Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಬ್ಲ್ಯಾಕ್ ಹೆಡ್ಸ್ ಸಮಸ್ಯೆಗೆ 'ಅಕ್ಕಿಹಿಟ್ಟಿ'ನ ಚಿಕಿತ್ಸೆ- ಶೀಘ್ರ ಪರಿಹಾರ!
ಚರ್ಮದಲ್ಲಿ ಬ್ಲ್ಯಾಕ್ ಹೆಡ್ಸ್ ಕಾಣಿಸಿಕೊಳ್ಳುವುದು ಸಾಮಾನ್ಯ ಸಮಸ್ಯೆ. ಇದು ಮುಖದ ಸೌಂದರ್ಯವನ್ನೇ ಕೆಡಿಸುವುದು ಮಾತ್ರವಲ್ಲದೆ ಹಲವಾರು ರೀತಿಯ ಇತರ ಸಮಸ್ಯೆಗಳಿಗೂ ಕಾರಣವಾಗುವುದು. ಮೇಧೋಗ್ರಂಥಿ ಸ್ರಾವವು ಚರ್ಮದಲ್ಲಿ ಜಮೆಯಾದಾಗ ಚರ್ಮದಲ್ಲಿ ಬ್ಲ್ಯಾಕ್ ಹೆಡ್ಸ್ ಗಳು ಕಾಣಿಸಿಕೊಳ್ಳುವುದು. ಚರ್ಮದಲ್ಲಿ ಕಲ್ಮಷಗಳು ಜಮೆಯಾಗುವುದನ್ನು ತಡೆಯಲು ಆಗಾಗ ಸ್ಕ್ರಬ್ ಮಾಡಿಸಿಕೊಳ್ಳುತ್ತಿರಬೇಕು. ಇದರ ಮೂಲಕ ಸತ್ತ ಚರ್ಮದ ಕೋಶಗಳನ್ನು ತೆಗೆದು ಚರ್ಮವು ಸ್ವಚ್ಛ ಹಾಗೂ ಆರೋಗ್ಯವಾಗಿರುವಂತೆ ನೋಡಿಕೊಳ್ಳಬಹುದು.

ಬ್ಲ್ಯಾಕ್ ಹೆಡ್ಸ್ ಗಳನ್ನು ಸರಿಯಾಗಿ ನಿವಾರಣೆ ಮಾಡದೆ ಇದ್ದರೆ ಅದರಿಂದ ಮೊಡವೆಗಳು, ಬೊಕ್ಕೆ ಮತ್ತು ಇತರ ಸಮಸ್ಯೆ ಕಾಣಿಸಿಕೊಳ್ಳುವುದು. ಈ ಲೇಖನದಲ್ಲಿ ಕಪ್ಪುಕಲೆಗಳನ್ನು ಅಕ್ಕಿಹಿಟ್ಟು ಬಳಸಿಕೊಂಡು ನೈಸರ್ಗಿಕ ವಿಧಾನದ ಮೂಲಕ ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯುವ... ಚರ್ಮದ ಮೇಲ್ಭಾಗದಲ್ಲಿ ಇರುವಂತಹ ಅತಿಯಾದ ಎಣ್ಣೆಯಂಶವನ್ನು ಹೀರಿಕೊಳ್ಳಲು ಅಕ್ಕಿಹಿಟ್ಟು ನೆರವಾಗುವುದು. ಇದರಿಂದ ಬ್ಲ್ಯಾಕ್ ಹೆಡ್ಸ್, ಮೊಡವೆ ಮತ್ತು ಬೊಕ್ಕೆಗಳು ನಿವಾರಣೆಯಾಗುವುದು. ಉರಿಯೂತ ಶಮನಕಾರಿ ಗುಣವು ಚರ್ಮದಲ್ಲಿನ ಯಾವುದೇ ಉರಿಯೂತ ತಡೆಯುವುದು.

ಅಕ್ಕಿಹಿಟ್ಟು ಮತ್ತು ಮೊಸರು
ಬೇಕಾಗುವ ಸಾಮಗ್ರಿಗಳು
*1 ಚಮಚ ಅಕ್ಕಿಹಿಟ್ಟು
*1 ಚಮಚ ಮೊಸರು
ತಯಾರಿಸುವ ವಿಧಾನ
ಒಂದು ಪಿಂಗಾಣಿಯಲ್ಲಿ ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದು ನಯವಾದ ಪೇಸ್ಟ್ ಆಗುವ ತನಕ ಮಿಶ್ರಣ ಮಾಡಿ. ಈ ಮಿಶ್ರಣವನ್ನು 5-10 ನಿಮಿಷ ಕಾಲ ಹಾಗೆ ಬಿಡಿ. ಮೊಸರಿನಲ್ಲಿ ಅಕ್ಕಿಹಿಟ್ಟು ನೆನೆಯಲಿ. ಇದರ ಬಳಿಕ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 15-20 ನಿಮಿಷ ಹಾಗೆ ಬಿಡಿ. ಬಳಿಕ ನಿಧಾನವಾಗಿ ವೃತ್ತಾಕಾರದಲ್ಲಿ ಕೈಬೆರಳುಗಳಿಂದ ಸ್ಕ್ರಬ್ ಮಾಡಿ ಮತ್ತು ಸಾಮಾನ್ಯ ನೀರಿನಿಂದ ತೊಳೆಯಿರಿ.

ಅಕ್ಕಿಹಿಟ್ಟು ಮತ್ತು ಜೇನುತುಪ್ಪ
ಬೇಕಾಗುವ ಸಾಮಗ್ರಿಗಳು
*ಒಂದು ಚಮಚ ಅಕ್ಕಿಹಿಟ್ಟು
*ಕೆಲವು ಹನಿ ಜೇನುತುಪ್ಪ
ತಯಾರಿಸುವ ವಿಧಾನ
ಒಂದು ಶುದ್ಧವಾಗಿರುವ ಪಿಂಗಾಣಿಗೆ ಅಕ್ಕಿಹಿಟ್ಟು ಹಾಕಿ. ಇದಕ್ಕೆ ಕೆಲವು ಹನಿ ಜೇನುತುಪ್ಪ ಹಾಕಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ನಿಧಾನವಾಗಿ ಕೈಬೆರಳುಗಳಿಂದ ಸ್ಕ್ರಬ್ ಮಾಡಿ. 2-3 ನಿಮಿಷ ಹೀಗೆ ಮಾಡಿದ ಬಳಿಕ ನೀರಿನಿಂದ ತೊಳೆಯಿರಿ. ಇದರ ಬಳಿಕ ಮೊಶ್ಚಿರೈಸರ್ ಹಚ್ಚಿ ಮಸಾಜ್ ಮಾಡಿ.

ಅಕ್ಕಿಹಿಟ್ಟು ಮತ್ತು ಅಲೋವೆರಾ ಲೋಳೆ
ಬೇಕಾಗುವ ಸಾಮಗ್ರಿಗಳು
*1 ಚಮಚ ಅಕ್ಕಿಹಿಟ್ಟು
*1 ಚಮಚ ಅಲೋವೆರಾ ಲೋಳೆ
ತಯಾರಿಸುವ ವಿಧಾನ
ತಾಜಾ ಅಲೋವೆರಾ ಎಲೆ ತೆಗೆದುಕೊಂಡು ಅದರಿಂದ ಲೋಳೆ ತೆಗೆಯಿರಿ. ಇದನ್ನು ಒಂದು ಪಿಂಗಾಣಿಗೆ ಹಾಕಿ. ಇದಕ್ಕೆ ಅಕ್ಕಿಹಿಟ್ಟು ಹಾಕಿಕೊಂಡ ಬಳಿಕ ಸರಿಯಾಗಿ ಎಲ್ಲವನ್ನು ಮಿಶ್ರಣ ಮಾಡಿ. ಮುಖಕ್ಕೆ ಈ ಮಿಶ್ರಣ ಹಚ್ಚಿಕೊಂಡು ಬಳಿಕ ನಿಧಾನವಾಗಿ ಸ್ಕ್ರಬ್ ಮಾಡಿ. 5 ನಿಮಿಷ ಹಾಗೆ ಬಿಡಿ. ಬಳಿಕ ಬಿಸಿ ನೀರು ಬಳಸಿಕೊಂಡು ತೊಳೆಯಿರಿ.

ಅಕ್ಕಿಹಿಟ್ಟು ಮತ್ತು ಸಕ್ಕರೆ
ಬೇಕಾಗುವ ಸಾಮಗ್ರಿಗಳು
*½ ಕಪ್ ಅಕ್ಕಿಹಿಟ್ಟು
*¼ ಕಪ್ ಸಕ್ಕರೆ
*2 ಚಮಚ ಕಡಲೆ ಹಿಟ್ಟು
*4 ಚಮಚ ಜೇನುತುಪ್ಪ
*ಕೆಲವು ಹನಿ ತೆಂಗಿನೆಣ್ಣೆ
ತಯಾರಿಸುವ ವಿಧಾನ
ಒಂದು ಪಿಂಗಾಣಿಯಲ್ಲಿ ಅಕ್ಕಿಹಿಟ್ಟು, ಸಕ್ಕರೆ, ಕಡಲೆಹಿಟ್ಟು, ಜೇನುತುಪ್ಪ ಮತ್ತು ಕೆಲವು ಹನಿ ತೆಂಗಿನೆಣ್ಣೆ ಹಾಕಿ. ಎಲ್ಲವನ್ನು ಜತೆಯಾಗಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 3 ನಿಮಿಷ ಹಾಗೆ ಇರಲಿ. ಇದರ ಬಳಿಕ ತಣ್ಣೀರಿನಿಂದ ತೊಳೆಯುವ ವೇಳೆ ಸ್ಕ್ರಬ್ ಮಾಡಿಕೊಳ್ಳಿ.

ಅಕ್ಕಿಹಿಟ್ಟು ಮತ್ತು ಕಿತ್ತಳೆಸಿಪ್ಪೆ ಹುಡಿ
ಬೇಕಾಗುವ ಸಾಮಗ್ರಿಗಳು
*2 ಚಮಚ ಅಕ್ಕಿಹಿಟ್ಟು
*2 ಚಮಚ ಕಿತ್ತಳೆಹಣ್ಣಿನ ಸಿಪ್ಪೆಯ ಹುಡಿ
*2 ಚಮಚ ಹಸಿರು ಕಡಲೆಹುಡಿ
*ಕೆಲವು ಹನಿ ರೋಸ್ ವಾಟರ್
ತಯಾರಿಸುವ ವಿಧಾನ
ಒಂದು ಪಿಂಗಾಣಿಗೆ ಅಕ್ಕಿಹುಡಿ, ಕಿತ್ತಳೆಸಿಪ್ಪೆಹುಡಿ, ಹಸಿರುಕಡಲೆ ಹುಡಿ ಹಾಕಿಕೊಳ್ಳಿ. ಕೆಲವು ಹನಿ ರೋಸ್ ವಾಟರ್ ಹಾಕಿಕೊಂಡ ಬಳಿಕ ಇದನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಮುಖ ಹಾಗೂ ಕುತ್ತಿಗೆಯು ಒಣಗಿರಲಿ. ಈ ಮಿಶ್ರಣವನ್ನು ಹಚ್ಚಿಕೊಂಡು ನಿಧಾನವಾಗಿ ಸ್ಕ್ರಬ್ ಮಾಡಿ. 15 ನಿಮಿಷ ಹಾಗೆ ಬಿಟ್ಟ ಬಳಿಕ ತಣ್ಣೀರಿನಿಂದ ತೊಳೆಯಿರಿ. ಚರ್ಮದಲ್ಲಿನ ಅತಿಯಾದ ಎಣ್ಣೆಯಂಶವನ್ನು ಇದು ಹೀರಿಕೊಳ್ಳುವುದು.



Click it and Unblock the Notifications