Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಖದ ಅಂದ ಹೆಚ್ಚಿಸುವ ಹಲಸಿನ ಹಣ್ಣಿನ ಫೇಸ್ ಪ್ಯಾಕ್!
ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ತರಕಾರಿ ಎಂದರೆ ಹಣ ಕೊಟ್ಟು ಅಂಗಡಿಯಿಂದ ಕೊಂಡು ತರುವುದೆಂಬ ಕಲ್ಪನೆಯೇ ಇರಲಿಲ್ಲ. ಅಂತೆಯೇ ಹಣ್ಣುಗಳು ಸಹಾ. ಪ್ರತಿ ಮನೆಯಲ್ಲಿಯ ಹಿತ್ತಲಿನಲ್ಲಿ ಬಾಳೆ, ಮಾವು ಮತ್ತು ಹಲಸಿನ ಮರಗಳಿರುತ್ತಿದ್ದವು. ಮಾವು ಎಂದರೆ ಅತ್ಯುತ್ತಮ ಹಾಗೂ ಹಲಸಿನ ಹಣ್ಣು ಎಂದರೆ ಒಂದು ತರಹದ ನಿಕೃಷ್ಟ ಭಾವನೆ ಇಂದಿಗೂ ಇದೆ. ಅದು ಏನೇ ಇರಲಿ, ಆದರೆ ಸೌಂದರ್ಯದ ವಿಷಯಕ್ಕೆ ಬಂದಾಗ ಹಲಸಿನ ಹಣ್ಣಿನ ಕೊಡುಗೆ ಅಪಾರ..
ಅದರಲ್ಲೂ ಏಪ್ರಿಲ್, ಮೇ, ತಿಂಗಳು ಬಂತೆಂದರೆ, ಸಾಕು ಮಾರುಕಟ್ಟೆಗಳಲ್ಲಿ ಹಲಸಿನ ಹಣ್ಣುಗಳದ್ದೇ ಕಾರುಬಾರು. ಇದರ ಸುವಾಸನೆಯ ಭರಿತ ಪರಿಮಳ ಎಂತವರನ್ನೂ ಕೂಡ ತನ್ನ ಬಳಿ ಆಕರ್ಷಿಸುತ್ತದೆ. ಅರೇ, ಕೇವಲ ಹಲಸಿನ ಹಣ್ಣಿನ ವಾಸನೆಯನ್ನು ಮಾತ್ರ ಸವಿದರೆ ಸಾಕೇ..? ಅದರಲ್ಲೂ ಕೆಲವರಂತೂ ಹಲಸಿನ ಹಣ್ಣು ಅಂದ ಕೂಡಲೇ ಬಾಯಲ್ಲಿ ಕೆಲವರಿಗೆ ನೀರೂರುತ್ತೆ. ಹಾಗಂತ ಬಾಯಲ್ಲಿ ನೀರೂರಿಸಿ, ತಿನ್ನಲು ಮಾತ್ರ ರುಚಿಯಾಗಿರುವ ಹಣ್ಣು ಹಲಸು ಅಂತ ಅಂದುಕೊಳ್ಳಬೇಡಿ.. ಬದಲಾಗಿ ಹಲಸು ನಿಮ್ಮ ಸೌಂದರ್ಯ ವರ್ಧಕ ಕೂಡ ಹೌದು.. ಅದರಲ್ಲೂ ಇನ್ನೊಂದು ಸಂಗತಿ ನಿಮಗೆ ಹೇಳಲೇ ಬೇಕು, ಹಲಸು ಎಷ್ಟು ಉಪಕಾರಿಯೋ ಅಷ್ಟೇ ಹಲಸಿನ ಬೀಜವೂ ಕೂಡ ಸೌಂದರ್ಯ ವಿಷಯದಲ್ಲಿ ಎತ್ತಿದ ಕೈ...!
ಹೌದು ಹಲಸಿನ ಬೀಜದ ಮುಖಲೇಪದಿಂದ ಕೂಡ ಸೌಂದರ್ಯವನ್ನು ವೃದ್ಧಿಸಬಹುದು. ಇದಕ್ಕಾಗಿ ಹಲಸಿನ ಹಸಿ ಬೀಜವೊಂದನ್ನು ಕಲ್ಲಿನ ಮೇಲೆ ಉಜ್ಜಿ ನಯವಾಗಿ ಅರೆದು ಸಮಪ್ರಮಾಣದಲ್ಲಿ ಜೇನು ಮತ್ತು ಹಾಲನ್ನು ಸೇರಿಸಿ ಮುಖಕ್ಕೆಹಚ್ಚಿ ಅರ್ಧಗಂಟೆಯ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುವುದು ಮತ್ತು ನೆರಿಗೆಗಳಾಗುವುದನ್ನೂ ತಪ್ಪಿಸಬಹುದು. ಬನ್ನಿ ಇಷ್ಟೆಲ್ಲಾ ಉಪಯೋಗವಿರುವ ಈ ಹಲಸಿನ ಹಣ್ಣನ್ನು ಬಳಸಿ ಹೇಗೆ ನಿಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು ಅನ್ನೋದನ್ನು ನಾವು ನಿಮಗೆ ಸಿಂಪಲ್ ಆಗಿ ನಿಮಗೆ ತಿಳಿಸುತ್ತಿದ್ದೇವೆ ಮುಂದೆ ಓದಿ..

ವೃದ್ಧಾಪ್ಯವನ್ನು ದೂರಮಾಡುತ್ತದೆ
ಹಲಸಿನ ಹಣ್ಣಿನಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಚರ್ಮ ಕಾಂತಿ ಮತ್ತು ಸೆಳೆತ ಕಳೆದುಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಮತ್ತು ಪೋಷಣೆಯನ್ನು ನೀಡುತ್ತದೆ. ವಿಶೇಷವಾಗಿ ಮುಖದ ಚರ್ಮಕ್ಕೆ ಕಳೆ, ಕೋಮಲತೆ ಮತ್ತು ಕಾಂತಿಯನ್ನು ನೀಡುವ ಮೂಲಕ ತಾರುಣ್ಯವನ್ನು ಬಹಳ ವರ್ಷಗಳವರೆಗೆ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಮೊಡವೆ ನಿವಾರಣೆಗೆ
ಮೊಡವೆ ಸಮಸ್ಯೆಗಳಿಂದ ನೀವು ಬಳಲುತ್ತಿದ್ದೀರಿ ಎಂದಾದಲ್ಲಿ ಪರಿಹಾರ ನಮ್ಮಲ್ಲಿದೆ. ಹಲಸಿನ ಹಣ್ಣನ್ನು ಸಮನಾಗಿ ಅರ್ಧಭಾಗ ಮಾಡಿ. ಒಳಭಾಗವನ್ನು ತುಂಡರಿಸಿ ಮೊಡವೆ ಭಾಗಕ್ಕೆ ಹಚ್ಚಿ. 15 ನಿಮಿಷಗಳ ಕಾಲ ಹಾಗೆಯೇ ಒಣಗಲು ಬಿಡಿ. ನಂತರ ತಂಪು ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಒಣತ್ವಚೆಗೆ ಹಲಸಿನ ಹಣ್ಣು
ಒಣ ತ್ವಚೆ ಮತ್ತು ತುರಿಕೆ ಸಮಸ್ಯೆಯನ್ನು ಹೋಗಲಾಡಿಸಲು ಹಲಸಿನ ಹಣ್ಣಿನ ರಸದಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಈ ರಸ ಮುಖದಲ್ಲಿ ಹಾಗೆಯೇ ಇರಲು ಬಿಡಿ. 20 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.

ನೆರಿಗೆಗಳನ್ನು ದೂರ ಮಾಡಲು
ನೆರಿಗೆಗಳು ನಿಮ್ಮನ್ನು ವೃದ್ಧಾಪ್ಯಕ್ಕೆ ತಳ್ಳುತ್ತವೆ. ನೆರಿಗೆಗಳಿಂದ ದೂರಾಗಲು, ಹಣ್ಣಿನಿಂದ ಪೇಸ್ಟ್ ತಯಾರಿಸಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಬಹುದಾಗಿದೆ. ಈ ಪೇಸ್ಟ್ಗೆ ಒಂದು ಚಮಚ ಹಾಲನ್ನು ಸೇರಿಸಿಕೊಳ್ಳಿ ನಂತರ ಇದನ್ನು ಮಿಶ್ರಮಾಡಿಕೊಂಡು ನೆರಿಗೆಗಳ ಭಾಗಕ್ಕೆ ಹಚ್ಚಿಕೊಳ್ಳಿ. ನಂತರ 10 ನಿಮಿಷಗಳ ತರುವಾಯ ಅದನ್ನು ತೆಗೆಯಿರಿ. ಮುಖವನ್ನು ತಣ್ಣಗಿನ ನೀರಿನಿಂದ ತೊಳೆದುಕೊಂಡು ಐಸ್ನಿಂದ ಮುಖಕ್ಕೆ ಮಾಲೀಸು ಮಾಡಿಕೊಳ್ಳಿ.

ಕಪ್ಪು ಕಲೆಗಳನ್ನು ನಿವಾರಿಸಲು
ಹಲಸಿನ ಹಣ್ಣಿನ ಮೂರು ಹಣ್ಣು ಮತ್ತು ಬೀಜವನ್ನು ನುಣ್ಣಗೆ ಅರೆದುಕೊಳ್ಳಿ. ಈ ಮಿಶ್ರಣ ಒರಟಾಗಿರಲಿ. ಇದನ್ನು ಮೇಲ್ಮುಖವಾಗಿ ಕಪ್ಪು ಕಲೆಗಳ ಮೇಲೆ ಹಚ್ಚಿಕೊಳ್ಳಿ. 10 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.

ತ್ವಚೆಯ ಗಾಯಗಳನ್ನು ಹೋಗಲಾಡಿಸಲು
ಹಲಸಿನ ಹಣ್ಣಿನಿಂದ ಗಾಯಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ಹಲಸಿನ ಹಣ್ಣಿನ ಬೀಜಗಳನ್ನು ಹುಡಿ ಮಾಡಿಟ್ಟುಕೊಳ್ಳಿ ಇದಕ್ಕೆ ಒಂದು ಚಮಚ ಜೇನನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಗಾಯದ ಮೇಲ್ಭಾಗಕ್ಕೆ ಈ ಪೇಸ್ಟ್ ಅನ್ನು ಸವರಿ ನಂತರ ಒಣಗಲು ಬಿಡಿ. 10 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.



Click it and Unblock the Notifications
