For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಮಹಿಳೆಯರ ಬ್ಯೂಟಿ ಸೀಕ್ರೆಟ್ಸ್- ಕೇಳಿದರೆ ಅಚ್ಚರಿಗೊಳ್ಳುವಿರಿ!

By Sushma Charhra
|

ನೈಸರ್ಗಿಕ ಸೌಂದರ್ಯ ಮತ್ತು ಚರ್ಮದ ಕಾಳಜಿ ವಿಚಾರಕ್ಕೆ ಬಂದರೆ ಫ್ರೆಂಚ್ ಮಹಿಳೆಯರು ಮುಂಚೂಣಿ ಯಲ್ಲಿ ಇರುತ್ತಾರೆ ಮತ್ತು ಅವರ ಬ್ಯೂಟಿ ಬಗ್ಗೆ ಯಾವುದೇ ಸೀಕ್ರೇಟ್ ಕೂಡ ಇಲ್ಲ. ಭಾರತೀಯ ಮಹಿಳೆಯರಿಗೆ ಅವರ ತ್ವಚೆಯ ಸೌಂದರ್ಯ ರಹಸ್ಯ ಏನು ಎಂಬ ಬಗ್ಗೆ ಕುತೂಹಲ ಮೂಡುವುದು ಸಹಜವೇ ಆಗಿದೆ. ಹೊಳೆಯುವ ತ್ವಚೆ ಮತ್ತು ಕಾಂತಿಯುವ ಚರ್ಮವು ಎಂತವರನ್ನು ಸೆಳೆಯುತ್ತದೆ.

ಹಾಗಾದ್ರೆ ಫ್ರೆಂಚ್ ಮಹಿಳೆಯರು ಅನುಸರಿಸುವ ಬ್ಯೂಟಿ ಸೂತ್ರ ಯಾವುದು? ಯಾವ ಸೌಂದರ್ಯ ಕಾಳಜಿಯು ಅವರನ್ನು ಇಷ್ಟು ಸೌಂದರ್ಯವಂತರನ್ನಾಗಿ ಮಾಡುತ್ತದೆ? ನಮಗಿಂತ ಅವರು ಯಾವ ವಿಭಿನ್ನ ಸೌಂದರ್ಯ ಪ್ರಜ್ಞೆಯನ್ನು ಹೊಂದಿರುತ್ತಾರೆ ಎಂಬುದು ಎಲ್ಲರಲ್ಲೂ ಉಂಟಾಗುವ ಸಹಜ ಪ್ರಶ್ನೆ.

ಹಾಗಂತ, ಇದ್ಯಾವುದೇ ರಾಕೆಟ್ ವಿಜ್ಞಾನವೂ ಅಲ್ಲ, ಅವರು ಯಾವುದೇ ವಿಶೇಷ ತಂತ್ರಜ್ಞಾನವನ್ನು ತಮ್ಮ ಸೌಂದರ್ಯಕ್ಕಾಗಿ ಬಳಸುವುದೂ ಇಲ್ಲ. ಕೆಲವು ಸರಳ ವಿಚಾರಗಳೇ ಫ್ರೆಂಚ್ ಮಹಿಳೆಯರನ್ನು ಅಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಅವರು ಅವರ ಬೇಸಿಕ್ ಸೌಂದರ್ಯ ವಿಚಾರಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಅವರು ಯಾವುದೇ ಕಠಿಣ ವಿಚಾರಗಳನ್ನು, ಗಾಢವಾಗಿರುವ ಮತ್ತು ಆಳವಾದ ಮೇಕಪ್ ಗಳನ್ನು ಅಥವಾ ಬ್ಯೂಟಿ ಟ್ರೀಟ್ ಮೆಂಟ್ ಗಳನ್ನು ಪಡೆಯುವುದಿಲ್ಲ. ಅವರು ಸರಳವಾಗಿರುತ್ತಾರೆ .. ಅತ್ಯಂತ ಸರಳವಾಗಿರುತ್ತಾರೆ. ಬಹುಶ್ಯಃ ಅದೇ ಕಾರಣವೇ ಅವರನ್ನು ಅಷ್ಟು ಸುಂದರ ಗೊಳಿಸುವುದಾಗಿದೆ.ಅವರು ಅದೇ ಬೆಸ್ಟ್ ಎಂದು ಹೇಳಿಕೊಳ್ಳುತ್ತಾರೆ.

Glowing skin

ನೀವು ಕೂಡ ನಿಮ್ಮ ಸೌಂದರ್ಯವನ್ನು ಸರಳಗೊಳಿಸಿಕೊಳ್ಳಬೇಕು ಎಂದರೆ ಫ್ರೆಂಚ್ ಮಹಿಳೆಯರು ಅನುಸರಿಸುವ ಸೌಂದರ್ಯ ಮಾರ್ಗಗಳನ್ನು ಅನುಸರಿಸುವುದು ಬಹಳ ಒಳ್ಳೆಯದು. ಅದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ನಿಮ್ಮಲ್ಲಿ ಹೊಸದಾಗಿರುವ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗುತ್ತದೆ. ನೀವು ತಿಳಿದಿರಬೇಕಾದ ಆಶ್ಚರ್ಯಕರವಾಗಿ ಫ್ರೆಂಚ್ ಮಹಿಳೆಯರ ಸೌಂದರ್ಯ ಸಲಹೆಗಳು
1. ಫ್ರೆಂಚ್ ಮಹಿಳೆಯರು ವಯಸ್ಸಿನ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ
2. ಅವರು ಕಡುವಾದ ಕ್ಲೆನ್ಸರ್ ಗಳನ್ನು ಬಳಸುವುದಿಲ್ಲ
3. ಅವರು ಮೇಕಪ್ ನಲ್ಲಿ ನೈಸರ್ಗಿಕವಾಗಿ ಕಾಣಲು ಇಚ್ಛಿಸುತ್ತಾರೆ
4. ಅವರು ಕೂದಲನ್ನು ಹೆಚ್ಚು ಟೈಟ್ ಆಗಿ ಕಟ್ಟಿಕೊಳ್ಳುವುದಿಲ್ಲ
5. ಚರ್ಮದ ಕಾಳಜಿಗೆ ಅವರು ಬಹಳ ಮಹತ್ವ ನೀಡುತ್ತಾರೆ.
6. ಹೈಡ್ರೇಷನ್ ಗೆ ಅವರು ಹೆಚ್ಚು ಮಹತ್ವ ನೀಡುತ್ತಾರೆ
7. ವೈನ್ ಸೇವಿಸುವುದನ್ನು ಬಿಡುವುದೇ ಇಲ್ಲ

1. ಫ್ರೆಂಚ್ ಮಹಿಳೆಯರು ವಯಸ್ಸಿನ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ

ಫ್ರೆಂಚ್ ಮಹಿಳೆಯರು ತಮ್ಮ ವಯಸ್ಸಿನ ಚಿಹ್ನೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲವಂತೆ ಯಾಕೆ ಗೊತ್ತಾ? ಅವರು ತಮ್ಮ ವಯಸ್ಸು ಯಾವುದೇ ಇದ್ದರೂ ನಾವು ಸುಂದರವಾಗಿ ಕಾಣುತ್ತೇವೆ ಎಂಬ ಭಾವನೆ ಹೊಂದಿರುತ್ತಾರೆ. ಅವರು ತಮ್ಮ ವಯಸ್ಸಿನ ಬಗ್ಗೆ ಭಯ ಪಡುವುದಿಲ್ಲ. ಚರ್ಮದಲ್ಲಿ ನೆರಿಗೆಗಳಾಗುವುದು ಮತ್ತು ಕೂದಲು ಬಿಳಿಗೊಳ್ಳುವಿಕೆಯ ಬಗ್ಗೆ ಅವರಿಗೆ ಯಾವುದೇ ಬೇಸರವಿರುವುದಿಲ್ಲ.
ಮಾರುಕಟ್ಟೆಗಳಲ್ಲಿ ಸಿಗುವ ಆಂಟಿ-ಏಜಿಂಗ್ ಕ್ರೀಮ್ ಗಳು ಮತ್ತು ಲೋಷನ್ ಗಳನ್ನು ಬಳಕೆ ಮಾಡುವ ಬದಲಾಗಿ ಅವರು ನೈಸರ್ಗಿಕ ಎಣ್ಣೆ ಮತ್ತು ಜೇನುತುಪ್ಪವನ್ನು ಅವರ ಚರ್ಮಕ್ಕೆ ಬಳಕೆ ಮಾಡುತ್ತಾರಂತೆ. ದುಬಾರಿ ವೆಚ್ಚದ ಚರ್ಮದ ಚಿಕಿತ್ಸೆಗಳನ್ನು ಪಡೆಯುವ ಬದಲಾಗಿ, ಅವರು ನೈಸರ್ಗಿಕ ವಿಧಾನಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಉದಾಹರಣೆಗೆ ಅವರು ಹೆಚ್ಚು ಹಣ್ಣುಗಳನ್ನು ಸೇವಿಸುತ್ತಾರೆ ಮತ್ತು ಹಸಿರು ತರಕಾರಿಗಳು ಮತ್ತು ಪೋಷಕಾಂಶ ಭರಿತ ಆಹಾರ ಸೇವನೆಗೆ ಮಹತ್ವ ನೀಡಿ ತಮ್ಮ ಉತ್ತಮ ಆರೋಗ್ಯ ಮತ್ತು ಚರ್ಮದ ಆರೈಕೆಯನ್ನು ಮಾಡಿಕೊಳ್ಳುತ್ತಾರೆ.

2. ಅವರು ಕಡುವಾದ ಕ್ಲೆನ್ಸರ್ ಗಳನ್ನು ಬಳಸುವುದಿಲ್ಲ

ಹೌದು, ನಿಜವೇ ಹೇಳುತ್ತಿದ್ದೇವೆ. ಫ್ರೆಂಚ್ ಮಂದಿ ತುಂಬಾ ಕಡುವಾದ ಯಾವುದೇ ಕ್ಲೆನ್ಸರ್ ಅಥವಾ ಬಾಡಿ ವಾಷ್ ಗಳನ್ನು ತಮ್ಮ ದೇಹವನ್ನು ಸ್ವಚ್ಛಗೊಳಿಸಲು ಬಳಸುವುದಿಲ್ಲ. ಅವರು ಯಾವಾಗಲು ನೈಸರ್ಗಿಕ ಪದಾರ್ಥಗಳು ಮತ್ತು ಅತ್ಯಂತ ಕಡಿಮೆ ಕೆಮಿಕಲ್ ಗಳಿರುವ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಫ್ರೆಂಚ್ ಮಹಿಳೆಯರ ಬ್ಯೂಟಿ ಕಿಟ್ ನಲ್ಲಿ ತುಂಬಾ ಕಡುವಾದ ಯಾವುದೇ ಸೋಪು, ಕ್ಲೆನ್ಸರ್, ಫೇಶ್ ವಾಷ್ ಇತ್ಯಾದಿಗಳನ್ನು ಗಮನಿಸಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಅವರ ಚರ್ಮವು ಯಾವುದೇ ಕೆಮಿಕಲ್ ಗಳ ದುಷ್ಪರಿಣಾಮಗಳಿಗೆ ಒಳಗಾಗದೇ ಹೆಚ್ಚು ಆರೋಗ್ಯಯುತವಾಗಿ ಇರಲು ಸಾಧ್ಯವಾಗುತ್ತದೆ.

3. ಅವರು ಮೇಕಪ್ ನಲ್ಲಿ ನೈಸರ್ಗಿಕವಾಗಿ ಕಾಣಲು ಇಚ್ಛಿಸುತ್ತಾರೆ

ಒಕೆ, ಒಂದು ವೇಳೆ ನೀವು ಫ್ರೆಂಚ್ ಮಹಿಳೆಯರ ಬ್ಯೂಟಿ ಕಿಟ್ ನೋಡುವ ಅವಕಾಶ ಸಿಕ್ಕಿ ಅದನ್ನು ನೋಡಿದರೆ ಖಂಡಿತ ಆಶ್ಚರ್ಯ ಪಡುತ್ತೀರಿ. ಯಾಕೆ ಗೊತ್ತಾ? ಅವರ ಮೇಕಪ್ ಕಿಟ್ ನಲ್ಲಿ ಕೇವಲ ನೈಸರ್ಗಿಕ ಸೌಂದರ್ಯ ವರ್ಧಕಗಳು ಮಾತ್ರ ಇರುತ್ತದೆ ಮತ್ತು ಅವರು ಡ್ರೆಸ್ ಮಾಡಿಕೊಳ್ಳುವಾಗ ಅತೀ ಕಡಿಮೆ ಮೇಕಪ್ ಅಪ್ ಬಳಸಲು ಇಚ್ಛಿಸುತ್ತಾರೆ ಮತ್ತು ನೈಸರ್ಗಿಕವಾಗಿ ಬ್ಯೂಟಿಫುಲ್ ಆಗಿ ಕಾಣಲು ಆಸೆ ಪಡುತ್ತಾರೆ. ಹೌದು ಅತೀ ಕಡಿಮೆ ಮೇಕಪ್ ಮಾಡಿಕೊಂಡರೆ ಹೆಚ್ಚು ಸುಂದರವಾಗಿ ಕಾಣಲು ಸಾಧ್ಯವಿದೆ ಅದನ್ನು ಫ್ರೆಂಚ್ ಮಹಿಳೆಯರು ಯಾವಾಗಲೂ ಸಾಧಿಸಿ ತೋರಿಸುತ್ತಾರೆ.

4. ಅವರು ಕೂದಲನ್ನು ಹೆಚ್ಚು ಟೈಟ್ ಆಗಿ ಕಟ್ಟಿಕೊಳ್ಳುವುದಿಲ್ಲ

ಇದು ಬಹುಶ್ಯಃ ಭಾರತೀಯ ಮಹಿಳೆಯರೆಲ್ಲರೂ ಫ್ರೆಂಚ್ ಮಹಿಳೆಯರಿಂದ ತಿಳಿಯ ಬೇಕಾಗಿರುವ ಅಂಶವಾಗಿದೆ. ಅವರು ಮನೆಯಲ್ಲೇ ಇರಲಿ ಇಲ್ಲವೇ ಹೊರಗಡೆಗೆ ಹೋಗುತ್ತಿರಲಿ ಅವರು ಅವರ ಕೂದಲನ್ನು ಬಿಗಿಯಾಗಿ ಕಟ್ಟುವುದಿಲ್ಲ ಆದಷ್ಟು ಕೂದಲು ಬಿಟ್ಟುಕೊಂಡಿರುವದಕ್ಕೆ ಆಸಕ್ತಿ ತೋರುತ್ತಾರೆ ಮತ್ತು ಆ ಮೂಲಕ ಕೂದಲಿನ ಉಸಿರಾಟಕ್ಕೆ ಅವಕಾಶ ನೀಡುತ್ತಾರೆ. ಒಂದು ವೇಳೆ ಅವರು ಕೂದಲನ್ನೂ ಕಟ್ಟಿಕೊಂಡರೂ ಕೂಡ ಅದು ಎಂದಿಗೂ ಬಿಗಿಯಾಗಿ ಇರುವುದಿಲ್ಲ.ಅವರು ಲೂಸ್ ಆಗಿರುವ ಒಂದು ಗಂಟನ್ನು ಹಾಕಿಕೊಳ್ಳುತ್ತಾರೆ ಹಾಗಾಗಿ ಅತ್ಯಂತ ಹೆಚ್ಚು ಸುಂದರವಾಗಿ ಕಾಣಿಸುತ್ತಾರೆ. ಹೀಗೆ ಕೂದಲನ್ನು ಬಿಗಿಯಾಗಿ ಕಟ್ಟದೇ ಇದ್ದರೆ ಕೂದಲು ತುಂಡಾಗುವಿಕೆ ಇರುವುದೇ ಅಲ್ಲ ಅಥವಾ ಇದ್ದರೂ ಅತ್ಯಂತ ಕಡಿಮೆ ಇರುತ್ತದೆ. ಹಾಗಾಗಿ ಕೂದಲಿನ ಆರೋಗ್ಯ ಹೆಚ್ಚುತ್ತದೆ.

5. ಚರ್ಮದ ಕಾಳಜಿಗೆ ಅವರು ಬಹಳ ಮಹತ್ವ ನೀಡುತ್ತಾರೆ

ಫ್ರೆಂಚ್ ಮಹಿಳೆಯರು ತಮ್ಮ ಕೈಗಳು ಮತ್ತು ಕಾಲುಗಳನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಲು ಮಹತ್ವ ನೀಡುತ್ತಾರೆ ಮತ್ತು ಅವರು ಅದನ್ನು ಹೇಗೆ ಮಾಡುತ್ತಾರೆ ಗೊತ್ತಾ? ಅದಕ್ಕಾಗಿ ಒಂದು ರೆಸಿಪಿ ಕೂಡ ಇದೆ. ಆ ರೆಸಿಪಿ ಯಾವುದು ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಸ್ವಲ್ಪ ಸಮುದ್ರ ಉಪ್ಪನ್ನು ತೆಗೆದುಕೊಳ್ಳಿ ಮತ್ತು ಅದಕ್ಕ ಕೆಲವು ಹನಿ ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆ (ಇತರೆ ಎಣ್ಣೆಯಾದರೂ ಆಗುತ್ತದೆ. ನಿಮ್ಮ ಮನೆಯಲ್ಲಿ ಯಾವ ಎಣ್ಣೆ ಇದಿಯೋ ಅದನ್ನೂ ಬಳಸಬಹುದು) ಒಟ್ಟಿಗೆ ಸೇರಿಸಿಕೊಳ್ಲಿ ಮತ್ತು ಅದರಿಂದ ನಿಮ್ಮ ಕೈಕಾಲುಗಳಿಗೆ ಸ್ಕ್ರಬ್ ಮಾಡಿಕೊಳ್ಳಿ. ಕಡೇಪಕ್ಷ ಒಂದು ಐದು ನಿಮಿಷ ಇದರಿಂದ ಮಸಾಜ್ ಮಾಡಿ ಮತ್ತು ಪ್ರತಿದಿನ ಇದನ್ನು ಮಾಡಿ. ಇದನ್ನು ಪ್ರತಿದಿನದ ಅಭ್ಯಾಸವನ್ನಾಗಿ ಮಾಡಿಕೊಳ್ಳಿ ಮತ್ತು ಬದಲಾವಣೆ ಯನ್ನು ಖಂಡಿತ ನೀವು ಗಮನಿಸಿಕೊಳ್ಳಬಹುದು. ಇನ್ನೊಂದು ಪ್ರಮುಖ ಬ್ಯೂಟಿ ಟಿಪ್ಸ್ ಫ್ರೆಂಚ್ ಮಹಿಳೆಯರು ಪಾಲಿಸುವುದು ಏನೆಂದರೆ ಅವರು ಯಾವತ್ತೂ ಕೂಡ ನೈಲ್ ಪಾಲಿಶ್ ನ್ನು ಬಳಸುವುದೇ ಇಲ್ಲ. ಯಾವಾಗಲೂ ಅವರು ಅವರ ಕೈ ಉಗುರು ನೈಸರ್ಗಿಕವಾಗಿಯೇ ಇರಬೇಕು ಎಂದು ಭಾವಿಸುತ್ತಾರೆ ಮತ್ತು ಯಾವಾಗಲೂ ಆಲಿವ್ ಎಣ್ಣೆಯಿಂದ ಮಸಾಜ್ ಮತ್ತು ಸ್ಕ್ರಬ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

6. ಹೈಡ್ರೇಷನ್ ಗೆ ಅವರು ಹೆಚ್ಚು ಮಹತ್ವ ನೀಡುತ್ತಾರೆ

ನಿಮ್ಮ ಚರ್ಮವನ್ನು ಯಾವಾಗಲೂ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ. ಈ ಒಂದು ನಿಯಮವನ್ನು ಹೆಚ್ಚಿನ ಫ್ರೆಂಚ್ ಮಹಿಳೆಯರು ಪಾಲಿಸಿಯೇ ಪಾಲಿಸುತ್ತಾರೆ ಮತ್ತು ಇದೇ ಕಾರಣಕ್ಕೆ ಅವರ ಚರ್ಮವು ಯಾವಾಗಲೂ ಕೂಡ ಫಳಫಳ ಹೊಳೆಯುತ್ತಿರುತ್ತದೆ. ಇದಕ್ಕೆ ಒಂದು ಸರಳವಾದ ಕಾರಣವೇನೆಂದರೆ, ಇದು ಬಾಹ್ಯವಾಗಿ ಮತ್ತು ಆಂತರಿಕವಾಗಿ ನಿಮ್ಮ ದೇಹವನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಪ್ರತಿಯೊಬ್ಬರೂ ಕೂಡ ಹೆಚ್ಚು ನೀರು ಕುಡಿಯುವುದರಿಂದಾಗಿ ಅವರ ಆರೋಗ್ಯವನ್ನು ಅಧ್ಬುತವಾಗಿ ಇಟ್ಟುಕೊಳ್ಳಬಹುದು. ಒಂದು ವೇಳೆ ನೀವು ಕೂಡ ಫ್ರೆಂಚ್ ಮಹಿಳೆಯರಂತೆ ನಿಮ್ಮ ಚರ್ಮವು ನೈಸರ್ಗಿಕವಾಗಿ ಸುಂದರವಾಗಿ ಕಾಣಬೇಕು ಎಂದು ಭಾವಿಸಿದರೆ ಸಾಕಷ್ಟು ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

7. ವೈನ್ ಸೇವಿಸುವುದನ್ನು ಬಿಡುವುದೇ ಇಲ್ಲ

ಇದರಲ್ಲಿ ಯಾವುದೇ ಗುಟ್ಟು ಮಾಡುವ ಸಂಗತಿಯಿಲ್ಲ. ಫ್ರೆಂಚ್ ಮಹಿಳೆಯರು ವೈನ್ ಪ್ರಿಯರು. ಪ್ರತಿ ಊಟ ಮತ್ತು ತಿಂಡಿ, ಉಪಹಾರದ ಸಮಯದಲ್ಲೂ ಅವರಿಗೆ ವೈನ್ ಬೇಕೇ ಬೇಕು.ನಿಜ ಹೇಳಬೇಕು ಅಂದರೆ, ನಿಮಗೆ ತಿಳಿದಿಲ್ಲದ ಒಂದು ವಿಚಾರವೇನೆಂದರೆ ವೈನ್ ಅಥವಾ ರೆಡ್ ವೈನ್ ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳಿದ್ದು ಅದು ವಯಸ್ಸಿನ ಚಿಹ್ನೆಗಳು ಬೇಗನೆ ಕಾಣಿಸಿಕೊಳ್ಳದಂತೆ ನೋಡಿಕೊಳ್ಳುತ್ತದೆ. ಇವೆಲ್ಲವೂ ಫ್ರೆಂಚ್ ಮಹಿಳೆಯರ ಬ್ಯೂಟಿ ಸೀಕ್ರೇಟ್ ಬಗೆಗಿನ ಒಂದು ಕ್ವಿಕ್ ರೌಂಡ್ ಅಪ್ ಅಷ್ಟೇ. ಇಂತಹದ್ದೇ ಹಲವು ಬ್ಯೂಟಿ ಟಿಪ್ಸ್ ಮತ್ತು ಟ್ರಿಕ್ಸ್ ಗಳನ್ನು ನೀವು ತಿಳಿಯಬೇಕು ಅಂದರೆ ಬೋಲ್ಡ್ ಸ್ಕೈ ಗಮನಿಸುವುದನ್ನು ಮರೆಯಬೇಡಿ.. ಲೇಖನ ನಿಮಗೆ ಇಷ್ಟವಾದರೆ ನಿಮ್ಮವರೊಂದಿಗೆ ಹಂಚಿಕೊಳ್ಳಿ ಮತ್ತು ಲೈಕ್ ಒತ್ತಿ.

English summary

7 Amazing French Beauty Tips You Should Know

It is no secret that French ladies are one of the best when it comes to natural beauty and skin care. And, the women there are known for their natural beauty, their glowing face and skin, and more importantly, their secret beauty tips. But, what makes them different? What makes their skin so beautiful? What is their beauty secret?
X
Desktop Bottom Promotion