Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಬಹುಪಯೋಗಿ 'ಲಿಂಬೆ' ಹಣ್ಣನ್ನು ಎಷ್ಟು ಹೊಗಳಿದರೂ ಸಾಲದು!
ಸೌಂದರ್ಯ ಎನ್ನುವುದು ದೇವರು ನೀಡಿರುವ ವರ ಎಂದರೆ ತಪ್ಪಾಗಲಾರದು. ಆ ಸೌಂದರ್ಯವನ್ನು ಕಾಪಾಡಲು ತುಂಬಾ ಶ್ರಮ ಬೇಕಾಗುತ್ತದೆ. ಯಾಕೆಂದರೆ ಇಂದಿನ ಕಲುಷಿತ ವಾತಾವರಣದಲ್ಲಿ ಸೌಂದರ್ಯವನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ವಾತಾವರಣ ಕಲುಷಿತಗೊಂಡಷ್ಟು ಮಾರುಕಟ್ಟೆಗೆ ವಿವಿಧ ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳು ದಾಪುಗಾಲಿಡುತ್ತದೆ.
ಇದರಿಂದ ಸೌಂದರ್ಯವು ಕೆಲವು ದಿನಗಳ ಕಾಲ ಹೊಳಪನ್ನು ಪಡೆಯಬಹುದೇ ಹೊರತು ಶಾಶ್ವತವಾಗಿ ಇದಕ್ಕೆ ಯಾವುದೇ ಪರಿಹಾರವಿಲ್ಲ. ಆದರೆ ಕೆಲವೊಂದು ನೈಸರ್ಗಿಕ ಸಾಧನಗಳಿಂದ ಸೌಂದರ್ಯವನ್ನು ವರ್ಧಿಸಿಕೊಂಡು ಅದನ್ನು ಕಾಪಾಡಿಕೊಳ್ಳಬಹುದು... |
ಹಲವಾರು ಆರೋಗ್ಯ ಗುಣಗಳನ್ನು ಹೊಂದಿರುವಂತಹ ಲಿಂಬೆಹಣ್ಣಿನಿಂದ ತ್ವಚೆ ಹಾಗೂ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ನೀವು ನಿಂಬೆಹಣ್ಣನ್ನು ಬಳಸಿಕೊಂಡು ಯಾವ ರೀತಿ ಸೌಂದರ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಯಲು ಈ ಲೇಖನವನ್ನು ಮುಂದಕ್ಕೆ ಓದಿಕೊಳ್ಳಿ....

ತ್ವಚೆಗೆ ಬ್ಲೀಚಿಂಗ್
ಲಿಂಬೆಯು ಚರ್ಮದ ಬಣ್ಣವನ್ನು ಬಿಳಿ ಮಾಡುವಲ್ಲಿ ನೈಸರ್ಗಿಕ ಬ್ಲೀಚಿಂಗ್ ಆಗಿ ಕೆಲಸ ಮಾಡುತ್ತದೆ. ಲಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿಕೊಂಡು ಫೇಸ್ ಪ್ಯಾಕ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಐದು ನಿಮಿಷ ಕಾಲ ಹಾಗೆ ಬಿಡಿ. ಬಿಸಿ ನೀರಿನಿಂದ ಮುಖವನ್ನು ತೊಳೆದರೆ ಕಲೆಗಳು ಮಾಯವಾಗುವುದು.

ತಲೆಹೊಟ್ಟು ನಿವಾರಣೆ
ಲಿಂಬೆರಸವು ತಲೆಹೊಟ್ಟನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ತಲೆಬುರುಡೆಗೆ ಲಿಂಬೆರಸವನ್ನು ಹಾಕಿಕೊಳ್ಳಿ. ಇದರ ಬಳಿಕ ತಲೆಗೆ ತೈಲ ಹಾಕಿಕೊಳ್ಳಿ. ಯಾಕೆಂದರೆ ಲಿಂಬೆಯಿಂದ ತಲೆಬುರುಡೆ ಒಣಗುವುದು. ತಲೆಹೊಟ್ಟು ನಿವಾರಣೆಯಾಗ ಬೇಕಾದರೆ ಹಗುರವಾದ ಶಾಂಪೂ ಬಳಸಿಕೊಳ್ಳಿ....

ಮೊಣಕೈ ಮತ್ತು ಮೊಣಕಾಲನ್ನು ಬಿಳಿಯಾಗಿಸುವುದು
ಕೆಲವೊಂದು ಸಲ ಮೊಣಕೈ ಮತ್ತು ಮೊಣಕಾಲಿನ ಭಾಗವು ತುಂಬಾ ಕಪ್ಪಗೆ ಇರುವಂತೆ ಕಾಣಿಸುತ್ತದೆ. ಇದನ್ನು ಬಿಳಿಯಾಗಿಸುವ ಉಪಾಯವೆಂದರೆ ಒಂದು ಲಿಂಬೆ ತುಂಡಿಗೆ ಸ್ವಲ್ಪ ಉಪ್ಪು ಹಾಕಿಕೊಂಡು ಸರಿಯಾಗಿ ಉಜ್ಜಿಕೊಳ್ಳಿ. ಹತ್ತು ದಿನಗಳಲ್ಲಿ ಮೊಣಕೈ ಮತ್ತು ಮೊಣಕಾಲು ಬಿಳಿಯಾಗುವುದು.

ಚರ್ಮದ ಅಲರ್ಜಿ ನಿವಾರಣೆ
ಲಿಂಬೆರಸದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮತ್ತು ವಿಟಮಿನ್ ಸಿ ಕೆಲವೊಂದು ಸಣ್ಣಪುಟ್ಟ ಚರ್ಮದ ಅಲರ್ಜಿಗಳನ್ನು ನಿವಾರಣೆ ಮಾಡುವುದು.

ನುಣುಪಾದ ಕೂದಲಿಗೆ
ಕೂದಲಿಗೆ ಕಂಡೀಷನರ್ ಬಳಸುವವರು ಲಿಂಬೆರಸವನ್ನು ಬಳಸಬಹುದು. ಯಾಕೆಂದರೆ ಇದು ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ಕೂದಲು ತೊಳೆಯಲು ಶಿಖಾಕಾಯಿ ಬಳಸುತ್ತಾ ಇದ್ದರೆ ಕೂದಲಿಗೆ ಕೃತಕ ಕಂಡೀಷನರ್ ನ್ನು ಬಳಸಬೇಡಿ. ಕೂದಲನ್ನು ನುಣುಪು ಮಾಡಲು ಲಿಂಬೆರಸ ಬಳಸಿ.

ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುವುದು
ಲಿಂಬೆರಸವು ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಲಿಂಬೆಗೆ ಸ್ವಲ್ಪ ಉಪ್ಪು ಹಾಕಿಕೊಂಡು ಅದನ್ನು ಮುಖಕ್ಕೆ ಉಜ್ಜಿಕೊಳ್ಳಿ. ಚರ್ಮದ ರಂಧ್ರದಲ್ಲಿನ ಎಲ್ಲಾ ಕೊಳೆ ಹೊರಬರುವುದು.

ಮೊಡವೆ ನಿವಾರಣೆ
ಮೊಡವೆಗಳ ನಿವಾರಣೆಯಲ್ಲಿ ನಿಂಬೆಯು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಲ್ಲಿರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮವನ್ನು ಸ್ವಚ್ಛಗೊಳಿಸಿ ಚರ್ಮದ ರಂಧ್ರಗಳಲ್ಲಿ ಇರುವಂತಹ ಎಣ್ಣೆಯನ್ನು ಹೊರತೆಗೆಯುವುದು. ಲಿಂಬೆಯಲ್ಲಿರುವ ಈ ಗುಣಗಳು ಮೊಡವೆಯನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವುದು.
ಮೊಡವೆಗೆ 'ಆಯುರ್ವೇದ' ಔಷಧಿಗಳು-ಯಾವುದೇ ಅಡ್ಡಪರಿಣಾಮಗಳಿಲ್ಲ

ಕೂದಲಿನ ಸುವಾಸನೆಗೆ
ತಾಜಾವಾರಿಗುವ ಲಿಂಬೆಯು ಒಳ್ಳೆಯ ಸುವಾಸನೆಯನ್ನು ಹೊಂದಿರುವುದು. ಕೂದಲನ್ನು ಲಿಂಬೆಯ ರಸದಿಂದ ತೊಳೆದಾಗ ಕೂದಲು ಗಂಟೆಗಳ ಕಾಲ ಸುವಾಸನೆಯನ್ನು ಹೊಂದಿರುತ್ತದೆ. ಇದು ಕೂದಲಿಗೆ ನೈಸರ್ಗಿಕ ಪರ್ಫ್ಯೂಮ್ ಆಗಿ ಕೆಲಸ ಮಾಡುವುದು.

ಬಿಳಿ ಉಗುರುಗಳಿಗೆ ಲಿಂಬೆ
ಲಿಂಬೆರಸದಲ್ಲಿ ಇರುವಂತಹ ಬ್ಲೀಚಿಂಗ್ ಗುಣವು ಉಗುರುಗಳಿಗೂ ನೆರವಾಗುವುದು. ಪ್ರತಿಯೊಬ್ಬರಿಗೂ ಸ್ವಚ್ಛ ಹಾಗೂ ಬಿಳಿ ಉಗುರುಗಳು ಬೇಕಾಗಿದೆ. ಉಗುರುಗಳನ್ನು ಲಿಂಬೆ ಮತ್ತು ಸಾಸಿವೆ ಎಣ್ಣೆಯಿಂದ ಉಜ್ಜಿಕೊಂಡರೆ ಬಿಳಿ ಹಾಗೂ ಸ್ವಚ್ಛ ಉಗುರು ನಿಮ್ಮದಾಗುವುದು.



Click it and Unblock the Notifications











