Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಣ್ಣ ವಯಸ್ಸಿನಲ್ಲೇ ವೃದ್ಧರಂತೆ ಕಾಣಲು ಕಾರಣವೇನು?
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನೆರೆಮನೆಯ ಹುಡುಗ ನಿಮ್ಮನ್ನು ಅಂಕಲ್ ಎಂದು ಕರೆದರೆ ಕೋಪ ನೆತ್ತಿಗೇರುವುದಿಲ್ಲವೇ? ಅದು ಕೂಡ ನಿಮ್ಮ ವಯಸ್ಸು ಇನ್ನು 30 ದಾಟದೇ ಇರುವಾಗ? ಅದೇ ನಿಮ್ಮದೇ ವಯಸ್ಸಿನ ನಾಲ್ಕು ಜನರ ಮಧ್ಯೆ ನಿಂತಾಗ ನೀವು ತುಂಬಾ ವಯಸ್ಸಾದವರಂತೆ ಕಾಣಿಸುತ್ತಿದ್ದರೆ?

ಚರ್ಮದಲ್ಲಿ ನೆರಿಗಗಳು ಕಾಣಿಸಿಕೊಂಡು ಸಣ್ಣ ವಯಸ್ಸಿನಲ್ಲೂ ವೃದ್ಧರಂತೆ ಕಾಣುತ್ತಿರುವಿರಾದರೆ ಇದಕ್ಕೆ ಹಲವಾರು ರೀತಿಯ ಕಾರಣಗಳು ಇರಬಹುದು. ನಿಮ್ಮ ಚರ್ಮಕ್ಕೆ ಅಕಾಲಿಕವಾಗಿ ವಯಸ್ಸಾಗುತ್ತಿರುವುದು ಇದಕ್ಕೆ ಕಾರಣವಾಗಿರಬಹುದು.
ಇದು ಅನುವಂಶೀಯತೆಯಿಂದ ಬಂದಿರಲೂ ಬಹುದು. ನಿಮ್ಮ ಚರ್ಮವು ಅನುವಂಶೀಯತೆಯಿಂದಾಗಿ ಅಕಾಲಿಕವಾಗಿ ವಯಸ್ಸಾಗುತ್ತಿರುವಂತೆ ಕಾಣುತ್ತಿದ್ದರೆ ಅದಕ್ಕೆ ಯಾವುದೇ ಪರಿಹಾರವಿಲ್ಲ. ಚರ್ಮವು ಜೋತು ಬೀಳುವುದು ಮತ್ತು ನೆರಿಗೆಗಳು ಕಾಣಿಸಿಕೊಳ್ಳುವುದರಿಂದ ನೀವು ಸಣ್ಣ ವಯಸ್ಸಿನಲ್ಲೂ ವಯಸ್ಸಾದವರಂತೆ ಕಾಣುತ್ತೀರಿ. ನಿಮ್ಮನ್ನು ನೋಡಿದವರು ಇವರಿಗೆ ತುಂಬಾ ವಯಸ್ಸಾಗಿದೆ ಎಂದು ಭಾವಿಸಬಹುದು. ಚ್ಯೂಯಿಂಗ್ ಗಮ್ ಜಗಿದರೆ ಸುಕ್ಕು ಬೇಗ ಬರುತ್ತೆ
ಇದು ನಿಮ್ಮನ್ನು ಚಿಂತೆಗೀಡು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಚರ್ಮದ ಆರೈಕೆಯನ್ನು ನೀವು ಚೆನ್ನಾಗಿ ಮಾಡಿಕೊಳ್ಳುತ್ತಿದ್ದರೂ ಅಕಾಲಿಕವಾಗಿ ನೆರಿಗೆ ಕಾಣಿಸಿಕೊಳ್ಳಲು ಕೆಲವೊಂದು ಕಾರಣಗಳಿವೆ. ಇದನ್ನು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ.
ಸನ್ ಸ್ಕ್ರೀನ್ ಬಳಸದೆ ಇರಬಹುದು
ಸನ್ ಸ್ಕ್ರೀನ್ ಮುಖ್ಯವಲ್ಲ ಮತ್ತು ಇದನ್ನು ನಿಯಮಿತವಾಗಿ ಬಳಸಬೇಕೆಂದಿಲ್ಲ ಎಂದು ಹೆಚ್ಚಿನವರು ಭಾವಿಸಿರುತ್ತಾರೆ. ಯುವಿ ಕಿರಣಗಳು ಚರ್ಮಕ್ಕೆ ತುಂಬಾ ಅಪಾಯಕಾರಿ ಮತ್ತು ಚರ್ಮದ ಕೋಶಗಳ ಗುಣಮಟ್ಟಕ್ಕೆ ಹಾನಿಯುಂಟು ಮಾಡುವುದು. ಇದರಿಂದ ನೀವು ಅಕಾಲಿಕವಾಗಿ ವಯಸ್ಸಾದವರಂತೆ ಕಾಣುತ್ತೀರಿ. ಮುಖದ ಸುಕ್ಕು, ರಂಧ್ರದ ಪರಿಹಾರಕ್ಕೆ ಇಲ್ಲಿದೆ ಮನೆಮದ್ದು
ಅತಿಯಾದ ಧೂಮಪಾನ
ಧೂಮಪಾನದಿಂದ ಹಲವಾರು ರೀತಿಯ ಅನಾರೋಗ್ಯಗಳು ಕಾಡಬಹುದು. ಧೂಮಪಾನದ ಅಭ್ಯಾಸದಿಂದಾಗಿ ಚರ್ಮದ ಕೋಶಗಳಿಗೆ ವಯಸ್ಸಾಗುವಂತೆ ಮಾಡುವುದು ಮತ್ತು ಧೂಮಪಾನದ ವೇಳೆ ತುಟಿಗಳು ಸೆಳೆದುಕೊಳ್ಳುವುದರಿಂದ ಮುಖದ ಸುತ್ತಲು ನೆರಿಗೆಗಳು ಹೆಚ್ಚಾಗುವುದು.
ಅತಿಯಾದ ಪಾರ್ಟಿ
ಅತಿಯಾದ ಆಲ್ಕೋಹಾಲ್ ಸೇವನೆ, ಡ್ರಗ್ಸ್ ತೆಗೆದುಕೊಳ್ಳುವುದು ವಿಶ್ರಾಂತಿಯಿಲ್ಲದೆ ಯಾವಾಗಲೂ ಪಾರ್ಟಿ ಮಾಡುತ್ತಾ ಇರುವುದು ಇಂತಹ ಹವ್ಯಾಸಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಮತ್ತು ಚರ್ಮದ ಕೋಶಗಳ ಉತ್ಪತ್ತಿ ಮೇಲೆ ಪರಿಣಾಮ ಬಿದ್ದು ನೆರಿಗೆ ಕಾಣಿಸಿಕೊಳ್ಳಬಹುದು. ಬರೀ ಹತ್ತೇ ದಿನಗಳಲ್ಲಿ ಮುಖದ ಸುಕ್ಕು ಮಂಗಮಾಯ...
ವ್ಯಸ್ತ ನಗರದಲ್ಲಿರುವುದು
ಯಾವಾಗಲೂ ವ್ಯಸ್ತವಾಗಿರುವ, ಕಲುಷಿತ ವಾತಾವರಣದಿಂದ ಕೂಡಿರುವ ನಗರದಲ್ಲಿ ವಾಸಿಸುತ್ತಾ ಇದ್ದರೆ, ಧೂಳು ಮತ್ತು ಕಲುಷಿತ ವಾತಾವರಣದಲ್ಲಿ ಯಾವಾಗಲೂ ಪ್ರಯಾಣಿಸುತ್ತಿದ್ದರೆ ನಿಮ್ಮ ಚರ್ಮವು ಅಕಾಲಿಕ ವಯಸ್ಸಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಕಲುಷಿತ ವಾತಾವರಣದಲ್ಲಿ ವಾಸಿಸುವವರು ಅಕಾಲಿಕ ವಯಸ್ಸಾದವರಂತೆ ಕಾಣುತ್ತಾರೆ.



Click it and Unblock the Notifications


