Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕೋಮಲವಾದ ತ್ವಚೆಗೆ ಮೊಸರು ಮತ್ತು ಅಕ್ಕಿಯ ಸ್ಕ್ರಬ್
ತ್ವಚೆಯನ್ನು ಎಷ್ಟು ಆರೈಕೆ ಮಾಡುತ್ತೇವೆಯೋ, ಅದು ಅಷ್ಟು ಕಳೆಯಿಂದ ಇರುತ್ತದೆ. ಯಾವಾಗ ನಿಮ್ಮ ತ್ವಚೆಯು ಒಣಗಿದಂತೆ ಮತ್ತು ಕಳೆಗುಂದಿದ ಹಾಗೆ ಕಾಣುತ್ತದೆಯೋ, ಆಗ ಅದಕ್ಕೆ ಮೊಯಿಶ್ಚರೈಸಿಂಗ್ ಬಾಡಿ ಸ್ಕ್ರಬ್ ಮೂಲಕ ಆರೈಕೆ ನೀಡುವುದು ಅಗತ್ಯವಾಗಿರುತ್ತದೆ. ಅದಕ್ಕಾಗಿ ನಿಮಗೆ ಹಲವಾರು ಸ್ಕ್ರಬ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಆದರೆ ಇವುಗಳಿಗಿಂತ ಸ್ವಾಭಾವಿಕವಾಗಿ ದೊರೆಯುವಂತಹ ಸ್ಕ್ರಬ್ ನಿಮಗೆ
ಈ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ. ನೀವು ಯಾವುದೇ ಸ್ಕ್ರಬ್ ಬಳಸಿದರು ಅದರಲ್ಲಿ ರಾಸಾಯನಿಕ ಪದಾರ್ಥಗಳು ಇಲ್ಲವೆಂಬುದನು ಖಚಿತಪಡಿಸಿಕೊಂಡು ಬಳಸುವುದು ಒಳ್ಳೆಯದು. ಇದಕ್ಕಾಗಿ ನಾವು ಇಂದು ನಿಮಗೆ ಅಕ್ಕಿ ಮತ್ತು ಮೊಸರಿನ ಸ್ಕ್ರಬ್ ಕುರಿತು ತಿಳಿಸಿಕೊಡುತ್ತಿದ್ದೇವೆ. ಇದು ನಿಮಗೆ ಹೊಳಪಿನಿಂದ ಕೂಡಿದ ತ್ವಚೆಯನ್ನು ನೀಡಲು ಸಹಾಯ ಮಾಡುತ್ತದೆ. ಅಕ್ಕಿ ತೊಳೆದ ನೀರಿನ ಆಶ್ಚರ್ಯಕರ ಸಂಗತಿ

ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ಒಂದು ಬಟ್ಟಲು ಉದ್ದವಾಗಿರುವ ಬಾಸುಮತಿ ಅಕ್ಕಿಯನ್ನು ಬೆಚ್ಚಗಿರುವ ನೀರಿನಲ್ಲಿ, ನಾಲ್ಕು ಗಂಟೆಗಳ ಕಾಲ ನೆನೆಸಿ. ಅನಂತರ ನೀರನ್ನು ಒಂದು ಸ್ವಚ್ಛವಾದ ಹತ್ತಿಯ ಬಟ್ಟೆಯಿಂದ ಬಸಿದುಕೊಳ್ಳಿ. ಯಾವಾಗ ನೀರು ಇಂಗಿ ಹೋಗುತ್ತದೆಯೋ, ಆಗ ಅಕ್ಕಿ ಒಣಗಲು ಆರಂಭವಾಗುತ್ತದೆ. ಜೊತೆಗೆ ಅವುಗಳು ಒಡೆಯಲು ಸಹ ಆರಂಭವಾಗುತ್ತವೆ.ಈ ಅಕ್ಕಿಯನ್ನು ಅರ್ಧ ಕಪ್ ಗಟ್ಟಿ ಮೊಸರಿಗೆ ಸೇರಿಸಿ. ಈ ಅಕ್ಕಿಯು ಮೊಸರಿನಲ್ಲಿ ಸ್ವಲ್ಪ ಹೊತ್ತು ನೆನೆಯಲು ಬಿಡಿ. ಆನಂತರ ಮೂರು-ನಾಲ್ಕು ಹನಿ ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈಗ ನಿಮ್ಮ ಮುಂದೆ ಮೊಯಿಶ್ಚರೈಸಿಂಗ್ ಬಾಡಿ ಸ್ಕ್ರಬ್ ಸಿದ್ಧವಾಗಿರುತ್ತದೆ.
ಬಳಸುವ ವಿಧಾನ
ಈ ಸ್ಕ್ರಬ್ ಅನ್ನು ನಿಮ್ಮ ದೇಹದ ಮೇಲೆ ಎರಡು-ಮೂರು ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ. ಇದು ನಿಮ್ಮ ದೇಹದಿಂದ ಒಣ ತ್ವಚೆಯನ್ನು ನಿವಾರಿಸುತ್ತದೆ. ಆನಂತರ ನಿಮ್ಮ ದೇಹವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ನಿರ್ಜೀವ ಕೋಶಗಳು, ನಿಮ್ಮ ದೇಹದಿಂದ ಹೊರಗೆ ಹೋಗುತ್ತವೆ. ಉತ್ತಮ ಫಲಿತಾಂಶಕ್ಕಾಗಿ ಈ ಸ್ಕ್ರಬ್ ಅನ್ನು ದಿನಾ ಬಿಟ್ಟು ದಿನ ಬಳಸಿ.
ಪ್ರಯೋಜನಗಳು
ಮೊಸರು ನಿಮ್ಮ ಒಣ ತ್ವಚೆಗೆ ಮೃದುತ್ವವನ್ನು ನೀಡುವ ಪದಾರ್ಥವಾಗಿ ಕೆಲಸ ಮಾಡುತ್ತದೆ. ಒಡೆದ ಅಕ್ಕಿಯು ನಿಮ್ಮ ತ್ವಚೆಯನ್ನು ಎಕ್ಸ್‌ಫೋಲಿಯೇಟ್ ಮಾಡುತ್ತದೆ. ಜೊತೆಗೆ ಇದರಲ್ಲಿರುವ ಎಸೆನ್ಶಿಯಲ್ ಆಯಿಲ್ ನಿಮ್ಮ ತುರಿಕೆ ಬಂದಿರುವ ತ್ವಚೆಗೆ, ವಿಶ್ರಾಂತಿಯನ್ನು ನೀಡುತ್ತದೆ.



Click it and Unblock the Notifications

