Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಾಳಿಂಬೆ ಮಾಸ್ಕ್‌ನಿಂದ, ಮುಖದ ಕಾಂತಿ ಇನ್ನಷ್ಟು ರಂಗೇರಲಿದೆ
ನಿಮ್ಮ ಮುಖದಲ್ಲಿ ಸುಕ್ಕುಗಳು, ಕಲೆಗಳು, ಇತ್ಯಾದಿ ಸಮಸ್ಯೆಗಳು ವಯಸ್ಸಾದಂತೆ ಕಾಣಿಸಿಕೊಳ್ಳುತ್ತಾ ಇರುತ್ತವೆ. ನಮಗೆ ಊಹೆ ತಿಳಿದಾಗಿನಿಂದಲು ನಾವು ನಮ್ಮ ಸೌಂದರ್ಯದ ಬಗ್ಗೆ ಕಾಳಜಿಯನ್ನು ತೆಗೆದುಕೊಂಡಿರುತ್ತೇವೆ. ಅದರಲ್ಲೂ ತಾರುಣ್ಯಕ್ಕೆ ಬಂದ ಮೇಲೆ ಇದರ ಕುರಿತಾಗಿ ಇನ್ನಷ್ಟು ಕಾಳಜಿ ತೋರಿಸಿದರು ಸಹ ವಯಸ್ಸಾಗುತ್ತಿದ್ದಂತೆ, ಇದರ ಪ್ರಭಾವ ನಮ್ಮನ್ನು ಆವರಿಸಿಕೊಳ್ಳದೆ ಬಿಡದು. ಹಾಗೆಂದು ಸುಕ್ಕು ಬಂದಿದೆ ಎಂದು ಕೊರಗುತ್ತಾ ಕುಳಿತರೆ ಸುಕ್ಕು ಇನ್ನೂ ಹೆಚ್ಚಾಗುತ್ತದೆ. ಕೊರಗುವಿಕೆಯನ್ನು ಬಿಡಿ, ಸುಕ್ಕು ಮತ್ತಿತರ ಕಲೆಗಳನ್ನು ನಿವಾರಿಸಲು ಹಲವಾರು ಮಾರ್ಗೋಪಯಗಳು ಇವೆ ಅದನ್ನು ನೋಡೋಣ ಬನ್ನಿ.

ಹಣ್ಣುಗಳನ್ನು ಸೇವಿಸಿದರೆ ನಮಗೆ ದೇಹದ ಒಳಗಿನಿಂದ ಆರೋಗ್ಯದ ಜೊತೆಗೆ ಸೌಂದರ್ಯವು ದೊರೆಯುತ್ತದೆ. ಅದೇ ಹಣ್ಣಿನ ತಿರುಳುಗಳನ್ನು ಸಹ ಬಳಸಿಕೊಂಡು ಮಾಸ್ಕ್, ಪೇಸ್ಟ್ ಮುಂತಾದ ಸೌಂದರ್ಯ ಉತ್ಪನ್ನಗಳನ್ನು ತಯಾರಿಸಿಕೊಂಡು ನಾವು ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.ಅದರಲ್ಲಿಯೂ ದಾಳಿಂಬೆಯ ಸಿಪ್ಪೆಯನ್ನು ಈ ನಿಟ್ಟಿನಲ್ಲಿ ಹೆಚ್ಚಾಗಿ ಬಳಸಿಕೊಳ್ಳಬಹುದು. ಇದಕ್ಕಾಗಿ ನೀವು ತೀರಾ ಹೆಚ್ಚಿಗೆ ಕಷ್ಟಪಡಬೇಕಾಗಿಲ್ಲ, ದಾಳಿಂಬೆಯನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ಸುಲಿದು ಇಟ್ಟುಕೊಂಡರೆ ಸಾಕು.
ದಾಳಿಂಬೆ ಸಿಪ್ಪೆಗಳಿಂದ ದೊರೆಯುವ ಪ್ರಯೋಜನಗಳು
ದಾಳಿಂಬೆಯ ಸಿಪ್ಪೆಗಳಲ್ಲಿ ಆಂಟಿಮೈಕ್ರೊಬೈಯಲ್ ಮತ್ತು ಆಂಟಿಆಕ್ಸಿಡೆಂಟ್ ಅಂಶಗಳು ಅಧಿಕವಾಗಿರುತ್ತವೆ. ಇದು ತ್ವಚೆಯ ಇನ್‍ಫೆಕ್ಷನ್‍ಗಳಿಗೆ ಹೇಳಿ ಮಾಡಿಸಿದ ಮನೆ ಮದ್ದಾಗಿರುತ್ತದೆ. ಇದು ತ್ವಚೆಯಲ್ಲಿರುವ ಸಂಕೋಚಕ ಗುಣಗಳನ್ನು ಉದ್ದೀಪನ ಮಾಡುತ್ತದೆ. ಈ ಸಂಕೋಚಕ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ನಿಮ್ಮ ತ್ವಚೆಯನ್ನು ಬಿಗಿ ಮಾಡುತ್ತವೆ ಮತ್ತು ತ್ವಚೆಯಲ್ಲಿರುವ ರಂಧ್ರಗಳನ್ನು ಮುಚ್ಚುತ್ತದೆ. ಇವು ತ್ವಚೆ ಇಳಿ ಬೀಳುವುದನ್ನು ತಡೆಯುತ್ತದೆ, ಜೊತೆಗೆ ಇದು ವಯಸ್ಸಾದಂತೆ ಕಾಣುವುದನ್ನು ಸಹ ತಡೆಯುತ್ತದೆ.
ಈ ಸಿಪ್ಪೆಗಳನ್ನು ಹೇಗೆಲ್ಲ ಬಳಸಬಹುದು ಎಂದು ತಿಳಿದುಕೊಳ್ಳೋಣ
*ದಾಳಿಂಬೆ ಸಿಪ್ಪೆಗಳನ್ನು ಒಣಗಿಸಿ, ಪುಡಿ ಮಾಡಿ ಒಂದು ಗಾಳಿಯಾಡದ ಜಾಡಿಯಲ್ಲಿ ಹಾಕಿ ಇಟ್ಟುಕೊಳ್ಳಿ. ಈ ಪುಡಿಯನ್ನು ತಿಂಗಳಾನುಗಟ್ಟಲೆ ಬಳಸಿಕೊಳ್ಳಬಹುದು. ಇದನ್ನು ಪೇಸ್ ಮಾಸ್ಕ್ ಹಾಗಿ, ಸ್ಕ್ರಬ್ ಆಗಿ ಅಥವಾ ಇತರೆ ಫೇಸ್ ಪ್ಯಾಕ್‌ಗಳ ಜೊತೆಗೆ ಬಳಸಿಕೊಳ್ಳಬಹುದು. ಕೆಲವೊಮ್ಮೆ ನೀವು ತಾಜಾ ದಾಳಿಂಬೆ ಸಿಪ್ಪೆಯನ್ನು ಸಹ ಕೆಲವೊಂದು ಫೇಸ್ ಪ್ಯಾಕ್‌ಗಳಿಗೆ ಬಳಸಿಕೊಳ್ಳಬಹುದು.
*ದಾಳಿಂಬೆಯ ಕೆಲವೊಂದು ಸಿಪ್ಪೆಗಳನ್ನು ಸುಲಿದುಕೊಂಡು, ಅವುಗಳನ್ನು ಜಜ್ಜಿಕೊಳ್ಳಿ. ಒಂದು ಟೇಬಲ್ ಚಮಚ ದಾಳಿಂಬೆ ಸಿಪ್ಪೆಗೆ ಎರಡು ಟೇಬಲ್ ಚಮಚ ಮಲಾಯ್ ಅಥವಾ ಕೆನೆಯನ್ನು ಹಾಕಿ. ನಂತರ ಇದಕ್ಕೆ ಸ್ವಲ್ಪ ಕಡಲೆ ಹಿಟ್ಟನ್ನು ಹಾಕಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಮತ್ತು ಕುತ್ತಿಗೆಗೆ ಲೇಪಿಸಿಕೊಳ್ಳಿ. 15 ನಿಮಿಷ ಇದನ್ನು ಬಿಟ್ಟು, ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
*ಜೊತೆಗೆ ನೀವು ದಾಳಿಂಬೆಯ ಒಣ ಪುಡಿಯನ್ನು ಸಹ ನೀವು ಬಳಸಿಕೊಳ್ಳಬಹುದು. ದಾಳಿಂಬೆಯ ಒಣಪುಡಿಗೆ ರೋಸ್ ವಾಟರ್ ಅನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಲೇಪಿಸಿ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಈ ಪ್ಯಾಕ್‌ಗಳನ್ನು ದಿನಕ್ಕೆ ಎರಡು ಬಾರಿ ನಿಮ್ಮ ಮುಖಕ್ಕೆ ಲೇಪಿಸಿ, ಹೊಳೆಯುವ ಸೌಂದರ್ಯದಿಂದ ಕೂಡಿದ, ನಳನಳಿಸುವ ತ್ವಚೆಯನ್ನು ಪಡೆಯಿರಿ.



Click it and Unblock the Notifications


