Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಲಿಂಬೆ-ಟೀ ಟ್ರೀ ಎಣ್ಣೆಯ ಜೋಡಿ, ಮಾಡಲಿದೆ ಕಮಾಲಿನ ಮೋಡಿ!
ಅರೆ ನಿಮಗೆ ಇದ್ದಕ್ಕಿದ್ದಂತೆ ಒಂದು ಸೌಂದರ್ಯದ ಸಲಹೆಯನ್ನು ಯಾರಾದರು ನೀಡುತ್ತಾರೆ ಎಂದು ಭಾವಿಸಿಕೊಳ್ಳಿ. ಅದು ಕೂಡ ಮೇಕಪ್ ಇಲ್ಲದೆ ನೀವು ಚೆನ್ನಾಗಿ ಕಾಣುವ ಬಗೆಯನ್ನು ಯಾರಾದರು ವಿವರಿಸಿದರೆ ಹೇಗಿರುತ್ತದೆ? ಅದರಲ್ಲಿ ತಾತ-ಅಜ್ಜಿಯರ ಕಾಲದ ಈ ಉಪಾಯ ನಿಮಗೆ ತಿಳಿದರೆ ಎಷ್ಟು ಸಂತೋಷಪಡುತ್ತೀರಿ ಅಲ್ಲವೇ?
ಹೌದು ಶತ ಶತಮಾನಗಳಿಂದ ಬಳಸಿಕೊಂಡು ಬರುತ್ತಿರುವ ಈ ಸೌಂದರ್ಯದ ಸಲಹೆಯನ್ನು ಯಾರಾದರು ನಿಮಗೆ ನೀಡಿದರೆ, ಅದನ್ನು ಮೊದಲು ನೀವು ಕಣ್ಣರಳಿಸಿ ನೋಡುತ್ತೀರಿ. ನಂತರ ಅದನ್ನು ಒಮ್ಮೆ ಪ್ರಯತ್ನಿಸಿ ನೋಡುವ ಪ್ರಯತ್ನವನ್ನಂತು ಖಂಡಿತ ಮಾಡುತ್ತೀರಿ. ಆಮೇಲೆ ಏನಾಗುತ್ತದೆ. ನಿರೀಕ್ಷಿಸಿದಂತೆಯೇ ನೀವು ಅದನ್ನು ನಿಮ್ಮ ಸೌಂದರ್ಯ ಕಾಪಾಡುವ ವಿಧಾನವಾಗಿ ಮುಂದುವರಿಸುತ್ತೀರಿ.
ಹೌದು ಅಂತಹ ಹಳೆಯ ಸಲಹೆಯನ್ನು ನಾವು ನಿಮಗಾಗಿ ಇಂದು ಹೊತ್ತು ತಂದಿದ್ದೇವೆ. ಅದೇ ಲಿಂಬೆ ಮತ್ತು ಟೀ ಟ್ರೀ ಎಣ್ಣೆಯ ಸಲಹೆ. ಇದು ರಾಸಾಯಾನಿಕ ಮುಕ್ತವಾಗಿರುವುದು ಮತ್ತೂ ವಿಶೇಷಾಅಗಿದೆ. ಎರಡು ಟೀ ಸ್ಪೂನ್ ಟೀ ಟ್ರೀ ಎಣ್ಣೆಯನ್ನು ಎರಡು ಟೀ ಸ್ಪೂನ್ ಲಿಂಬೆರಸದ ಜೊತೆಗೆ ಒಂದು ಬಟ್ಟಲಿನಲ್ಲಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ತ್ವಚೆಗೆ ಲೇಪಿಸಿಕೊಳ್ಳಿ, 15 ನಿಮಿಷ ಬಿಟ್ಟು ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ, ಸಾಕು!. ಇದನ್ನು ಪ್ರತಿನಿತ್ಯ ಮಾಡುವುದರಿಂದ ನಿಮ್ಮ ತ್ವಚೆಯಲ್ಲಿ ಹಲವಾರು ಧನಾತ್ಮಕ ಬದಲಾವಣೆಗಳು ಕಂಡು ಬರುತ್ತವೆ. ಬನ್ನಿ ಅವು ಯಾವುವು ಎಂದು ನೋಡೋಣ...

ಮೊಡವೆಗಳನ್ನು ಕಡಿಮೆ ಮಾಡುತ್ತದೆ
ಲಿಂಬೆ ರಸ ಮತ್ತು ಟೀ ಟ್ರೀ ಎಣ್ಣೆಯ ಮಿಶ್ರಣವು ಆಂಟಿ ಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿರುತ್ತದೆ. ಇದು ಮೊಡವೆಗಳನ್ನು ಹುಟ್ಟು ಹಾಕುವ ಬ್ಯಾಕ್ಟೀರಿಯಾಗಳನ್ನು ಕೊಂದು ಹಾಕುತ್ತದೆ. ಆದ್ದರಿಂದ ನಿಮಗೆ ಮೊಡವೆಗಳಿಂದ ಮುಕ್ತಿ ದೊರೆಯುತ್ತದೆ.

ತ್ವಚೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ
ಈ ಸ್ವಾಭಾವಿಕ ಉತ್ಪನ್ನವನ್ನು ಪ್ರತಿದಿನ ಬಳಸಿದರೆ ನಿಮ್ಮ ತ್ವಚೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ಈ ಎರಡು ಉತ್ಪನ್ನಗಳ ಜೊತೆಗೆ ಜೇನು ತುಪ್ಪವನ್ನು ಬೆರೆಸಿಕೊಂಡು ನಿಮ ತ್ವಚೆಗೆ ಲೇಪಿಸಿ. ಇದರಿಂದ ಸುಕ್ಕು ಮತ್ತು ಗೆರೆಗಳು ಮಾಯವಾಗುತ್ತದೆ.

ತ್ವಚೆಯನ್ನು ಬೆಳ್ಳಗೆ ಮಾಡುತ್ತದೆ
ಲಿಂಬೆ ರಸ ಮತ್ತು ಟೀ ಟ್ರೀ ಎಣ್ಣೆಯ ಮಿಶ್ರಣವನ್ನು ಸ್ವಾಭಾವಿಕ ಬ್ಲೀಚಿಂಗ್ ಏಜೆಂಟ್ ಆಗಿ ಸಹ ಬಳಸಬಹುದು. ಇದು ನಿಮ್ಮ ತ್ವಚೆಯನ್ನು ಕೆಲವೇ ದಿನಗಳಲ್ಲಿ ಬೆಳ್ಳಗೆ ಮಾಡುತ್ತದೆ. ಜೊತೆಗೆ ವಯಸ್ಸಿನ ಕಲೆಗಳನ್ನು ಸಹ ಇದು ಗುಣಪಡಿಸುತ್ತದೆ.

ತುರಿಕೆಯನ್ನು ನಿವಾರಿಸುತ್ತದೆ
ಲಿಂಬೆ ರಸ ಮತ್ತು ಟೀ ಟ್ರೀ ಎಣ್ಣೆಯ ಮಿಶ್ರಣವು ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿರುವುದರಿಂದಾಗಿ ನಿಮಗೆ ತುರಿಕೆಯಿಂದ ಮುಕ್ತಿಯನ್ನು ನೀಡುತ್ತದೆ. ಜೊತೆಗೆ ಸುಟ್ಟ ಗಾಯ ಹಾಗು ಗುಳ್ಳೆಗಳನ್ನು ಸಹ ನಿವಾರಿಸುತ್ತದೆ.

ತ್ವಚೆಯನ್ನು ಟೋನ್ ಮಾಡುತ್ತದೆ
ಲಿಂಬೆ ರಸ ಮತ್ತು ಟೀ ಟ್ರೀ ಎಣ್ಣೆಯ ಮಿಶ್ರಣವು ಸ್ವಾಭಾವಿಕ ತ್ವಚೆಯ ಟೋನರ್ ಆಗಿದೆ. ಇದು ತ್ವಚೆಯ ರಂಧ್ರಗಳ ಗಾತ್ರವನ್ನು ಕಡಿಮೆ ಮಾಡುತ್ತದೆ ಹಾಗು ತ್ವಚೆಯನ್ನು ಬಿಗಿಗೊಳಿಸಿ, ಮೃದುತ್ವವನ್ನು ನೀಡುತ್ತದೆ.

ತ್ವಚೆಯನ್ನು ಸ್ವಚ್ಛಗೊಳಿಸುತ್ತದೆ
ಈ ಸ್ವಾಭಾವಿಕ ಮಿಶ್ರಣವು ನಿಮ್ಮ ತ್ವಚೆಯನ್ನು ಆಳವಾಗಿ ಸ್ವಚ್ಚಗೊಳಿಸುತ್ತದೆ ಮತ್ತು ಅದರಲ್ಲಿರುವ ಕಲ್ಮಶಗಳನ್ನು ನಿವಾರಿಸುತ್ತದೆ. ಕೊಳೆ, ಧೂಳು ಇತ್ಯಾದಿಗಳು ಬಂದು ಕೂರದಂತೆ ಇವು ಕಾಪಾಡುತ್ತವೆ.

ತ್ವಚೆಯ ಸ್ಥಿತಿಗಳನ್ನು ಗುಣಪಡಿಸುತ್ತದೆ
ಲಿಂಬೆ ರಸ ಮತ್ತು ಟೀ ಟ್ರೀ ಎಣ್ಣೆಯ ಮಿಶ್ರಣವು ಹಲವಾರು ತ್ವಚೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಕೀಟಗಳ ಕಡಿತ, ಕುರುಗಳು, ರಿಂಗ್ ವರ್ಮ್, ಇತ್ಯಾದಿ ಸಮಸ್ಯೆಗಳನ್ನು ಸಹ ಇದು ನಿವಾರಿಸುತ್ತದೆ. ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ ಇದು ಎಲ್ಲಾ ತ್ವಚೆಯ ಸಮಸ್ಯೆಗಳಿಗೆ ಒಂದೇ ಪರಿಹಾರವಾಗಿರುತ್ತದೆ.



Click it and Unblock the Notifications
