Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶ್ರಮ ಪಡುವ ಕೈಗಳಿಗೆ ಮನೆಮದ್ದಿನ ಆರೈಕೆ...
ಶ್ರಮಜೀವಿಗಳು ತಮ್ಮ ದುಡಿಮೆಯಲ್ಲಿ ಹೆಚ್ಚು ಒತ್ತು ನೀಡಿ, ತಮ್ಮ ದೇಹದ ಅಂಗಗಳ ಕಡೆ ಹೆಚ್ಚು ಗಮನಹರಿಸುವುದಿಲ್ಲ. ಅದರಲ್ಲೂ ಕೈಗಳ ಬಗ್ಗೆ ಹೆಚ್ಚು ನಿರಾಸಕ್ತಿವಹಿಸಿ ಉದಾಸೀನ ಮಾಡುತ್ತಾರೆ. ತಮ್ಮ ಕೈಗಳಿಂದ ಹೆಚ್ಚು ಶ್ರಮವುಳ್ಳ ಕೆಲಸಗಳನ್ನು ನಿರ್ವಹಿಸುತ್ತಿದ್ದು, ಕೈಗಳಿಗೆ ಹೆಚ್ಚು ಒತ್ತಡ ಉಂಟಾಗಿ ಕೈಗಳ ಆರೋಗ್ಯ ಕ್ಷೀಣಿಸುತ್ತದೆ. ದೀರ್ಘಾವಧಿಯಲ್ಲಿ ಅಸುರಕ್ಷಿತ ಮತ್ತು ಉದಾಸೀನದ ಕ್ರಮಗಳಿಂದ ನಿಮ್ಮ ಕೈಗಳ ಸಾಮರ್ಥ್ಯ ಸಹ ಕುಂದುತ್ತದೆ. ಇದು ಸಹಜ ಪ್ರಕ್ರಿಯೆಯಾಗಿದ್ದರೂ ಇದನ್ನು ನಿರ್ಲಕ್ಷಿಸಿದರೆ ಆಪಾಯವೇ ಹೆಚ್ಚು. ಹೆಚ್ಚು ನಿರ್ಲಕ್ಷ್ಯ ತೋರುತ್ತಿರುವ ದೇಹದ ಭಾಗಗಳಲ್ಲಿ ಕೈಗಳೂ ಸಹ ಒಂದು.
ಪ್ರತಿದಿನ ಬಟ್ಟೆ ಒಗೆಯುವುದು, ಸ್ವಚ್ಛಗೊಳಿಸುವುದು, ಅಡುಗೆ ಮಾಡುವುದು ಇತ್ಯಾದಿ ಅನುಸರಣೆಗಳಿಂದ ನಿಮ್ಮ ಕೈಗಳಿಗೆ ಹೆಚ್ಚು ಶ್ರಮ ಉಂಟಾಗುತ್ತದೆ. ನಾವು ಸ್ವಚ್ಛಗೊಳಿಸುವ ಸಾಬೂನು ಮತ್ತು ಮಾರ್ಜಕಗಳ ಬಳಕೆಯಿಂದ ಅದರಲ್ಲಿರುವ ರಾಸಾಯನಿಕ ಅಂಶಗಳು ನಿಮ್ಮ ಕೈಗಳೊಂದಿಗೆ ಪ್ರತಿಕ್ರಯಿಸುತ್ತದೆ. ಇದರಿಂದ ನಿಮ್ಮ ಕೈಗಳ ಚರ್ಮವು ಒಣಗಿದಂತಾಗಿ ಚರ್ಮದಲ್ಲಿ ಸುಕ್ಕುಗಳು ಉಂಟಾಗಲು ಕಾರಣವಾಗುತ್ತವೆ. ಸಾಮಾನ್ಯವಾಗಿ ತ್ವಚೆಯ ಚರ್ಮಕ್ಕಿಂತ ಕೈಗಳ ಚರ್ಮಗಳು ಮೃದುವಾಗಿರುವುದಿಲ್ಲ. ಕೈಗಳ ಚರ್ಮಕ್ಕೆ ಹೆಚ್ಚು ಆರೈಕೆ ಅಗತ್ಯವಿದ್ದು, ಒಳಗಿನಿಂದಲೇ ತೇವಾಂಶ ನೀಡುವುದು ಅತ್ಯಗತ್ಯ. ಏಕೆಂದರೆ ದಿನದ ಅಂತ್ಯದಲ್ಲಿ

ರಾಸಾಯನಿಕ ಉತ್ಪನ್ನಗಳನ್ನು ಬಳಸುವಿಕೆಯಿಂದ ಇದು ಹೊರತಾಗಿಲ್ಲ. ಮನೆಯಲ್ಲಿಯೇ ತಯಾರಿಸಲಾದ ಕ್ರೀಂಗಳಿಂದ ನಿಮ್ಮ ಕೈಗಳನ್ನು ಮೃದುಗೊಳಿಸಿ ಆರೈಕೆ ಮಾಡಬಹುದು. ಈ ಕ್ರೀಂಗಳು ಚರ್ಮದ ಒಳಗಿನಿಂದ ಹೀರಿಕೊಳ್ಳುತ್ತದೆ. ಈಗ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಸಿಗುವಂತಹ ಸರಳ ಪದಾರ್ಥಗಳಿಂದ ಕೈಗಳಿಗೆ ಸ್ವಂತವಾಗಿ ಕ್ರೀಮ್ ತಯಾರಿಸಿಕೊಳ್ಳುವ ಕೆಲವು ಉಪಯುಕ್ತ ಸಲಹೆಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಇದರಿಂದ ನಿಮ್ಮ ಕೈಗಳು ಮೃದುವಾಗಿ ನಾಜೂಕಾಗುತ್ತವೆ. ಮನೆಯಲ್ಲಿಯೇ ಕ್ರೀಂ ತಯಾರಿಸಬಹುದಾದ 2 ರೆಸಿಪ್ಪಿ ಮಾದರಿಗಳನ್ನು ನಿಮ್ಮ ಉಪಯೋಗಕ್ಕಾಗಿ ನೀಡಲಾಗಿದೆ. ಒಮ್ಮೆ ಪ್ರಯತ್ನಿಸಿ ಇದರಿಂದ ಪ್ರಯೋಜನ ಹೊಂದಿರಿ...
ಮಾಯಿಶ್ಚರೈಸಿಂದ ಹ್ಯಾಂಡ್ ಕ್ರೀಮ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
*1/2 ಕಪ್ ಸೀಗೇಕಾಯಿ ತೈಲ
*2 ಚಮಚ ಜೊಜೊಬಾ ತೈಲ ಅಥವಾ ಬಾದಾಮಿ ತೈಲ
*10 ಹನಿ ರೋಸ್ ಮೆರಿ ತೈಲ
*20 ಹನಿ ಲ್ಯಾವೆಂಡರ್ ತೈಲ
*7 ಹನಿ ಕ್ಯಾರೆಟ್ ಬೀಜದ ತೈಲ
*5 ಹನಿ ಟೀ ಟ್ರೀ ತೈಲ
ತಯಾರಿಸುವ ವಿಧಾನ
ಸೀಗೇಕಾಯಿ ತೈಲವನ್ನು ಕಡಿಮೆ ಉರಿಯಲ್ಲಿ ಕಾಯಿಸಿ. ಇದು ಕರಗಿದ ನಂತರ ಜೊಜೊಬಾ ತೈಲವನ್ನು ಸೇರಿಸಿ 15 ನಿಮಿಷಗಳ ಕಾಲ ಗಡುಸಾಗುವವರೆಗೆ ಫ್ರೀಸರ್ ನಲ್ಲಿ ಇಡಿ. ಆದರೆ ಹೆಚ್ಚು ಗಡುಸಾಗಿಸಬೇಡಿ ಎಚ್ಚರ. ಇದು ಕ್ರೀಮ್ ಆಗುವವರೆಗೆ ಕಾಯಿರಿ. ಈ ಕ್ರೀಮ್ ಅನ್ನು ಹೊರತೆಗೆದು ಅವಶ್ಯಕ ಎಣ್ಣೆಗಳೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲಸಿ ದಪ್ಪನೆಯ ಕ್ರೀಂ ಆಗುವವರೆಗೆ ಮಿಶ್ರಣ ಮಾಡಿಕೊಳ್ಳಿ. ಈ ಕ್ರೀಮ್ ಅನ್ನು ಒಂದು ಜಾರ್‌ಗೆ ಹಾಕಿ ಇಟ್ಟುಕೊಳ್ಳಿ. ಇದರ ಕ್ರಮವಾದ ಬಳಕೆಯ ನಂತರ ನಿಮ್ಮ ಕೈಗಳು ಹೆಚ್ಚು ಮೃದುಗೊಂಡು ಅಂದವಾಗಿ ಕಾಣುತ್ತವೆ.
ಹೋಮ್ ಮೇಡ್ ಹ್ಯಾಂಡ್ ಲೋಶನ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
*1/2 ಕಪ್ ಆಲಿವ್ ತೈಲ ಅಥವಾ ಬಾದಾಮಿ ತೈಲ
*1/4 ಕಪ್ ಮೇಣ
*1/4 ಕಪ್ ತೆಂಗಿನ ಎಣ್ಣೆ
*1 ಚಮಚ ವಿಟಮಿನ್ ಇ ತೈಲ
*1 ಚಮಚ ಲ್ಯಾವೆಂಡರ್ ತೈಲ
ತಯಾರಿಸುವ ವಿಧಾನ
*ಕಡಿಮೆ ಉರಿಯಲ್ಲಿ ತೆಂಗಿನ ತೈಲ ಮತ್ತು ಮೇಣವನ್ನು ಬೆರೆಸಿ ಕಾಯಿಸಿ. ಇದು ಕಾಯಿಸಿದ ನಂತರ ಉರಿಯನ್ನು ಆರಿಸಿ ಇನ್ನುಳಿದ ಸಾಮಗ್ರಿಗಳನ್ನು ಇದರೊಂದಿಗೆ ಬೆರೆಸಿಕೊಳ್ಳಿ. ಇದನ್ನು ಒಂದು ಜಾರ್‌ನಲ್ಲಿ ಶೇಖರಿಸಿಟ್ಟುಕೊಳ್ಳಿ. ಇದರಿಂದ ಪರಿಣಾಮಕಾರಿ ಫಲಿತಾಂಶಗಳು ದೊರೆಯಲು ಸಾಧ್ಯವಾಗುತ್ತದೆ.



Click it and Unblock the Notifications


