ಥಟ್ಟನೇ ತ್ವಚೆಯನ್ನು ಬೆಳ್ಳಗಾಗಿಸುವ ಪುರಾತನ ಕಾಲದ ಮನೆಮದ್ದುಗಳು

By Deepu

ವಿಶ್ವದಲ್ಲಿ ಭಾರತದ ಹೆಸರನ್ನು ಬೆಳಗಿದ ವಿಷಯಗಳಲ್ಲಿ ಭಾರತೀಯ ಮಹಿಳೆಯರ ಸೌಂದರ್ಯವೂ ಒಂದು. ಇದಕ್ಕೆ ಪ್ರಮುಖ ಕಾರಣ ಶತಮಾನಗಳಿಂದ ಭಾರತೀಯ ನಾರಿಯರು ತಮ್ಮ ಸೌಂದರ್ಯಕ್ಕೆ ನೀಡುತ್ತಿದ್ದ ಮಹತ್ವ ಮತ್ತು ಕಾಳಜಿ. ಇಂದಿನ ಆಧುನೀಕತೆಯ ಭರಾಟೆ ಎಲ್ಲಾ ಕ್ಷೇತ್ರಗಳಂತೆಯೇ ಸೌಂದರ್ಯವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರೂ ಭಾರತೀಯ ಪುರಾತನ ಸೌಂದರ್ಯ ಪದ್ಧತಿಗಳು ಇಂದಿಗೂ ಉಳಿದುಕೊಂಡು ಬಂದಿರುವುದಕ್ಕೆ ಈ ವಿಧಾನಗಳು ನೀಡುತ್ತಿರುವ ಫಲಪ್ರದ ಅರೈಕೆಯೇ ಕಾರಣ.

ಆದರೆ ಇಂದಿನ ಜೆಟ್ ಯುಗದಲ್ಲಿ ಎಲ್ಲವೂ ಥಟ್ಟನೇ ಆಗುತ್ತಿರುವಾಗ ಸೌಂದರ್ಯದ ಕಾಳಜಿಯೂ ಥಟ್ಟನೇ ಆಗಬೇಕೆಂದು ಬಯಸುವುದು ಸಾಂಪ್ರಾದಾಯಿಕ ವಿಧಾನಗಳನ್ನು ಮೂಲೆಗುಂಪಾಗಿಸಿರುವುದು ಮಾತ್ರ ಖೇದಕರ. ಬನ್ನಿ ಪುರಾತನ ಕಾಲದಿಂದಲೂ ಸೌಂದರ್ಯ ಪ್ರಸಾಧನಗಳಿಗೆ ಹೆಸರುವಾಸಿಯಾಗಿರುವ ಕೆಲವೊಂದು ಪ್ರಮುಖ ಮಾಹಿತಿಗಳನ್ನು ನೀಡಿದ್ದೇವೆ ಮುಂದೆ ಓದಿ....

ಬಿಸಿಲಿನಿಂದಾಗಿದ್ದ ಕಪ್ಪು ಬಣ್ಣವನ್ನು ತೊಲಗಿಸಲು ಕಡಲೆ ಹಿಟ್ಟಿನ ಪೇಸ್ಟ್

ಬಿಸಿಲಿನಿಂದಾಗಿದ್ದ ಕಪ್ಪು ಬಣ್ಣವನ್ನು ತೊಲಗಿಸಲು ಕಡಲೆ ಹಿಟ್ಟಿನ ಪೇಸ್ಟ್

ಬಿಸಿಲಿಗೆ ಒಡ್ಡಿದ್ದ ಚರ್ಮದ ಭಾಗ ಕೊಂಚ ದಟ್ಟನಾಗಿರುವುದನ್ನು ಗಮನಿಸಬಹುದು. ಕಡಲೆ ಹಿಟ್ಟನ್ನು ಬಳಸಿ ಮುಖ ಮತ್ತು ಸೂರ್ಯನಿಗೆ ಒಡ್ಡಿದ್ದ ಚರ್ಮದ ಭಾಗಗಳನ್ನು ತೊಳೆದುಕೊಳ್ಳುವ ಮೂಲಕ ಈ ಬಣ್ಣವನ್ನು ಸುಲಭವಾಗಿ ಮತ್ತು ಯಶಸ್ವಿಯಾಗಿ ನಿವಾರಿಸಬಹುದು.

ಶ್ರೀಗಂಧದ ಪುಡಿ ಮತ್ತು ಬಾದಾಮಿ ಎಣ್ಣೆ

ಶ್ರೀಗಂಧದ ಪುಡಿ ಮತ್ತು ಬಾದಾಮಿ ಎಣ್ಣೆ

*ಒಂದು ಟೀ ಚಮಚ ಶ್ರೀಗಂಧದ ಪುಡಿಗೆ 1 ಟೀ ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗದವರೆಗೆ ಅನ್ವಯಿಸಿ.

*10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

*ವಾರಕ್ಕೆ 3-4 ಬಾರಿ ಈ ಕ್ರಮವನ್ನು ಅನುಸರಿಸಿದರೆ ಚರ್ಮದ ಆರೋಗ್ಯವನ್ನು ಕಾಪಾಡಬಹುದು ಮತ್ತು ಮೊಡವೆಯಿಂದ ಮುಕ್ತಿ ಹೊಂದಬಹುದು.

ಹಸಿ ಬೀಟ್‌ರೂಟಿನ ರಸ

ಹಸಿ ಬೀಟ್‌ರೂಟಿನ ರಸ

ಹಸಿ ಬೀಟ್‌ರೂಟಿನ ಅರ್ಧ ಭಾಗವನ್ನು ತುರಿದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ. ಈ ರಸವನ್ನು ನೇರವಾಗಿ ಮುಖದ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ.

ಬಾದಾಮಿ

ಬಾದಾಮಿ

ಕೆಲವು ಬಾದಾಮಿಗಳನ್ನು ರಾತ್ರಿಯಿಡೀ ನೆನೆಸಿಡಿ. ಮರುದಿನ ಇದನ್ನು ಕೊಂಚ ಹಸಿ ಹಾಲಿನೊಂದಿಗೆ ನಯವಾಗಿ ಅರೆದು ಚರ್ಮಕ್ಕೆ ಹಚ್ಚಿಕೊಳ್ಳಿ. ಕೊಂಚ ಸಮಯದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಚರ್ಮದ ಕಲೆಗಳನ್ನು ತೊಲಗಿಸಲು ಮತ್ತು ಕಪ್ಪಾದ ಭಾಗಗಳನ್ನು ಸಹಜವರ್ಣಕ್ಕೆ ತರಲು ನೆರವಾಗುತ್ತದೆ. ನಿಯಮಿತವಾಗಿ ಉಪಯೋಗಿಸಿದರೆ ಚರ್ಮದ ಕಾಂತಿ ಹೆಚ್ಚುತ್ತದೆ.

ಸೌತೆಕಾಯಿ

ಸೌತೆಕಾಯಿ

ಸೂರ್ಯನ ಝಳದಿಂದ ಬಳಲಿದ ಚರ್ಮಕ್ಕೆ ಆರೈಕೆ ನೀಡಲು ಸೌತೆಕಾಯಿ ಅತ್ಯುತ್ತಮವಾಗಿದೆ. ಇದು ಚರ್ಮಕ್ಕೆ ಆರ್ದ್ರತೆ ನೀಡುವ ಜೊತೆಗೇ ಕಣ್ಣುಗಳ ಕೆಳಭಾಗದ ಕಪ್ಪುಕಲೆಯನ್ನೂ ತೊಲಗಿಸಲು ನೆರವಾಗುತ್ತದೆ. ಇದಕ್ಕಾಗಿ ಎಳೆ ಸೌತೆಯನ್ನು ನಯವಾಗಿ ಅರೆದು ನೇರವಾಗಿ ಚರ್ಮದ ಮೇಲೆ ದಪ್ಪನಾದ ಲೇಪನದಂತೆ ಹಚ್ಚಿಕೊಳ್ಳಿ. ಕೊಂಚ ಸಮಯದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಓಟ್ಸ್ ಮತ್ತು ಜೇನು

ಓಟ್ಸ್ ಮತ್ತು ಜೇನು

ಓಟ್ಸ್ ಮೀಲ್ ಅಥವಾ ಓಟ್ಸ್‌ನ ಭೂಸಾ ಸಹಾ ಉತ್ತಮ ಸೌಂದರ್ಯವರ್ಧಕವಾಗಿದೆ. ಮೊಟ್ಟೆಯ ಹಳದಿ ಭಾಗವನ್ನು ಬೇರ್ಪಡಿಸಿ ಇದಕ್ಕೆ ಕೊಂಚ ಜೇನು ಮತ್ತು ಕೊಂಚ ಓಟ್ಸ್ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ದಪ್ಪನಾಗಿ ಮುಖಕ್ಕೆ ಹಚ್ಚಿ ಕೊಂಚ ಸಮಯದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆಂಟಿ ಆಕ್ಸಿಡೆಂಟ್‍ಗಳು ಮತ್ತು ರಂಜಕದಂತಹ ಖನಿಜಗಳು ಯಥೇಚ್ಛವಾಗಿರುವುದರಿಂದ ತ್ವಚೆಯ ಕಾಂತಿಯನ್ನು ವೃದ್ಧಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ 4 ಟೇಬಲ್ ಚಮಚ ಓಟ್‌ಮೀಲ್, 2 ಟೇಬಲ್ ಚಮಚ ಹಾಲು, 2 ಟೀ ಚಮಚ ಸೌತೆಕಾಯಿ ರಸವನ್ನುಚೆನ್ನಾಗಿ ಬೆರೆಸಿಕೊಂಡು, ಇದಕ್ಕೆ ಜಜ್ಜಿರುವ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸಹ ಹಾಕಿ ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಿಶ್ರಣ ಮಾಡಿ, ಮುಖದ ಮೇಲೆ ಲೇಪಿಸಿಕೊಳ್ಳಿ ಹಾಗೂ 15 ನಿಮಿಷಗಳವರೆಗೆ ಅದನ್ನು ಹಾಗೆಯೇ ಬಿಡಿ. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ.

ಅಕ್ಕಿ ನೀರಿನೊಂದಿಗೆ ಮುಖ ತೊಳೆಯಿರಿ

ಅಕ್ಕಿ ನೀರಿನೊಂದಿಗೆ ಮುಖ ತೊಳೆಯಿರಿ

ತ್ವಚೆಯ ಮೇಲಿನ ಕಲೆಗಳನ್ನು ಅಕ್ಕಿಯ ನೀರಿನೊ೦ದಿಗೆ ತಿಳಿಗೊಳಿಸಿಕೊಳ್ಳಿರಿ. ನಿಮ್ಮ ಮುಖವನ್ನು ಅಕ್ಕಿನೀರಿನಿ೦ದ ತೊಳೆದುಕೊಳ್ಳುವುದಕ್ಕೆ ಮೊದಲು ಅದಕ್ಕೆ ಚಿಟಿಕೆಯಷ್ಟು ಅರಿಶಿನವನ್ನು ಸೇರಿಸಿಕೊಳ್ಳಿರಿ. ಇದರಿ೦ದ ಅಕ್ಕಿ ನೀರಿನಿ೦ದಾಗಬಹುದಾದ ಪ್ರಯೋಜನವು ಮತ್ತಷ್ಟು ಹೆಚ್ಚಾಗುತ್ತದೆ. ಅಕ್ಕಿ ನೀರನ್ನು ಒ೦ದು ಫೇಸ್ ವಾಶ್ ನ ರೂಪದಲ್ಲಿ ನಿಯಮಿತವಾಗಿ ಬಳಸಿದ್ದೇ ಆದಲ್ಲಿ, ಅದು ಮೊಡವೆಗಳ ನಿವಾರಣೆಗೆ ನೆರವಾಗುತ್ತದೆ. ಆದರೂ ಸಹ, ಅಕ್ಕಿ ನೀರಿನ ನಿಯಮಿತ ಬಳಕೆಯು ನಿಮ್ಮ ತ್ವಚೆಯನ್ನು ಮಾತ್ರ ಶುಷ್ಕಗೊಳಿಸಿಬಿಡುತ್ತದೆ.

ಅರಿಶಿನದ ಫೇಸ್ ಪ್ಯಾಕ್

ಅರಿಶಿನದ ಫೇಸ್ ಪ್ಯಾಕ್

ಅರಿಶಿನವನ್ನು ಮೊಟ್ಟೆಯ ಬಿಳಿ ಭಾಗದ ಜೊತೆಗೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಫೇಸ್ ಮಾಸ್ಕ್ ರೀತಿಯಲ್ಲಿ ಮುಖಕ್ಕೆ ಲೇಪಿಸಿ, ಒಣಗಲು ಬಿಡಿ. 15 ನಿಮಿಷದ ನಂತರ ಇದನ್ನು ತೊಳೆಯಿರಿ. ಒಂದು ವೇಳೆ ನಿಮಗೆ ಕಚ್ಛಾ ಮೊಟ್ಟೆಯ ವಾಸನೆ ಹಿಡಿಸದ ಪಕ್ಷದಲ್ಲಿ, ಇದಕ್ಕೆ ಒಂದೆರಡು ಹನಿ ಲಿಂಬೆರಸವನ್ನು ಬೆರೆಸಿಕೊಳ್ಳಬಹುದು. ಇದರಿಂದ ಮತ್ತಷ್ಟು ಒಳ್ಳೆಯ ಫಲಿತಾಂಶ ಪಡೆಯಬಹುದು.

 ಮುಲ್ತಾನಿ ಮಿಟ್ಟಿಯ ಪೇಸ್ಟ್

ಮುಲ್ತಾನಿ ಮಿಟ್ಟಿಯ ಪೇಸ್ಟ್

ಮುಲ್ತಾನಿ ಮಿಟ್ಟಿ ಮುಲ್ತಾನಿ ಮಿಟ್ಟಿಯನ್ನು ನೀರಿನಲ್ಲಿ ಕಲಸಿಕೊಂಡು ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮುಖವನ್ನು ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಮ್ಮೆ ಮಾಡಿ ನಿಮಗೆ ಅದ್ಭುತ ಫಲಿತಾಂಶ ದೊರೆಯುವುದು ಖಂಡಿತ. ಮುಲ್ತಾನಿ ಮಿಟ್ಟಿ ನಿಮ್ಮ ತ್ವಚೆಯ ಚರ್ಮದ ರಚನೆಯನ್ನು ಸುಧಾರಿಸುತ್ತದೆ. ಇದು ಅನಗತ್ಯ ತೇಪೆಗಳನ್ನು ತೆಗೆದು ಚರ್ಮವನ್ನು ಮೃದುವಾಗಿಸುತ್ತದೆ. ಇದರಿಂದ ನಿಮ್ಮ ತ್ವಚೆಯ ಚರ್ಮ ತುಂಬಾ ಸುಸಂಗತ ಮತ್ತು ಬಿಳಿಯಾಗುತ್ತದೆ. ಚರ್ಮದ ಕಾಂತಿ ಹಾಗೂ ರಚನೆ, ಅದರ ಆರೋಗ್ಯಕ್ಕಾಗಿ ಮುಲ್ತಾನಿ ಮಿಟ್ಟಿಯನ್ನು ನಿಯಮಿತವಾಗಿ ಬಳಸಬೇಕು.

ಬೇವಿನ ಎಲೆ ಮತ್ತು ಆಲೋವೆರಾ

ಬೇವಿನ ಎಲೆ ಮತ್ತು ಆಲೋವೆರಾ

*ಒಂದು ಮುಷ್ಟಿ ಬೇವಿನ ಎಲೆಯನ್ನು ಮಿಕ್ಸಿ/ಬ್ಲೆಂಡರ್‍ಅಲ್ಲಿ ರುಬ್ಬಿಕೊಳ್ಳಿ. 1/2 ಟೀ ಚಮಚ ಬೇವಿನ ಪುಡಿಗೆ 2 ಟೀ ಚಮಚ ಅಲೋವೆರಾ ಜೆಲ್ ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖದ ಭಾಗಕ್ಕೆ ಅನ್ವಯಿಸಿ.

*5 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಮೃದುವಾದ ನೀರಿನಲ್ಲಿ ತೊಳೆಯಿರಿ.

*ವಾರದಲ್ಲಿ 3-4 ಬಾರಿ ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಆಲಿವ್ ಎಣ್ಣೆ ಮತ್ತು ನಿಂಬೆ ರಸ

ಆಲಿವ್ ಎಣ್ಣೆ ಮತ್ತು ನಿಂಬೆ ರಸ

*1 ಟೀ ಚಮಚ ಆಲಿವ್ ಎಣ್ಣೆಗೆ 1 ಟೀ ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖದ ಭಾಗಕ್ಕೆ ಅನ್ವಯಿಸಿ.

*10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

*ವಾರದಲ್ಲಿ 3-4 ಬಾರಿ ಅನ್ವಯಿಸುವುದರಿಂದ ಮೊಡವೆಯಿಂದ ಮುಕ್ತಿ ಕಾಣಬಹುದು.

English summary

Ancient Ayurvedic Beauty Tips for Modern Women

Glowing skin not only enhances our self-confidence but is also an indicator of our health. Though the market is flooded with products that claim to address every skin problem, majority of these are loaded with chemicals which are not good for our skin in the long run.
X
Desktop Bottom Promotion