Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಸಮ ಬಣ್ಣ ನಿವಾರಣೆಗೆ ದಾಲ್ಚಿನ್ನಿಯ ಫೇಸ್ ಮಾಸ್ಕ್
ದೇಹದ ಬಣ್ಣವು ಬಿಳಿ, ಕಪ್ಪು ಅಥವಾ ಗೋಧಿ ಬಣ್ಣ ಹೊಂದಿರುವುದು. ಇದು ಮೂರು ವಿಧದ ದೇಹದ ಬಣ್ಣ. ಆದರೆ ಕೆಲವು ಮಹಿಳೆಯರಲ್ಲಿ ಮುಖದ ಮೇಲೆ ಅಸಮ ಬಣ್ಣ ಅಂದರೆ ಸ್ವಲ್ಪ ಬಳಿ ಹಾಗೂ ಇನ್ನೊಂದು ಕಡೆ ಇದು ಬಣ್ಣ ಮಾಸಿರುವಂತೆ ಕಾಣಿಸುವುದು ಇದೆ. ಹೀಗಾಗಿ ಇದು ಸೌಂದರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಇಂತಹ ಸಮಸ್ಯೆಯನ್ನು ನೀವು ಮೇಕಪ್ ನಿಂದ ಬಗೆಹರಿಸಿಕೊಳ್ಳಬಹುದು. ಪ್ರೈಮರ್, ಕಾನ್ಸಿಲರ್ ಮತ್ತು ಫೌಂಡೇಶನ್ ನಿಂದ ನೀವು ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಆದರೆ ಇದು ತಾತ್ಕಾಲಿಕ.
ಯಾಕೆಂದರೆ ಮೇಕಪ್ ತೆಗೆದರೆ ಮತ್ತೆ ನಿಮ್ಮ ಹಳೆಯ ಮುಖ ಮತ್ತೆ ಕಾಣುವುದು. ಈ ಸಮಯದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅತೀ ಅಗತ್ಯ. ಯಾಕೆಂದರೆ ಪದೇ ಪದೇ ಮೇಕಪ್ ಬಳಿದುಕೊಂಡರೆ ಅದರಿಂದ ತ್ವಚೆಯ ಮೇಲೆ ನಿಮಗೆ ತಿಳಿಯದಂತೆ ಅಡ್ಡಪರಿಣಾಮಗಳು ಉಂಟಾಗುವುದು. ಇದಕ್ಕಾಗಿ ಕೆಲವೊಂದು ನೈಸರ್ಗಿಕ ಸಾಮಗ್ರಿಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಿ. ಇದರಲ್ಲಿ ಪ್ರಮುಖವಾಗಿ ನೀವು ದಾಲ್ಚಿನ್ನಿ ಬಳಸಿಕೊಂಡು ತ್ವಚೆಯ ಆರೈಕೆ ಮಾಡಬಹುದು. ಹಲವಾರು ಪೋಷಕಾಂಶಗಳಿಂದ ಕೂಡಿರುವಂತಹ ದಾಲ್ಚಿನ್ನಿಯು ಚರ್ಮದ ಬಣ್ಣ ತಗ್ಗಿಸಿ, ಅಸಮ ಬಣ್ಣದ ಸಮಸ್ಯೆ ನಿವಾರಣೆ ಮಾಡುವುದು. ನಿಮ್ಮ ತ್ವಚೆಯ ಆರೈಕೆಯಲ್ಲಿ ದಾಲ್ಚಿನ್ನಿ ಬಳಕೆ ಮಾಡುವುದು ಹೇಗೆ ಎಂದು ತಿಳಿಯಿರಿ.
ನಿಮ್ಮ ತ್ವಚೆಯ ಆರೈಕೆಯಲ್ಲಿ ದಾಲ್ಚಿನ್ನಿ ಬಳಕೆ ಮಾಡುವುದು ಹೇಗೆ?

* ಮೊಡವೆ, ಬೊಕ್ಕೆ ಮತ್ತು ದದ್ದುಗಳಿಗೆ ಚಿಕಿತ್ಸೆ
* ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ನೀಡುವುದು.
* ಕಿರಿಕಿರಿ ಉಂಟುಮಾಡುವ ಚರ್ಮಕ್ಕೆ ಶಮನ ನೀಡುವುದು.
* ಬ್ಲ್ಯಾಕ್ ಹೆಡ್ ಗಳು ಮತ್ತು ವೈಟ್ ಹೆಡ್ ಗಳ ನಿವಾರಣೆ
ದಾಲ್ಚಿನ್ನಿ ಹೊಂದಿರುವ ಫೇಸ್ ಮಾಸ್ಕ್ ನ್ನು ನೀವು ಮನೆಯಲ್ಲೇ ತಯಾರಿಸಬಹುದು. ದಾಲ್ಚಿನ್ನಿ ಬಳಸಿಕೊಂಡು ಫೇಸ್ ಮಾಸ್ಕ್ ತಯಾರಿ ಹೇಗೆ ಎಂದು ತಿಳಿಯಿರಿ.
ಬೇಕಾಗುವ ಸಾಮಗ್ರಿಗಳು
* 2 ಚಮಚ ದಾಲ್ಚಿನ್ನಿ ಹುಡಿ.
* 1/2 ಚಮಚ ಲಿಂಬೆ ರಸ
* 1/2 ಚಮಚ ಜಾಯಿಕಾಯಿ ಹುಡಿ
* 4-5 ಹನಿ ಚಾ ಮರದ ಸಾರಭೂತ ತೈಲ
ವಿಧಾನ
* ಸಣ್ಣ ಪಿಂಗಾಣಿಯಲ್ಲಿ ದಾಲ್ಚಿನ್ನಿ ಹುಡಿಯನ್ನು ಹಾಕಿಕೊಳ್ಳಿ.
* ಇದಕ್ಕೆ ಜೇನುತುಪ್ಪ ಹಾಕಿ ಮತ್ತು ಎರಡು ಸರಿಯಾಗಿ ಮಿಶ್ರಣ ಮಾಡಿ.
* ಅರ್ಧ ಲಿಂಬೆ ಕತ್ತರಿಸಿ ಮತ್ತು ಇದರ ರಸ ತೆಗೆಯಿರಿ ಮತ್ತು ಇದನ್ನು ಹೇಳಿದಷ್ಟು ಪ್ರಮಾಣದಲ್ಲಿ ಹಾಕಿಕೊಳ್ಳಿ. ಇದರ ಬಳಿಕ ಜಾಯಿಕಾಯಿ ಹುಡಿ ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮತ್ತೆ ಮಿಶ್ರಣ ಮಾಡಿಕೊಳ್ಳಿ.
* ಕೊನೆಯದಾಗಿ ಕೆಲವು ಹನಿ ಚಾ ಮರದ ಸಾರಭೂತ ತೈಲ ಹಾಕಿಕೊಂಡು ಮಿಶ್ರಣ ಮಾಡಿ ಮತ್ತು ಮತ್ತೆ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದರಿಂದ ನಿಮಗೆ ನಯ ಹಾಗೂ ಮೆತ್ತಗಿನ ಪೇಸ್ಟ್ ಸಿಗುವುದು.
* ಪೇಸ್ಟ್ ಈಗ ಹಚ್ಚಿಕೊಳ್ಳಲು ತಯಾರಾಗಿದೆ.
ಇದಕ್ಕೆ ಹಚ್ಚಿಕೊಳ್ಳುವ ವಿಧಾನ
* ಉಗುರುಬೆಚ್ಚಗಿನ ನೀರಿನಿಂದ ಮೊದಲು ಮುಖ ತೊಳೆದುಕೊಳ್ಳಿ. ಬಿಸಿ ನೀರು ಚರ್ಮದ ರಂಧ್ರಗಳನ್ನು ತೆರೆಯುವುದು ಮತ್ತು ವಿಷಕಾರಿ ಅಂಶ, ಧೂಳು ಮತ್ತು ಕೊಳೆಯನ್ನು ತೆಗೆಯುವುದು.
* ಇದರ ಬಳಿಕ ಶುದ್ಧವಾದ ಟವೆಲ್ ನಿಂದ ಮುಖ ಒರೆಸಿಕೊಳ್ಳಿ.
* ಬ್ರಷ್ ಬಳಸಿಕೊಂಡು ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. ಕೈಬೆರಳಿನಿಂದಲೂ ಇದನ್ನು ನೀವು ಹಚ್ಚಿಕೊಳ್ಳಬಹುದು. ಆದರೆ ಇದರಿಂದ ನಿಮಗೆ ಕಿರಿಕಿರಿಯಾಗಬಹುದು. ಇದಕ್ಕೆ ಬ್ರಷ್ ಬಳಸಿ.
* ಮುಖ ಹಾಗೂ ಕುತ್ತಿಗೆ ಫೇಸ್ ಪ್ಯಾಕ್ ಹಚ್ಚಿಕೊಳ್ಳಿ. ಯಾಕೆಂದರೆ ಮುಖ ಹಾಗೂ ಕುತ್ತಿಗೆ ಬಣ್ಣವು ಒಂದೇ ರೀತಿಯಲ್ಲಿರಲಿ. ಕಣ್ಣುಗಳು, ಕಿವಿ ಮತ್ತು ಬಾಯಿಗೆ ಹಚ್ಚಿಕೊಳ್ಳಬೇಡಿ.
* 15-20 ನಿಮಿಷ ಕಾಲ ನೀವು ಈ ಫೇಸ್ ಪ್ಯಾಕ್ ನ್ನು ಹಾಗೆ ಬಿಡಿ. ಬಳಿಕ ಮುಖ ತೊಳೆಯಿರಿ.
* ಉತ್ತಮ ಫಲಿತಾಂಶಕ್ಕಾಗಿ ನೀವು ವಾರದಲ್ಲಿ ಎರಡು ಸಲ ಇದನ್ನು ಬಳಸಿ.
ಹೇಗೆ ಕೆಲಸ ಮಾಡುವುದು?
* ದಾಲ್ಚಿನ್ನಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಮೊಡವೆ ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ಇದು ತೆಗೆದುಹಾಕುವುದು. ಇದರಿಂದ ತ್ವಚೆಗೆ ಕಾಂತಿ ಸಿಗುವುದು.
* ಜೇನುತುಪ್ಪವು ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು ಮತ್ತು ಲಿಂಬೆರಸವು ಚರ್ಮದಲ್ಲಿನ ರಂಧ್ರಗಳನ್ನು ಬಿಗಿಗೊಳಿಸುವುದು.
* ಜಾಯಿಕಾಯಿ ಹುಡಿಯು ಚರ್ಮದಲ್ಲಿನ ಸತ್ತ ಕೋಶಗಳನ್ನು ತೆಗೆದುಹಾಕುವುದು ಮತ್ತು ಒಣಚರ್ಮದ ಸಮಸ್ಯೆ ನಿವಾರಣೆ ಮಾಡುವುದು. ಇದರಿಂದ ಚರ್ಮವು ಮೊಶ್ಚಿರೈಸ್ ಆಗಿರುವುದು.
* ಚಾ ಮರದ ಸಾರಭೂತ ತೈಲದಲ್ಲಿರುವಂತಹ ಉರಿಯೂತ ಶಮನಕಾರಿ ಗುಣವು ಉರಿಯೂತಕ್ಕೆ ಒಳಗಾಗಿರುವ ಚರ್ಮಕ್ಕೆ ಶಮನ ನೀಡುವುದು.



Click it and Unblock the Notifications
