Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ಅಚ್ಚರಿಯಾದರೂ ನಿಜ-ಮುಖಕ್ಕೆ ವಿಸ್ಕಿ ಫೇಸ್ ಪ್ಯಾಕ್ ಒಳ್ಳೆಯದಂತೆ!!
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಎಚ್ಚರಿಕೆ ಸಂದೇಶಗಳನ್ನು ನಾವು ಪ್ರತಿನಿತ್ಯ ಕೇಳುತ್ತಾ ಇರುತ್ತೇವೆ. ಮದ್ಯಪಾನ ಆರೋಗ್ಯವನ್ನು ಕೆಡಿಸುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಿದ್ದರೂ ಕೆಲವು ಮಂದಿ ಮದ್ಯಪಾನಕ್ಕೆ ದಾಸರಾಗಿರುತ್ತಾರೆ. ಇದು ತಪ್ಪು. ಮದ್ಯಪಾನ ಹಿತಮಿತವಾಗಿದ್ದರೂ ಅದರಿಂದ ದೇಹಕ್ಕೆ ಹಾನಿಯಾಗುವುದುಂಟು. ಆದರೆ ಬೋಲ್ಡ್ ಸ್ಕೈ ಹೇಳಲು ಹೊರಟಿರುವುದು ಮದ್ಯಪಾನದಿಂದ ತ್ವಚೆಗೆ ಆಗುವ ಲಾಭದ ಬಗ್ಗೆ. ಇದನ್ನು ಕೇಳಿ ನೀವು ಸ್ವಲ್ಪ ಅಚ್ಚರಿಗೊಳಗಾಗಬಹುದು.
ಆದರೆ ಇದು ನಿಜ. ವಿಸ್ಕಿಯನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಿದರಿಂದ ಸುಂದರ ಹಾಗೂ ಕಾಂತಿಯುತ ತ್ವಚೆಯು ನಿಮ್ಮದಾಗುವುದು. ವಿಸ್ಕಿಯನ್ನು ನಿಮ್ಮ ಸೌಂದರ್ಯವರ್ಧಕದಲ್ಲಿ ತುಂಬಾ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಕೆಲವೊಂದು ಸಾಮಗ್ರಿಗಳೊಂದಿಗೆ ವಿಸ್ಕಿಯನ್ನು ಫೇಸ್ ಮಾಸ್ಕ್ ಆಗಿ ಬಳಸಿಕೊಳ್ಳಬಹುದು. ಯಾವ್ಯಾವ ಸಾಮಗ್ರಿಗಳೊಂದಿಗೆ ವಿಸ್ಕಿ ಬಳಸಿದರೆ ಅದರಿಂದ ತ್ವಚೆಯ ಕಾಂತಿ ಹೆಚ್ಚಾಗುವುದು ಎನ್ನುವುದರ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.....

ನೀರು
ವಿಸ್ಕಿಯೊಂದಿಗೆ ನೀರು ಬೆರೆಸಿಕೊಂಡು ಕುಡಿಯುವುದನ್ನು ಕೇಳಿದ್ದೀರಿ. ಅದೇ ರೀತಿ ನಿಮ್ಮ ತ್ವಚೆಗೂ ವಿಸ್ಕಿಯೊಂದಿಗೆ ನೀರು ಬೆರೆಸಿ ಬಳಸಿದರೆ ತುಂಬಾ ಪರಿಣಾಮಕಾರಿಯಾಗಲಿದೆ. ½ ಕಪ್ ನೀರಿಗೆ ಎರಡು ಚಮಚ ವಿಸ್ಕಿಯನ್ನು ಹಾಕಿಕೊಳ್ಳಿ. ಹತ್ತಿ ಉಂಡೆ ಬಳಸಿಕೊಂಡು ಅದನ್ನು ನಿಮ್ಮ ತ್ವಚೆಗೆ ಹಚ್ಚಿಕೊಳ್ಳಿ. ಐದು ನಿಮಿಷ ಬಿಟ್ಟು ತೊಳೆದರೆ ಕಾಂತಿಯುತ ತ್ವಚೆ ನಿಮ್ಮದಾಗುವುದು.

ನಿಂಬೆ
ನಿಂಬೆಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣಗಳು ಇವೆ. ಇದಕ್ಕೆ ವಿಸ್ಕಿ ಬೆರೆಸಿದರೆ ಅದು ತ್ವಚೆಗೆ ಮತ್ತಷ್ಟು ಕಾಂತಿ ನೀಡುವುಡು. ಎರಡು ಚಮಚ ವಿಸ್ಕಿಯೊಂಧಿಗೆ ½ ಚಮಚ ತಾಜಾ ನಿಂಬೆರಸ ಬೆರೆಸಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಬಿಡಿ. ತಣ್ಣೀರಿನಿಂದ ತೊಳೆದ ಬಳಿಕ ಮಾಯಿಶ್ಚರೈಸರ್ ಹಾಕಿಕೊಳ್ಳಿ. ಕಪ್ಪು ಹಾಗೂ ನಿಸ್ತೇಜ ಚರ್ಮಕ್ಕೆ ಇದು ಒಳ್ಳೆಯದು.

ಜೇನುತುಪ್ಪ
ಸುಂದರ ಹಾಗೂ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ಇದು ಒಳ್ಳೆಯ ವಿಧಾನ. ಜೇನುತುಪ್ಪದಲ್ಲಿ ಮೊಶ್ಚಿರೈಸರ್ ಗುಣಗಳು ಇವೆ ಮತ್ತು ಇದು ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸುವುದು. ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಮಚ ವಿಸ್ಕಿ ಹಾಕಿಕೊಂಡು ಮಿಶ್ರಣ ಮಾಡಿ ಮುಖಕ್ಕೆ ಕೆಲವು ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಟ್ಟು ನೀರಿನಿಂದ ತೊಳೆಯಿರಿ.

ಹಾಲು
ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲವಿದೆ. ಇದು ಚರ್ಮದ ಬಣ್ಣವನ್ನು ಸುಧಾರಿಸುವುದು. ಕೆಲವು ಹನಿ ವಿಸ್ಕಿಯನ್ನು ಒಂದು ಚಮಚ ಹಾಲಿಗೆ ಅಥವಾ 1-2 ಚಮಚದಷ್ಟು ವಿಸ್ಕಿಯನ್ನು ಹಾಲಿನ ಹುಡಿ ಬಳಸುತ್ತಿದ್ದರೆ ಹಾಕಿಕೊಳ್ಳಿ. ಇದಕ್ಕೆ ಜೇನುತುಪ್ಪ ಹಾಕಿದರೆ ಮತ್ತಷ್ಟು ಒಳ್ಳೆಯದು. ಕೆಲವು ನಿಮಿಷ ಬೆರಳುಗಳನ್ನು ಬಳಸಿಕೊಂಡು ಮುಖಕ್ಕೆ ಮಸಾಜ್ ಮಾಡಿ. ಸ್ವಲ್ಪ ಸಮಯ ಬಿಟ್ಟು ಇದನ್ನು ತೊಳೆಯಿರಿ.

ಮೊಟ್ಟೆ
ಒಂದು ಮೊಟ್ಟೆಯ ಬಿಳಿಯ ಲೋಳೆ ತೆಗೆದುಕೊಂಡು ಅದನ್ನು ಸರಿಯಾಗಿ ಕಲಸಿ ದಪ್ಪಗೆ ಮಾಡಿ. ಇದಕ್ಕೆ ಒಂದು ಚಮಚ ಹಾಲಿನ ಹುಡಿ ಹಾಗೂ ಒಂದು ಚಮಚ ವಿಸ್ಕಿ ಹಾಕಿಕೊಳ್ಳಿ. ಕೆಲವು ಹನಿ ನಿಂಬೆರಸ ಹಾಕಿದರೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ. ಸ್ವಲ್ಪ ಸಮಯ ಬಿಟ್ಟು ಸ್ವಚ್ಛ ನೀರಿನಿಂದ ತೊಳೆಯಿರಿ. ಇದು ಮೊಡವೆಗಳಿಗೆ ಪರಿಣಾಮಕಾರಿ.

ಚಾಕಲೇಟ್
ಇದು ತ್ವಚೆಯ ವಿನ್ಯಾಸವನ್ನು ಉತ್ತಮಪಡಿಸುವುದು ಮಾತ್ರವಲ್ಲದೆ ಕಾಲಜನ್ ಬಿಡುಗಡೆಯನ್ನು ಹೆಚ್ಚಿಸುವುದು. ಒಂದು ಚಮಚ ಕೋಕಾ ಹುಡಿ ಮತ್ತು ಕೆಲವು ಹನಿ ವಿಸ್ಕಿಯನ್ನು ಇದಕ್ಕೆ ಬಳಸಿಕೊಳ್ಳಿ. ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಇದು ಸಂಪೂರ್ಣವಾಗಿ ಒಣಗುವ ತನಕ ಮುಖದ ಮೇಲೆ ಇರಲಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಟವೆಲ್ ನಿಂದ ಒರೆಸಿಕೊಳ್ಳಿ.

ಗುಲಾಬಿ
ಗುಲಾಬಿಯಿಂದ ತ್ವಚೆಗೆ ಹಲವಾರು ರೀತಿಯ ಲಾಭಗಳು ಇವೆ ಎಂದು ನಿಮಗೆ ಈಗಾಗಲೇ ತಿಳಿದಿದೆ. ಇದು ನೈಸರ್ಗಿಕ ಟೋನರ್ ಆಗಿ ಕೆಲಸ ಮಾಡುವುದು ಮತ್ತು ಚರ್ಮದಲ್ಲಿರುವ ಕೆಂಪು ಬಣ್ಣವನ್ನು ನಿವಾರಿಸುವುದು. ವಿಸ್ಕಿ ಜತೆ ಸೇರಿಸಿದಾಗ ಇದು ಅದ್ಭುತವಾಗಿ ಕೆಲಸ ಮಾಡುವುದು. ಒಂದು ಹಿಡಿ ಗುಲಾಬಿ ಎಸಲುಗಳನ್ನು ತೆಗೆದುಕೊಂಡು ಅದನ್ನು ಸರಿಯಾಗಿ ಜಜ್ಜಿಕೊಂಡು ರಸ ತೆಗೆಯಿರಿ. ಇದಕ್ಕೆ ಅರ್ಧ ಚಮಚ ವಿಸ್ಕಿ ಹಾಕಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ ಮತ್ತು ನೀರಿನಿಂದ ಮುಖ ತೊಳೆಯಿರಿ.

ಬೇವು
‘ಫಂಗಲ್ ವಿರೋಧಿ ಗುಣವನ್ನು ಹೊಂದಿರುವ ಬೇವು ಅದ್ಭುತವಾಗಿ ಕೆಲಸ ಮಾಡುವುದು ಮತ್ತು ಕಲ್ಮಷವನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಸ್ವಲ್ಪ ಬೇವಿನ ಎಲೆಗಳನ್ನು ರುಬ್ಬಿಕೊಳ್ಳಿ ಮತ್ತು ಅದಕ್ಕೆ ಒಂದು ಚಮಚ ವಿಸ್ಕಿ ಹಾಕಿ. ಇದಕ್ಕೆ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ.

ಸೌತೆಕಾಯಿ
ಸೌತೆಕಾಯಿಯು ತ್ವಚೆಗೆ ತಂಪನ್ನು ನೀಡುವುದು. ಇದನ್ನು ವಿಸ್ಕಿ ಜತೆಗೆ ಸೇರಿಸಿದಾಗ ತ್ವಚೆಯು ತುಂಬಾ ಸ್ವಚ್ಛವಾಗುವುದು. ½ ಕಪ್ ಸೌತೆಕಾಯಿ ತಿರುಳನ್ನು ರುಬ್ಬಿಕೊಂಡು ಅದಕ್ಕೆ ಎರಡು ಚಮಚ ವಿಸ್ಕಿ ಹಾಕಿ. ಇದನ್ನು ಮುಖಕ್ಕೆ ಹಚ್ಚಿಕೊಂಡರೆ ಒಳ್ಳೆಯ ಫಲಿತಾಂಶ ಪಡೆಯಬಹುದು.



Click it and Unblock the Notifications