Latest Updates
-
ಡೇಟಿಂಗ್ ಆಪ್ ಬಳಸುವ ಮುನ್ನ ಎಚ್ಚರ: ನಿಮ್ಮನ್ನು ಬಲಿಪಶು ಮಾಡುವ ಹನಿಟ್ರ್ಯಾಪ್ ಜಾಲದ ಅಸಲಿ ಮುಖ ಇಲ್ಲಿದೆ! -
ಬಿಸಿಲ ಬೇಗೆಯಿಂದ ಮನೆ ಮತ್ತು ಗಿಡಗಳನ್ನು ರಕ್ಷಿಸುವುದು ಹೇಗೆ? ತಾಪಮಾನ ಏರಿಕೆಯ ನಡುವೆ ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಉಪ್ಪಿನಕಾಯಿ, ಹಪ್ಪಳ ಇಷ್ಟನಾ? ಎಚ್ಚರ! ಹೃದಯದ ಆರೋಗ್ಯಕ್ಕಾಗಿ ಅಡುಗೆಯಲ್ಲಿ ಈ ಬದಲಾವಣೆ ಮಾಡಲೇಬೇಕು -
ಅಮೆಜಾನ್ ಸೇಲ್ ಮುಗಿಯಲು ಕೆಲವೇ ಗಂಟೆ ಬಾಕಿ: ಈ ಬ್ಯೂಟಿ ಮತ್ತು ಫ್ಯಾಷನ್ ಡೀಲ್ಸ್ ಮಿಸ್ ಮಾಡ್ಬೇಡಿ! -
ತೀವ್ರ ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಆರೋಗ್ಯವಾಗಿರಲು ಈ ಸುರಕ್ಷತಾ ಕ್ರಮಗಳನ್ನು ಮಿಸ್ ಮಾಡ್ಬೇಡಿ! -
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ! -
ಬಿಸಿಲಿಗೆ ಬಾಲ್ಕನಿ ಗಿಡಗಳು ಬಾಡುತ್ತಿವೆಯೇ? ಈ 5 ಸರಳ ಟ್ರಿಕ್ಸ್ ಬಳಸಿ ಗಿಡಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಿ! -
ಹಾಲಿನ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಹಾಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಈ ಪರ್ಯಾಯ ಆಹಾರಗಳೇ ದಾರಿ! -
ರೆಡ್ ಕಾರ್ಪೆಟ್ ಮೇಲೆ ಸದ್ದು ಮಾಡುತ್ತಿರುವ 'ಸೀರೆ-ಗೌನ್' ಮ್ಯಾಜಿಕ್: 2026ರ ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ!
ಸುಡುವ ಬೇಸಿಗೆಗೆ ತ್ವಚೆಗೆ ಬೇಕು ತಂಪು ತಂಪು ಮಜ್ಜಿಗೆಯ ಕಂಪು
ಬಿರು ಬೇಸಿಗೆಯ ಸಂದರ್ಭದಲ್ಲಿ ನಮ್ಮ ದೇಹ ತಂಪಿನ ಆಹಾರಗಳತ್ತ ವಾಲುವುದು ಸಹಜವೇ ಆಗಿದೆ. ನೀವು ಎಷ್ಟೇ ಆಹಾರ ಕುಡಿದರೂ ನಿಮ್ಮ ದೇಹಕ್ಕೆ ತಂಪು ಬೇಕು ಎಂದೆನಿಸುತ್ತದೆ. ಅದು ತಂಪು ಪಾನೀಯಗಳಾಗಿರಬಹುದು ಇಲ್ಲಾ ನೀರು ಅಥವಾ ದ್ರವಾಹಾರಗಳಾಗಿರ ಬಹುದು. ಆದರೆ ಈ ತಂಪಿನ ಪಾನೀಯಗಳು ಕ್ಷಣ ಹೊತ್ತಿಗೆ ಮಾತ್ರವೇ ನಿಮ್ಮ ದೇಹದ ಉಷ್ಣವನ್ನು ಕಡಿಮೆ ಮಾಡುತ್ತವೆಯಾದರೂ ನಂತರ ಉಷ್ಣತೆಯನ್ನು ಹೆಚ್ಚಿಸುತ್ತದೆ.
ಆರೋಗ್ಯವೃದ್ಧಿಗೆ ದಿನನಿತ್ಯ ಕುಡಿಯಿರಿ, ಒಂದು ಗ್ಲಾಸ್ ಮಜ್ಜಿಗೆ ಅಂತೆಯೇ ಇದರಲ್ಲಿರುವ ರಾಸಾಯನಿಕ ಅಂಶಗಳೂ ಕೂಡ ದೇಹಕ್ಕೆ ಉತ್ತಮವಾದುದಲ್ಲ. ಹಾಗಿದ್ದರೆ ನಿಮ್ಮ ದೇಹದ ಧಗೆಯನ್ನು ತಣಿಸಿ ಬಿರುಬಿಸಿಲಿಗೆ ಬಾಡುವ ನಿಮ್ಮ ತ್ವಚೆಯ ಕಾಂತಿಯನ್ನು ಇಮ್ಮಡಿಗೊಳಿಸುವ ಅತ್ಯುತ್ತಮ ಪಾನೀಯದ ಅದ್ಭುತ ಸಲಹೆಗಳನ್ನು ನಾವು ನೀಡುತ್ತಿದ್ದೇವೆ. ಅದು ಬೇರಾವುದೂ ಅಲ್ಲದೆ ಹಾಲಿನ ಉತ್ಪನ್ನವೆಂದೆನಿಸಿರುವ ಮಜ್ಜಿಗೆಯಾಗಿದೆ. ಕಡಿಮೆ ಖರ್ಚಿನಲ್ಲಿ ನಿಮ್ಮ ತ್ವಚೆಗೆ ಮಾಂತ್ರಿಕ ಪರಿಣಾಮವನ್ನುಂಟು ಮಾಡುವ ಮಜ್ಜಿಗೆ ಎಲ್ಲಾ ವಯಸ್ಸಿನವರು ಮೆಚ್ಚುವಂತಹ ಪಾನೀಯವಾಗಿದೆ. ಉತ್ತಮ ನಿದ್ದೆ, ದೇಹಕ್ಕೆ ತಂಪು, ರಾಸಾಯನಿಕಗಳಿಲ್ಲ, ಕೊಬ್ಬಿನಂಶವಿಲ್ಲ ಹೀಗೆ ನಾನಾ ವಿಧದ ಅಂಶಗಳನ್ನೊಳಗೊಂಡು ಮಜ್ಜಿಗೆ
ನಿಮ್ಮಲ್ಲಿ ತಾಜಾತನವನ್ನುಂಟು ಮಾಡುತ್ತದೆ. ಹಾಲಿನ ಅಂಶಗಳನ್ನು ಮಜ್ಜಿಗೆ ಒಳಗೊಂಡಿದ್ದು ಲ್ಯಾಕ್ಟಿಕ್ ಏಸಿಡ್ ಇದರಲ್ಲಿದೆ. ಮುಖದಲ್ಲಿನ ಮೃತ ಕೋಶಗಳನ್ನು ನಿವಾರಿಸುವಲ್ಲಿ ಮಜ್ಜಿಗೆಯದು ಎತ್ತಿದ ಕೈಯಾಗಿದೆ. ತ್ವಚೆಯನ್ನು ಲ್ಯಾಕ್ಟಿಕ್ ಏಸಿಡ್ ಶುಭ್ರಗೊಳಿಸುತ್ತದೆ ಅಂತೆಯೇ ಮೃದುತ್ವವನ್ನು ಇದು ನೀಡುತ್ತದೆ. ಹಾಗಿದ್ದರೆ ನಿಮ್ಮ ತ್ವಚೆಗೆ ಇದನ್ನು ಹೇಗೆ ಬಳಸಬೇಕು ಎಂಬುದು ನಿಮ್ಮ ಕುತೂಹಲವಾಗಿದೆ ಎಂದಾದಲ್ಲಿ ಇಲ್ಲಿದೆ ಕೆಲವೊಂದು ಪರಿಹಾರೋಪಾಯಗಳು....

ಸುಧಾರಿತ ತ್ವಚೆಗಾಗಿ
ಮಜ್ಜಿಗೆಯು ಲ್ಯಕ್ಟಿಕ್ ಆಸಿಡ್ ಅನ್ನು ತನ್ನಲ್ಲಿ ಒಳಗೊಂಡಿದ್ದು ಇದು ತ್ವಚೆಯನ್ನು ಉತ್ತಮಗೊಳಿಸುತ್ತದೆ. ಒಂದು ಚಮಚ ಮಜ್ಜಿಗೆಗೆ ಚಿಟಿಕೆಯಷ್ಟು ಅರಶಿನ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ. ನಿಮ್ಮ ಮುಖ ಮತ್ತು ಕತ್ತಿಗೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ತಣ್ಣನೆ ನೀರಿನಲ್ಲಿ ಮುಖ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಬಳಸಿ ನೋಡಿ

ಕಪ್ಪು ಕಲೆಗಳನ್ನು ನಿವಾರಿಸಲು
ಮಜ್ಜಿಗೆಯು ತ್ವಚೆಯನ್ನು ಮಸಾಜ್ ಮಾಡುವ ಅಂಶಗಳನ್ನು ಒಳಗೊಂಡಿದ್ದು ಇದು ತ್ವಚೆಯಲ್ಲಿರುವ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಕಿತ್ತಳೆ ಸಿಪ್ಪೆಯ ಪುಡಿಯನ್ನು ಎರಡು ಚಮಚದಷ್ಟು ತೆಗೆದುಕೊಂಡು ಅದಕ್ಕೆ ಸಮಪ್ರಮಾಣದಲ್ಲಿ ಮಜ್ಜಿಗೆಯನ್ನು ಸೇರಿಸಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 30 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆದುಕೊಳ್ಳಿ.ಇನ್ನೊಂದು ವಿಧಾನವೆಂದರೆ ಮಜ್ಜಿಗೆಗೆ ಹತ್ತಿಯ ಉಂಡೆಯನ್ನು ಅದ್ದಿ ಅದನ್ನು ಮುಖಕ್ಕೆ ಲೇಪಿಸಿಕೊಳ್ಳಿ. ವಾರಕ್ಕೆ ಎರಡರಿಂದ ಮೂರು ಬಾರಿ ಈ ವಿಧಾನವನ್ನು ಅನುಸರಿಸುತ್ತಿರಿ.

ಟ್ಯಾನ್ ನಿವಾರಿಸಲು
ಸೂರ್ಯನ ಬಿಸಿಲಿಗೆ ನಿಮ್ಮ ತ್ವಚೆ ಬಳಲಿದೆ ಎಂದಾದಲ್ಲಿ ಮಜ್ಜಿಗೆಯಿಂದ ತಂಪಿನ ಆರೈಕೆಯನ್ನು ಮಾಡಬಹುದಾಗಿದೆ. 1/4 ಕಪ್ ಮಜ್ಜಿಗೆಯನ್ನು ತೆಗೆದುಕೊಂಡು ಅದಕ್ಕೆ ಟೊಮಾಟೊ ಬಳಸಿ ಪೇಸ್ಟ್ ತಯಾರಿಸಿ. ನಿಮ್ಮ ಮುಖಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ 30 ನಿಮಿಷದ ನಂತರ ಮುಖಕ್ಕೆ ತಣ್ಣೀರನ್ನು ಬಳಸಿ ಮುಖ ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಈ ಪ್ರಕ್ರಿಯೆ ನಡೆಸಿ.ಇನ್ನೊಂದು ವಿಧಾನವೆಂದರೆ ಜೇನು ಮತ್ತು ಮಜ್ಜಿಗೆಯನ್ನು ಬಳಸಿಕೊಂಡು ಮಾಡುವ ಫೇಸ್ ಪ್ಯಾಕ್ ಆಗಿದೆ. 2 ಚಮಚ ಮಜ್ಜಿಗೆಗೆ 2 ಚಮಚ ಜೇನು ಸೇರಿಸಿ. 5 ನಿಮಿಷ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. 15 ನಿಮಿಷ ಹಾಗೆಯೇ ಬಿಡಿ. ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಒಣ ತ್ವಚೆಗೆ
ನೀವು ಒಣ ಮತ್ತು ನಿಸ್ತೇಜತೆಯನ್ನು ಹೊಂದಿದ್ದರೆ ಈ ವಿಧಾನವನ್ನು ಮಾಡಿ ನೋಡಿ
ಸಣ್ಣ ತುಂಡು ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಮ್ಯಾಶ್ ಮಾಡಿ. ಅದಕ್ಕೆ ಮಜ್ಜಿಗೆಯನ್ನು ಹಾಕಿ ಕಲಸಿ. ನಿಮ್ಮ ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. 20 ನಿಮಿಷ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

ಕ್ಲೆನ್ಸರ್
ನಿಮ್ಮ ಮುಖದಲ್ಲಿರುವ ಬ್ಯಾಕ್ಟೀರಿಯಾವನ್ನು ನಿವಾರಿಸಿ ಮುಖಕ್ಕೆ ಕಾಂತಿಯನ್ನು ನೀಡುವಲ್ಲಿ ಮಜ್ಜಿಗೆ ಕಮಾಲಿನದ್ದಾಗಿದೆ. ಒಂದು ಪಾತ್ರೆಯಲ್ಲಿ 3 ಚಮಚ ಮಜ್ಜಿಗೆ ತೆಗೆದುಕೊಳ್ಳಿ ಇದಕ್ಕೆ ಬಾದಾಮಿ, ಆಲೀವ್ ಹಾಗೂ ಕೆಲವು ಹನಿ ರೋಸ್ ವಾಟರ್ ಅನ್ನು ಸೇರಿಸಿ. ಇದನ್ನು ಮಿಶ್ರ ಮಾಡಿಕೊಂಡು ಈ ಪಾತ್ರೆಗೆ ಹತ್ತಿಯ ಉಂಡೆಯನ್ನು ಅದ್ದಿ ಮುಖಕ್ಕೆ ಲೇಪಿಸಿ. ಸಂಪೂರ್ಣ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. ಇದು ಮುಖದಿಂದ ಕೊಳೆಯನ್ನು ನಿವಾರಿಸುತ್ತದೆ. 15 ನಿಮಿಷ ಮುಖದಲ್ಲಿ ಮಜ್ಜಿಗೆಯನ್ನು ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದನ್ನು ನಿತ್ಯವೂ ಪುನರಾವರ್ತಿಸಿ ಉತ್ತಮ ಫಲಿತಾಂಶ ಪಡೆದುಕೊಳ್ಳಿ.

ಮಜ್ಜಿಗೆಯೊಂದಿಗೆ ಕಡಲೆಹಿಟ್ಟು ಅರಿಶಿನದ ಪ್ಯಾಕ್
ಮುಖದ ಕಾಂತಿಯನ್ನು ವರ್ಧಿಸಲು ಮಜ್ಜಿಗೆಯೊಂದಿಗೆ ಕಡಲೆ ಹಿಟ್ಟು ಮತ್ತು ಅರಿಶಿನವನ್ನು ಬಳಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ನಂತರ ಸ್ವಲ್ಪ ಹೊತ್ತಿನ ನಂತರ ತೊಳೆದುಕೊಳ್ಳಿ.

ಮಜ್ಜಿಗೆಯೊಂದಿಗೆ ಕಡಲೆಹಿಟ್ಟು ಅರಿಶಿನದ ಪ್ಯಾಕ್
ಮುಖದ ಕಾಂತಿಯನ್ನು ವರ್ಧಿಸಲು ಮಜ್ಜಿಗೆಯೊಂದಿಗೆ ಕಡಲೆ ಹಿಟ್ಟು ಮತ್ತು ಅರಿಶಿನವನ್ನು ಬಳಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ನಂತರ ಸ್ವಲ್ಪ ಹೊತ್ತಿನ ನಂತರ ತೊಳೆದುಕೊಳ್ಳಿ.

ಮಜ್ಜಿಗೆ ಮತ್ತು ಮೆಂತೆ ಹುಡಿ
ತನ್ನ ಮಾಯಿಶ್ಚರೈಸಿಂಗ್ ಗುಣಗಳಿಂದ ಮಜ್ಜಿಗೆ ಮೆಂತೆ ಹೆಸರುವಾಸಿಯಾಗಿದೆ. ಇದನ್ನು ಮಜ್ಜಿಗೆಯೊಂದಿಗೆ ಸೇರಿಸಿದಾಗ, ಇದು ತ್ವಚೆಯನ್ನು ಶುಭ್ರಗೊಳಿಸುವ ಕಾಂತಿಯುಕ್ತಗೊಳಿಸುವ ಅಂಶವಾಗಿ ಮಾರ್ಪಡುತ್ತದೆ. ಮುಖದಲ್ಲಿನ ಕಲೆ ಮತ್ತು ಮೊಡವೆಗಳನ್ನು ಇದು ದೂರಮಾಡುತ್ತದೆ. ಮಜ್ಜಿಗೆಯೊಂದಿಗೆ ಮೆಂತೆ ಹುಡಿಯನ್ನು ಸೇರಿಸಿ ನಂತರ ಅದನ್ನು ಮುಖಕ್ಕೆ ಹಚ್ಚಿಕೊಂಡು ನಂತರ ನೀರಿನಿಂದ ತೊಳೆದುಕೊಳ್ಳಿ.

ಬಾಳೆಹಣ್ಣು ಮಾಸ್ಕ್ ಮತ್ತು ಮಜ್ಜಿಗೆ
ಈ ಪ್ಯಾಕ್ ನಿಮ್ಮ ತ್ವಚೆಯನ್ನು ಶುಭ್ರಗೊಳಿಸುವುದಲ್ಲದೆ ಮುಖಕ್ಕೆ ಮೃದುತ್ವವನ್ನು ಇದು ನೀಡುತ್ತದೆ ಅಂತೆಯೇ ಟ್ಯಾನ್ ಅನ್ನು ನಿವಾರಿಸುವಲ್ಲಿ ಬಾಳೆಹಣ್ಣು ಮಾಸ್ಕ್ ಮತ್ತು ಮಜ್ಜಿಗೆ ಪ್ಯಾಕ್ ಅತ್ಯುತ್ತಮವಾದುದು. ಸ್ವಲ್ಪ ಬಾಳೆಹಣ್ಣಿನ ತುಂಡುಗಳನ್ನು ಮಜ್ಜಿಗೆಯೊಂದಿಗೆ ಕಿವುಚಿಕೊಳ್ಳಿ. ಇದನ್ನು ಚೆನ್ನಾಗಿ ಕಲಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಮುಖವನ್ನು ತೊಳೆದುಕೊಳ್ಳಿ.

ಮಜ್ಜಿಗೆ ಮತ್ತು ಜೇನು
ತ್ವಚೆಯನ್ನು ಕಾಂತಿಯುಕ್ತಗೊಳಿಸಲು ಮಜ್ಜಿಗೆಗೆ ಜೇನನ್ನು ಬೆರೆಸಿ. ಸನ್ ಟ್ಯಾನ್ ಅನ್ನು ನಿವಾರಿಸಿ ಮುಖಕ್ಕೆ ನೈಸರ್ಗಿಕ ಹೊಳೆವನ್ನು ಇದು ತರುತ್ತದೆ. ಜೇನನ್ನು ಮಜ್ಜಿಗೆಯೊಂದಿಗೆ ಬೆರೆಸಿ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ನಂತರ ಮುಖವನ್ನು ತೊಳೆದುಕೊಳ್ಳಿ.



Click it and Unblock the Notifications