Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೊಡವೆಗಳ ಆರೈಕೆಗೆ, ಚಕ್ಕೆ-ಜೇನು ತುಪ್ಪದ ಪೇಸ್ಟ್
ಮೊಡವೆಗಳನ್ನು ಯಾರು ತಾನೇ ಬಯಸುತ್ತಾರೆ. ಇಂದಿನ ದಿನಮಾನದಲ್ಲಿ ಮೊಡವೆಗಳು ಯಾವ ವಯಸ್ಸಿನಲ್ಲಿ ಬೇಕಾದರು ಕಾಣಿಸಿಕೊಳ್ಳುತ್ತವೆ. ಹದಿಹರೆಯದವರಲ್ಲಿ ಹಾರ್ಮೊನ್‌ಗಳ ಪರಿಣಾಮದಿಂದ ಕಾಣಿಸಿಕೊಂಡರೆ, ಎಳೆ ಮಕ್ಕಳಲ್ಲಿ ಅಲರ್ಜಿಯ ಸಮಸ್ಯೆಯಿಂದ ಮೊಡವೆ ಕಾಣಿಸಿಕೊಳ್ಳುತ್ತದೆ. ಇನ್ನು ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ಸಹ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಕೀವು ತುಂಬಿದ ಮೊಡವೆಯು ನೋಡುವುದಕ್ಕೆ ಅಸಹ್ಯವಾಗಿ ಕಾಣಿಸುತ್ತದೆ. ಅದನ್ನು ಚಿವುಟಿ, ಅದರಿಂದ ಮುಕ್ತಿ ಪಡೆಯಲು ನೋಡುವುದು ಸಾಮಾನ್ಯವಾಗಿ ಬಹುತೇಕ ಜನ ಬಳಸುವ ಮಾರ್ಗವಾಗಿರುತ್ತದೆ.
ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿಯನ್ನು ಏಕೆ ತೆಗೆದುಕೊಳ್ಳಬೇಕು. ಮೊಡವೆಗಳನ್ನು ನಿವಾರಿಸಿಕೊಳ್ಳಲು ಸುಲಭವಾದ ಪರಿಹಾರವು ನಿಮ್ಮ ಮನೆಯ ಅಡುಗೆ ಮನೆಯಲ್ಲಿಯೇ ಇದೆ. ಕೇವಲ ಚಕ್ಕೆ ಮತ್ತು ಜೇನು ತುಪ್ಪವನ್ನು ಬಳಸಿಕೊಂಡು ನೀವು ಈ ಸಮಸ್ಯೆಯಿಂದ ಪಾರಾಗಬಹುದು. ಬನ್ನಿ ಈ ಕೀವು ತುಂಬಿದ ಮೊಡವೆಗಳಿಂದ ಪಾರಾಗಲು ಈ ಎರಡು ಪದಾರ್ಥಗಳು ಹೇಗೆ ನೆರವಾಗುತ್ತವೆ ಎಂಬುದನ್ನು ನೋಡೋಣ. ಮೊಡವೆಗಳನ್ನು ಯಾಕೆ ಚಿವುಟಿಕೊಳ್ಳಬಾರದು ಗೊತ್ತಾ?

ಚಕ್ಕೆ ಮತ್ತು ಜೇನು ತುಪ್ಪ ಹೇಗೆ ಕೆಲಸ ಮಾಡುತ್ತದೆ?
ಆಹಾರ ತಯಾರಿಸಲು ಬಳಸುವ ಒಂದು ಸಾಮಾನ್ಯ ಮಸಾಲೆ ಪದಾರ್ಥ ಚಕ್ಕೆ. ಇದರಲ್ಲಿ ಸಿನ್ನಮಿಕ್ ಅಮ್ಲವು ಇರುತ್ತದೆ, ಜೊತೆಗೆ ಸಿನ್ನಮಲ್ಡಿಹೈಡ್ ಎಂಬ ಅಂಶ ಹಾಗು ಒಂದು ತೈಲ ಪದಾರ್ಥವು ಸಹ ಇದರಲ್ಲಿ ಇರುತ್ತದೆ. ಇವುಗಳು ಸೂಕ್ಷ್ಮಾಣು ಜೀವಿ ನಿರೋಧಕ ಮತ್ತು ಉರಿಬಾವು ನಿರೋಧಕವಾಗಿ ಕೆಲಸ ಮಾಡುತ್ತವೆ. ಮೊಡವೆಗಳು ಇನ್‌ಫೆಕ್ಷನ್ ಕಾರಕವಾಗಿರುತ್ತವೆ, ಅಲ್ಲದೆ ತ್ವಚೆಯ ರಂಧ್ರಗಳಲ್ಲಿ ಸುಲಭವಾಗಿ ಇನ್‌ಫೆಕ್ಷನ್ ಉಂಟು ಮಾಡಿಬಿಡುತ್ತದೆ. ಚಕ್ಕೆಯಲ್ಲಿ ಬ್ಯಾಕ್ಟೀರಿಯಾ ನಿರೋಧಕ ಅಂಶಗಳು ಇರುತ್ತವೆ ಮತ್ತು ಜೇನು ತುಪ್ಪವು ಸ್ವಾಭಾವಿಕವಾಗಿ ಸ್ವಚ್ಛಗೊಳಿಸುವ ಅಂಶಗಳನ್ನು ಹೊಂದಿರುತ್ತದೆ. ಜೊತೆಗೆ ಇದು ತ್ವಚೆಗೆ ತೇವಾಂಶವನ್ನು ಸಹ ನೀಡುತ್ತದೆ ಮತ್ತು ತ್ವಚೆಯನ್ನು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸುತ್ತದೆ. ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!
ಪೇಸ್ಟ್ ತಯಾರಿಸುವ ಬಗೆ
1/4 ಸ್ಪೂನ್ ಚಕ್ಕೆ ಪುಡಿಯನ್ನು ತೆಗೆದುಕೊಂಡು, ಅದಕ್ಕೆ ಒಂದೆರಡು ಹನಿ ಜೇನು ತುಪ್ಪವನ್ನು ಬೆರೆಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. (3 ಜೇನು ತುಪ್ಪ : 1 ಚಕ್ಕೆ ಪುಡಿ ಅನುಪಾತವನ್ನು ಬಳಸಿ).
ಇದೀಗ ಈ ಪೇಸ್ಟ್ ಅನ್ನು ನಿಮ್ಮ ಮೊಡವೆ ಮೇಲೆ ಲೇಪಿಸಿ ಮತ್ತು ಅದನ್ನು ಒಣಗಲು ಬಿಡಿ. ರಾತ್ರಿ ಮಲಗುವ ಮುನ್ನ ಈ ಪೇಸ್ಟ್ ಅನ್ನು ಮೊಡವೆಗಳು ಇರುವ ಭಾಗಕ್ಕೆ ಲೇಪಿಸಿ, ಬೆಳಗ್ಗೆ ಎದ್ದ ಮೇಲೆ ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಪರಿಹಾರವನ್ನು ನೀವು ವಾರಕ್ಕೆ ಎರಡು - ಮೂರು ಬಾರಿ ಬಳಸಿ. ಮೊಡವೆಗಳಿಂದ ಮುಕ್ತರಾಗಿ.



Click it and Unblock the Notifications

