Latest Updates
-
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ
ಚೆಂದುಟಿಯ ಚೆಲುವೆ ನೀವಾಗಬೇಕೆ? ಹಾಗಿದ್ದರೆ ಇಲ್ಲಿದೆ ಮನೆಮದ್ದುಗಳು
ತುಟಿಗಳು ನಿಮ್ಮ ಮುಖದ ಪ್ರಮುಖವಾದ ಭಾಗವಾಗಿದ್ದು, ನಿಮ್ಮ ನಗುವನ್ನು ಇನ್ನಷ್ಟು ಪ್ರಕಾಶಮಾನ ಹಾಗೂ ಆಕರ್ಷಣೀಯವನ್ನಾಗಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ, ಅದರಲ್ಲೂ ವಿಶೇಷವಾಗಿ ಮಹಿಳೆಯರು, ಗುಲಾಬಿವರ್ಣದ ಅಂದವಾದ ತುಟಿಗಳುಳ್ಳವರಾಗಿರಲು ಬಯಸುತ್ತಾರೆಯೇ ಹೊರತು, ಶರೀರದ ಇತರ ಭಾಗಗಳಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ತುಟಿಗಳಿಗೆ ನೀಡುವುದು ಅತಿ ವಿರಳ. ಈ ಕಾರಣದಿಂದಾಗಿಯೇ ಬಹಳಷ್ಟು ಜನರ ತುಟಿಗಳು ಬಿರುಕುಗೊಂಡಿದ್ದು, ಸಹಜವಾದ ವರ್ಣವನ್ನು ಕಳೆದುಕೊಂಡು ಪೇಲವವಾಗಿ ಕಾಣಿಸುತ್ತವೆ.
ತುಟಿಗಳ ಆರೈಕೆಗೆ ನೀವೇನೂ ಬಹಳಷ್ಟು ಪರಿಶ್ರಮ ಪಡಬೇಕಾಗಿಲ್ಲ. ಪ್ರತಿದಿನ ಕೇವಲ 3 ರಿಂದ 5 ನಿಮಿಷಗಳ ಕಾಲಾವಕಾಶವನ್ನು ಇದಕ್ಕಾಗಿ ಮಿಸಲಾಗಿಟ್ಟರೆ ಸಾಕು. ನಿಮ್ಮ ತುಟಿಗಳನ್ನು ಯೋಗ್ಯವಾದ ರೀತಿಯಲ್ಲಿ ಆರೈಕೆ ಮಾಡಿ, ಆರೋಗ್ಯಕರವಾದ, ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು ಈ ಕೆಳಗೆ ಕೆಲವು ಸರಳವಾದ ಸೂತ್ರಗಳನ್ನು ನೀಡಲಾಗಿದೆ.
ಮುಖದ ಅಂದಕ್ಕೂ ಮತ್ತು ತುಟಿಗೂ ತುಂಬಾ ನಿಕಟ ಸಂಬಂಧವಿದೆ. ಆಕರ್ಷವಾದ ತುಟಿ ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ತುಟಿ ಕಪ್ಪು ಬಣ್ಣವನ್ನು ಹೊಂದಿದ್ದರೆ ಮುಖ ಕಲೆರಹಿತವಾಗಿದ್ದು, ತುಂಬಾ ನಯವಾದ ತ್ವಚೆಯಿದ್ದರೂ ಆಕರ್ಷಕವಾಗಿ ಕಾಣಲು ಸಾಧ್ಯವಿಲ್ಲ! ಕಪ್ಪು ತುಟಿಯನ್ನು ಮರೆಮಾಚಲು ಲಿಪ್ ಸ್ಟಿಕ್ ಹಚ್ಚಿ ತುಟಿಯನ್ನು ಮತ್ತಷ್ಟು ಕಪ್ಪಾಗಿಸುವ ಬದಲು ಆರ್ಯುವೇದ ವಿಧಾನವನ್ನು ಬಳಸಿದರೆ ಗುಲಾಬಿ ತುಟಿಯ ಚೆಲುವು ನಿಮ್ಮದಾಗುವುದು. ಹಾಗಿದ್ದರೆ ಬನ್ನಿ ಆ ವಿಧಾನಗಳೇನು ಎಂಬುದನ್ನು ತಿಳಿದುಕೊಳ್ಳೋಣ...

ಬಾದಾಮಿ ಎಣ್ಣೆ
ನಿಮ್ಮ ತುಟಿಯನ್ನು ಮೃದುಗೊಳಿಸುವ ಅಂಶವನ್ನು ಬಾದಾಮಿ ಎಣ್ಣೆ ಹೊಂದಿದ್ದು, ತುಟಿಗೆ ಹೊಸ ಕಳೆಯನ್ನು ನೀಡುತ್ತದೆ ಹಾಗೂ ಬಿರುಕಿನ ಸಮಸ್ಯೆಯಿಂದ ತುಟಿಯನ್ನು ಸಂರಕ್ಷಣೆ ಮಾಡುತ್ತದೆ. ರಾತ್ರಿ ಮಲಗುವ ಮುಂಚೆ ತುಟಿಗೆ ಎಣ್ಣೆಯನ್ನು ಸವರಿ ಮಲಗಿದರೆ ಸಾಕು, ಈ ಕಾರ್ಯವನ್ನು ನಿತ್ಯವೂ ಮಾಡಿ ಉತ್ತಮ ಫಲಿತಾಂಶವನ್ನು ನೀವು ಪಡೆದುಕೊಳ್ಳುವಿರಿ.

ಲಿಂಬೆ ಮತ್ತು ಜೇನು
ನೈಸರ್ಗಿಕ ಸೌಂದರ್ಯಕಾರಕಗಳನ್ನು ಲಿಂಬೆ ಮತ್ತು ಜೇನು ಒಳಗೊಂಡಿದ್ದು, ಔಷಧೀಯ ಗುಣಗಳೂ ಇವುಗಳಲ್ಲಿ ಹೇರಳವಾಗಿದೆ. ಸ್ವಲ್ಪ ಹನಿಗಳಷ್ಟು ಜೇನಿಗೆ ಒಂದು ಚಮಚ ಲಿಂಬೆ ರಸವನ್ನು ಬೆರೆಸಿಕೊಳ್ಳಿ ಮತ್ತು ಅದನ್ನು ನಿಮ್ಮ ತುಟಿಗೆ ಹಚ್ಚಿ. ಒಂದು ಗಂಟೆ ಕಳೆದ ನಂತರ ಅದನ್ನು ತೊಳೆಯಿರಿ. ಅದ್ಭುತ ಫಲಿತಾಂಶವನ್ನು ನೀವು ಪಡೆದುಕೊಳ್ಳಬಹುದು.

ಬೀಟ್‌ರೂಟ್
ನಿಮ್ಮ ತುಟಿಯನ್ನು ಕೆಂಪಗಾಗಿಸಿ ಆರೋಗ್ಯಕರವಾಗಿಸುವ ಅಂಶವನ್ನು ಬೀಟ್‌ರೂಟ್ ಹೊಂದಿದೆ. ಈ ಬೀಟ್‌ರೂಟ್ ರಸಕ್ಕೆ ಒಂದೆರಡು ಪುದಿನಾ ರಸವನ್ನು ಬೆರೆಸಿ ಮತ್ತು ಅದನ್ನು ಬ್ಲೆಂಡ್ ಮಾಡಿಕೊಳ್ಳಿ. ಬೇಕಾದಲ್ಲಿ ಬಾದಾಮಿ ಎಣ್ಣೆಯನ್ನು ಮಿಶ್ರ ಮಾಡಿಕೊಳ್ಳಬಹುದು. ಹತ್ತಿಯ ಉಂಡೆಯನ್ನು ಈ ಮಿಶ್ರಣಕ್ಕೆ ಮುಳುಗಿಸಿ ನಿಮ್ಮ ತುಟಿಗೆ ದಿನಕ್ಕೆರಡು ಬಾರಿ ಹಚ್ಚಿ.

ಗ್ಲಿಸರಿನ್
ತ್ವಚೆಯ ಕಾಂತಿ ಮತ್ತು ಮೃದುತ್ವವನ್ನು ಹಿಡಿದಿಡುವಲ್ಲಿ ಗ್ಲಿಸರಿನ್ ಕಮಾಲಿನದ್ದಾಗಿದೆ. ಇದು ತ್ವಚೆಯ ಬಿರುಕನ್ನು ಕಡಿಮೆ ಮಾಡುತ್ತದೆ. ನಿಮ್ಮ ತುಟಿಗೂ ಈ ಗ್ಲಿಸರಿನ್ ಆರೈಕೆಯನ್ನು ಮಾಡಬಹುದಾಗಿದೆ. ರಾತ್ರಿ ಮಲಗುವ ಮುನ್ನ ತುಟಿಗೆ ಗ್ಲಿಸರಿನ್ ಹಚ್ಚಿ ಮಲಗಿಕೊಳ್ಳಿ. ನಿತ್ಯವೂ ಹೀಗೆ ಮಾಡುವುದು ನಿಮ್ಮ ತುಟಿಯ ಬಣ್ಣವನ್ನು ಕೆಂಪಗೆ ಮಾಡುತ್ತದೆ.

ಆಪಲ್ ಸೀಡರ್ ವಿನೇಗರ್
ನಿಮ್ಮ ತುಟಿಯ ಬಿರುಕಿನ ಸಮಸ್ಯೆಗಳು ಮತ್ತು ಬಣ್ಣಗೆಟ್ಟಂತಹ ಸಮಸ್ಯೆಗಳನ್ನು ನಿವಾರಿಸಲು ಆಪಲ್ ಸೀಡರ್ ನೆರವುಕಾರಿಯಾಗಿದೆ. ನೀರಿನಲ್ಲಿ ಆಪಲ್ ಸೀಡರ್ ವಿನೇಗರ್ ಅನ್ನು ಬೆರೆಸಿಕೊಳ್ಳಿ. ಹತ್ತಿಯ ಉಂಡೆಯನ್ನು ಬಳಸಿಕೊಂಡು ಈ ಮಿಶ್ರಣದಲ್ಲಿ ಹತ್ತಿಯನ್ನು ಅದ್ದಿ ತುಟಿಗೆ ಹಚ್ಚಿಕೊಳ್ಳಿ. 10-15 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ತುಟಿಯನ್ನು ತೊಳೆದುಕೊಳ್ಳಿ. ರಾತ್ರಿ ಮಾತ್ರ ಇದನ್ನು ಹಚ್ಚಿಕೊಂಡು ಹಾಗೆಯೇ ಇರಬೇಡಿ ಇದರಲ್ಲಿ ಆಸಿಡ್ ಅಂಶ ಇರುವುದರಿಂದ ಹತ್ತು ನಿಮಿಷ ಮಾತ್ರ ಬಿಡಿ.

ಬೇಕಿಂಗ್ ಸೋಡಾ
ಮೃತಕೋಶಗಳನ್ನು ನಿವಾರಣೆ ಮಾಡುವಲ್ಲಿ ಬೇಕಿಂಗ್ ಸೋಡಾ ಕಮಾಲಿನದ್ದಾಗಿದೆ. ಇದು ನಿಮ್ಮ ತುಟಿಯ ಬಣ್ಣವನ್ನು ಮರಳಿ ತರುತ್ತದೆ. ಒಂದು ಚಮಚದಷ್ಟು ನೀರನ್ನು ಬೇಕಿಂಗ್ ಸೋಡಾಗೆ ಬೆರೆಸಿ ಮತ್ತು ಇದನ್ನು ಹಚ್ಚಿ. ನಿಮ್ಮ ತುಟಿಗೆ ಇದರಿಂದ ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ. ನಂತರ ನೀರಿನಿಂದ ತುಟಿಯನ್ನು ತೊಳೆದುಕೊಳ್ಳಿ. ನಿತ್ಯವೂ ಈ ಪ್ರಕ್ರಿಯೆಯನ್ನು ಮಾಡಿ ನೋಡಿ.

ರೋಸ್ ವಾಟರ್
ನಿಮ್ಮ ತುಟಿಯನ್ನು ಚೆಂದುಟಿಗೆ ಮರಳಿಸುವಲ್ಲಿ ರೋಸ್ ವಾಟರ್ ಅತ್ಯದ್ಭುತ ಪರಿಹಾರವಾಗಿದೆ. ಹತ್ತಿಯ ಉಂಡೆಯನ್ನು ಬಳಸಿ ಅದರಲ್ಲಿ ರೋಸ್ ವಾಟರ್ ಮುಳುಗಿಸಿಕೊಂಡು ನಿಮ್ಮ ತುಟಿಗೆ ಹಚ್ಚಿಕೊಳ್ಳಿ. 2-3 ಬಾರಿ ಇದನ್ನು ಪುನರಾವರ್ತಿಸಿ ರಾತ್ರಿ ಮಲಗುವ ಮೊದಲು ಹೀಗೆ ಮಾಡಿ. ನಂತರ ಬೆಳಗ್ಗೆ ತೊಳೆದುಕೊಳ್ಳಿ.

ಅಲೊವೇರಾ
ತ್ವಚೆಯನ್ನು ಅಲೊವೇರಾ ಅತ್ಯದ್ಭುತವಾಗಿ ಮಾಡುವಲ್ಲಿ ಎತ್ತಿದ ಕೈಯಾಗಿದೆ. ಅಲೊವೇರಾವನ್ನು ತುಂಡರಿಸಿ ಅದರ ಲೋಳೆಯನ್ನು ಸಂಗ್ರಹಿಸಿ. ಮಾರುಕಟ್ಟೆಯಲ್ಲಿ ಸಿಗುವ ಸಿದ್ಧ ಅಲೊವೇರಾ ಜೆಲ್ ಅನ್ನು ಕೂಡ ನೀವು ಬಳಸಬಹುದು. ಆದರೆ ತಾಜಾ ಅಲೊವೇರಾ ಜೆಲ್ ಬಳಸುವುದು ಉತ್ತಮವಾಗಿದೆ. ನಿಮ್ಮ ತುಟಿಗೆ ಇದನ್ನು ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ವಾರಕ್ಕೊಮ್ಮೆ ಹಚ್ಚಿ ಉತ್ತಮ ಫಲಿತಾಂಶ ಪಡೆದುಕೊಳ್ಳಿ.



Click it and Unblock the Notifications











