Latest Updates
-
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು!
ಸೌಂದರ್ಯ ವೃದ್ಧಿಗೆ ಬೇವಿನ ಫೇಸ್ ಪ್ಯಾಕ್
ಬೇವುಬೆಲ್ಲ ತಿಂದು ಒಳ್ಳೆಯದನ್ನು ಮಾತಾಡಿ ಎನ್ನುವ ಗಾದೆಮಾತಿದೆ. ಕಹಿ ಎನ್ನುವುದಕ್ಕೆ 'ಬೇವು'ಎನ್ನುವ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಬೇವಿನಿಂದಾಗುವ ಉಪಯೋಗ ಬಹಳಷ್ಟು. ಬೋಲ್ಡ್ ಸ್ಕೈ ಬೇವಿನಿಂದ ಉತ್ತಮ ಚರ್ಮಕ್ಕೆ ಅಗುವ ಉಪಯೋಗದ ಬಗ್ಗೆ ಈ ಲೇಖನದ ಮೂಲಕ ತಿಳಿಸುತ್ತಿದೆ.
ನಮಗೆಲ್ಲಾ ತಿಳಿದಿರುವಂತೆ ಬೇವು ಹಲವಾರು ರೋಗ ನಿರೋಧಕ ಗುಣಗಳನ್ನು ಹೊಂದಿದೆ. ಆದುದರಿಂದ ಇದನ್ನು ಸೌಂದರ್ಯ ವರ್ಧಕಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಯಾಕೆಂದರೆ ಬೇವಿನಲ್ಲಿ ಚರ್ಮಕ್ಕೆ ಉಪಯುಕ್ತವಾಗುವಂತಹ ಹಲವಾರು ಅಂಶಗಳಿವೆ. ಇದು ಚರ್ಮದಲ್ಲಿರುವ ಕಜ್ಜಿ, ಗುಳ್ಳೆಗಳು, ಕಲೆಗಳನ್ನು ಹೋಗಲಾಡಿಸುವಲ್ಲಿ ಉಪಯುಕ್ತವಾಗುತ್ತದೆ.
ಬೇವಿನ ಬಳಕೆಯಿಂದ ಚರ್ಮ ಕೆಂಪಾಗುವುದು, ತುರಿಕೆಯಿಂದ ಉಂಟಾಗುವ ಕಜ್ಜಿಗಳನ್ನು ತಡೆಗಟ್ಟಬಹುದು. ಮೊಡವೆಯಿಂದ ಹಾನಿಗೊಳಗಾದ ಚರ್ಮವನ್ನು ಸರಿ ಮಾಡುವಲ್ಲಿ, ಮೊಡವೆ ಮತ್ತು ಗಾಯದ ಕಲೆಗಳನ್ನು ತೊಡೆದು ಹಾಕುವಲ್ಲಿ ಬೇವಿನ ಪ್ಯಾಕ್ ಉಪಯೋಗಿಸುವುದರಿಂದ ಉತ್ತಮ ಫಲಿತಾಂಶಗಳನ್ನು ಒಂದೇ ವಾರದಲ್ಲಿ ಪಡೆಯಬಹುದಾಗಿದೆ.
ಬೇವನ್ನು ಬೇರೆ ಬೇರೆ ಮಿಶ್ರಣಗಳೊಂದಿಗೆ ಬಳಸಿ ಉಪಯೋಗಿಸುವುದರಿಂದ 'ಮೊಡವೆ ಮುಕ್ತ' ಚರ್ಮವನ್ನು ಪಡೆಯಬಹುದು.ಬೇವನ್ನು ಟೊಮೇಟೊ, ಜೇನು, ಮುಂತಾದುವುಗಳೊಂದಿಗೆ ಮಿಶ್ರಣ ಮಾಡಿ ಬಳಸಬಹುದು. ಕೆಲವು ತರ ತರಹದ ಮಿಶ್ರಣಗಳನ್ನು ಬೇವಿನ ಜೊತೆ ಉಪಯೋಗಿಸಿ ಅದರ ಮಹತ್ವವನ್ನು ಇನ್ನು ಹೆಚ್ಚಿಸಬಹುದು. ಹೀಗೆ ಉಪಯೋಗಿಸುವುದರಿಂದ ಉತ್ತಮ ತ್ವಚೆ ಪಡೆಯಬಹುದು. ಹಾಗಾಗಿ, ಬೋಲ್ಡ್ ಸ್ಕೈ ಸಾದರ ಪಡಿಸುವ ಈ ಲೇಖನವು ಬೇವು ಮತ್ತು ಅದರ ಉಪಯುಕ್ತತೆಯನ್ನು ಪಟ್ಟಿ ಮಾಡಿ ನಿಮ್ಮ ಚರ್ಮವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಬಗ್ಗೆ ಸ್ಲೈಡ್ ಶೋ ಮೂಲಕ ತಿಳಿಸುತ್ತಿದ್ದೇವೆ ಮುಂದೆ ಓದಿ...

ಸುಂದರ ತ್ವಚೆಗಾಗಿ ಬೇವು ಮತ್ತು ಗಂಧದ ಪ್ಯಾಕ್
ಬೇವಿನ ಪ್ಯಾಕ್ ಬ್ಯಾಕ್ಟೀರಿಯಾದಿಂದ ಆಗುವ ಕೆಟ್ಟ ಪರಿಣಾಮಗಳನ್ನು ಹೋಗಲಾಡಿಸಿ ತ್ವಚೆಯನ್ನು ಸುಂದರಗೊಳಿಸುತ್ತದೆ. ಬೇವಿನ ಪೌಡರ್ ಜೊತೆ ಗಂಧದ ಪೌಡರನ್ನು ರೋಸ್ ವಾಟರ್ ಜೊತೆ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ ನಂತರ ಇದನ್ನು ನಿಮ್ಮ ಚರ್ಮಕ್ಕೆ ಬಳಸಿ ಸ್ವಲ್ಪ ಸಮಯ ಹಾಗೇ ಬಿಟ್ಟು ನಂತರ ತೊಳೆದರೆ ನಿಮ್ಮ ಚರ್ಮಕ್ಕೆ ವಿಶೇಷ ಹೊಳಪು ಬರುತ್ತದೆ.

ಎಣ್ಣೆ ಮುಕ್ತ ಚರ್ಮಕ್ಕಾಗಿ ಬೇವು ಮತ್ತು ಕಡಲೆ ಹಿಟ್ಟಿನ ಪ್ಯಾಕ್
ಈ ಪ್ಯಾಕ್ ಜಿಡ್ಡಿನಿಂದ ಕೂಡಿದ ಚರ್ಮ ಉಳ್ಳವರಿಗೆ ಒಂದು ವರವಾಗಿದೆ. ಬೇವು ಮತ್ತು ಕಡಲೆ ಹಿಟ್ಟಿನ ಪೌಡರನ್ನು ಒಟ್ಟಾಗಿ ಮಿಶ್ರಣ ಮಾಡಿ, ನಂತರ ಅದನ್ನು ಚರ್ಮಕ್ಕೆ ಬಳಸಿ ಸ್ವಲ್ಪ ಸಮಯ ಹಾಗೆಯೇ ಬಿಡಬೇಕು. ನಂತರ ಮುಖವನ್ನು ಚೆನ್ನಾಗಿ ತೊಳೆದರೆ ಚರ್ಮವು ಸ್ವಚ್ಛವಾಗಿ ಕಾಣುತ್ತದೆ. ಈ ಮಿಶ್ರಣ ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸುವುದರಿಂದ ಹದಿ ಹರೆಯದವರಿಗೆ ಇದು ತುಂಬಾ ಉಪಯುಕ್ತವಾಗಿದೆ.

ಬೇವು ಮತ್ತು ಜೇನಿನ ಪ್ಯಾಕ್ ಕಾಂತಿಯುತ ಚರ್ಮಕ್ಕಾಗಿ
ಬೇವು ಮತ್ತು ಜೇನನ್ನು ಕಾಂತಿಯುತ ಮತ್ತು ಸ್ವಚ್ಛ ತ್ವಚೆ ಪಡೆಯಲು ಉಪಯೋಗಿಸುತ್ತಾರೆ. ಬೇವು ಮತ್ತು ಜೇನಿನರಸ ಮಂಕಾದ ತ್ವಚೆಯನ್ನು ಸುಂದರಗೊಳಿಸಲು ಬಳಸುತ್ತಾರೆ. ಸ್ವಲ್ಪ ಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಜೇನಿನೊಂದಿಗೆ ಕಿವುಚಬೇಕು ಮತ್ತು ಪೇಸ್ಟ್ ಮಾಡಿಕೊಳ್ಳಬೇಕು ನಂತರ ಚರ್ಮದ ಮೇಲೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಬೇಕು.

ಬೇವು ಮತ್ತು ಪಪ್ಪಾಯಿ ಹಣ್ಣಿನ ಪ್ಯಾಕ್
ಬೇವು ಮತ್ತು ಪಪ್ಪಾಯಿ ಹಣ್ಣಿನ ಮಿಶ್ರಣ ಚರ್ಮದ ಮೇಲೆ ಅತ್ಯುತ್ತಮವಾಗಿ ಪರಿಣಾಮ ಬೀರುತ್ತದೆ. ಇದರಿಂದ ಚರ್ಮವು ಸ್ವಚ್ಚ ಮತ್ತು ಹೊಳಪಿನಿಂದ ಕಂಗೊಳಿಸುತ್ತದೆ. ಬೇವಿನ ಪೌಡರನ್ನು ಪಪ್ಪಾಯಿಯೊಂದಿಗೆ ಸೇರಿಸಿ ಪೇಸ್ಟ್ ತರಹ ಮಾಡಿಕೊಂಡು ಇದನ್ನು ಚರ್ಮದ ಮೇಲೆ ಬಳಸಬೇಕು. ಸ್ವಲ್ಪ ಹೊತ್ತು ಬಿಟ್ಟು ನಂತರ ತೊಳೆದಾಗ ಹೊಳೆ ಹೊಳೆಯುವ ತ್ವಚೆಯ ಫಲಿತಾಂಶ ಹೊರಬೀಳುವುದರಲ್ಲಿ ಸಂಶಯವಿಲ್ಲ.

ಬೇವು ಮತ್ತು ಟೊಮೇಟೊ
ಇದೆರಡನ್ನು ಒಟ್ಟಾಗಿ ಬಳಸುವುದರಿಂದ ಕಾಂತಿಯುತ ಮತ್ತು ತೇವರಹಿತ ಚರ್ಮವನ್ನು ಹೊಂದಬಹುದಾಗಿದೆ. ಬೇವಿನ ಪೌಡರನ್ನು ಟೊಮೇಟೊ ಹಣ್ಣಿನೊಂದಿಗೆ ಸೇರಿಸಿ ಮಿಶ್ರಣ ಮಾಡಿಕೊಂಡು ಚರ್ಮದ ಮೇಲೆ ಉಪಯೋಗಿಸಿ ಇಪ್ಪತ್ತು ನಿಮಿಷಗಳ ಕಾಲ ಹಾಗೇ ಒಣಗಲು ಬಿಟ್ಟು, ಸ್ವಲ್ಪ ಸಮಯದ ನಂತರ ತೊಳೆದಾಗ ಮುಖದಲ್ಲಿನ ಮೊಡವೆ ದೂರವಾಗಿ ಹೊಳೆಯುವ ಮುಖ ನಿಮ್ಮದಾಗುತ್ತದೆ.



Click it and Unblock the Notifications











