Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ಸೋಪು ಕೊಳ್ಳುವ ಮುನ್ನ, ಇಂತಹ ಸಂಗತಿಗಳು ನೆನಪಿರಲಿ
ಮಾರುಕಟ್ಟೆಯಲ್ಲಿ ನೂರಾರು ವಿಧದ ಸೋಪುಗಳು ಇಂದು ಲಭ್ಯವಿವೆ. ಆಂಟಿ ಬ್ಯಾಕ್ಟೀರಿಯಲ್ ನಿಂದ ಹಿಡಿದು ಮೊಡವೆ ನಿವಾರಕ, ತೇವಕಾರಕ, ಗ್ಲಿಸರಿನ್ ಯುಕ್ತ, ಬೇವಿನ ಎಣ್ಣೆ, ಚಂದನ ಇಂತಹ ಹತ್ತು ಹಲವು ಅಂಶಗಳನ್ನೊಳಗೊಂಡ ಸೋಪುಗಳು ಲಭ್ಯವಿವೆ. ಕೆಲವೊಮ್ಮೆ ಸುಂದರ ಹೊರಕವಚವನ್ನು ನೋಡಿ ನಮ್ಮ ಚರ್ಮದ ವಿಧಕ್ಕೆ ಸರಿಹೊಂದದ ಸೋಪನ್ನು ಖರೀದಿಸಿ ಇದರ ಬಳಕೆಯಿಂದ ಚರ್ಮಕ್ಕೆ ಘಾಸಿ ಮಾಡಿಕೊಂಡಿರುತ್ತೇವೆ. ತ್ವಚೆಗೆ ಸೋಪ್ ಬಳಸುವ ಮುನ್ನ ಸ್ವಲ್ಪ ಇತ್ತ ಗಮನಿಸಿ!
ಏಕೆಂದರೆ ಇದರ ಆಮ್ಲೀಯತೆ ಅಥವಾ ಕ್ಷಾರೀಯತೆ ನಮ್ಮ ಚರ್ಮದ ಪಿಎಚ್ ಮಟ್ಟವನ್ನು ಏರುಪೇರುಗೊಳಿಸಿ ಚರ್ಮದ ಹಲವು ತೊಂದರೆಗಳಿಗೆ ಕಾರಣವಾಗಬಹುದು. ಈ ಬಗ್ಗೆ ಚರ್ಮವೈದ್ಯರು ಏನು ಸಲಹೆ ನೀಡುತ್ತಾರೆಂದರೆ ಮುಖಕ್ಕೆ ಅಗತ್ಯಕ್ಕಿಂತಲೂ ಹೆಚ್ಚು ಸೋಪು ಉಪಯೋಗಿಸಿದರೆ ಇದು ಚರ್ಮವನ್ನು ಅತಿಯಾಗಿ ಒಣಗಿಸಿ ಪಕಳೆ ಏಳುವಂತೆ ಮಾಡುತ್ತದೆ.
ಆದ್ದರಿಂದ ಯಾವುದೇ ಸೋಪನ್ನು ಕೊಳ್ಳುವ ಮುನ್ನ ನಿಮ್ಮ ಚರ್ಮದ ಬಗೆ ಯಾವುದು ಎಂದು ಕಂಡುಕೊಂಡು ಅದಕ್ಕೆ ಹೊಂದುವ ಸೋಪನ್ನು ಆರಿಸಿಕೊಳ್ಳುವುದು ಜಾಣತನದ ಕ್ರಮ. ಜಾಣರಾಗಬೇಕಿದ್ದರೆ ಕೆಳಗಿನ ಸ್ಲೈಡ್ ಶೋದಲ್ಲಿ ನೀಡಿರುವ ಮಾಹಿತಿಯನ್ನು ಅನುಸರಿಸಿ...

ಆಂಟಿ ಬ್ಯಾಕ್ಟೀರಿಯಲ್ ಸೋಪುಗಳು
ಹೆಸರೇ ಸೂಚಿಸುವಂತೆ ಇದರ ನೊರೆ ಬ್ಯಾಕ್ಟೀರಿಯಾ ನಿವಾರಕವಾಗಿದೆ. ಇದಕ್ಕೆ ಇದರಲ್ಲಿರುವ ಟ್ರೈಕ್ಲೋಸಾನ್ ಮತ್ತು ಟ್ರೈಕ್ಲೋಕಾರ್ಬನ್ ಎಂಬ ರಾಸಾಯನಿಕಗಳು ಕಾರಣ. ಇವು ದ್ರವರೂಪದಲ್ಲಿಯೂ ಘನರೂಪದಲ್ಲಿಯೂ ಲಭ್ಯವಿವೆ. ಸಾಮಾನ್ಯವಾಗಿ ಇವುಗಳು ಹೆಚ್ಚು ಕ್ಷಾರೀಯವಗಿದ್ದು 9 ರಿಂದ 10 ರ ಹಂತದಲ್ಲಿರುತ್ತದೆ. ಆದ್ದರಿಂದ ಈ ಸೋಪುಗಳ ಹೆಚ್ಚಿನ ಬಳಕೆಯಿಂದ ಚರ್ಮಕ್ಕೆ ಉರಿಯಾಗಬಹುದು. ಅಲ್ಲದೇ ಒಣಚರ್ಮ ಮತ್ತು ಚರ್ಮ ಕೆಂಪಗಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಇದು ಎಣ್ಣೆ ಚರ್ಮದವರಿಗೆ ಹೆಚ್ಚು ಸೂಕ್ತವಾಗಿದೆ. ಇವರು ಮುಖವನ್ನು ತೊಳೆಯಲು ಬಳಸಬಹುದು. ಈ ಸೋಪಿನಲ್ಲಿ ಲ್ಯಾವೆಂಡರ್, ಕ್ಯಾಮೋಮೈಲ್ ಮತ್ತು ಥೈಮ್ ಎಂಬ ಅಂಶಗಳಿದ್ದರೆ ಇನ್ನೂ ಉತ್ತಮವಾಗಿದೆ. ಈ ಸೋಪು ಅತಿ ಹೆಚ್ಚು ಎಣ್ಣೆ ಪಸೆ ಇರುವ ಚರ್ಮದವರಿಗೆ ಮಾತ್ರ ಸೂಕ್ತವಾಗಿದ್ದು ಇತರರು ಇದನ್ನು ಬಳಸದಿರುವುದೇ ಲೇಸು.

ಮೊಡವೆ ನಿವಾರಕ ಸೋಪುಗಳು
ಮೊಡವೆಗಳಿರುವ ಮುಖವನ್ನು ತೊಳೆಯಲು ಮಾತ್ರ ದಿನಕ್ಕೆರಡು ಬಾರಿ ಈ ಸೋಪನ್ನು ಉಪಯೋಗಿಸಬೇಕು. ಮೊಡವೆಗಳು ಬೆನ್ನು ಮತ್ತು ಎದೆಯ ಭಾಗದಲ್ಲಿದ್ದರೆ ಅಲ್ಲಿಯೂ ಉಪಯೋಗಿಸಬಹುದು. ಆದರೆ ಇದರ ಹೆಚ್ಚಿನ ಬಳಕೆಯಿಂದ ಚರ್ಮ ಸಿಪ್ಪೆಯಂತೆ ಏಳುವ ಸಾಧ್ಯತೆ ಇದ್ದು ಸಿಪ್ಪೆ ಎದ್ದಲ್ಲಿ ಕಲೆಯಾಗುವ ಅಪಾಯವಿದೆ. ಈ ಸೋಪುಗಳು ಸೂಕ್ಷ್ಮಸಂವೇದಿ ಚರ್ಮವನ್ನು ಹೊಂದಿರುವವರಿಗೆ ಹೆಚ್ಚು ಸೂಕ್ತವಾಗಿದೆ. ಈ ಚರ್ಮದವರಲ್ಲಿ ಮೊಡವೆ ಮತ್ತು ಸೋಂಕುಗಳು ಸುಲಭವಾಗಿ ಹರಡುವುದರಿಂದ ಮೊಡವೆ ನಿವಾರಕ ಸೋಪುಗಳು ಇವರಿಗೆ ಮಾತ್ರವೇ ಹೆಚ್ಚು ಸೂಕ್ತವಾಗಿದೆ. ಈ ಸೋಪು ಕೊಳ್ಳುವ ಮೊದಲು ಇದರಲ್ಲಿ ವಿಟಮಿನ್ ಇ, ಜೋಜೋಬಾ ಎಣ್ಣೆ (jojoba oil) ಇದೆಯೇ ನೋಡಿಕೊಳ್ಳಿ. ಈ ಅಂಶಗಳಿದ್ದರೆ ಎಕ್ಸಿಮಾ ಮತ್ತು ಸೋರಿಯಾಸಿಸ್ (psoriasis) ಮೊದಲಾದ ಚರ್ಮವ್ಯಾಧಿಗಳಿದ್ದವರೂ ಈ ಸೋಪನ್ನು ಬಾಧಿತ ಚರ್ಮದ ಭಾಗವನ್ನು ತೊಳೆಯಲು ಉಪಯೋಗಿಸಬಹುದು.

ಗಿಡಮೂಲಿಕೆಗಳ ಸೋಪು
ಈ ಸೋಪುಗಳಲ್ಲಿ ಸೌಮ್ಯವಾದ ಗಿಡಮೂಲಿಕೆಗಳಾದ ಕ್ಯಾಮೋಮೈಲ್, ಲ್ಯಾವೆಂಡರ್, ಪುದಿನಾ, ಸ್ಪಿಯರ್ ಮಿಂಟ್, ಓಟ್ ಮೀಲ್ ಅಥವಾ ಬೆಣ್ಣೆಹಣ್ಣುಗಳಿರುತ್ತವೆ. ಕೆಲವು ಸೋಪುಗಳ ಮುಖ್ಯ ಪರಿಕರವಾಗಿ ಆಲಿವ್ ಎಣ್ಣೆ ಅಥವಾ ಶಿಯಾ ಬೆಣ್ಣೆಯನ್ನೂ ಬಳಸಲಾಗುತ್ತದೆ. ಚರ್ಮದ ಜೀವಕೋಶಗಳನ್ನು ಮರುನಿರ್ಮಿಸಲು ಆಲಿವ್ ಎಣ್ಣೆ ಉತ್ತಮವಾಗಿದ್ದು ಕಾಂತಿ ಹೆಚ್ಚಿಸಲು ಸಹಾ ನೆರವಾಗುತ್ತದೆ. ಅಲ್ಲದೇ ಆಲಿವ್ ಎಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ನುಗಳು ಕ್ಯಾನ್ಸರ್ ಕಾರಕ ಕಣಗಳನ್ನು ದೂರ ಇರಿಸುತ್ತವೆ. ಈ ಸೋಪುಗಳು ಒಣಚರ್ಮದವರಿಗೆ ಹೆಚ್ಚು ಸೂಕ್ತವಾಗಿದೆ. ಇದರಲ್ಲಿ ಲೋಳೆಸರ, ಕೋಕೋ ಬೆಣ್ಣೆ ಅಥವಾ ಬೆಣ್ಣೆಹಣ್ಣಿನ ಅಂಶಗಳಿದ್ದರೆ ಇನ್ನೂ ಉತ್ತಮವಾಗಿದೆ.

ತೇವಕಾರಕ ಸೋಪು
ಈ ಸೋಪುಗಳಲ್ಲಿ ಆಲಿವ್ ಎಣ್ಣೆ, ಶಿಯಾ ಬೆಣ್ಣೆ, ಪ್ಯಾರಾಫಿನ್, ಗ್ಲಿಸರಿನ್ ಮೊದಲಾದ ಅಂಶಗಳಿರುತ್ತವೆ. ಇವೆಲ್ಲವೂ ಚರ್ಮವನ್ನು ಮೃದುವಾಗಿಸಲು ಸಹಕರಿಸುತ್ತವೆ. ಆಲಿವ್ ಎಣ್ಣೆ ವೃದ್ದಾಪ್ಯವನ್ನು ದೂರಮಾಡುವ ಗುಣ ಹೊಂದಿದ್ದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇನ್ನುಳಿದಂತೆ ಶಿಯಾ ಬೆಣ್ಣೆಯಲ್ಲಿರುವ ವಿಟಮಿನ್ನುಗಳು ಉತ್ತಮ ತೇವಕಾರಕವಾಗಿವೆ. ಈ ಸೋಪು ಸಾಮಾನ್ಯವಾಗಿ ಒಣ ಮತ್ತು ಸಾಮಾನ್ಯ ಚರ್ಮದವರಿಗೆ ಹೆಚ್ಚು ಸೂಕ್ತವಾಗಿದೆ.

ಅರೋಮಾಥೆರಪಿ ಸೋಪು
ಈ ಸೋಪುಗಳಲ್ಲಿ ಕೆಲವು ಅವಶ್ಯಕ ತೈಲಗಳಿದ್ದು ಚರ್ಮಕ್ಕೆ ಆರೋಗ್ಯ ಮತ್ತು ಸೆಳೆತ ನೀಡುತ್ತವೆ. ಈ ಸೋಪುಗಳಲ್ಲಿ ಹೋಹೋಬಾ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಕ್ಯಾಮೋಮೈಲ್ ಹೂವಿನಿಂದ ತೆಗೆಯಲಾದ ಅಂಶಗಳು, ಮಲ್ಲಿಗೆ ಮತ್ತು ಯಾಂಗ್ ಯಾಂಗ್ (ylang-ylang) ಮೊದಲಾದ ಅಂಶಗಳಿರುತ್ತವೆ. ಇವೆಲ್ಲವೂ ಚರ್ಮದ ಆರೈಕೆಗೆ ಸಹಕರಿಸುತ್ತವೆ. ಇದು ಒಣ ಮತ್ತು ಸಾಮಾನ್ಯ ಚರ್ಮದವರಿಗೆ ಹೆಚ್ಚು ಸೂಕ್ತವಾಗಿದೆ.ಆದರೆ ಯಾವುದೇ ಹೊಸ ಸೋಪನ್ನು ಮೊದಲ ಬಾರಿ ಬಳಸುವಾಗ ಮೊಣಕೈ ಅಥವಾ ಮೊಣಕಾಲಿನ ಮೇಲೆ ಹಚ್ಚಿ ಅಲರ್ಜಿಕಾರಕವೇ ಅಲ್ಲವೇ ಎಂದು ಪರೀಕ್ಷಿಸಿಕೊಂಡ ಬಳಿಕವೇ ಮುಂದುವರೆಯುವುದು ಉತ್ತಮ.

ಗ್ಲಿಸರಿನ್ ಆಧಾರಿತ ಸೋಪು
ಬಿಸಿಲಿಗೆ ಕಪ್ಪಾದ ಚರ್ಮವನ್ನು ಪುನಃ ಸಹಜವರ್ಣಕ್ಕೆ ತರಲು ಗ್ಲಿಸರಿನ್ ಉತ್ತಮವಾಗಿದೆ. ಇವು ನೈಸರ್ಗಿಕ ತೇವಕಾರಕವೂ ಆಗಿದ್ದು ಸಾಮಾನ್ಯ ಅಥವಾ ವಿವಿಧ ವಿಧದ ಸಂಯೋಜನೆಯ ಚರ್ಮದವರಿಗೆ ಹೆಚ್ಚು ಸೂಕ್ತವಾಗಿದೆ. ಅಲ್ಲದೇ ಒಣ ಮತ್ತು ಸೂಕ್ಷ್ಮ ಸಂವೇದಿಯಾಗಿರುವ ಚರ್ಮದವರಿಗೂ ಉತ್ತಮ ಆಯ್ಕೆಯಾಗಿದೆ.



Click it and Unblock the Notifications











