Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ಸೌಂದರ್ಯ ಮತ್ತು ತ್ವಚೆಯ ಆರೈಕೆಗೆ 'ಕಡಲೆ ಹಿಟ್ಟಿನ' ಫೇಸ್ ಪ್ಯಾಕ್!
ಅಡುಗೆ ಮನೆಗೆ ಹೋದರೆ ಅಲ್ಲಿ ನಿಮ್ಮ ಸೌಂದರ್ಯ ವರ್ಧಿಸುವ ಹಲವಾರು ಸಾಮಗ್ರಿಗಳು ಸಿಗುವುದು ಖಚಿತ. ಯಾಕೆಂದರೆ ಮಾರುಕಟ್ಟೆಯ ಕ್ರೀಮ್‌ಗಿಂತ ಈ ಮನೆಮದ್ದುಗಳು ತುಂಬಾ ಪರಿಣಾಮಕಾರಿ. ಇದು ನೈಸರ್ಗಿಕವಾಗಿ ನಿಮಗೆ ಸೌಂದರ್ಯ ಕೊಡುವುದು. ಇದರಲ್ಲಿ ಒಂದು ಕಡಲೆಹಿಟ್ಟು. ಕಡಲೆಹಿಟ್ಟನ್ನು ಚರ್ಮದ ಸೌಂದರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತದೆ.ಇದು ಹಿಂದಿನಿಂದಲೂ ಮಹಿಳೆಯರಿಗೆ ತುಂಬಾ ಅಚ್ಚುಮೆಚ್ಚಿನ ಸೌಂದರ್ಯವರ್ಧಕ ಸಾಮಗ್ರಿಯಾಗಿದೆ.
ಇದು ಚರ್ಮಕ್ಕೆ ಕಾಂತಿ ನೀಡುವುದು ಮಾತ್ರವಲ್ಲದೆ ಮೊಡವೆ ಹಾಗೂ ಕಲೆಗಳನ್ನು ನಿವಾರಿಸುವುದು. ಕಡಲೆಹಿಟ್ಟನ್ನು ಇತರ ಕೆಲವು ಸಾಮಗ್ರಿಗಳೊಂದಿಗೆ ಸೇರಿಸಿಕೊಂಡು ಬಳಸಿದಾಗ ಅದರಿಂದ ಹಲವಾರು ರೀತಿಯ ಸೌಂದರ್ಯ ಲಾಭಗಳು ನಮಗೆ ಸಿಗುವುದು ಖಚಿತ. ನೀವು ಇದಕ್ಕಾಗಿ ಹೆಚ್ಚಿನ ಹಣ ಕೂಡ ವ್ಯಯಿಸಬೇಕೆಂದಿಲ್ಲ. ಬೋಲ್ಡ್ ಸ್ಕೈ ನಿಮಗೆ ಈ ಲೇಖನದಲ್ಲಿ ಕಡಲೆಹಿಟ್ಟಿನಿಂದ ತಯಾರಿಸಬಹುದಾದ ಕೆಲವು ಫೇಸ್ ಪ್ಯಾಕ್‌ಗಳ ಬಗ್ಗೆ ತಿಳಿಸಲಿದೆ. ಇದನ್ನು ಚರ್ಮದ ಬಣ್ಣ ಬಿಳಿ ಮಾಡಲು, ಮುಖದ ಮೇಲಿನ ಅನಗತ್ಯ ಕೂದಲು ತೆಗೆಯಲು ಮತ್ತು ಚರ್ಮ ನಯ ಮಾಡಿ, ನೆರಿಗೆ ನಿವಾರಿಸಲು ತುಂಬಾ ಪರಿಣಾಮಕಾರಿ....

ಮುಖದ ಕೂದಲು ತೆಗೆಯಲು ಕಡಲೆಹಿಟ್ಟು
ಒಂದು ಚಮಚ ಕಡಲೆಹಿಟ್ಟು, ಜೋಳದ ಗಂಜಿ ಮತ್ತು ಸಕ್ಕರೆಯನ್ನು ಒಂದು ಪಿಂಗಾಣಿಗೆ ಹಾಕಿಕೊಂಡು ಮಿಶ್ರಣ ಮಾಡಿ. ಇದಕ್ಕೆ ಒಂದು ಮೊಟ್ಟೆ ಹಾಕಿ ಪೇಸ್ಟ್ ಮಾಡಬೇಕು. ಇದನ್ನು ತೆಳುವಾಗಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಒಣಗಿದ ಬಳಿಕ ಮತ್ತೊಂದು ಪದರ ಹಚ್ಚಿ. ಇದು ಸಂಪೂರ್ಣವಾಗಿ ಒಣಗಲಿ ಮತ್ತು ಇದನ್ನು ಉಜ್ಜಿಕೊಳ್ಳಿ ಹಾಗೂ ತಣ್ಣೀರಿನಿಂದ ತೊಳೆಯಿರಿ. ಮುಖದ ಮೇಲಿನ ಅನಗತ್ಯ ಕೂದಲು ಹೋಗುವ ತನಕ ವಾರದಲ್ಲಿ ಎರಡು ಸಲ ಇದನ್ನು ಪ್ರಯೋಗಿಸಿ.

ನಯವಾದ ಚರ್ಮಕ್ಕೆ ಕಡಲೆಹಿಟ್ಟಿನ ಮಸಾಜ್
ಒಂದು ಚಮಚ ಕಡಲೆಹಿಟ್ಟು, ಎರಡು ಚಮಚ ತೆಂಗಿನ ಕಾಯಿ ಕ್ರೀಮ್ ಮತ್ತು ಎರಡು ಚಮಚ ಗ್ಲಿಸರಿನ್ ಹಾಕಿಕೊಂಡು ಕಡಲೆಹಿಟ್ಟಿನ ಮಸಾಜ್ ಕ್ರೀಮ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಸರಿಯಾಗಿ ವೃತ್ತಾಕಾರದಲ್ಲಿ 10 ನಿಮಿಷ ಕಾಲ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ನೆರಿಗೆಮುಕ್ತ ಚರ್ಮಕ್ಕೆ ಕಡಲೆಹಿಟ್ಟಿನ ಪ್ಯಾಕ್
ಒಂದು ಪಿಂಗಾಣಿಯಲ್ಲಿ ಒಂದು ಚಮಚ ಕಡಲೆಹಿಟ್ಟು, ಒಂದು ಮೊಟ್ಟೆಯ ಬಿಳಿ ಲೋಳೆ ಮತ್ತು ಒಂದು ಚಮಚ ಮುಲ್ತಾನಿ ಮಿಟ್ಟಿ ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖ ಹಾಗೂ ಕುತ್ತಿಗೆ ಹಚ್ಚಿಕೊಳ್ಳಿ ಮತ್ತು ನೆರಿಗೆ ಹೆಚ್ಚು ಕಾಣಿಸುವ ಕಣ್ಣಿನ ಕೆಳಭಾಗದಲ್ಲಿ ಮಸಾಜ್ ಮಾಡಿ. ಇದನ್ನು 30 ನಿಮಿಷ ಅಥವಾ ಸಂಪೂರ್ಣ ಒಣಗುವ ತನಕ ಮುಖದಲ್ಲಿಡಿ. ಬಳಿಕ ನೀರಿನಿಂದ ತೊಳೆಯಿರಿ. ಇದು ಕಡಲೆಹಿಟ್ಟಿನ ಒಳ್ಳೆಯ ಫೇಸ್ ಪ್ಯಾಕ್.

ಚರ್ಮ ಬಿಳಿಯಾಗಲು ಕಡಲೆಹಿಟ್ಟು
ನಾಲ್ಕು ತುಂಡು ಪಪ್ಪಾಯಿಯನ್ನು ರುಬ್ಬಿಕೊಳ್ಳಿ. ಇದಕ್ಕೆ ಎರಡು ಚಮಚ ಕಿತ್ತಳೆ ಜ್ಯೂಸ್ ಮತ್ತು ಒಂದು ಚಮಚ ಕಡಲೆಹಿಟ್ಟು ಹಾಕಿ ಮಿಶ್ರಣ ಮಾಡಿ. ಎಲ್ಲವನ್ನು ಸರಿಯಾಗಿ ಕಲಸಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಒದ್ದೆ ಹತ್ತಿ ಉಂಡೆಯಿಂದ ಇದನ್ನು ತೆಗೆಯಿರಿ. ಹತ್ತಿ ಉಂಡೆಯಿಂದ ಮೇಲ್ಮುಖವಾಗಿ ತೆಗೆಯಿರಿ. ತಣ್ಣೀರಿನಿಂದ ಮುಖ ತೊಳೆಯಿರಿ.

ಕಾಂತಿಯುತ ಚರ್ಮಕ್ಕಾಗಿ
ಒಂದು ಚಮಚ ಕಡಲೆಹಿಟ್ಟು, ಒಂದು ಚಮಚ ಹಾಲಿನ ಕೆನೆ ಮತ್ತು ಒಂದು ಚಮಚ ಲಿಂಬೆರಸ ಹಾಕಿಕೊಂಡು ಪೇಸ್ಟ್ ಮಾಡಿ. ಮುಖವನ್ನು ರೋಸ್ ವಾಟರ್ ಹಾಕಿ ತೊಳೆಯಿರಿ. ಬಳಿಕ ಪೇಸ್ಟ್ ಹಚ್ಚಿಕೊಳ್ಳಿ. ಇದನ್ನು 15 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಕಾಂತಿಯುತ ಚರ್ಮವನ್ನು ನಿಮ್ಮದಾಗಿಸಿಕೊಳ್ಳಲು ಇದು ಅತ್ಯುತ್ತಮವಾದ ಕಡಲೆಹಿಟ್ಟಿನ ಪ್ಯಾಕ್.

ಕಪ್ಪು ಕಲೆ ಮತ್ತು ಮೊಡವೆ ನಿವಾರಣೆಗೆ
ಹಣ್ಣು ಟೊಮೆಟೋವನ್ನು ಜಜ್ಜಿಕೊಂಡು ಅದಕ್ಕೆ ಒಂದು ಚಮಚ ಕಡಲೆಹಿಟ್ಟು ಮತ್ತು ಎರಡು ಚಮಚ ಅಲೋವೆರಾ ಲೋಳೆ ಹಾಕಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 30 ನಿಮಿಷ ಕಾಲ ಹಾಗೆ ಬಿಡಿ. ಇದು ಮೊಡವೆ, ಕಲೆ ನಿವಾರಣೆಗೆ ಅದ್ಭುತವಾದ ಫೇಸ್ ಪ್ಯಾಕ್.

ಚರ್ಮ ಬಣ್ಣ ಕಳಕೊಳ್ಳುವುದಕ್ಕೆ
ಒಂದು ಚಮಚ ಅಡುಗೆ ಸೋಡಾವನ್ನು ಒಂದು ಪಿಂಗಾಣಿ ನೀರಿಗೆ ಹಾಕಿ ಸರಿಯಾಗಿ ಕಲಸಿ. ಇನ್ನೊಂದು ಪಿಂಗಾಣಿಯಲ್ಲಿ ಎರಡು ಚಮಚ ಕಡಲೆಹಿಟ್ಟು ಮತ್ತು ಅರ್ಧ ಚಮಚ ಅರಿಶಿನ ಹಾಕಿ. ಅಡುಗೆ ಸೋಡಾದ ನೀರನ್ನು ಕಡಲೆಹಿಟ್ಟು ಮತ್ತು ಅರಶಿನದ ಮಿಶ್ರಣಕ್ಕೆ ಹಾಕಿ ಮತ್ತು ದಪ್ಪಗಿನ ಪೇಸ್ಟ್ ಮಾಡಿ. ಮೆತ್ತಗೆ ಉಜ್ಜುತ್ತಾ ಇದನ್ನು ಹಚ್ಚಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ತೊಳೆಯಿರಿ.

ಒಣ ಚರ್ಮಕ್ಕೆ ಕಡಲೆಹಿಟ್ಟು ಫೇಸ್ ಪ್ಯಾಕ್
ಅರ್ಧ ಹಣ್ಣಾದ ಬಾಳೆಹಣ್ಣು, ಒಂದು ಚಮಚ ಜೇನುತುಪ್ಪ ಮತ್ತು ಎರಡು ಚಮಚ ಕಡಲೆಹಿಟ್ಟು ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಬಿಸಿ ನೀರಿನಿಂದ ತೊಳೆಯಿರಿ. ಇದು ಮುಖಕ್ಕೆ ಪೋಷಣೆ ನೀಡಿ ಮೊಶ್ಚಿರೈಸ್ ಮಾಡುವುದು.

ಮೃದು ಹಾಗೂ ಸುಂದರ ತ್ವಚೆಗೆ
ಒಂದು ಚಮಚ ಓಟ್ಸ್ ನ್ನು ಒಂದು ಪಿಂಗಾಣಿ ಹಾಲಿನಲ್ಲಿ ಐದು ನಿಮಿಷ ಕಾಲ ನೆನೆಸಿ. ಚಮಚದ ಹಿಂಭಾಗವನ್ನು ಬಳಸಿಕೊಂಡು ಓಟ್ಸ್ ನ್ನು ಜಜ್ಜಿ ಮತ್ತು ಇದಕ್ಕೆ ಒಂದು ಚಮಚ ಕಡಲೆಹಿಟ್ಟು ಹಾಕಿ. ಇದನ್ನು ವೃತ್ತಕಾರದಲ್ಲಿ ಮುಖದ ಮೇಲೆ ಸ್ಕ್ರಬ್ ಮಾಡಿ. ಐದು ನಿಮಿಷ ಮುಂದುವರಿಸಿ. ಇದು ಸತ್ತ ಚರ್ಮ ಮತ್ತು ಕೊಳೆಯನ್ನು ತೆಗೆದುಹಾಕಿ ಸುಂದರ ಹಾಗೂ ನಯವಾದ ಚರ್ಮವನ್ನು ನಿಮ್ಮದಾಗಿಸುವುದು.

ಮೊಡವೆ ಮತ್ತು ಬೊಕ್ಕೆಗಳಿಗೆ
ಒಂದು ಚಮಚ ಕಡಲೆಹಿಟ್ಟನ್ನು ಒಂದು ಚಮಚ ಗಂಧದ ಹುಡಿ ಮತ್ತು ಎರಡು ಚಮಚ ಮೊಸರಿನ ಜತೆಗೆ ಸೇರಿಸಿ ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಹಚ್ಚುವ ಮೊದಲು ಮುಖ ಹಾಗೂ ಕುತ್ತಿಗೆಯನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದು ಕಡಲೆಹಿಟ್ಟಿನಿಂದ ತ್ವಚೆಗೆ ಸಿಗುವ ಪರಿಣಾಮಕಾರಿ ಫೇಸ್ ಪ್ಯಾಕ್.



Click it and Unblock the Notifications











