Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಖದ ಸೌಂದರ್ಯಕ್ಕೆ, ಒಂದು ಚಮಚದಷ್ಟು ಉಪ್ಪು ಸಾಕು!
ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆಮಾತಿದೆ. ಯಾವುದೇ ಆಹಾರದ ರುಚಿ ಹೆಚ್ಚಿಸಲು ಕೊಂಚ ಪ್ರಮಾಣದಲ್ಲಿ ಉಪ್ಪು ಅಗತ್ಯ. ಇದೊಂದು ಅತ್ಯಂತ ಅಗ್ಗವಾಗಿ ದಕ್ಕುವ ಸಾಮಾಗ್ರಿಯಾಗಿದ್ದು ಆರೋಗ್ಯ ಹಾಗೂ ಸ್ವಚ್ಛತೆ ಎರಡಕ್ಕೂ ಅಗತ್ಯವಾಗಿದೆ. ಸೇವನೆಯ ವಿಷಯ ಬಂದಾಗ ಇದರ ಪ್ರಮಾಣದಲ್ಲಿ ಮಿತಿ ಅಗತ್ಯ. ಎಷ್ಟು ಎಂದರೆ ಗರಿಷ್ಠ 3.75ಗ್ರಾಂ ನಷ್ಟು ಇದಕ್ಕೂ ಹೆಚ್ಚಾದರೆ ಈ ಪ್ರಮಾಣವನ್ನು ಹೊರಹಾಕಲು ಜೀವಕೋಶಗಳು ಅತಿ ಹೆಚ್ಚಾಗಿ ಶ್ರಮಪಡಬೇಕಾಗುತ್ತದೆ ಹಾಗೂ ಆರೈಕೆಯಿಲ್ಲದಿದ್ದರೆ ಸಾವು ಸಹಾ ಸಂಭವಿಸಬಹುದು. ಸಮುದ್ರದ ಉಪ್ಪುನೀರಿನಲ್ಲಿ ನಾವು ಜೀವಂತವಾಗಿರಲು ಸಾಧ್ಯವಿಲ್ಲದಿರುವುದು ಇದೇ ಕಾರಣಕ್ಕೆ. ಒಣ ಚರ್ಮಕ್ಕೆ ಉಪ್ಪಿನ ಸ್ಕ್ರಬ್ ರೆಸಿಪಿ
ತ್ವಚೆಯ ಸ್ವಚ್ಛತೆ ಮತ್ತು ಆರೋಗ್ಯಕ್ಕೂ ಉಪ್ಪುನೀರು ಉತ್ತಮವಾಗಿದೆ. ಇದೇ ಕಾರಣಕ್ಕೆ ವರ್ಷದಲ್ಲಿ ಕೆಲವು ಬಾರಿಯಾದರೂ ಸಮುದ್ರ ಸ್ನಾನ ಮಾಡುವಂತೆ ಆಯುರ್ವೇದಲ್ಲಿ ತಿಳಿಸಲಾಗಿದೆ. ಸಾಧ್ಯವಿಲ್ಲದಿದ್ದರೆ ಮನೆಯಲ್ಲಿ ಸ್ನಾನ ಮಾಡುವ ನೀರಿಗೆ ಕೊಂಚ ಉಪ್ಪು ಹಾಕಿ ಸ್ನಾನ ಮಾಡುವ ಮೂಲಕ ಬೆವರುಸಾಲೆ, ಮುಖದ ಮೊಡವೆ ಕಡಿಮೆಯಾಗುವುದು, ಸತ್ತ ಜೀವಕೋಶಗಳನ್ನು ನಿವಾರಿಸುವುದು, ಚರ್ಮ ಸಹಜವರ್ಣ ಪಡೆಯಲು ನೆರವಾಗುವುದು ಇತ್ಯಾದಿ ಪ್ರಯೋಜನಗಳಿವೆ. ಉಪ್ಪಿನಿಂದಲೂ ಸ್ಕ್ರಬ್ ತಯಾರಿಸಬಹುದೇ? ನಂಬಲೇಬೇಕು
ಒಂದು ವೇಳೆ ನೀವು ವೃತ್ತಿಪರರಿಂದ ಸೌಂದರ್ಯದ ಆರೈಕೆ ಪಡೆಯುತ್ತಿದ್ದಲ್ಲಿ ಅವರು ಉಪಯೋಗಿಸುವ ಪ್ರಸಾಧನಗಳಲ್ಲಿ ಉಪ್ಪಿನಂಶ ಇರುವುದನ್ನು ಖಚಿತಪಡಿಸಿಕೊಳ್ಳಿ. ಇದರಂತಹ ಉತ್ತಮ ಪರಿಣಾಮವನ್ನು ನೀಡಬಲ್ಲ ಪ್ರಸಾದನಗಳನ್ನು ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ನಿತ್ಯವೂ ಉಪಯೋಗಿಸುವ ಫೇಶಿಯಲ್ ಕಿಟ್ ನಲ್ಲಿ ಪ್ರತಿ ಬಳಕೆಯ ಪ್ರಮಾಣಕ್ಕೆ ಒಂದು ಚಿಕ್ಕ ಚಮಚ ಉಪ್ಪು ಸೇರಿಸಿ ಬಳಸಿ. ಉಪ್ಪು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು!
ಒಂದು ವೇಳೆ ಸ್ಪಾ ಸೇವೆಯನ್ನು ಪಡೆಯುವವರಾಗಿದ್ದರೆ ಇದಕ್ಕೆ ಮೂರರಿಂದ ನಾಲ್ಕು ದೊಡ್ಡಚಮಚ ಉಪ್ಪು ಸೇರಿಸಿ. ಈ ಪ್ರಬಲ ಪ್ರಸಾದನವನ್ನು ಬಳಸಿ ಮೈ ಮಸಾಜ್ ಮಾಡುವ ಮೂಲಕ ಚರ್ಮದ ತೊಂದರೆಗಳು ಶೀಘ್ರವಾಗಿ ಗುಣವಾಗುತ್ತವೆ. ವಿಶೇಷವಾಗಿ ಬೆವರಿನ ಸಮಯವಾದ ಬೇಸಿಗೆಯಲ್ಲಿಯೂ ಉಪ್ಪು ತ್ವಚೆಗೆ ಉತ್ತಮ ಆರೈಕೆ ನೀಡುತ್ತದೆ. ಈ ಬಗ್ಗೆ ಕೆಲವಾರು ಮಾಹಿತಿಗಳನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು, ಅವು ಯಾವುದು ಎಂಬುದನ್ನು ಮುಂದೆ ಓದಿ...

ಸತ್ತ ಜೀವಕೋಶಗಳನ್ನು ನಿವಾರಿಸಲು (exfoliation)
ಒಂದು ದೊಡ್ಡ ಚಮಚ ಕಲ್ಲುಪ್ಪು ಮತ್ತು ಮೂರು ದೊಡ್ಡಚಮಚ ಜೇನುತುಪ್ಪವನ್ನು ಸೇರಿಸಿ ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಚರ್ಮದ ಮೇಲೆ ತೆಳುವಾಗಿ ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದರಿಂದ ಸತ್ತ ಜೀವಕೋಶಗಳೆಲ್ಲಾ ಸಡಿಲವಾಗುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸತ್ತ ಜೀವಕೋಶಗಳನ್ನು ನಿವಾರಿಸಲು (exfoliation)
ನಯವಾದ ಬ್ರಶ್ ಬಳಸಿ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ. ಈ ವಿಧಾನವನ್ನು ಸತತವಾಗಿ ಎರಡು ದಿನ ಅನುಸರಿಸಿದರೆ ಚರ್ಮದ ಅಷ್ಟೂ ವಿಸ್ತಾರದ ಸತ್ತ ಜೀವಕೋಶಗಳು ನಿವಾರಣೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.

ಚರ್ಮದ ಬಣ್ಣ ಸಹಜವರ್ಣದತ್ತ ತಿರುಗುತ್ತದೆ
ಬಿಸಿಲು ಮೊದಲಾದ ಕಾರಣಗಳಿಂದ ಗಾಢವಾಗಿದ್ದ ಚರ್ಮದ ಬಣ್ಣವನ್ನು ಸಹಜವರ್ಣದತ್ತ ತಿರುಗಿಸಲು ಉಪ್ಪು ಒಂದು ನೈಸರ್ಗಿಕ ಪ್ರಸಾಧನವಾಗಿದೆ. ಇದಕ್ಕಾಗಿ ಅರ್ಧ ಲೋಟ ಗುಲಾಬಿ ನೀರಿಗೆ ಎರಡು ದೊಡ್ಡ ಚಮಚ ಉಪ್ಪು ಸೇರಿಸಿ ಕಲಕಿ. ಈ ದ್ರಾವಣದಿಂದ ಬಿಲಿಸಿಗೆ ಒಡ್ಡಿದ್ದ ಚರ್ಮವನ್ನು ದಿನಕ್ಕೆ ಎರಡು ಅಥವಾ ಮೂರು ಬಾರಿ ಬಟ್ಟೆ ಅಥವಾ ಹತ್ತಿಯುಂಡೆಯನ್ನು ಬಳಸಿ ಒರೆಸಿಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮದ ಬಣ್ಣ ಸಹಜವರ್ಣದತ್ತ ತಿರುಗುತ್ತದೆ
ಗುಲಾಬಿನೀರು ಚರ್ಮದ ಸೂಕ್ಷ್ಮರಂಧ್ರಗಳನ್ನು ಸಡಿಲಿಸಿದರೆ ಉಪ್ಪು ಚರ್ಮದಲ್ಲಿ ಶೇಖರವಾಗಿದ್ದ ಕಲ್ಮಶಗಳನ್ನು ನಿವಾರಿಸುತ್ತದೆ. ಇದರಿಂದ ಶೀಘ್ರವಾಗಿ ಸಹಜವರ್ಣ ಪಡೆಯಲು ಸಾಧ್ಯವಾಗುತ್ತದೆ.

ನೆರಿಗೆಗಳನ್ನು ನಿವಾರಿಸಲು ನೆರವಾಗುತ್ತದೆ
ನೆರಿಗೆಗಳು ಸಹಜ ಸೌಂದರ್ಯವನ್ನು ಕುಂದಿಸುತ್ತವೆ. ಚರ್ಮ ಸಹಜವಾದ ಸೆಳೆತವನ್ನು ಕಳೆದುಕೊಳ್ಳುವ ಮೂಲಕ ನೆರಿಗೆಗಳು ಪ್ರಾರಂಭವಾಗುತ್ತವೆ. ಸೆಳೆತವನ್ನು ಹೆಚ್ಚಿಸುವ ಮೂಲಕ ನೆರಿಗೆಗಳನ್ನು ನಿವಾರಿಸಿಕೊಳ್ಳಬಹುದು.

ನೆರಿಗೆಗಳನ್ನು ನಿವಾರಿಸಲು ನೆರವಾಗುತ್ತದೆ
ಇದಕ್ಕಾಗಿ ಪ್ರತಿದಿನ ಹತ್ತು ನಿಮಿಷಗಳ ಕಾಲ ನೆರಿಗೆಗಳಿರುವ ಚರ್ಮವನ್ನು ನಯವಾಗಿ ಮಸಾಜ್ ಮಾಡಿ. ಕೆಲವು ದಿನಗಳಲ್ಲಿಯೇ ನೆರಿಗೆಗಳು ಮಾಯವಾಗುತ್ತವೆ. ಇದೇ ವಿಧಾನ ಅನುಸರಿಸಿ ನೆರಿಗೆ ಮೂಡಲಿರುವ ಅನುಮಾನವಿರುವ ಭಾಗವನ್ನೂ ಮಸಾಜ್ ಮಾಡಿ ನೆರಿಗೆಗಳು ಬರುವುದನ್ನು ತುಂಬಾ ತಡವಾಗಿಸಬಹುದು.

ಚರ್ಮದ ಕೋಮಲತೆ ಹೆಚ್ಚಿಸುತ್ತದೆ
ಚರ್ಮ ಒರಟಾಗಿದ್ದರೆ ಇದನ್ನು ಸೌಮ್ಯಗೊಳಿಸಲು ಹೆಚ್ಚಿನ ಖರ್ಚು ಮಾಡುವ ಅಗತ್ಯವಿಲ್ಲ. ಕೇವಲ ಉಪ್ಪಿನ ಗಾಢ ದ್ರಾವಣದ ಫೇಶಿಯಲ್ ವಿಧಾನವನ್ನು ವಾರಕ್ಕೊಮ್ಮೆ ಅಥವಾ ವಾರಕ್ಕೆರಡು ಬಾರಿ ಪಡೆದರೆ ಸಾಕು. ಇದಕ್ಕಾಗಿ ಒಂದು ದೊಡ್ಡಚಮಚ ಉಪ್ಪು ಮತ್ತು ಒಂದು ದೊಡ್ಡಮಚ ಹಾಲು ಮತ್ತು ಕೊಂಚ ಕೋಲ್ಡ್ ಕ್ರೀಂ ಸೇರಿಸಿ ದಪ್ಪನಾದ ದ್ರಾವಣ ತಯಾರಿಸಿ. ಈ ದ್ರಾವಣವನ್ನು ದಪ್ಪನಾಗಿ ಮುಖಕ್ಕೆ ಹಚ್ಚಿ ಫೇಶಿಯಲ್ ವಿಧಾನ ಅನುಸರಿಸುವ ಮೂಲಕ ಚರ್ಮ ಅತಿ ಕೋಮಲವಾಗುತ್ತದೆ.

ಮುಖದ ಮೊಡವೆಗಳನ್ನು ನಿವಾರಿಸುತ್ತದೆ
ಮುಖದ ಮೊಡವೆಗಳು ಹದಿಹರೆಯದವರಿಗೆ ಕಾಡುವ ಸಮಸ್ಯೆಯಾಗಿದೆ. ಇದಕ್ಕಾಗಿ ಒಂದು ಬೋಗುಣಿಯಲ್ಲಿ ಒಂದು ದೊಡ್ಡಚಮಚ ಉಪ್ಪು ಮತು ಒಂದು ಚಿಕ್ಕ ಚಮಚ ಅರಿಶಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಮೊಸರು ಸೇರಿಸಿ ದಪ್ಪನಾದ ದ್ರಾವಣವಾಗುವಂತೆ ಬೆರೆಸಿ. ಈ ಲೇಪನವನ್ನು ದಪ್ಪನಾಗಿ ಕೇವಲ ಮೊಡವೆಯ ಮೇಲೆ ಮಾತ್ರ ಬರುವಂತೆ ಹಚ್ಚಿ. (ಪಕ್ಕದ ಚರ್ಮಕ್ಕೆ ತಾಕಿದರೆ ಕೆಂಪಗಾಗಬಹುದು) ಇದು ಹಾಗೇ ಒಣಗಲು ಬಿಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮುಖದ ಮೊಡವೆಗಳನ್ನು ನಿವಾರಿಸುತ್ತದೆ
ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸಿ. ಕ್ರಮೇಣ ಮೊಡವೆಗಳು ಯಾವುದೇ ಕಲೆ ಉಳಿಸದೇ ಮಾಯವಾಗುತ್ತವೆ.

ಚಿಕ್ಕಪುಟ್ಟ ಗಾಯ, ಗೀರುಗಳಿಗೆ ಶಮನ ನೀಡುತ್ತದೆ
ಪ್ರತಿದಿನ ಮಾಡುವ ಶೇವಿಂಗ್ ಸಮಯದಲ್ಲಿ ರೇಜರ್‌ನ ತೀಕ್ಷ್ಣ ಅಲಗು ತಾಗಿ ಅತಿ ಸೂಕ್ಷ್ಮ ಗೀರು ಮತ್ತು ಗಾಯಗಳಾಗಬಹುದು. ಇದಕ್ಕಾಗಿ ಒಂದು ವೇಳೆ ಆಫ್ಟರ್ ಶೇವ್ ಲೋಷನ್ ಇಲ್ಲದಿದ್ದರೆ ಉಪ್ಪುನೀರಿನ ದ್ರಾವಣ ಬಳಸುವ ಮೂಲಕ ಈ ಗೀರುಗಳು ಸುಲಭವಾಗಿ ಮಾಗುತ್ತವೆ ಹಾಗೂ ಪ್ರಾರಂಭದಲ್ಲಿ ಕೊಂಚ ಉರಿಯಾದರೂ ಸ್ವಲ್ಪ ಹೊತ್ತಿನ ಬಳಿಕ ಕಡಿಮೆಯಾಗುತ್ತದೆ. ಇದು ಗಾಯಗಳನ್ನು ಮಾಗಿಸುವ ಜೊತೆಗೇ ಗೀರುಗಳ ಕಲೆ ಉಳಿಯದಂತೆ ಮಾಡುತ್ತದೆ.



Click it and Unblock the Notifications
