Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮೊಡವೆಯ ಬಗ್ಗೆ ಇರುವ ಈ 5 ಸುಳ್ಳುಗಳು ತಿಳಿದಿರಲಿ
ಮೊಡವೆಯ ಸಮಸ್ಯೆಯನ್ನು ಲಿಂಗ ಬೇಧವಿಲ್ಲದೆ ಬಹುತೇಕ ಎಲ್ಲರೂ ಜೀವನದ ಒಂದಿಲ್ಲೊಂದು ಹಂತದಲ್ಲಿ ಅನುಭವಿಸಿಯೇ ಇರುತ್ತಾರೆ. ಚರ್ಮದ ಮೇಲಿನ ಕೊಬ್ಬಿನ ಗ್ರಂಥಿಗಳು (sebaceous glands) ಹೆಚ್ಚುವರಿ ಕೊಬ್ಬು ಉತ್ಪಾದಿಸಿದಾಗ ಅದು ಚರ್ಮದ ರಂಧ್ರಗಳಲ್ಲಿ ಜಮೆಯಾಗಿ ಮೊಡವೆ ಹಾಗೂ ಗುಳ್ಳೆಗಳಾಗಿ ಹೊರಬರುತ್ತದೆ.

ಸಾಮಾನ್ಯವಾಗಿ ಹದಿಹರೆಯದಲ್ಲಿಯೇ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಕೆಲ ಬಾರಿ 20 ಹಾಗೂ 30 ರ ವಯಸ್ಸಿನ ಹೆಣ್ಣು ಮಕ್ಕಳಿಗೂ ಮೊಡವೆಗಳುಂಟಾಗುತ್ತವೆ. ಮೊಡವೆ ಎಂಬುದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಇದರ ಬಗ್ಗೆ ಹಲವಾರು ತಪ್ಪು ಕಲ್ಪನೆಗಳು ಜನರಲ್ಲಿ ಮನೆ ಮಾಡಿವೆ. ಮೊಡವೆಗಳ ಬಗ್ಗೆ ಜನರಲ್ಲಿ ಇರುವ ಸಾಮಾನ್ಯ ತಪ್ಪು ಕಲ್ಪನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದ್ದು, ಮೊಡವೆಗಳ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಸಹ ವಿವರಿಸಲಾಗಿದೆ.
ಮೊಡವೆಗಳ ಬಗ್ಗೆ ತಪ್ಪು ಕಲ್ಪನೆಗಳು

ಸುಳ್ಳು : ಸ್ವಚ್ಛತೆಯ ಕೊರತೆಯಿಂದ ಮೊಡವೆಗಳುಂಟಾಗುತ್ತವೆ
ಸತ್ಯ : ಚರ್ಮದ ರಂಧ್ರಗಳು ಮುಚ್ಚಿದಾಗ ಮೊಡವೆಗಳುಂಟಾಗುತ್ತವೆ ಎಂಬುದು ಸತ್ಯ. ಆದರೆ ಹೊರಗಿನ ಧೂಳು ಅಥವಾ ಮಣ್ಣಿನಿಂದ ಚರ್ಮದ ರಂಧ್ರಗಳು ಮುಚ್ಚಿದಾಗ ಮೊಡವೆಗಳಾಗುವುದಿಲ್ಲ. ಚರ್ಮದ ಮೇಲಿನ ಕೊಬ್ಬಿನ ಗ್ರಂಥಿಗಳು ಸ್ರವಿಸುವ ಹೆಚ್ಚುವರಿ ಕೊಬ್ಬಿನ ಅಂಶದಿಂದ ಮೊಡವೆಗಳು ಬರುತ್ತವೆ. ಹೀಗಾಗಿ ಆಗಾಗ ಮುಖ ತೊಳೆದುಕೊಳ್ಳುವುದು, ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಮೊಡವೆಗಳಾಗದಂತೆ ತಡೆಯಲು ಸಾಧ್ಯವಿಲ್ಲ. ವಾಸ್ತವದಲ್ಲಿ ಪದೆ ಪದೆ ಮುಖ ತೊಳೆದುಕೊಳ್ಳುವುದರಿಂದ ಮುಖದ ಚರ್ಮ ಒಣಗಿ ಇನ್ನಷ್ಟು ಹೆಚ್ಚು ಕೊಬ್ಬು ಬಿಡುಗಡೆಯಾಗಿ ಮೊಡವೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ.

ಸುಳ್ಳು : ಮೊಡವೆಗೆ ಯಾವುದೇ ಚಿಕಿತ್ಸೆ ಮಾಡಬೇಕಿಲ್ಲ
ಸತ್ಯ : ಮೊಡವೆಗಳ ಚಿಕಿತ್ಸೆಯ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಅಗತ್ಯ. ಚಿಕ್ಕ ಪ್ರಮಾಣದ ಮೊಡವೆಗಳನ್ನು ಕೆಲ ಮನೆ ಔಷಧಿಗಳಿಂದಲೇ ನಿವಾರಿಸಬಹುದು. ಆದರೆ ಮೊಡವೆಗಳ ಸಮಸ್ಯೆ ಹೆಚ್ಚಾದಲ್ಲಿ ಮಾತ್ರ ಇದಕ್ಕೆ ವೈದ್ಯಕೀಯ ಚಿಕಿತ್ಸೆ ಪಡೆಯಲೇಬೇಕು. ಒಂದು ವೇಳೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಚರ್ಮದ ಮೇಲೆ ತುರಿಕೆ, ನೋವು, ರಕ್ತ ಒಸರುವಿಕೆ ಆರಂಭವಾಗಬಹುದು. ಅಲ್ಲದೆ ಮೊಡವೆ ಹಾಗೂ ಗುಳ್ಳೆಗಳು ನಿಮ್ಮ ಮಾನಸಿಕ ಆರೋಗ್ಯವನ್ನೂ ಕೆಡಿಸಬಲ್ಲವು ಎಂಬುದು ನಿಮಗೆ ಗೊತ್ತಿರಲಿ. ಮೊಡವೆಗಳು ಉದ್ವೇಗ ಹೆಚ್ಚಿಸಿ ಆತ್ಮ ವಿಶ್ವಾಸವನ್ನು ಹಾಳುಮಾಡಬಲ್ಲವು. ದೀರ್ಘ ಕಾಲದವರೆಗೆ ಮೊಡವೆಗಳು ವಾಸಿಯಾಗದಿದ್ದಲ್ಲಿ ತಕ್ಷಣ ವೈದ್ಯರನ್ನು ಕಾಣಬೇಕು.

ಸುಳ್ಳು : ಹೆಚ್ಚಿನ ಮೇಕಪ್‌ನಿಂದ ಮೊಡವೆಗಳಾಗುತ್ತವೆ
ಸತ್ಯ : ಬಹುತೇಕರು ಸುಂದರವಾಗಿ ಕಾಣಲು ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ ಆಗಾಗ ಮೇಕಪ್ ಮಾಡಿಕೊಳ್ಳುವುದರಿಂದ ಮೊಡವೆಗಳುಂಟಾಗುತ್ತವೆ ಎಂಬ ತಪ್ಪು ಕಲ್ಪನೆ ಮನೆ ಮಾಡಿದೆ. ನಿಜ ಹೇಳಬೇಕೆಂದರೆ ಕೇವಲ ಮೇಕಪ್‌ನಿಂದಲೇ ಮೊಡವೆಗಳಾಗುವುದಿಲ್ಲ. ಆದರೆ ಮೇಕಪ್ ತೆಗೆದ ನಂತರ ಸೂಕ್ತವಾಗಿ ಚರ್ಮದ ಆರೈಕೆ ಮಾಡದಿದ್ದರೆ ಮಾತ್ರ ಮೊಡವೆಗಳು ಬರಬಹುದು. ಅವಧಿ ಮುಗಿದ ಮೇಕಪ್ ಸಾಮಗ್ರಿ ಬಳಕೆ, ಮೇಕಪ್ ನಂತರ ಸರಿಯಾಗಿ ಚರ್ಮವನ್ನು ಕ್ಲೀನ್ ಮಾಡದಿರುವುದರಿಂದ ಮೊಡವೆ ಕಾಣಿಸಿಕೊಳ್ಳಬಹುದು. ಆದರೆ ಮೇಕಪ್ ಮಾಡಿಕೊಂಡ ಕಾರಣದಿಂದಲೇ ಮೊಡವೆಗಳುಂಟಾಗುವುದಿಲ್ಲ.

ಸುಳ್ಳು : ಮೊಡವೆಗಳನ್ನು ಒಡೆದು ಗುಣ ಪಡಿಸಬಹುದು
ಸತ್ಯ : ಮುಖದ ಮೇಲೆ ಮೊಡವೆ ಕಾಣಿಸಿಕೊಂಡಾಗ ಬಹುತೇಕರು ಅದನ್ನು ಸೂಜಿಯಿಂದ ಚುಚ್ಚಿ ಒಡೆದುಕೊಳ್ಳುತ್ತಾರೆ. ಆದರೆ ಹೀಗೆ ಮಾಡುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು. ಮೊಡವೆಗಳನ್ನು ಒಡೆಯುವುದರಿಂದ ಉಂಟಾಗುವ ನೋವು ಹಾಗೂ ಉರಿಯಿಂದ ಸುತ್ತಲೂ ಮತ್ತಷ್ಟು ಮೊಡವೆಗಳುಂಟಾಗಿ ಕೊನೆಗೆ ಚಿಕಿತ್ಸೆ ಕಷ್ಟಕರವಾಗಬಹುದು.

ಸುಳ್ಳು : ಬಿಸಿಲಿನಿಂದ ಮೊಡವೆಗಳನ್ನು ನಿವಾರಿಸಬಹುದು
ಸತ್ಯ : ಉರಿಯೂತದಿಂದ ಮೊಡವೆಗಳು ಉಂಟಾಗುವುದರಿಂದ ಸೂರ್ಯನ ಬಿಸಿಲಿಗೆ ಮೈಯೊಡ್ಡಿದಾಗ ಕೆಲ ಹೊತ್ತು ರಿಲೀಫ್ ಸಿಕ್ಕಂತಾಗಬಹುದು. ಆದರೆ ಇದು ಕ್ಷಣಿಕ ಮಾತ್ರ. ಬಹಳ ಹೊತ್ತು ಬಿಸಿಲಲ್ಲಿ ಕುಳಿತರೆ ಚರ್ಮವನ್ನು ರಕ್ಷಿಸುವ ಕೊಲಾಜ್ ಎಂಬ ಪ್ರೋಟೀನ್ ನಷ್ಟವಾಗಿ ಚರ್ಮಕ್ಕೆ ಮತ್ತಷ್ಟು ಹಾನಿಯಾಗಬಹುದು. ಕೊಲಾಜ್ ಕಡಿಮೆಯಾದಷ್ಟೂ ಮೊಡವೆ ಹಾಗೂ ಗುಳ್ಳೆಗಳು ಹೆಚ್ಚಾಗುತ್ತವೆ ಎಂಬುದು ಗೊತ್ತಿರಲಿ.



Click it and Unblock the Notifications
