಗೆದುಕೊಂಡು ರುಬ್ಬಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ.
*ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ.
*15 ನಿಮಿಷ ಹಾಗೆ ಬಿಡಿ ಮತ್ತು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.
*ಒಂದು ವಾರ ಕಾಲ ಇದನ್ನು ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಬಹುದು ಮತ್ತು ಬೇಕಾದಾಗ ಬಳಸಬಹುದು.

ಅಲೋವೆರಾ ಫೇಸ್ ಪ್ಯಾಕ್
*ಬೇಕಾಗುವ ಸಾಮಗ್ರಿಗಳು
*2-3 ಚಮಚ ಅಲೋವೆರಾ ಲೋಳೆ
*ಕೆಲವು ಹನಿ ಲಿಂಬೆರಸ
ತಯಾರಿಸುವುದು ಹೇಗೆ
*ತಾಜಾ ಅಲೋವೆರಾದ ಎಲೆ ತೆಗೆದುಕೊಂಡು ಅದರಿಂದ ಲೋಳೆ ತೆಗೆಯಿರಿ.
*ಇದಕ್ಕೆ ಕೆಲವು ಹನಿ ಲಿಂಬೆರಸ ಹಾಕಿಕೊಂಡು ಎಲ್ಲವನ್ನು ಮಿಶ್ರಣ ಮಾಡಿ.
*ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 2-3 ನಿಮಿಷ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ.
*15 ನಿಮಿಷ ಹಾಗೆ ಬಿಟ್ಟ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

ಲಿಂಬೆ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್
*ಬೇಕಾಗುವ ಸಾಮಗ್ರಿಗಳು
*ಕೆಲವು ಹನಿ ಲಿಂಬೆರಸ
*1 ಚಮಚ ಜೇನುತುಪ್ಪ
ತಯಾರಿಸುವ ವಿಧಾನ
*ಪಿಂಗಾಣಿಗೆ ಹಾಕಿಕೊಂಡು ಅದಕ್ಕೆ ಜೇನುತುಪ್ಪ ಮತ್ತು ಲಿಂಬೆರಸ ಹಾಕಿ ಮಿಶ್ರಣ ಮಾಡಿ.
*ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 10-15 ನಿಮಿಷ ಬಿಟ್ಟು ಸಮಾನ್ಯ ನೀರಿನಿಂದ ತೊಳೆಯಿರಿ.
*ವಾರದಲ್ಲಿ ಎರಡರಿಂದ ಮೂರು ಸಲ ಇದನ್ನು ಬಳಸಿದರೆ ವೇಗವಾಗಿ ಫಲಿತಾಂಶ ಪಡೆಯಬಹುದು.
*ಇದು ತ್ವಚೆಯಲ್ಲಿ ಅಧಿಕ ಎಣ್ಣೆಯನ್ನು ಹೊರತೆಗೆಯುವುದು ಮತ್ತು ಚರ್ಮವು ನಯ ಹಾಗೂ ಮೊಶ್ಚಿರೈಸ್ ಆಗಿರಲು ನೆರವಾಗುವುದು.



Click it and Unblock the Notifications