Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಸೀತಾಫಲದಲ್ಲಿ ಸೀಕ್ರೆಟ್ ಆಗಿ ಇವೆ ಸೌಂದರ್ಯದ ರಹಸ್ಯ
ಸೀತಾಫಲ ಕಣ್ರಿ, ಅದೇ ಒರಟು ಒರಟು ಚರ್ಮದ, ಒಳಗೆ ಪೂರ್ತಿ ಬೀಜ, ಅದರ ಮೇಲೆ ರುಚಿ ರುಚಿಯಾದ ತಿರುಳು ಇರುತ್ತದೆಯಲ್ಲವೇ? ಅದೇ ಹಣ್ಣು, ಚಪ್ಪರಿಸಿಕೊಂಡು ತಿಂದ ಆ ಹಣ್ಣಿನ ರುಚಿ ನೆನಪಿಗೆ ಬರುತ್ತಿದೆಯಲ್ಲವೇ? ನಿಮಗೆ ಅದರ ರುಚಿ ಮತ್ತು ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ಪರಿಚಯವಿರುತ್ತದೆ. ಈ ಪೋಷಕಾಂಶಗಳಿಂದ ಕೂಡಿದ ಹಣ್ಣು ನಿಮಗೆ ಸ್ವಚ್ಛ, ಹೊಳಪಿನಿಂದ ಮತ್ತು ಸುಂದರವಾದ ತ್ವಚೆಯನ್ನು ನೀಡಲು ಸಹಾಯ ಮಾಡುತ್ತದೆ.
ಈ ಹಣ್ಣಿನಲ್ಲಿ ವಿಟಮಿನ್ ಎ, ಬಿ, ಸಿ, ಮತ್ತು ಇ ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಜೊತೆಗೆ ಮೆಗ್ನಿಷಿಯಂ, ತಾಮ್ರ, ರಂಜಕ ಮತ್ತು ಮ್ಯಾಂಗನೀಸ್ ಅಂಶಗಳು ಸಹ ಇರುತ್ತವೆ. ಇದಲ್ಲದೆ ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಸಹ ಸಮೃದ್ಧವಾಗಿ ಇರುತ್ತವೆ. ಈ ಆಂಟಿ ಆಕ್ಸಿಡೆಂಟ್ ಅಂಶವು ನಿಮ್ಮ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಿರಿಸುತ್ತದೆ. ಕುತೂಹಲಕಾರಿ ವಿಚಾರವೇನೆಂದರೆ ಸೀತಾಫಲವನ್ನು ತಲೆ ಹೊಟ್ಟು ನಿವಾರಿಸಲು ಬಳಸಲಾಗುತ್ತದೆ. ತಲೆ ಹೊಟ್ಟು ನಿವಾರಿಸಲು ಇದು ರಾಮ ಬಾಣ ಎಂದು ಹೇಳಲಾಗುತ್ತದೆ.

ಬರೀ ತ್ವಚೆ ಮತ್ತು ಕೂದಲಿಗೆ ಇದರಿಂದ ಪ್ರಯೋಜನಗಳು ಲಭಿಸುತ್ತವೆ ಎಂದು ಭಾವಿಸಬೇಡಿ. ಇದನ್ನು ಹೊರತುಪಡಿಸಿ ಸಹ ಸೀತಾಫಲದಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ದೊರೆಯುತ್ತವೆ. ಇದು ರಕ್ತದೊತ್ತಡವನ್ನು ನಿವಾರಿಸುತ್ತದೆ, ಅನಿಮಿಯಾವನ್ನು ಗುಣಪಡಿಸುತ್ತದೆ, ನಮಗೆ ಉತ್ತಮ ದೃಷ್ಟಿಯನ್ನು ನೀಡಲು ಸಹ ನೆರವು ನೀಡುತ್ತದೆ, ಅಸ್ತಮಾ, ಅಲ್ಸರ್ ಮತ್ತು ತ್ವಚೆಯಲ್ಲಿ ಕಾಣಿಸಿಕೊಳ್ಳುವ ಗುಳ್ಳೆಗಳನ್ನು ತೊಲಗಿಸುತ್ತದೆ.
ಸೀತಾಫಲದಲ್ಲಿ ಅಡಗಿರುವ ಖನಿಜಾಂಶಗಳು ನಿಮ್ಮ ತ್ವಚೆಯ ಆರೋಗ್ಯವನ್ನು ಪುನಃಶ್ಚೇತನಗೊಳಿಸುತ್ತದೆ. ಇವುಗಳು ತ್ವಚೆಯಲ್ಲಿರುವ ಪಿಎಚ್ ಪ್ರಮಾಣವನ್ನು ತಟಸ್ಥಗೊಳಿಸುತ್ತವೆ ಮತ್ತು ಸಮತೋಲನದಲ್ಲಿ ಇಡುತ್ತವೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಸೀತಾಫಲದ ಕುರಿತು ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಾಗುತ್ತಿದೆಯಲ್ಲವೇ? ಅದಕ್ಕಾಗಿ ಬೋಲ್ಡ್‌ಸ್ಕೈ ಇಂದು ನಿಮ್ಮೊಂದಿಗೆ ಸೀತಾಫಲದಿಂದ ದೊರೆಯುವ ಸೌಂದರ್ಯದ ಪ್ರಯೋಜನಗಳನ್ನು ತಿಳಿಸಿಕೊಡುತ್ತಿದೆ ಮುಂದೆ ಓದಿ.
ವಯಸ್ಸಾದಂತೆ ಕಾಣುವುದನ್ನು ನಿಯಂತ್ರಿಸುತ್ತದೆ
ಸೀತಾಫಲದಲ್ಲಿರುವ ಅಮೈನೊ ಆಮ್ಲಗಳು ಮತ್ತು ಇನ್ನಿತರ ರಾಸಾಯನಿಕಗಳು ದೇಹದಲ್ಲಿ ಕೊಲ್ಲಾಜೆನ್ ಉತ್ಪತ್ತಿಯಾಗಲು ನೆರವಾಗುತ್ತವೆ. ಕೊಲ್ಲಾಜೆನ್ ತ್ವಚೆಯ ಕೋಶಗಳಿಗೆ ಸ್ಥಿತಿಸ್ಥಾಪಕತ್ವ ಗುಣವನ್ನು ನೀಡುತ್ತದೆ. ಸೀತಾಫಲದಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ನಿಮ್ಮ ದೇಹದಲ್ಲಿ ಫ್ರೀ ರ‍್ಯಾಡಿಕಲ್ ಹಾನಿಯುಂಟಾಗುವುದನ್ನು ತಪ್ಪಿಸುತ್ತದೆ ಮತ್ತು ತ್ವಚೆಯನ್ನು ಸಹ ಫ್ರೀ ರ‍್ಯಾಡಿಕಲ್ ಹಾನಿಯಿಂದ ಪಾರು ಮಾಡುತ್ತದೆ.
ಗಾಯ ಮಾಗಲು ನೆರವು ನೀಡುತ್ತದೆ
ಸೀತಾಫಲದಲ್ಲಿರುವ ವಿಟಮಿನ್ ಸಿ ಅಂಶವು ನಿಮ್ಮ ದೇಹದಲ್ಲಿ ಉಂಟಾದ ಗಾಯಗಳನ್ನು ಮಾಗಿಸಲು ನೆರವು ನೀಡುತ್ತದೆ. ಇದು ತ್ವಚೆಯ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ ಮತ್ತು ತ್ವಚೆಗೆ ಆಕ್ಸೈಡ್‌ಗಳಿಂದ ಒತ್ತಡ ಬರುವುದನ್ನು ನಿವಾರಿಸುತ್ತದೆ. ಇದು ಕಪ್ಪು ಕಲೆಗಳನ್ನು, ಮಚ್ಚೆಗಳನ್ನು ನಿವಾರಿಸಿ ತ್ವಚೆಗೆ ಆಹ್ಲಾದಕತೆಯನ್ನು ನೀಡುತ್ತದೆ.
ತ್ವಚೆಗೆ ತೇವಾಂಶವನ್ನು ನೀಡುತ್ತದೆ
ಸೀತಾಫಲದಲ್ಲಿರುವ ವಿಟಮಿನ್ ಇ ಅಂಶವು ತ್ವಚೆಯಲ್ಲಿ ತೇವಾಂಶವನ್ನು ಇರಿಸಲು ನೆರವು ನೀಡುತ್ತದೆ. ಇದು ಅಷ್ಟೇನು ಹೊಳಪಿಲ್ಲದ ತ್ವಚೆಗೆ ಸಹ ತಾಜಾತನವನ್ನು ನೀಡಿ, ಸೌಂದರ್ಯದಿಂದ ಕಂಗೊಳಿಸುವಂತೆ ಮಾಡುತ್ತದೆ. ಇದು ತ್ವಚೆಗೆ ಎಣ್ಣೆಯಂಶವನ್ನು ನೀಡಿ, ಪರಿಸರದ ಪರಿಣಾಮಗಳಿಂದ ತ್ವಚೆ ಹಾಳಾಗುವುದನ್ನು ತಪ್ಪಿಸುತ್ತದೆ.
ತ್ವಚೆ ಹೊಳೆಯುವಂತೆ ಮಾಡುತ್ತದೆ
ಸೀತಾಫಲವನ್ನು ಪ್ರತಿನಿತ್ಯ ಸೇವಿಸಿದರೆ ಒಳ್ಳೆಯದು. ಇದು ಹೊಳಪಿನಿಂದ ಕೂಡಿದ ತ್ವಚೆಯನ್ನು ನೀಡುತ್ತದೆ. ಇದರಲ್ಲಿ ನಾರಿನಂಶವು ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇದು ಮಲ ವಿಸರ್ಜನೆಯನ್ನು ಉದ್ದೀಪಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗೆ ಇದು ದೇಹದಲ್ಲಿರುವ ಟಾಕ್ಸಿನ್‌ಗಳನ್ನು ನಿವಾರಣೆ ಮಾಡುತ್ತದೆ. ಈ ನಾರಿನಂಶವು ನಿಮ್ಮ ತ್ವಚೆಯಲ್ಲಿನ ಕೊಲ್ಲಾಜೆನ್ ಉತ್ಪತ್ತಿಯನ್ನು ಹಾಳು ಮಾಡುವ ಸಕ್ಕರೆ ಅಂಶಗಳನ್ನು ಸಹ ನಿವಾರಿಸುತ್ತದೆ.



Click it and Unblock the Notifications

