Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸೂಕ್ಷ್ಮ ಚರ್ಮಕ್ಕೆ ಕಂದು ಸಕ್ಕರೆ ಸೂಕ್ತ...
ದೇಹದ ಸೌಂದರ್ಯದ ಬಗ್ಗೆ ಆಸಕ್ತಿ ವಹಿಸುವುದು ಇತ್ತೀಚೆಗೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಉತ್ಪನ್ನಗಳು ಪ್ರತಿದಿನ ಬಿಡುಗಡೆಯಾಗುತ್ತಿವೆ. ಜನರು ಹಿಂದೂಮುಂದೂ ಯೋಚಿಸದೇ ತಮಗೆ ಅನ್ನಿಸಿದ ರಾಸಾಯನಿಕ ಉತ್ಪನ್ನಗಳನ್ನು ಬಳಸಲು ಇಚ್ಛಿಸುತ್ತಿದ್ದಾರೆ. ಕ್ಷಣಿಕ ಸೌಂದರ್ಯಕ್ಕೆ ಹೆಚ್ಚು ಜನರು ಮಾರುಹೋಗುತ್ತಿದ್ದಾರೆ. ಈ ರೀತಿಯ ಉತ್ಪನ್ನಗಳನ್ನು ಬಳಸಿ ಕ್ಷಣಿಕವಾಗಿ ಸೌಂದರ್ಯವನ್ನು ಪಡೆಯುತ್ತಿದ್ದಾರೆಯೇ ವಿನಹ ಅದನ್ನು ದೀರ್ಘಕಾಲ ಬಳಸಿದರೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಯಾರೂ ಚಿಂತಿಸುತ್ತಿಲ್ಲ.
ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದು, ಹೆಚ್ಚು ತಿಳಿದವರೇ ಈ ವಿಧಾನವನ್ನು ಅನುಸರಿಸುತ್ತಿರುವುದು ವಿಪರ್ಯಾಸವೇ ಸರಿ. ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಇರುವ ಉತ್ತಮ ಮಾರ್ಗವೆಂದರೆ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ನಿಮ್ಮ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಸರಳವಾದ ವಿಧಾನಗಳಲ್ಲಿ ಬ್ರೌನ್ ಶುಗರ್‌ನ (ಕಂದು ಸಕ್ಕರೆ) ಬಳಕೆಯಿಂದಲೂ ಸಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದರ ಉಪಯೋಗದಿಂದ ಅನೇಕ ರೀತಿಯ ದೇಹ ಸೌಂದರ್ಯ ಉಪಯುಕ್ತತೆಯನ್ನು ಹೊಂದಬಹುದು. ಇದು ನಿಮ್ಮ ತ್ವಚೆಗೆ ಒಳಗಿನಿಂದಲೇ ತೇವಾಂಶ ನೀಡಿ ಸತ್ತ ಜೀವಕೊಶಗಳನ್ನು ಹೊರಹಾಕುತ್ತದೆ. ಅಲ್ಲದೆ ಇದನ್ನು ನಿಮ್ಮ ಮುಖಕ್ಕೆ, ಪಾದಕ್ಕೆ ಮತ್ತು ದೇಹಕ್ಕೆ ಸ್ಕ್ರಬ್ ರೀತಿಯಲ್ಲಿ ಬಳಸಬಹುದಾಗಿದೆ. ಇದರ ಸ್ಕ್ರಬ್ ಅನ್ನು ಕೇವಲ 10 ನಿಮಿಷದಲ್ಲಿ ತಯಾರಿಸಬಹುದು.

ಇಂದಿಗೂ ಸಹ ಕಂದು ಸಕ್ಕರೆ ಅನ್ನು ಸ್ವಾಭಾವಿಕ ಮತ್ತು ಅಂದದ ತ್ವಚೆಗಾಗಿ ಬಳಸಲಾಗುತ್ತಿದೆ. ಇದು ನೈಸರ್ಗಿಕವಾಗಿ ಚರ್ಮದ ಸತ್ತ ಜೀವಕೋಶಗಳನ್ನು ಹೊರಹಾಕುತ್ತದೆ. ಇದು ನಿಮ್ಮ ಚರ್ಮಕ್ಕೆ ಮೃದುವಾಗಿದ್ದು, ಒರಟಾದ ಅನುಭವ ನೀಡುವುದಿಲ್ಲ. ಸೂಕ್ಷ್ಮ ರೀತಿಯ ಚರ್ಮಗಳಿಗೆ ಇದೊಂದು ಸೂಕ್ತವಾದ ಸಾಧನ. ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿರುವ ಕಂದು ಸಕ್ಕರೆಯ ಕೆಲವು ಉಪಯೋಗಗಳನ್ನು ಈ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ. ಒಮ್ಮೆ ಪ್ರಯತ್ನಿಸಿ ನೋಡಿ, ಫಲಿತಾಂಶ ನಿಮಗೇ ತಿಳಿಯುತ್ತದೆ.
ಒಣಗಿದ ತುಟಿಗಳಿಗೆ ಸೂಕ್ತವಾದ ಆಯ್ಕೆ
ಒಣಗಿದ ತುಟಿಗಳನ್ನು ಆರೈಕೆ ಮಾಡಲು ಇದರ ಬಳಕೆ ಸೂಕ್ತವಾದ ಆಯ್ಕೆ. ಇದು ನಿಮ್ಮ ತುಟಿಗಳಿಗೆ ಒಳಗಿನಿಂದಲೇ ತೇವಾಂಶ ನೀಡಿ, ನಿಮ್ಮ ತುಟಿಗಳನ್ನು ದೀರ್ಘಕಾಲದವರೆಗೆ ಮೃದುವಾಗಿರಿಸಿರುತ್ತದೆ. ನೀವು ಮಾಡಬೇಕಿರುವುದು ಇಷ್ಟೇ, ಈ ಸಕ್ಕರೆಯನ್ನು ತೇವಗೊಳಿಸಿ ಸ್ಕ್ರಬ್ ರೀತಿಯಲ್ಲಿ ನಿಮ್ಮ ತುಟಿಗಳಿಗೆ ಹಚ್ಚಿಕೊಳ್ಳಿ. ನಿಮ್ಮ ತುಟಿಯಲ್ಲಿನ ಸತ್ತ ಜೀವಕೋಶಗಳು ಹೊರಹೋಗಿ, ನಿಮ್ಮ ತುಟಿಗಳನ್ನು ಮೃದುಗೊಳಿಸಿ ನಾಜೂಕಾಗಿಸುತ್ತದೆ.
ಮೃದು ಚರ್ಮಕ್ಕೆ ಉಪಯುಕ್ತ
ಸ್ವಲ್ಪ ಬ್ರೌನ್ ಶುಗರ್ ಅನ್ನು ಬಾಳೆಹಣ್ಣಿನೊಂದಿಗೆ ಜಜ್ಜಿ ಸ್ಕ್ರಬ್ ರೀತಿ ಬರುವವರೆಗೆ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ದೇಹಕ್ಕೆ ಸ್ನಾನದ ಮುಂಚಿತವಾಗಿ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಚರ್ಮವನು ಕಾಂತಿಯುಕ್ತಗೊಂಡು ನಳನಳಿಸುತ್ತದೆ.
ಚಾಕಲೇಟ್ + ತೆಂಗಿನಕಾಯಿ + ಬ್ರೌನ್ ಶುಗರ್
ಇದೊಂದು ಉತ್ತಮ ತೇವಾಂಶ ನೀಡುವ ಆಯ್ಕೆ. ಈ ಪದಾರ್ಥಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ತಿಕ್ಕಿದ ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿರಿ. ಇದರಿಂದ ನಿಮ್ಮ ಚರ್ಮದಲ್ಲಿನ ಸತ್ತ ಜೀವಕೋಶಗಳು ಹೊರಬಂದು ನಿಮ್ಮ ಚರ್ಮಕ್ಕೆ ಒಳಗಿನಿಂದಲೇ ತೇವಾಂಶ ನೀಡುತ್ತದೆ.
ಲಿಂಬೆ + ಜೇನು + ಬ್ರೌನ್ ಶುಗರ್
ಇದೊಂದು ಹಿಂದಿನ ಕಾಲದಿಂದ ಅನುಸರಿಸಿಕೊಂಡು ಬಂದ ಪದ್ಧತಿಯಾಗಿದ್ದು, ಇದನ್ನು ಹರಳಾಗಿಸಿದ ಸಕ್ಕರೆಯೊಂದಿಗೆ ಬಳಸಲಾಗುತ್ತದೆ. ಬ್ರನ್ ಶುಗರ್, ಜೇನು ಮತ್ತು ಸ್ವಲ್ಪ ಲಿಂಬೆ ಹನಿಗಳನ್ನು ಒಟ್ಟಾಗಿ ಬೆರೆಸಿಕೊಳ್ಳಿ. ಇದನ್ನು 2:2:1 ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಹಚ್ಚಿಕೊಂಡು 10 ನಿಮಿಷದ ನಂತರ ನೀರಿನಿಂದ ಸ್ವಚ್ಛಗೊಳಿಸಿದರೆ ನಿಮ್ಮ ಚರ್ಮವು ಮೃದುಗೊಂಡು ನಾಜೂಕಾಗುತ್ತದೆ.



Click it and Unblock the Notifications

