ಚರ್ಮಕ್ಕೂ ಆಹಾರ ಬೇಕೇ? ಈ ಲೇಖನವನ್ನು ಓದಿ...

By Suma

ನೀವು ಆಹಾರವನ್ನು ಏಕೆ ಸೇವಿಸುತ್ತೀರಿ? ಗಾಬರಿ ಪಡಬೇಡಿ, ದೇಹದ ಸಾಮರ್ಥವನ್ನು ಸುಸ್ಥಿತಿಯಲ್ಲಿಡಲು ಮತ್ತು ಸದಾ ಆರೋಗ್ಯವಾಗಿರಲು ಆರೋಗ್ಯಕರ ಆಹಾರವನ್ನು ನಾವು ಸೇವಿಸುತ್ತೇವೆ. ಆದರೆ ನಮ್ಮ ಚರ್ಮದ ಆರೋಗ್ಯದ ಬಗ್ಗೆ ಈ ರೀತಿ ಯೋಚಿಸುವುದಿಲ್ಲ. ಆದರೆ ಚತುರರು ಮಾತ್ರ ದೇಹದ ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯದ ಕಡೆಗೂ ಗಮನಹರಿಸುತ್ತಾರೆ. ಈ ಲೇಖನದಲ್ಲಿ ಚರ್ಮದ ಆರೋಗ್ಯಕ್ಕೆ ಬೇಕಾಗುವ ಸೂಕ್ತ ಆಹಾರದ ವಿಧಾನವನ್ನು ನಿಮಗಾಗಿ ನೀಡಲಾಗಿದೆ. ಈ ಆಹಾರಗಳಿಂದ ನಿಮ್ಮ ಚರ್ಮದ ಆರೋಗ್ಯವು ಇಮ್ಮಡಿಗೊಂಡು ನಾಜೂಕಾಗಲು ನೆರವಾಗುತ್ತದೆ.

ಹೌದು, ಚರ್ಮಕ್ಕೆ ಅಗತ್ಯವಿರುವ ಅವಶ್ಯ ನೈಸರ್ಗಿಕ ಸತ್ವಗಳುಳ್ಳ ಆಹಾರ ಪದಾರ್ಥಗಳ ವಿವರವನ್ನು ನಿಮಗಾಗಿ ನೀಡಲಾಗಿದ್ದು, ಇತರೆ ರಾಸಾಯನಿಕಗಳ ಬಳಕೆಯನ್ನು ನಿಯಂತ್ರಿಸಿ, ಚರ್ಮಕ್ಕೆ ಉಪಯೋಗವಾಗುವ ಹೆಚ್ಚು ಪೌಷ್ಠಿಕಾಂಶ ಸತ್ವಗಳುಳ್ಳ ಆಹಾರ ವಿಧಾನಗಳನ್ನು ಒಮ್ಮೆ ಅನುಸರಿಸಿ ನೋಡಿ. ಇದರಿಂದ ನಿಮ್ಮ ಚರ್ಮದ ಕಾಂತಿಯು ಹೆಚ್ಚಾಗಿ ಸದಾ ಆರೋಗ್ಯವಾಗಿರುವಂತೆ ಕಾಪಾಡುತ್ತದೆ...

ಪಾಲಾಕ್ ಸೊಪ್ಪು

ಪಾಲಾಕ್ ಸೊಪ್ಪು

ಪಾಲಾಕ್ ಕೂಡ ಹೊಳೆಯುವ ತ್ವಚೆಯನ್ನು ದಯಪಾಲಿಸುವಲ್ಲಿ ಎತ್ತಿದ ಕೈಯಾಗಿದೆ. ಉತ್ಕರ್ಷಣ ನಿರೋಧಿ ಅಂಶಗಳನ್ನು ಹೇರಳವಾಗಿ ಒಳಗೊಂಡಿರುವ ಪಾಲಾಕ್ ಸುಕ್ಕುಗಳನ್ನು ನೀಗಿಸುವುದರ ಜೊತೆಗೆ ತ್ವಚೆಯನ್ನು ಬಲಿಷ್ಟಗೊಳಿಸುತ್ತದೆ. ಉರಿಯೂತ ಗುಣಗಳನ್ನು ಹೊಂದಿರುವ ಪಾಲಾಕ್ ತ್ವಚೆಯ ವಿಷಕಾರಿ ಅಂಶಗಳನ್ನು ಹೋಗಲಾಡಿಸಿ ಸ್ವಚ್ಛವಾದ ಹೊಳೆಯುವ ಚರ್ಮವನ್ನು ನೀಡುತ್ತದೆ. ಪಾಲಕ್ ಸೊಪ್ಪು: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ಟೊಮೇಟೊ

ಟೊಮೇಟೊ

ಟೊಮೇಟೋ ಅಥವಾ ಇದನ್ನು ಒಳಗೊಂಡಿರುವ ಆಹಾರಗಳು ಮೊಡವೆ ಸಮಸ್ಯೆಗಳನ್ನು ನಿವಾರಿಸುತ್ತವೆ. ಇದು ಲೈಕೊಪೇನ್ ಎಂಬ ಅಂಶವನ್ನು ಒಳಗೊಂಡಿದ್ದು ಸನ್ ಸ್ಕ್ರೀನ್‎ನಂತೆ ಕೆಲಸ ಮಾಡುತ್ತದೆ ಕೂಡ. ಸೂರ್ಯನ ಬೆಳಕಿಗೆ ಹೆಚ್ಚು ಒಡ್ಡಿಕೊಂಡಾಗ ಉತ್ಪನ್ನವಾಗುವ ಮುಕ್ತ ರಾಡಿಕಲ್‎ಗಳೊಂದಿಗೆ ಹೋರಾಡುವ ಗುಣವನ್ನು ಇದು ಹೊಂದಿದೆ. ನಿಮ್ಮ ತ್ವಚೆಯನ್ನು ಫ್ರೆಶ್ ಮತ್ತು ಹೊಳೆಯಿಸುವ ಟೊಮೇಟೊ ತನ್ನ ತಿರುಳಿನ ಮೂಲಕ ರಂಧ್ರಗಳನ್ನು ಬಿಗಿಗೊಳಿಸಿ ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ತ್ವಚೆಯ ಅಂದಕ್ಕೆ ಟೊಮೇಟೊ ಹಣ್ಣಿನ ಚಿಕಿತ್ಸೆ

ಸಮುದ್ರ ಆಹಾರಗಳು

ಸಮುದ್ರ ಆಹಾರಗಳು

ಸಮುದ್ರ ಆಹಾರಗಳು ಅದರಲ್ಲೂ ಮೀನು ಮುಖದ ಸುಕ್ಕನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೀನಿನಲ್ಲಿರುವ ಒಮೇಗಾ 3 ಫ್ಯಾಟಿ ಆಸಿಡ್ಸ್ ಸುಕ್ಕುಗಟ್ಟುವಿಕೆ ಪ್ರಕ್ರಿಯೆಯನ್ನು ತಡೆಯುತ್ತದೆ. ಮುಖದ ಸ್ನಾಯುಗಳನ್ನು ಮತ್ತು ಚರ್ಮವನ್ನು ಬಿಗಿಗೊಳಿಸುವ ಅಸೆಟೈಕೊಲಿನ್ ನಿಮ್ಮ ಮುಖವನ್ನು ಸುಂದರಗೊಳಿಸುತ್ತದೆ. ಮೊಡವೆಗಳಿಂದ ಉಂಟಾಗುವ ಒತ್ತಡವನ್ನು ನಿವಾರಿಸುವಲ್ಲಿ ಒಮೇಗಾ 3 ಪಾತ್ರ ಹಿರಿದಾಗಿದೆ.

ವಾಲ್‎ನಟ್ಸ್

ವಾಲ್‎ನಟ್ಸ್

ಆರೋಗ್ಯಕರ ಹೃದಯ, ಮೃದು ತ್ವಚೆ, ಆರೋಗ್ಯಪೂರ್ಣ ಕೂದಲು, ಬಲವಾದ ಮೂಳೆಗಳನ್ನು ಪಡೆದುಕೊಳ್ಳುವಲ್ಲಿ ವಾಲ್‎ನಟ್ಸ್ ಸಹಕಾರಿಯಾಗಿದೆ. ಒಮೇಗಾ 3 ಏಸಿಡ್ ಅನ್ನು ಇದು ಒಳಗೊಂಡಿದ್ದು, ವಿಟಮಿನ್ ಇ ಯನ್ನು ಹೊಂದಿದೆ. ತ್ವಚೆಯನ್ನು ಹೊಳೆಯುವಂತೆ ಮಾಡುವಲ್ಲಿ ವಾಲ್‎ನಟ್ಸ್ ಸಹಕಾರಿಯಾಗಿದೆ.

ಬೆರ್ರಿ

ಬೆರ್ರಿ

ಸ್ಟ್ರಾಬೆರ್ರಿ, ಬ್ಲ್ಯೂಬೆರ್ರಿ, ಚೆರ್ರಿ ಉತ್ಕರ್ಷಣ ವಿರೋಧಿ ಅಂಶಗಳನ್ನು ಒಳಗೊಂಡಿದ್ದು ತ್ವಚೆಯ ಹೊಳಪುಹೀನತೆಯ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಸಣ್ಣ ವಯಸ್ಸಿನಲ್ಲಿಯೇ ತ್ವಚೆ ಕಳೆಗುಂದೂದುವುದು ಮೊಡವೆಗಳಿಂದ ಇದು ರಕ್ಷಿಸುತ್ತದೆ. ಮುಂದಿನ ಬಾರಿ ಬೆರ್ರಿಗಳ ಸಲಾಡ್ ಮಾಡಿ ಸೇವಿಸಿ ಮತ್ತು ಪ್ರಯೋಜನವನ್ನು ನೀವೇ ಅರಿತುಕೊಳ್ಳಿ.

Story first published: Saturday, January 9, 2016, 9:02 [IST]
X
Desktop Bottom Promotion