Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಳನಳಿಸುವ ಸೌಂದರ್ಯ ಬೆರಳತುದಿಯಲ್ಲೇ ಇದೆ!
ಹೊಸ ವರ್ಷದಲ್ಲಿ ಸಾಧಿಸಿ ತೋರುವ ಛಲದಲ್ಲಿ ನೀವು ಹೊಸ ನಿರ್ಧಾರಗಳನ್ನು ತಾಳಿದಂತೆ ನಿಮ್ಮ ಸೌಂದರ್ಯವನ್ನು ಇನ್ನಷ್ಟು ಪ್ರಖರವಾಗಿಸುವುದಕ್ಕಾಗಿ ಕೆಲವೊಂದು ಸಲಹೆಗಳನ್ನು ಪಾಲಿಸುವ ನಿಶ್ಚಯವನ್ನು ಮಾಡಿಕೊಳ್ಳಿ! ಹೌದು ಈ ಮಾತು ನಿಜಕ್ಕೂ ನಿಮ್ಮ ಸೌಂದರ್ಯದ ವಿಷಯದಲ್ಲಿ ಪಾಲಿಸುವಂಥದ್ದಾಗಿದೆ. ಸೌಂದರ್ಯಕ್ಕೆ ಘಾಸಿ ತರುವ ಯಾವುದೇ ಕೆಲಸವನ್ನು ನೀವು ಮಾಡುವುದರಿಂದ ಸುಂದರ ತ್ವಚೆಗೆ ಹಾನಿಕಾರಕವಾಗಬಹುದು ಮತ್ತು ನಿಮ್ಮ ಪ್ರಸ್ತುತ ಸೌಂದರ್ಯಕ್ಕೆ ಧಕ್ಕೆಯುಂಟಾಗಬಹುದು. ಬರೀ ಎರಡೇ ವಾರದಲ್ಲಿ ಮುಖದ ಕಲೆ ಮಂಗಮಾಯ...
2016 ನಿಮ್ಮ ಮುಖದ ಸೌಂದರ್ಯದ ವಿಷಯದಲ್ಲಿ ಧನಾತ್ಮಕವಾಗಿರಬೇಕು ಎಂದಾದಲ್ಲಿ ಸೌಂದರ್ಯಕ್ಕಾಗಿ ನೀವು ಕೆಲವೊಂದು ನಿರ್ಧಾರಗಳನ್ನು ತಾಳುವುದು ಅನಿವಾರ್ಯವಾಗಿದೆ. ಸಾಧಿಸುತ್ತೇನೆ ಎಂಬ ಇಚ್ಛಾಶಕ್ತಿ ನಿಮ್ಮಲ್ಲಿದೆ ಎಂದಾದಲ್ಲಿ ನಿಮಗೆ ಈ ಸಲಹೆಗಳನ್ನು ಪಾಲಿಸುವುದು ಅಷ್ಟೊಂದು ಕಷ್ಟಕರವಾಗಿರುವುದಿಲ್ಲ ಬಿಡಿ. ನೀವು ದಿನವೂ ಮಾಡುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಮತ್ತು ಮುಂದೆ ಮಾಡದೇ ಇರುವುದೇ 2016 ಕ್ಕೆ ನಿಮ್ಮ ಹೊಸ ನಿರ್ಧಾರಗಳಾಗಲಿ ಹಾಗಿದ್ದರೆ ತಡಮಾಡದೇ ಇಂದಿನ ಲೇಖನದಲ್ಲಿ ನಾವು ನೀಡುವ ಸೌಂದರ್ಯ ಸಲಹೆಗಳನ್ನು ಪಾಲಿಸಿ ಮತ್ತು ನಿಮ್ಮ ಹೊಸ ವರ್ಷವನ್ನು ವರ್ಷಪೂರ್ತಿ ಹೊಸದರಂತೆ ನಳ ನಳಿಸುವ ಸೌಂದರ್ಯದೊಂದಿಗೆ ಕಾಪಾಡಿಕೊಳ್ಳಿ...

ತ್ವಚೆಯ ಸಂರಕ್ಷಣೆ
ದಿನಕ್ಕೆ ಎರಡು ಬಾರಿ ಸನ್ ಸ್ಕ್ರೀನ್ ಲೋಶನ್ ಬಳಕೆಯನ್ನು ಮಾಡಿ. ನೀವು ಇದನ್ನು ಬಳಸಿದಂತೆಲ್ಲಾ ಸನ್ ಸ್ಕ್ರೀನ್ ಹಚ್ಚುವುದು ಅಭ್ಯಾಸವಾಗಿಬಿಡುತ್ತದೆ. ನಿಮ್ಮ ವಯಸ್ಸನ್ನು ಮರೆಮಾಚುವಲ್ಲಿ ಸನ್ ಸ್ಕ್ರೀನ್ ಪಾತ್ರ ಹಿರಿದು. ಹಾನಿಕಾರಕ ಸೂರ್ಯನ ಕಿರಣಗಳು ನಿಮ್ಮ ತ್ವಚೆಯನ್ನು ಕಪ್ಪಾಗಿಸುವುದು ಮಾತ್ರವಲ್ಲದೆ, ಕಪ್ಪು ಕಲೆಗಳು, ಕಪ್ಪು ವರ್ತುಲಗಳು, ಬೇಗನೇ ವಯಸ್ಸಾಗುವುದು ಮೊದಲಾದ ಸಮಸ್ಯೆಗಳನ್ನು ಉಂಟು ಮಾಡಬಹುದು. ಆದ್ದರಿಂದ ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್ ಲೋಶನ್ ಅನ್ನು ಹಚ್ಚಿಕೊಳ್ಳಿ ಮತ್ತು ಸೂರ್ಯನ ಕಿರಣಗಳಿಂದ ಆದಷ್ಟು ತ್ವಚೆಯನ್ನು ರಕ್ಷಿಸಿಕೊಳ್ಳಿ.

ತ್ವಚೆಯ ಸಂರಕ್ಷಣಾ ಕ್ರಮಗಳ ಪಾಲನೆ
ಡೀಪ್ ಕ್ಲೆನ್ಸರ್ ಅನ್ನು ಬಳಸಿಕೊಂಡು ಮೇಕಪ್ ಅನ್ನು ತೆಗೆದುಹಾಕಿ ಮತ್ತು ನೊರೆಯಿಲ್ಲದ ಫೇಸ್ ವಾಶ್ ಅನ್ನು ಬಳಸಿ. ಬರಿಯ ಮಾಯಿಶ್ಚರೈಸ್ ಅನ್ನು ಮಾತ್ರವೇ ದಿನಕ್ಕೆ ಎರಡು ಬಾರಿ ಬಳಸುವುದು, ಕ್ಲೆನ್ಸಿಂಗ್ ಮಾಡುವುದು, ಟೋನಿಂಗ್ ಮಾಡುವುದು ಮಾತ್ರವೇ ನಿಮ್ಮ ಸೌಂದರ್ಯವನ್ನು ಕಾಪಾಡುವುದಿಲ್ಲ.

ಡಿಟಾಕ್ಸಿಫಿಕೇಶನ್ ಆಯ್ಕೆಮಾಡಿಕೊಳ್ಳಿ
ನಿಮ್ಮ ತ್ವಚೆಯನ್ನು ಡಿಟಾಕ್ಸಿಫೈ ಮಾಡಲು ಹಲವಾರು ವಿಧಾನಗಳಿವೆ. ವೈದ್ಯರನ್ನು ಸಂಪರ್ಕಿಸಿ ನಿಮಗೆ ಯಾವುದು ಉತ್ತಮ ಎಂಬುದನ್ನು ಅರಿತುಕೊಳ್ಳಿ. ದೇಹದಿಂದ ವಿಷವನ್ನು ಹೊರಹಾಕಿ ತ್ವಚೆಯನ್ನು ಇನ್ನಷ್ಟು ಹೊಳೆಯುವಂತೆ ಮಾಡುವ ಗುಣವನ್ನು ಡಿಟಾಕ್ಸಿಫಿಕೇಶನ್ ಹೊಂದಿದೆ.

ನಿತ್ಯವೂ ಮಾಯಿಶ್ಚರೈಸರ್ ಮಾಡುವುದು
ನಿತ್ಯವೂ ಸ್ನಾನದ ನಂತರ, ನಿಮ್ಮ ಸಂಪೂರ್ಣ ದೇಹವನ್ನು ಮಾಯಿಶ್ಚರೈಸರ್ ಮಾಡುವುದರ ಮೂಲಕ ಮಸಾಜ್ ಮಾಡಿಕೊಳ್ಳಬೇಕು. ನಿಮ್ಮ ಬೆನ್ನು, ಕೈಗಳು, ಕಾಲುಗಳು ಮತ್ತು ಪಾದಗಳಿಗೆ ನಿತ್ಯವೂ ಮಾಯಿಶ್ಚರೈಸರ್ ಮಾಡಿಕೊಳ್ಳಿ. ಪೂರ್ಣ ದೇಹ ಆಯಿಲ್ ಮಸಾಜ್ ಕೂಡ ಸೂಕ್ತವಾಗಿದ್ದು ಮೇನಿಕ್ಯೂರ್ ಮತ್ತು ಪೇಡಿಕ್ಯೂರ್ ಅನ್ನು ಆಗಾಗ್ಗೆ ಮಾಡಿಕೊಳ್ಳಿ.

ವಿಟಮಿನ್ಗಳು ಮತ್ತು ಮಿನರಲ್ಗಳ ನಿತ್ಯ ಸೇವನೆ
ನಿಯಂತ್ರಿತ ನ್ಯೂಟ್ರಿಶಿಯಸ್ ಡಯಟ್ ಅನ್ನು ಪಾಲಿಸುವುದು ಸೌಂದರ್ಯದ ವಿಷಯದಲ್ಲಿ ಅತಿಮುಖ್ಯವಾದುದು. ಹಸಿರು ಎಲೆಯ ತರಕಾರಿಗಳು, ತಾಜಾ ಹಣ್ಣುಗಳು ಮತ್ತು ನಟ್ಸ್ಗಳನ್ನು ನಿತ್ಯವೂ ಸೇವಿಸಿ. ಹೆಚ್ಚು ವಿಟಮಿನ್ ಮತ್ತು ಉತ್ಕರ್ಷಣ ನಿರೋಧಿ ಕ್ಯಾಪ್ಸುಲ್ಗಳಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.



Click it and Unblock the Notifications
