Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಮುಖದ ಅಂದ ಹೆಚ್ಚಿಸುವ 'ರೆಡ್ ವೈನ್' ಫೇಸ್ ಮಾಸ್ಕ್
ತ್ವಚೆಯ ಕಾಳಜಿಯ ವಿಷಯಕ್ಕೆ ಬಂದಾಗ ಯುವತಿಯರು ಸೂಕ್ತ ತೀರ್ಮಾನಗಳನ್ನೇ ಕೈಗೊಳ್ಳುತ್ತಾರೆ. ಹೆಚ್ಚು ರಾಸಾಯನಿಕಗಳ ಬಳಕೆಯನ್ನು ಮಾಡದೆಯೇ ಮನೆಯಲ್ಲೇ ದೊರೆಯುವ, ಪ್ರಾಕೃತಿಕ ಉತ್ಪನ್ನಗಳನ್ನು ಬಳಸಿಕೊಂಡು ತ್ವಚೆಯ ಪೋಷಣೆಯನ್ನು ಮಾಡುತ್ತಾರೆ. ಆದರೆ ನೀವು ಈ ಹಿಂದೆ ಎಲ್ಲಾದರೂ ರೆಡ್ ವೈನ್ ಫೇಸ್ ಮಾಸ್ಕ್ ಬಗ್ಗೆ ಕೇಳಿದ್ದೀರಾ? ಹಾಗಿದ್ದರೆ ಈ ರೆಡ್ ವೈನ್ ಮಾಸ್ಕ್ ಅನ್ನು ನೀವು ಪ್ರಯತ್ನಿಸಲೇಬೇಕು.
ಈ ಮಾಸ್ಕ್ ನಿಮಗೆ ಈ ಹಿಂದೆ ಎಂದೂ ಕಾಣದ ಪ್ರಯೋಜನವನ್ನು ನೀಡುವುದು ಖಂಡಿತ. ಈ ಮಾಸ್ಕ್ ಅನ್ನು ಪ್ರಯತ್ನಿಸುವ ಮುನ್ನ ಇಂದಿನ ಲೇಖನದಲ್ಲಿ ಇದರ ಪ್ರಯೋಜನಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಮನೆಯಲ್ಲೇ ದೊರೆಯುವ ಅಡುಗೆ ಮನೆಯ ಪರಿಕರಗಳಿಂದ ಈ ರೆಡ್ ವೈನ್ ಫೇಸ್ ಪ್ಯಾಕ್ ಅನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ.

ರೆಡ್ ವೈನ್, ಜೇನು ಮತ್ತು ಮೊಸರನ್ನು ಈ ಮಾಸ್ಕ್‌ಗಾಗಿ ನೀವು ಬಳಸಬೇಕು. ಈ ಮೂರು ಸಾಮಾಗ್ರಿಗಳು ಮನೆಯಲ್ಲೇ ಸುಲಭವಾಗಿ ದೊರೆಯುತ್ತದೆ ಮತ್ತು ಫೇಸ್ ಮಾಸ್ಕ್ ತಯಾರಿಯಲ್ಲಿ ಅತ್ಯುನ್ನತ ಪ್ರಯೋಜನವನ್ನು ನೀಡುವುದು ಖಂಡಿತ.
ಈ ವೈನ್ ಫೇಸ್ ಮಾಸ್ಕ್ ಅನ್ನು ಯಾವುದೇ ತ್ವಚೆಯ ಪ್ರಕಾರಕ್ಕೆ ಯಾವುದೇ ಹವಾಮಾನದಲ್ಲಿ ನಿಮಗೆ ಬಳಸಿಕೊಳ್ಳಬಹುದಾಗಿದೆ. ರೆಡ್ ವೈನ್‌ನಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ತ್ವಚೆಯ ಪ್ರಾಥಮಿಕ ಸಮಸ್ಯೆಗಳಾದ ವಯಸ್ಸಾಗುವಿಕೆ ಮತ್ತು ಕ್ಷೀಣ ತ್ವಚೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಈ ಫೇಸ್ ಮಾಸ್ಕ್ ಬಳಸಿದರೆ ಸಾಕು ಕೆಲವೇ ದಿನಗಳಲ್ಲಿ ನಿಮಗೆ ಅತ್ಯುತ್ತಮ ಫಲಿತಾಂಶ ದೊರೆಯುತ್ತದೆ.
ವಾರದಲ್ಲಿ ಎಷ್ಟು ಬಾರಿ ಬೇಕಾದರೂ ಈ ಫೇಸ್ ಮಾಸ್ಕ್ ಅನ್ನು ನಿಮಗೆ ಬಳಸಬಹುದಾಗಿದೆ. ಅಂತೆಯೇ ವಿಶೇಷ ಸಂದರ್ಭಗಳಲ್ಲಿ ನಿಮಗೆ ಇನ್ನೂ ಸುಂದರವಾಗಿ ಕಾಣಬೇಕೆಂಬ ಹಂಬಲವಿದ್ದಲ್ಲಿ ನಿತ್ಯವೂ ಬಳಸಿಕೊಂಡು ತ್ವಚೆಯ ಕಾಂತಿಯನ್ನು ದ್ವಿಗುಣಬಳಸಬಹುದಾಗಿದೆ. ಬರಿಯ ಮುಖಕ್ಕೆ ಮಾತ್ರವಲ್ಲದೆ ದೇಹದ ಇತರ ಭಾಗಕ್ಕೂ ಈ ಫೇಸ್ ಮಾಸ್ಕ್ ಅನ್ನು ಬಳಸಬಹುದಾಗಿದೆ.
ಅಂತೆಯೇ ಇದನ್ನು ಹಚ್ಚಿಕೊಂಡ ನಂತರ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಇದು ಹೆಚ್ಚುವರಿ ಜಿಡ್ಡು, ಮುಚ್ಚಿಕೊಂಡ ರಂಧ್ರಗಳು, ತ್ವಚೆಯ ಬಿರುಕುಗಳಾದ ಮೊಡವೆಗಳು, ಕಾಂತಿರಹಿತ ತ್ವಚೆಯನ್ನು ಇದು ನಿವಾರಿಸುತ್ತದೆ. ಹಾಗಿದ್ದರೆ ಈ ಫೇಸ್ ಮಾಸ್ಕ್ ತಯಾರಿಸುವ ವಿಧಾನವನ್ನು ಇಲ್ಲಿ ತಿಳಿದುಕೊಳ್ಳೋಣ.....
ಮಾಸ್ಕ್ ತಯಾರಿಗೆ ಬೇಕಾಗುವ ಸಾಮಾಗ್ರಿಗಳು
*1 ಕಪ್‌ನಷ್ಟು ರೆಡ್ ವೈನ್ (ಮನೆಯಲ್ಲಿಯೇ ತಯಾರಿಸಿದ ಸಾವಯವ ವೈನ್)
*ಒಂದು ಚಮಚದಷ್ಟು ಆರ್ಗ್ಯಾನಿಕ್ ಜೇನು
*1/2 ಬೌಲ್
*ಮೊಸರು ಒಂದು ಬೌಲ್
*ಎಗ್ ಬೀಟರ್
*ಒಂದು ಡ್ರೈ ಬೌಲ್‌ನಲ್ಲಿ ಮೊಸರು ಹಾಕಿಕೊಂಡು ಎಗ್ ಬೀಟರ್‌ನಲ್ಲಿ ಮಿಶ್ರ ಮಾಡಿಕೊಳ್ಳಿ
*ಈಗ ಜೇನು ಬೆರೆಸಿ ಮತ್ತು ಚಮಚ ಬಳಸಿಕೊಂಡು ಮಿಶ್ರ ಮಾಡಿ
*ಮೊಸರಿನೊಂದಿಗೆ ಜೇನು ಚೆನ್ನಾಗಿ ಬೆರೆತುಕೊಂಡ ನಂತರ ಚಮಚದಷ್ಟು ರೆಡ್ ವೈನ್ ಅನ್ನು ಇದಕ್ಕೆ ಸೇರಿಸಿ. ಇದನ್ನು ಎಗ್‌ಬೀಟರ್‌ನಲ್ಲಿ ಪುನಃ ಮಿಶ್ರ ಮಾಡಿಕೊಳ್ಳಿ. ಇದರಿಂದ ನೀವು ಗುಲಾಬಿ ಮಿಶ್ರಿತ ಫೇಸ್ ಮಾಸ್ಕ್ ಅನ್ನು ಪಡೆದುಕೊಳ್ಳುತ್ತೀರಿ.
*ಈ ಮಾಸ್ಕ್ ಅನ್ನು ಸಂಪೂರ್ಣವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಕೈಗಳಿಂದ ಬೇಕಾದರೂ ಇದನ್ನು ಹಚ್ಚಿಕೊಳ್ಳಿ ಇಲ್ಲವೇ ಬ್ರಶ್ ಬಳಸಿ.
*20-30 ನಿಮಿಷಗಳ ನಂತರ ನಿಮ್ಮಮ ತ್ವಚೆ ಒಣಗುತ್ತದೆ ಮತ್ತು ಈ ಸಮಯದಲ್ಲಿ ಮುಖವನ್ನು ತೊಳೆದುಕೊಳ್ಳಿ ತಣ್ಣೀರಿನಿಂದ ಮುಖವನ್ನು ತೊಳೆದುಕೊಂಡು ಟೋನರ್ ಅಥವಾ ಮಾಯಿಶ್ಚರೈಸರ್ ಅನ್ನು ಬಳಸಿ.
ಈ ಮಾಸ್ಕ್ ತಯಾರಿಸಿ ಅದನ್ನು ಫ್ರಿಡ್ಜ್‌ನಲ್ಲಿರಿಸಿ ನಂತರ ಕೂಡ ನಿಮಗೆ ಹಚ್ಚಿಕೊಳ್ಳಬಹುದಾಗಿದೆ.



Click it and Unblock the Notifications














