Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸೌಂದರ್ಯಕ್ಕೆ ಕೇವಲ ಪೌಡರ್, ಕ್ರೀಮ್ ಹಚ್ಚಿದರೆ ಮಾತ್ರ ಸಾಲದು!
ಸೌಂದರ್ಯವು ದೈವೀದತ್ತ ವರವಾಗಿರುತ್ತದೆ ಎಂಬುದು ನಾವು ತಿಳಿದಿರುವ ಅಂಶವಾಗಿದ್ದರೂ ಇನ್ನಷ್ಟು ಸುಂದರರಾಗಿ ಕಾಣಬೇಕೆಂಬ ಹಂಬಲ ನಮ್ಮನ್ನು ಹಲವಾರು ಪ್ರಕ್ರಿಯೆಗಳಿಗೆ ಒಳಗಾಗುವಂತೆ ಮಾಡುತ್ತದೆ. ದುಬಾರಿ ಖರ್ಚು ಮಾಡಿ ಕ್ರೀಂ, ಲೋಶನ್ಗಳ ಮೊರೆ ಹೋಗಿ ಇದ್ದ ಸೌಂದರ್ಯವನ್ನು ಒಮ್ಮೊಮ್ಮೆ ಕೆಡಿಸಿಕೊಳ್ಳುತ್ತೇವೆ.
ಕಪ್ಪನೆಯ ಬಣ್ಣವಿದ್ದರೂ ಆಕರ್ಷಣೆ ಇರುತ್ತದೆ ಎಂಬ ಸತ್ಯವನ್ನು ನಾವು ಮನಗಾಣುವುದೇ ಇಲ್ಲ. ಬಾಹ್ಯ ಸೌಂದರ್ಯಕ್ಕೆ ಬೆಲೆ ನೀಡಿ ನಮ್ಮ ಆಂತರ್ಯದ ಸೌಂದರ್ಯವನ್ನು ಮರೆಯಾಗಿಸುತ್ತೇವೆ. ಸೌಂದರ್ಯ ಸಲಹೆಗಳನ್ನು ನೀವು ಪಾಲಿಸಿದ್ದರೂ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡಾಗ ಮಾತ್ರವೇ ನಿಮ್ಮಲ್ಲಿನ ಕೀಳರಿಮೆಯನ್ನು ಹೋಗಲಾಡಿಸಲು ಸಾಧ್ಯವಾಗುವುದು. ವರ್ಕ್ಔಟ್ ಮಾಡುವ ಮಹಿಳೆಯರಿಗಾಗಿ ವಿಶೇಷ ಬ್ಯೂಟಿ ಟಿಪ್ಸ್
ಎಷ್ಟು ಮಾಡಿದರೂ ಪ್ರಯೋಜನವಿಲ್ಲ ಎಂಬ ಮಾತು ನಮ್ಮಲ್ಲಿ ಹೂತುಹೋಗುಬಿಟ್ಟರೆ ನಮ್ಮ ಖರ್ಚು ವೆಚ್ಚ ನೀರಿನಲ್ಲಿ ಹೋಮಮಾಡಿದಂತೆಯೇ ಪ್ರಯೋಜನಕ್ಕೆ ಬಾರದು. ನೀವು ಮಾಡುತ್ತಿರುವ ಪ್ರಯೋಗಗಳು ನಿಮಗೆ ಫಲವನ್ನು ನೀಡಬೇಕು ಎಂದಾದಲ್ಲಿ ಕೆಲವೊಂದು ಜೀವನ ಸಲಹೆಗಳನ್ನು ನೀವು ಪಾಲಿಸಲೇಬೇಕು. ಆ ಸಲಹೆಗಳನ್ನು ತಿಳಿಸಿಕೊಡುವ ಕಾರ್ಯವನ್ನೇ ಇಂದಿನ ಲೇಖನದಲ್ಲಿ ನಾವು ಮಾಡಲಿರುವೆವು.

ಸೌಂದರ್ಯ ಸಲಹೆ#1
ಆದಷ್ಟು ನಿಯಮಿತವಾಗಿ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ ಇದು ನಿಮ್ಮನ್ನು ಫಿಟ್ ಮತ್ತು ಆರೋಗ್ಯವಂತರನ್ನಾಗಿ ಇರಿಸುತ್ತದೆ. ಹೊಳೆಯುವ ತ್ವಚೆಯನ್ನು ಇದು ನಿಮಗೆ ದಯಪಾಲಿಸುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಬೆವರಿನ ರೂಪದಲ್ಲಿ ಹೊರಹಾಕುವ ಕೆಲಸವನ್ನು ವ್ಯಾಯಾಮ ಮಾಡುತ್ತದೆ. ಸುಂದರ ಮೈಮಾಟ ಮತ್ತು ಮೈಕಾಂತಿಯನ್ನು ವ್ಯಾಯಾಮ ನಿಮಗೆ ದೊರಕಿಸುತ್ತದೆ. ಸೌಂದರ್ಯ ಕೇವಲ ಮುಖಕ್ಕೆ ಮಾತ್ರವಲ್ಲ, ಕುತ್ತಿಗೆಗೂ ಬೇಕು!
ಸೌಂದರ್ಯ ಸಲಹೆ#2
ನೀವು ನಿಯಮಿತವಾದ ತ್ವಚೆ ಕಾಳಜಿ ವಿಧಾನಗಳನ್ನು ಅನುಸರಿಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿ. ಕ್ಲೆನ್ಸಿಂಗ್, ಎಕ್ಸ್ಫೋಲಿಯೇಟಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಇದರಲ್ಲಿ ಇರಲಿ. ಇದಕ್ಕಾಗಿ ಸ್ವಲ್ಪ ಸಮಯವನ್ನು ನೀವು ವಿನಿಯೋಗಿಸಿದರೂ ಉತ್ತಮ ಫಲ ದೊರೆಯುವುದು ಖಂಡಿತ.
ಸೌಂದರ್ಯ ಸಲಹೆ#3
ನಿಮ್ಮ ಮುಖಕ್ಕೆ ಹೊಂದುವಂತಹ ಹೇರ್ ಸ್ಟೈಲ್ಗಾಗಿ ವೃತ್ತಿಪರ ಹೇರ್ ಸ್ಟೈಲಿಸ್ಟ್ಗಳನ್ನು ಭೇಟಿ ಮಾಡಿ. ಅವರು ನೀಡುವ ಸೌಂದರ್ಯ ಸಲಹೆಗಳಿಂದಲೂ ನಿಮಗೆ ಪ್ರಯೋಜನವಿದೆ. ನಿಮ್ಮ ಮುಖಕ್ಕೆ ಹೊಂದುವಂತಹ ಹೇರ್ ಕಟ್ ಮಾಡಿಸಿಕೊಂಡಲ್ಲಿ ನಿಮ್ಮ ಸೌಂದರ್ಯವನ್ನು ಇದು ಇಮ್ಮಡಿಗೊಳಿಸುವುದು ಖಂಡಿತ. ಮುಖದ ಸುಕ್ಕು, ರಂಧ್ರದ ಪರಿಹಾರಕ್ಕೆ ಇಲ್ಲಿದೆ ಮನೆಮದ್ದು
ಸೌಂದರ್ಯ ಸಲಹೆ #4
ನಿಮ್ಮ ದಿರಿಸುಗಳಲ್ಲಿ ಹೊಸತವನ್ನು ಬದಲಾಯಿಸುವ ಕಾಲ ಬಂದಾಗಿದೆ. ನಿಮ್ಮದು ಸಪೂರ ದೇಹವಾಗಿದ್ದರೆ ದೊಗಳೆ ದಿರಿಸುಗಳನ್ನು ಧರಿಸಬೇಡಿ. ನಿಮ್ಮ ದೇಹಕ್ಕೆ ಒಪ್ಪುವ ದಿರಿಸನ್ನು ಆಯ್ಕೆಮಾಡಿ.
ಇದರದೊಂದಿಗೆ ಆತ್ಮವಿಶ್ವಾಸವನ್ನು ನಿಮ್ಮಲ್ಲಿ ಬೆಳೆಸಿಕೊಳ್ಳಿ. ಮುಖದಲ್ಲಿ ಸುಂದರ ನಗುವಿರಲಿ. ಹೀಗೆ ಇಲ್ಲಿ ನಾವು ನೀಡಿರುವ ಸೌಂದರ್ಯ ಸಲಹೆಗಳನ್ನು ನೀವು ಪಾಲಿಸಿದಲ್ಲಿ ಅದ್ಭುತ ನೋಟವನ್ನು ನೀವು ಪಡೆದುಕೊಳ್ಳುವುದು ಖಂಡಿತ



Click it and Unblock the Notifications

