Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೊಳೆಯುವ ತ್ವಚೆಗಾಗಿ ವಿಟಮಿನ್‌ಯುಕ್ತ ತರಕಾರಿ ಜ್ಯೂಸ್
ಸೌಂದರ್ಯವೆನ್ನುವುದು ಸ್ತ್ರೀಗೆ ದೇವರು ನೀಡಿರುವ ವರ ಎಂಬುದರಲ್ಲಿ ಎರಡು ಮಾತಿಲ್ಲ. ಬೆಳ್ಳಗೆ ಬೆಳಗುತ್ತಾ ಸುಂದರವಾಗಿರುವುದು ಮಾತ್ರವೇ ಸೌಂದರ್ಯವಲ್ಲ. ಆಂತರಿಕವಾಗಿ ಕೂಡ ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುವುದೂ ಕೂಡ ಸೌಂದರ್ಯ ಎಂದು ಕರೆಯಿಸಿಕೊಳ್ಳುತ್ತದೆ. ತಾವು ಎಷ್ಟೇ ಸುಂದರಿಯಾಗಿದ್ದರೂ ಮಹಿಳೆಯರಿಗೆ ತಾವು ಇನ್ನಷ್ಟು ಮುದ್ದಾಗಿ ಕಳೆಕಳೆಯಾಗಿ ಕಾಣಬೇಕೆಂಬ ಹಂಬಲ ಇದ್ದೇ ಇರುತ್ತದೆ.
ಸ್ವಾಭಾವಿಕವಾಗಿ ಅಲ್ಲದಿದ್ದರೂ ರಾಸಾಯನಿಕಗಳ ಮೊರೆ ಹೋಗಿಯಾದರೂ ತಾವು ನಾಲ್ಕು ಜನರಲ್ಲಿ ಎದ್ದುಗಾಣಬೇಕೆಂಬ ಹುಚ್ಚು ಆಸೆ ಮಹಿಳೆಯರಾಗಿರುತ್ತದೆ. ಇವರಾಸೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ದೊರೆಯುವ ಸೌಂದರ್ಯ ಉತ್ಪನ್ನಗಳೂ ಕೂಡ ವಿಧವಿಧ ಜಾಹೀರಾತುಗಳನ್ನು ಪ್ರದರ್ಶಿಸಿ ಅವರನ್ನು ಮೋಡಿ ಮಾಡುತ್ತಿವೆ. ಬರೇ ನಾಲ್ಕು ದಿನಗಳಲ್ಲಿ ಸುಂದರ ಮೈಕಾಂತಿಯನ್ನು ಪಡೆದುಕೊಳ್ಳಿ ಮೊದಲಾದ ಬಣ್ಣದ ಮಾತುಗಳನ್ನಾಡಿ ಅವರು ಆ ಉತ್ಪನ್ನವನ್ನು ತೆಗೆದುಕೊಳ್ಳುವಂತೆ ಮಾಡುತ್ತಿವೆ. ಸ್ವಲ್ಪ ದಿನ ಮಾತ್ರವೇ ಕಾಂತಿಯನ್ನು ನೀಡುವ ಈ ಬಣ್ಣದ ವಸ್ತುಗಳು ಕಾಲಕ್ರಮೇಣ ತಮ್ಮ ಅಸಲಿ ರೂಪವನ್ನು ನಿಮ್ಮ ತ್ವಚೆಯ ಮೇಲೆ ಮೊಡವೆಗಳು, ಕಪ್ಪು ಕಲೆಗಳ ರೂಪದಲ್ಲಿ ನೀಡುತ್ತವೆ. ಹಾಗಿದ್ದರೆ ಇನ್ನೇನು ಮಾಡುವುದು ಎಂದು ಯೋಚಿಸುತ್ತಾ ಕೂರಬೇಡಿ.
ನೈಸರ್ಗಿಕ ವಿಧಾನಗಳಿಂದ ನಿಮ್ಮ ತ್ವಚೆಯ ಕಾಂತಿ ವರ್ಧನೆಗಾಗಿ ಇಂದಿನ ಲೇಖನದಲ್ಲಿ ನಾವು ಸಲಹೆಗಳೊಂದಿಗೆ ಬಂದಿರುವೆವು. ನಿಯಂತ್ರಿತ ಡಯೆಟ್ ಮತ್ತು ನಿಯಮಿತವಾಗಿ ಆಹಾರವನ್ನು ತೆಗೆದುಕೊಳ್ಳುವುದು ಹೊಳೆಯುವ ತ್ವಚೆಯನ್ನು ನಿಮಗೆ ಒದಗಿಸುತ್ತದೆ. ಈ ಡಯೆಟ್ ಹೇಗಿರಬೇಕು ಎಂದರೆ ಅದರಲ್ಲಿ ನ್ಯೂಟ್ರೀನ್‌ಗಳು ಮತ್ತು ವಿಟಮಿನ್‌ಗಳು ಹೇರಳವಾಗಿರಬೇಕು. ನಿಮ್ಮ ತ್ವಚೆ ಮತ್ತು ಕೂದಲಿಗೆ ಕಮಾಲನ್ನು ಉಂಟುಮಾಡುವ ಸಾಕಷ್ಟು ಪೋಷಕಾಂಶ ಭರಿತ ಹಣ್ಣು ಮತ್ತು ತರಕಾರಿಗಳಿದ್ದು ಅವು ಯಾವುವು ಮತ್ತು ಅವುಗಳ ನಿಯಮಿತ ಸೇವನೆಯಿಂದ ಉಂಟಾಗುವ ಪ್ರಯೋಜನಗಳನ್ನು ಇಂದು ತಿಳಿಸಲಿದ್ದೇವೆ. ನಿಮ್ಮ ಡಯೆಟ್‌ನಲ್ಲಿ ತರಕಾರಿ ಜ್ಯೂಸ್ ಇದ್ದಲ್ಲಿ ಇದು ನೈಸರ್ಗಿಕವಾಗಿ ನಿಮ್ಮ ಮುಖಕ್ಕೆ ಕಾಂತಿಯನ್ನು ನೀಡುತ್ತವೆ. ಹಾಗಿದ್ದರೆ ಆ ತರಕಾರಿಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡಿದ್ದೇವೆ....

ಕ್ಯಾರೆಟ್ ಜ್ಯೂಸ್
ಕ್ಯಾರೆಟ್‍ಗಳನ್ನು ಹಲವಾರು ತ್ವಚೆಯ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಚರ್ಮದ ತುರಿಕೆ, ಗುಳ್ಳೆಗಳು, ಮೊಡವೆಗಳು ಮುಂತಾದ ತ್ವಚೆಯ ಸಮಸ್ಯೆಗಳನ್ನು ಕ್ಯಾರೆಟ್‍ನಿಂದ ಗುಣಪಡಿಸಿ ಕೊಳ್ಳಬಹುದು. ಇದರ ಜೊತೆಗೆ ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ತ್ವಚೆಯ ಹೊಳಪನ್ನು ಸಹ ಹೆಚ್ಚಿಸಿಕೊಳ್ಳಬಹುದು. ಹೀಗೆ ಮನೆಯಲ್ಲಿ ತಯಾರಿಸಿದ ಕ್ಯಾರೆಟ್ ಜ್ಯೂಸ್ ತ್ವಚೆಗೆ ಉತ್ತಮ ಸ್ನೇಹಿಯಾಗಿ ವರ್ತಿಸುತ್ತದೆ ಎಂದು ಸಾಬೀತಾಗಿದೆ. ಹಾಗಾಗಿ ಕ್ಯಾರೆಟ್ ಜ್ಯೂಸನ್ನು ನಿಮ್ಮ ಆರೋಗ್ಯಕರ ತ್ವಚೆಯ ರಹಸ್ಯವನ್ನಾಗಿ ಸೇವಿಸಲು ಇಂದೇ ಆರಂಭಿಸಿ ಮತ್ತು ಪ್ರತಿನಿತ್ಯ ಸೇವಿಸಿ.

ಟೊಮೇಟೊ ಜ್ಯೂಸ್
ಅನೇಕ ಅಧ್ಯಯನಗಳ ಪ್ರಕಾರ ಟೊಮೇಟೊದಲ್ಲಿ ಅತ್ಯಧಿಕ ಪ್ರಮಾಣದ ವಿರೋಧಿ ಆಕ್ಸಿಡೆಂಟ್ಸ್ ಇರುವುದರಿಂದ ಇದರ ರಸ ಸೇವನೆಯು ಅನೇಕ ಪ್ರಯೋಜನಗಳನ್ನು ಕೊಡುತ್ತವೆ ಎಂದು ಋಜುವಾತಾಗಿದೆ. ಅಲ್ಲದೆ ಟೊಮೇಟೊ ಜ್ಯೂಸ್ ಹೊಳೆಯುವ ತ್ವಚೆಯನ್ನು ಮಾತ್ರ ನೀಡುವುದಲ್ಲದೆ, ಕ್ಯಾನ್ಸರ್ ವಿರುದ್ಧ ಹೋರಾಡುವ ಅಂಶಗಳನ್ನು ವೃದ್ಧಿಸುತ್ತದೆ. ಇದರಲ್ಲಿರುವ ಲ್ಯಾಕೊಪಿನ್ ಅಂಶವು ವಿವಿಧ ಬಗೆಯ ಕ್ಯಾನ್ಸರ್ ಅನ್ನು ಹೊಡೆದೋಡಿಸುತ್ತದೆ. ಅಂತೆಯೇ ಇದರಲ್ಲಿರುವ ವಿಟಮಿನ್ ಪ್ರತಿರಕ್ಷಣೆ ಪ್ರತಿಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಇತರ ರೋಗಗಳು ತಟ್ಟುವುದನ್ನು ಎದುರಿಸುತ್ತದೆ. ಲೈಕೊಪೈನ್ ಟೊಮೇಟೊ ರಸದಲ್ಲಿರುವುದರಿಂದ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುವುದರಲ್ಲಿ ಇದು ಸಹಕಾರಿಯಾಗಲಿದೆ

ಬೇಬಿ ಕಾರ್ನ್ ಜ್ಯೂಸ್
ಹೊಳೆಯುವ ತ್ವಚೆಯನ್ನು ಒದಗಿಸುವಲ್ಲಿ ಬೇಬಿ ಕಾರ್ನ್ ಮಹತ್ವದ್ದಾಗಿದೆ. ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ವಿಟಮಿನ್ ಸಿ, ಎ ಅಂಶ ಇದರಲ್ಲಿ ಹೇರಳವಾಗಿದ್ದು ಹೊಳೆಯುವ ತ್ವಚೆಯನ್ನು ಪಡೆಯುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಬಟಾಣಿ ಜ್ಯೂಸ್
ವಿಟಮಿನ್ ಬಿ6 ಮತ್ತು ಕೆ ಅಂಶಗಳು ಇದರಲ್ಲಿ ಹೇರಳವಾಗಿದ್ದು ನ್ಯೂಟ್ರೀನ್ ಅಂಶಗಳನ್ನು ಇದು ಒಳಗೊಂಡಿದೆ. ಉತ್ಕರ್ಷಣ ನಿರೋಧಿ ಅಂಶಗಳೂ ಬಟಾಣಿಯಲ್ಲಿದೆ. ನಿತ್ಯವೂ ಬಟಾಣಿ ಜ್ಯೂಸ್ ಅನ್ನು ಸೇವಿಸುವುದರಿಂದ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.

ಪಾಲಾಕ್ ಜ್ಯೂಸ್
ಪಾಲಾಕ್ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ತಡೆಯುವ ಗುಣಗಳೆರಡೂ ಇರುವುದರಿಂದ ಇದು ಆರೋಗ್ಯಕರ ಚರ್ಮ ಪಡೆಯಲು ಸಹಾಯಕ. ಪಾಲಾಕ್ ಸೊಪ್ಪಿನ ಜ್ಯೂಸ್ ಮಾಡಿ ಪ್ರತಿದಿನ ಸೇವಿಸುವುದರಿಂದ ಕಾಂತಿಯುತ ಚರ್ಮ ಪಡೆಯಬಹುದು. ಹಾಗಾಗಿ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೆ ಕಾಫಿ ಕುಡಿಯುವ ಬದಲು ಪಾಲಕ್ ಸೊಪ್ಪಿನ ಜ್ಯುಸ್ ಕುಡಿಯಿರಿ, ಮೊಡವೆಗಳಿಂದ ಮುಕ್ತರಾಗುವುದರ ಜೊತೆಗೆ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು



Click it and Unblock the Notifications
