Latest Updates
-
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ
ಮನಸ್ಸು ಮಾಡಿದರೆ ವಯಸ್ಸಿಗೆಯೇ ಸವಾಲು ಹಾಕಬಹುದು!
ಕಾಲವನ್ನು ತಡೆಯೋರು ಯಾರೂ ಇಲ್ಲ, ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ...." ಈ ಜನಪ್ರಿಯ ಸಿನಿಮಾ ಗೀತೆಯನ್ನು ನಾವೆಲ್ಲರೂ ಕೇಳಿದ್ದೇವೆ. ಇದ೦ತೂ ಖ೦ಡಿತವಾಗಿಯೂ ಸತ್ಯ. ಕಾಲಚಕ್ರವು ಒ೦ದು ಕ್ಷಣವೂ ನಿಲ್ಲದೇ ಮು೦ದೆ ಸಾಗುತ್ತಲೇ ಇರುತ್ತದೆ. ಈ ಅಖ೦ಡವಾದ ಕಾಲಚಕ್ರದ ಭಾಗಗಳೇ ಆಗಿರುವ ನಮಗೂ ಕೂಡ ದಿನಗಳೆದ೦ತೆಲ್ಲಾ ವಯಸ್ಸು ಹೆಚ್ಚುತ್ತಲೇ ಸಾಗುತ್ತದೆ, ಅ೦ತೆಯೇ ನಮ್ಮ ದೇಹದ ಸೌಂದರ್ಯದಲ್ಲೂ ಏರುಪೇರು ಆಗುವುದರ ಜೊತೆಗೆ ತಾರುಣ್ಯ ಕೂಡ ಕ್ಷೀಣಿಸುತ್ತಾ ಸಾಗುತ್ತದೆ. ಈ ಪ್ರಕ್ರಿಯೆಯು ಜೀವನದ ಅವಿಭಾಜ್ಯ ಅ೦ಗವೂ, ಅನಿವಾರ್ಯವಾದುದೂ ಆಗಿದೆ.
ಹೌದು, ವಯಸ್ಸಾವಿಕೆ ಎಂಬುದು ಸ್ವಾಭಾವಿಕ ಪ್ರಕ್ರಿಯೆಯಾಗಿದ್ದು ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಆದರೆ ಈ ವಯಸ್ಸಾಗುವಿಕೆ ಕಾಲಕ್ಕೆ ತಕ್ಕಂತೆ ನಡೆಯದೇ ಅಸ್ವಾಭಾವಿಕವಾಗಿದ್ದರೆ ನೀವು ಕಳವಳ ಹೊಂದಲೇಬೇಕು. ನಿಮ್ಮ ದೈನಂದಿನ ಚಟುವಟಿಕೆಗಳು ವಯಸ್ಸಿನ ಮೇಲೆ ಪರಿಣಾಮ ಬೀರಿ ನಿಮ್ಮಲ್ಲಿ ಈ ನ್ಯೂನತೆಯನ್ನು ಉಂಟು ಮಾಡುತ್ತಿದೆ ಎಂಬುದನ್ನು ನೀವು ಕಂಡುಕೊಳ್ಳಬೇಕು. ಎಚ್ಚರ: ಇಂತಹ ಮೇಕಪ್ ನಿಮ್ಮನ್ನು ಮುಪ್ಪಿಗೆ ತಳ್ಳಬಹುದು!
ನಿಯಂತ್ರಣವಿಲ್ಲದ ಜೀವನ ಶೈಲಿ, ರಾಸಾಯನಿಕಗಳ ಬಳಕೆ ಮತ್ತು ತಪ್ಪು ಆಹಾರ ಪದ್ಧತಿ ಅಕಾಲಿಕ ವಯಸ್ಸಾಗುವಿಕೆಗೆ ಕಾರಣ ಎಂದೆನಿಸಿದೆ. ನಿಮ್ಮ ಜೀವನ ಪದ್ಧತಿ ಅಸಮತೋಲನದಿಂದ ಕೂಡಿದ್ದರೆ ಸೇವಿಸುವ ಆಹಾರದಲ್ಲಿ ದೋಷಗಳಿದ್ದಲ್ಲಿ ವಯಸ್ಸಾಗುವಿಕೆ ವೇಗತೆಯನ್ನು ಪಡೆದುಕೊಳ್ಳುತ್ತದೆ. ಆರೋಗ್ಯಯುತ ಆಹಾರ ಪದ್ಧತಿಯ ಅನುಸರಣೆ ಮತ್ತು ಸೂಕ್ತವಾದ ತ್ವಚೆಯ ಕಾಳಜಿಯನ್ನು ಮಾಡುವುದರಿಂದ ಮುಖದ ಸುಕ್ಕುಗಟ್ಟುವಿಕೆ ಜೋತುಬೀಳುವಿಕೆ ಕಣ್ಣಿನ ಕಪ್ಪು ವರ್ತುಲ ಮೊದಲಾದ ಅಕಾಲಿಕ ವಯಸ್ಸಾಗುವಿಕೆ ಲಕ್ಷಣಗಳನ್ನು ತಡೆಗಟ್ಟಬಹುದಾಗಿದೆ.
ನಿಮ್ಮ ಆಹಾರ ಮತ್ತು ನೀವು ಮಾಡುವ ನಿದ್ದೆ ನಿಮ್ಮ ತ್ವಚೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುವ ಆಹಾರಗಳು ಹಾಗೂ ಎಂಟು ಗಂಟೆಗಳ ನಿದ್ದೆ ಆರೋಗ್ಯಯುತ ತ್ವಚೆ ಮತ್ತು ದೇಹಕ್ಕೆ ಅತ್ಯಗತ್ಯವಾದುದು. ನಮಗೆ ಗೊತ್ತಿಲ್ಲದೆಯೇ ಎಷ್ಟೋ ತಪ್ಪುಗಳನ್ನು ನಾವು ಮಾಡುತ್ತಿದ್ದು ಇದರಿಂದ ತ್ವಚೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ತಂದುಕೊಳ್ಳುತ್ತಿದ್ದೇವೆ. ಇಂದಿನ ಲೇಖನದಲ್ಲಿ ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗಿರುವ ಅನಾರೋಗ್ಯಕಾರಿ ಚಟುವಟಿಕೆಗಳನ್ನು ನಾವು ನಿಮಗೆ ತಿಳಿಸುತ್ತಿದ್ದು ಅದು ಏನು ಎಂಬುದನ್ನು ಅರಿತುಕೊಂಡು ಆ ತಪ್ಪುಗಳನ್ನು ನೀವು ಮಾಡುತ್ತಿದ್ದಲ್ಲಿ ಅದನ್ನು ನಿಲ್ಲಿಸಿ.

ಸೂರ್ಯನಿಂದ ರಕ್ಷಣೆ ಪಡೆಯುವಲ್ಲಿ ಕೊರತೆ
ಯುವಿ ಕಿರಣಗಳು ತ್ವಚೆಯನ್ನು ಹಾನಿಗೊಳಪಡಿಸುತ್ತವೆ. ಒಣ ತ್ವಚೆ, ವರ್ತುಲಗಳು ಮತ್ತು ಮುಖದಲ್ಲಿ ಸುಕ್ಕುಗಳನ್ನು ಇವುಗಳು ಉಂಟುಮಾಡುತ್ತವೆ. ಆದ್ದರಿಂದ ನೀವು ಮನೆಯಿಂದ ಹೊರಗೆ ಕಾಲಿಡುವಾಗ ಹೆಚ್ಚು ಎಸ್ಪಿಎಫ್ ಇರುವ ಸನ್ ಸ್ಕ್ರೀನ್ ಬಳಕೆಯನ್ನು ಮಾಡಿ.

ಆಲಸ್ಯದ ಜೀವನ ಪದ್ಧತಿ
ಅತಿ ವೇಗದಲ್ಲಿ ಮುಪ್ಪು ನಿಮ್ಮನ್ನು ಆವರಿಸಲು ಜಡ ಜೀವನ ಪದ್ಧತಿ ಕಾರಣವಾಗಿದೆ. ಆದ್ದರಿಂದ ನಿಯಮಿತ ವ್ಯಾಯಾಮವನ್ನು ಅಳವಡಿಸಿಕೊಳ್ಳಿ. ಸ್ನಾಯುಗಳನ್ನು ಸುದೃಢಗೊಳಿಸಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ ಅಂತೆಯೇ ಯವ್ವೌನವನ್ನು ಸುದೀರ್ಘವಾಗಿಸುತ್ತದೆ.

ಯೋಗ ಮತ್ತು ಧ್ಯಾನವನ್ನು ತ್ಯಜಿಸುವುದು
ನಿಮ್ಮ ಮನಸ್ಸನ್ನು ಶಾಂತಗೊಳಿಸಲು ದೇಹವನ್ನು ಸ್ವಸ್ಥವಾಗಿಡಲು ಮತ್ತು ಒತ್ತಡವನ್ನು ನಿವಾರಿಸಿಕೊಳ್ಳಲು ಯೋಗ ಹಾಗೂ ಧ್ಯಾನ ಸಹಕಾರಿಯಾಗಿದೆ. ನಿಯಮಿತವಾಗಿ ಧ್ಯಾನ ಮತ್ತು ಯೋಗವನ್ನು ಅಭ್ಯಸಿಸುವುದರಿಂದ ತ್ವಚೆ ತಾಜಾತನದಿಂದ ಕೂಡಿ ನಿಮ್ಮಲ್ಲಿ ಯುವತ್ವವನ್ನು ಕಾಪಿಡುತ್ತದೆ.

ಧೂಮಪಾನ
ಧೂಮಪಾನವು ತೀವ್ರಗತಿಯಲ್ಲಿ ಮುಪ್ಪು ನಿಮ್ಮನ್ನು ಆವರಿಸುವಂತೆ ಮಾಡುತ್ತದೆ ಹಾಗೂ ತ್ವಚೆ ಒಣಗಲು ಕಾರಣವಾಗುತ್ತದೆ. ವಿಟಮಿನ್ ಸಿ ಕೊರತೆಯುಂಟಾಗಿ ವರ್ತುಲಗಳನ್ನು ಉಂಟುಮಾಡುತ್ತದೆ. ಧೂಮಪಾನವು ಸುಕ್ಕುಗಳು ಮತ್ತು ರೇಖೆಗಳನ್ನು ಮುಖದಲ್ಲಿ ಉಂಟುಮಾಡುತ್ತದೆ.

ಮದ್ಯಪಾನ
ಅಕಾಲಿಕ ಮುಪ್ಪು ಆವರಿಸಿಕೊಳ್ಳುವಲ್ಲಿ ಮದ್ಯಪಾನದ ಪಾತ್ರ ಹಿರಿದು. ಮದ್ಯಪಾನ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ ಇದರಿಂದ ನಿಮ್ಮ ತ್ವಚೆ ಆರೋಗ್ಯಕರವಾಗಿದ್ದು ಹೊಳೆಯುತ್ತದೆ.

ನಿದ್ರಾಹೀನತೆ
ಪ್ರತಿಯೋರ್ವನಿಗೂ ಎಂಟುಗಂಟೆಗಳ ನಿದ್ದೆ ಅತ್ಯಗತ್ಯವಾದುದು. ವಯಸ್ಸಾಗುವಿಕೆಯನ್ನು ನಿಯಂತ್ರಿಸಲು ನಿದ್ರೆ ಅತೀ ಅಗತ್ಯ. ನೀವು ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡುತ್ತಿಲ್ಲ ಎಂದಾದಲ್ಲಿ ಕಪ್ಪು ವರ್ತುಲಗಳು, ಸುಸ್ತಾದ ಕಣ್ಣುಗಳು ಮತ್ತು ಊದಿದ ಕಣ್ಣುಗಳನ್ನು ನೀವು ಪಡೆದುಕೊಳ್ಳುತ್ತೀರಿ.

ಸಾಕಷ್ಟು ನೀರು ಸೇವಿಸದಿರುವುದು
ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಾಕಷ್ಟು ನೀರು ಕುಡಿಯುವುದು ಅಗತ್ಯ. ನೀರು ತ್ವಚೆಯನ್ನು ಹೈಡ್ರೇಟ್ ಮಾಡಿ ತಾಜಾಗೊಳಿಸಿ ಹೊಳೆಯುವಂತೆ ಮಾಡುತ್ತದೆ. ಹೈಡ್ರೇಟ್ ಆಗಿರುವ ತ್ವಚೆ ಸುಕ್ಕುಗಳಿಗೆ ಒಳಗಾಗುವುದಿಲ್ಲ.



Click it and Unblock the Notifications











