Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ಪವರ್ ಫುಲ್ ಔಷಧ: ಒಂದೇ ದಿನದಲ್ಲಿ ಮೊಡವೆ ಮಂಗಮಾಯ!
ಮಹಿಳೆಯರ ಸೌಂದರ್ಯದಲ್ಲಿ ಪ್ರಮುಖವಾಗಿರುವ ಮುಖದಲ್ಲಿ ಆಗಾಗ ಮೊಡವೆಗಳು ಮೂಡುವುದರಿಂದ ನೋವು, ಕಿರಿಕಿರಿ ಉಂಟಾಗುವುದು ಸಾಮಾನ್ಯ ಸಂಗತಿಯಾಗಿದೆ. ಅದರಲ್ಲೂ ಕೆಲವೊಂದು ವಿಧದ ಚರ್ಮದಲ್ಲಿ ಮೊಡವೆಗಳ ಸಮಸ್ಯೆ ಹೆಚ್ಚಾಗಿರುತ್ತದೆ. ಮೊಡವೆಗಳು ಕಾಣಿಸಿಕೊಳ್ಳುವುದು ಎಣ್ಣೆಯಂಶವಿರುವ ಚರ್ಮಗಳಲ್ಲಿ. ಆದರೆ ಒಣ ಚರ್ಮದವರಿಗೂ ಈ ಸಮಸ್ಯೆ ಇದ್ದೇ ಇರುತ್ತದೆ.
ಮೊಡವೆ ನಿವಾರಣೆ ಮಾಡಲು ಹಲವಾರು ರೀತಿಯ ಕ್ರೀಮ್ ಹಾಗೂ ಮದ್ದುಗಳನ್ನು ಉಪಯೋಗಿಸಿರಬಹುದು. ಆದರೂ ಮೊಡವೆಗಳು ಹಾಗೆ ಉಳಿದಿದ್ದರೆ ಅದಕ್ಕೆ ಕೆಲವೊಂದು ವಿಧಾನಗಳನ್ನು ಬಳಸಿಕೊಂಡು ಮೊಡವೆ ಕಡಿಮೆ ಮಾಡಬಹುದು. ಪ್ರತಿಯೊಬ್ಬರ ಚರ್ಮ ಒಂದೇ ರೀತಿಯಲ್ಲಿ ಇರುವುದಿಲ್ಲ. ಇದರಿಂದ ಚರ್ಮಕ್ಕೆ ಅನುಗುಣವಾಗಿ ಮದ್ದನ್ನು ಬಳಸಿಕೊಳ್ಳಬೇಕು. ಆದರೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ಹೇಳಿಕೊಡಲಿರುವ ಸರಳ ಮದ್ದುಗಳನ್ನು ಬಳಸಿಕೊಂಡು ಪರಿಹಾರ ಪಡೆಯಹುದು....

ಕಣ್ಣಿನ ಡ್ರಾಪ್
ಕಣ್ಣಿನ ಡ್ರಾಪ್ ಅನ್ನು ಯಾವುದೇ ರೀತಿಯ ಚರ್ಮದವರು ಕೂಡ ಬಳಸಿಕೊಳ್ಳಬಹುದು. ಯಾವುದೇ ಜೆನರಿಕ್ ಕಣ್ಣಿನ ಡ್ರಾಪ್ ನ್ನು ಬಳಸಬಹುದು. ಕಣ್ಣಿನ ಡ್ರಾಪ್ ಬಳಸುವುದರಿಂದ ಕೆಂಪಾಗಿರುವ ಮೊಡವೆ, ಕಿರಿಕಿರಿಯನ್ನು ತಡೆಯಬಹುದು ಮತ್ತು ಇದು ಚರ್ಮಕ್ಕೆ ಶಮನ ನೀಡುವುದು. ಕಣ್ಣಿನ ಡ್ರಾಪ್ ನ್ನು ನೀವು ಎಷ್ಟು ಸಲ ಬೇಕಿದ್ದರೂ ಬಳಸಬಹುದು. ಮೊಡವೆಗಳು ತೆರೆದುಕೊಂಡಿದ್ದರೆ ಕಣ್ಣಿನ ಡ್ರಾಪ್ ಹಾಕಬೇಡಿ.ಕೆಂಪಾಗಿರುವ ಮತ್ತು ಕಿರಿಕಿರಿ ಉಂಟು ಮಾಡಿರುವ ಮೊಡವೆಗಳಿಗೆ ಇದನ್ನು ಬಳಸಬಹುದು.

ಬೇವಿನ ಪೇಸ್ಟ್
ಎಲ್ಲಾ ರೀತಿಯ ಚರ್ಮಗಳಿಗೆ ಹೊಂದಿಕೊಳ್ಳುವ ಪ್ರಮುಖ ಔಷಧಿಯೆಂದರೆ ಬೇವಿನ ಎಲೆಯ ಪೇಸ್ಟ್. ತಾಜಾ ಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ ಮತ್ತು ಮೊಡವೆಗಳ ಮೇಲೆ ಹಚ್ಚಿಕೊಳ್ಳಿ. ಬೇವಿನ ಎಲೆಗಳನ್ನು ನೀರಿನಲ್ಲಿ ಸರಿಯಾಗಿ ಕುದಿಸಿಕೊಂಡು ಈ ನೀರಿನಲ್ಲಿ ಸ್ನಾನ ಮಾಡಬೇಕು.ಇದು ಮೊಡವೆಗಳಿಗೆ ತುಂಬಾ ಸರಳವಾಗಿರುವ ಮನೆಮದ್ದಾಗಿದೆ. ಇದು ಮೊಡವೆಯಿರುವ ಚರ್ಮಕ್ಕೆ ಶಮನ ನೀಡುವುದು ಮತ್ತು ಮೊಡವೆಗಳು ಮೂಡದಂತೆ ತಡೆಯುವುದು.

ತುಳಸಿ ಮತ್ತು ಶ್ರೀಗಂಧದ ಮಾಸ್ಕ್
ಮೊಡವೆಗಳಿಂದ ದೀರ್ಘ ಸಮಯದಿಂದ ನೀವು ಸಮಸ್ಯೆ ಎದುರಿಸುತ್ತಾ ಇದ್ದರೆ ಮೊಡವೆಯ ಈ ಮನೆಮದ್ದು ತುಂಬಾ ಪರಿಣಾಮಕಾರಿಯಾಗಲಿದೆ. ಇದಕ್ಕೆ ಕೇವಲ ಎರಡು ಸಾಮಗ್ರಿ ಮಾತ್ರ ಬೇಕಾಗಿರುವ ಕಾರಣದಿಂದ ತುಂಬಾ ಸರಳ ಹಾಗೂ ಪರಿಣಾಮಕಾರಿ. ತುಳಸಿ ಎಲೆಗಳನ್ನು ಒಣಗಿಸಿಕೊಂಡು ಹುಡಿ ಮಾಡಿ. ತುಳಸಿ ಹುಡಿ ಮತ್ತು ಶ್ರೀಗಂಧದ ಹುಡಿಯನ್ನು ನೀರು ಹಾಕಿ ಮಿಶ್ರಣ ಮಾಡಿ. ಚರ್ಮಕ್ಕೆ ಇದು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ರೋಸ್ ವಾಟರ್ ಬಳಸಿ. ದಿನದಲ್ಲಿ ಎರಡು ಸಲ ಇದನ್ನು ಬಳಸಿಕೊಂಡರೆ ಮೊಡವೆ ಇರುವ ಜಾಗವು ಕೆಲವೇ ದಿನಗಳಲ್ಲಿ ಸುಂದರವಾಗಿ ಕಾಣಿಸುವುದರಲ್ಲಿ ಸಂಶಯವೇ ಇಲ್ಲ.

ಪುದೀನಾ
ಬೇವಿನ ಎಲೆಗಳಂತೆ ಮೊಡವೆಗಳಿಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವ ಮತ್ತೊಂದು ಸಸ್ಯವೆಂದರೆ ಪುದೀನಾ. ತಾಜಾ ಪುದೀನಾ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ನೀರು ಹಾಕಿ.

ಪುದೀನಾ
ಇದರ ಪೇಸ್ಟ್ ಮಾಡಿಕೊಂಡು ಮೊಡವೆ ಇರುವ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಪ್ರತೀ ಸಲ ನೀವು ತಾಜಾ ಪುದೀನಾ ಎಲೆಗಳನ್ನು ಬಳಸಿಕೊಳ್ಳಿ. ಪುದೀನಾದ ದಪ್ಪಗಿನ ಪೇಸ್ಟ್ ಮಾಡಿ ಹಚ್ಚಿಕೊಳ್ಳಬೇಕು.



Click it and Unblock the Notifications