Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತ್ವಚೆಗೆ ಹಾಲಿನ ಕೆನೆಯ ಫೇಸ್ ಪ್ಯಾಕ್-ಇನ್ನಷ್ಟು ಮುದ್ದಾಗಿ ಕಾಣುವಿರಿ
ಹಾಲಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಇದು ದೇಹದ ಆರೋಗ್ಯಕ್ಕೆ ತುಂಬಾ ಲಾಭಕರ. ಹಾಲನ್ನು ಹಲವಾರು ರೀತಿಯಿಂದ ಬಳಕೆ ಮಾಡಿಕೊಂಡು ಸೇವಿಸುತ್ತಾರೆ. ಅದೇ ರೀತಿ ಸೌಂದರ್ಯವರ್ಧಕವಾಗಿಯೂ ಹಾಲಿನ ಬಳಕೆ ಮಾಡಿಕೊಳ್ಳುವರು. ಇದರಲ್ಲಿ ಪ್ರಮುಖವಾಗಿ ಹಾಲಿನ ಕೆನೆ ಅದ್ಭುತವಾಗಿ ಪರಿಣಾಮ ಬೀರುವುದು. ಇದು ನೈಸರ್ಗಿಕ ಮೊಶ್ಚಿರೈಸರ್ ಆಗಿ ಕೆಲಸ ಮಾಡುವುದು ಮಾತ್ರವಲ್ಲದೆ, ಹಲವಾರು ರೀತಿಯ ವಿಟಮಿನ್ ಹಾಗೂ ಖನಿಜಾಂಶಗಳು ಇದರಲ್ಲಿದೆ. ಇದರಲ್ಲಿರುವ ಕೊಬ್ಬುಗಳು ಹಾಗೂ ಪ್ರೋಟೀನ್ ಚರ್ಮದ ಹೊಸ ಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದು.
ಹಾಲಿನ ಕೆನೆಯನ್ನು ಬಿಸಿಲಿನಿಂದಾದ ಸುಟ್ಟ ಗಾಯ, ಕಲೆ ಮತ್ತು ಇತರ ಕಲೆಗಳನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಸತ್ತ ಚರ್ಮದ ಕೋಶಗಳನ್ನು ತೆಗೆಯುವ ಇದು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ನಂತೆ ಕೆಲಸ ಮಾಡಿ ಚರ್ಮವು ಆರೋಗ್ಯಕರ ಹಾಗೂ ಸ್ವಚ್ಛವಾಗಿರುವಂತೆ ಮಾಡುವುದು. ಹಾಲಿನ ಕೆನೆಯನ್ನು ಫೇಸ್ ಮಾಸ್ಕ್ ಮತ್ತು ಪ್ಯಾಕ್ ಗಳಾಗಿ ಬಳಸಬಹುದು. ಮನೆಯಲ್ಲೇ ಇದನ್ನು ತಯಾರಿಸಿಕೊಳ್ಳಬಹುದು. ತುಂಬಾ ಹಳೆಯ ಸೌಂದರ್ಯದ ರಹಸ್ಯವಾಗಿರುವಂತಹ ಹಾಲಿನ ಕೆನೆ ಅದ್ಭುತವಾಗಿ ಕೆಲಸ ಮಾಡುವುದರಲ್ಲಿ ಸಂಶಯವೇ ಇಲ್ಲ....

ತ್ವಚೆಯ ಬಣ್ಣ ಸುಧಾರಿಸಲು
ಹಾಲಿನ ಕೆನೆಯಲ್ಲಿ ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ. ಇದು ಚರ್ಮದ ಬಣ್ಣ ಸುಧಾರಣೆ ಮಾಡುವುದು ಮತ್ತು ಇದರಿಂದ ಚರ್ಮವು ಬಿಳಿಯಾಗುವುದು. ಒಂದು ಚಮಚ ಹಾಲಿನ ಕನೆ ಮತ್ತು ಒಂದು ಚಿಟಿಕೆ ಅರಶಿನ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಕಾಲ ಹಾಗೆ ಬಿಟ್ಟ ಬಳಿಕ ನಿಧಾನವಾಗಿ ಮಸಾಜ್ಮಾಡುತ್ತಾ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶ ಪಡೆಯಲು ಎರಡು ವಾರಗಳ ಕಾಲ ಇದನ್ನು ಬಳಸಿಕೊಳ್ಳಿ.

ಕಪ್ಪು ಕಲೆ ನಿವಾರಣೆಗೆ
ಹಾಲಿನ ಕೆನೆಯನ್ನು ಪ್ರತಿನಿತ್ಯ ಬಳಕೆ ಮಾಡಿದರೆ ಆಗ ಅದು ಮುಖದಲ್ಲಿರುವ ಕಪ್ಪು ಕಲೆಗಳನ್ನು ನಿವಾರಿಸುವುದು. ಇದನ್ನು ತಯಾರಿಸಲು ಎರಡು ಚಮಚ ಕಿತ್ತಳೆ ಸಿಪ್ಪೆ ಹುಡಿಯನ್ನು ಪಿಂಗಾಣಿಗೆ ಹಾಕಿ ಮತ್ತು ಅದಕ್ಕೆ ಬೇಕಾದಷ್ಟು ಹಾಲಿನ ಕೆನೆ ಹಾಕಿ ಪೇಸ್ಟ್ ಮಾಡಿ. ಇದನ್ನು ಈಗ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ಇದನ್ನು ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿ.
ಮತ್ತೊಂದು ವಿಧಾನ:
ಹಾಲಿನ ಕೆನೆಯಲ್ಲಿ ಹತ್ತಿ ಉಂಡೆ ಅದ್ದಿಕೊಳ್ಳಿ ಮತ್ತು ಇದನ್ನು ಮುಖಕ್ಕೆ ಹಚ್ಚಿರಿ. 10-15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ. ಪ್ರತಿನಿತ್ಯ ಎರಡು ಅಥವಾ ಮೂರು ಸಲ ಇದನ್ನು ಮಾಡಬಹುದು.

ಒಣ ಚರ್ಮಕ್ಕೆ
ಒಣ ಹಾಗೂ ಕಿತ್ತು ಬರುವ ಚರ್ಮವಿದ್ದರೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಒಂದು ಸಣ್ಣ ತುಂಡು ಬಾಳೆಹಣ್ಣು ತೆಗೆದುಕೊಂಡು ಸರಿಯಾಗಿ ಹಿಚುಕಿ. ಇದಕ್ಕೆ ಒಂದು ಚಮಚ ಹಾಲಿನ ಕೆನೆ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ಎಲ್ಲವೂ ಸರಿಯಾಗಿ ಮಿಶ್ರಣವಾದ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ. ಇದು ಸತ್ತಚರ್ಮದ ಕೋಶ ಕಿತ್ತುಹಾಕುವುದು ಮತ್ತು ಚರ್ಮವು ಕಾಂತಿಯುತವಾಗಿ ಹೊಳೆಯುವಂತೆ ಮಾಡುವುದು.

ಶುದ್ಧೀಕರಿಸಲು
ಹಾಲಿನ ಕೆನೆಯು ಬ್ಯಾಕ್ಟೀರಿಯಾವನ್ನು ಕೊಂದು, ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಮೂಲಕ ಕಲ್ಮಷ ಹೊರಹಾಕಲು ನೆರವಾಗುವುದು. ಇದರಿಂದ ಚರ್ಮವು ತುಂಬಾ ಶುದ್ಧ ಮತ್ತು ಆರೋಗ್ಯಕರವಾಗುವುದು.
ವಿಧಾನ
ಮೂರು ಚಮಚ ಹಾಲಿನ ಕೆನೆಯನ್ನು ಒಂದು ಪಿಂಗಾಣಿಗೆ ಹಾಕಿ. ಇದಕ್ಕೆ ತಲಾ ಒಂದು ಚಮಚ ಆಲಿವ್ ತೈಲ, ಬಾದಾಮಿ ತೈಲ, ಕೆಲವು ಹನಿ
ರೋಸ್ ವಾಟರ್ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣದಲ್ಲಿ ಒಂದು ಹತ್ತಿ ಉಂಡೆ ಅದ್ದಿಕೊಳ್ಳಿ ಮತ್ತು ಇದನ್ನು ಮುಖಕ್ಕೆ ಹಚ್ಚಿ. ಇದು ಮುಖದಲ್ಲಿನ ಹೆಚ್ಚುವರಿ ಕಲ್ಮಷ ತೆಗೆದುಹಾಕುವುದು. 15 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಪ್ರತಿದಿನ ಇದನ್ನು ನೀವು ಬಳಸಿದರೆ ತುಂಬಾ ಒಳ್ಳೆಯದು..

ಸುಂದರವಾದ ತ್ವಚೆಗಾಗಿ
ಹಾಲಿನ ಕೆನೆಯ ಫೇಸ್ ಪ್ಯಾಕ್ ಒಂದು ಚಿಟಿಕೆ ಕೇಸರಿಯನ್ನು ಒಂದು ಟೀ.ಚಮಚ ಜೇನು ತುಪ್ಪ ಮತ್ತು ಒಂದು ಟೀ.ಚಮಚ ಹಾಲಿನ ಕೆನೆಯ ಜೊತೆಗೆ ಮಿಶ್ರಣ ಮಾಡಿಕೊಳ್ಳಿ.ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 30 ನಿಮಿಷ ಬಿಟ್ಟು, ನಂತರ ತೊಳೆಯಿರಿ. ಇದು ಅತ್ಯಂತ ಪರಿಣಾಮಕಾರಿಯಾದ ಫೇಸ್ ಪ್ಯಾಕ್ ಆಗಿದ್ದು, ಇದರಿಂದ ತ್ವಚೆ ಸುಂದರವಾಗಿ ಕಾಣುತ್ತದೆ.

ಪ್ರತಿನಿತ್ಯದ ಹಾಲಿನ ಕೆನೆ ಫೇಸ್ ಪ್ಯಾಕ್
ಈ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು ಸದಾ ಯೌವನದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಮೊಡವೆಗಳಂತವು ನಿಮ್ಮ ತ್ವಚೆಯನ್ನು ಕಾಡದಂತೆ ನೋಡಿಕೊಳ್ಳುತ್ತವೆ. ಇದನ್ನು ತಯಾರಿಸುವುದು ಸುಲಭ. ಒಂದು ಟೀ.ಚಮಚ ಜೇನು ತುಪ್ಪಕ್ಕೆ, ಒಂದು ಟೀ.ಚಮಚ ಹಾಲಿನ ಕೆನೆಯನ್ನು ಬೆರೆಸಿ. ಇದಕ್ಕೆ ಬೇಕಾದಲ್ಲಿ ಲಿಂಬೆರಸವನ್ನು ಬೆರೆಸಿಕೊಳ್ಳಬಹುದು.ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಲೇಪಿಸಿ. 15 ನಿಮಿಷ ಬಿಟ್ಟು, ನಂತರ ತೊಳೆಯಿರಿ.

ಸ್ವಚ್ಛ ತ್ವಚೆಗಾಗಿ ಹಾಲಿನ ಕೆನೆಯ ಫೇಸ್ ಪ್ಯಾಕ್
ಒಂದು ಟೀ.ಚಮಚ ಹಾಲಿನ ಕೆನೆಯ ಜೊತೆಗೆ ಒಂದು ಟೀ.ಚಮಚ ಓಟ್ಸ್, ಒಂದು ಟೀ.ಚಮಚ ಅರಿಶಿನ ಮತ್ತು ಒಂದು ಟೀ.ಚಮಚ ರೋಸ್ ವಾಟರ್ ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳಿ ಮತ್ತು ವೃತ್ತಾಕಾರವಾಗಿ ಐದು ನಿಮಿಷಗಳ ಕಾಲ ಉಜ್ಜಿ. ಇದನ್ನು 15 ನಿಮಿಷ ಬಿಟ್ಟು, ನಂತರ ತೊಳೆಯಿರಿ.



Click it and Unblock the Notifications
