Latest Updates
-
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ? -
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ! -
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!
ಕುಂಬಳಕಾಯಿ ಫೇಸ್ ಪ್ಯಾಕ್, ತಾರುಣ್ಯಕ್ಕೆ ಹೊಸ ಲುಕ್
ತಾರುಣ್ಯವನ್ನು ಕಾಪಾಡುವ ಯಾವುದೇ ವಸ್ತುವಾಗಲಿ ಅದು ಎಲ್ಲರಿಗೂ ಪ್ರಿಯವಾದದ್ದು. ತಮ್ಮ ಸೌಂದರ್ಯದ ಲಾವಣ್ಯದಲ್ಲಿ ಸ್ವಲ್ಪ ಕೊರತೆಯುಂಟಾದರೂ ಅದನ್ನು ಹೆಚ್ಚಿನವರು ಸಹಿಸಲಾರರು. ಇನ್ನು ಮುಖದ ಮೇಲೆ ಕಪ್ಪು ಕಲೆಗಳು, ಸಣ್ಣ ಗೆರೆಗಳು, ಸುಕ್ಕುಗಳು ಉಂಟಾದರಂತೂ ಹೊರಗಡೆ ಅವರ ಮುಖವನ್ನು ಯಾರಿಗೂ ತೋರಿಸಲಾರದಷ್ಟು ನಿರಾಸೆ ಹೊಂದುವ ಲಕ್ಷಣ ಈಗಿನ ಕಾಲದ ಯುವತಿಯರಲ್ಲಿ ಹೆಚ್ಚಿದೆ.
ಈ ರೀತಿಯ ಲಕ್ಷಣಗಳು ನಿಮ್ಮನ್ನು ಬಾಧಿಸುತ್ತಿದ್ದರೆ ಕುಂಬಳಕಾಯಿಯ ಫೇಸ್ ಪ್ಯಾಕ್ ಅನ್ನು ಒಮ್ಮೆ ಪ್ರಯತ್ನಿಸಲೇಬೇಕು. ಕುಂಬಳಕಾಯಿಯ ಪ್ರಯೋಜನದ ಬಗ್ಗೆ ಈಗಾಗಲೇ ಅನೇಕ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ. ಈ ಲೇಖನದಲ್ಲಿಯೂ ಸಹ ಕುಂಬಳಕಾಯಿಯಿಂದ ನಿಮ್ಮ ತ್ವಚೆಯ ಸೌಂದರ್ಯಕ್ಕೆ ಉಪಯುಕ್ತವಾಗುವ ಕೆಲವು ಸಂಗತಿಗಳನ್ನು ನೀಡಲಾಗಿದೆ.

ಕುಂಬಳಕಾಯಿಯ ಫೇಸ್ ಪ್ಯಾಕ್ ಹೇಗೆ ಉಪಯುಕ್ತವಾಗಲಿದೆ?
ಕುಂಬಳಕಾಯಿಯಲ್ಲಿ ಉತ್ಕರ್ಷಣ ನಿರೋಧಕ ಸತ್ವ, ವಿಟಮಿನ್‌ಗಳು ಮತ್ತು ಜಿಂಕ್ ಸತ್ವವು ಯಥೇಚ್ಛವಾಗಿದ್ದು, ನಿಮ್ಮ ಚರ್ಮವನ್ನು ಕಪ್ಪು ಕಲೆಗಳಿಂದ ಮತ್ತು ಸುಕ್ಕುಗಟ್ಟುವುದರಿಂದ ಸಂರಕ್ಷಿಸುತ್ತದೆ. ಇದು ನಿಮ್ಮ ತ್ವಚೆಯ ಒಳಗಿನಿಂದ ನಿಧಾನವಾಗಿ ಚರ್ಮಕ್ಕೆ ಕಾಂತಿಯನ್ನು ಹೆಚ್ಚಿಸಿ ನಳನಳಿಸುವಂತೆ ಮಾಡುತ್ತದೆ. ಅದರಲ್ಲೂ ವಿಟಮಿನ್‌ಗಳ ಆಗರವಾಗಿರುವ ಕುಂಬಳಕಾಯಿ ಕೊಲಾಜೆನ್ ಎಂಬ ಪ್ರೊಟೀನ್ ಅನ್ನು ಉತ್ಪತ್ತಿ ಮಾಡಿ ನಿಮ್ಮ ಚರ್ಮವನ್ನು ಸದೃಢಗೊಳಿಸಿ ಮೃದುವಾಗಿಸುತ್ತದೆ. ಚರ್ಮಕ್ಕೆ ಅಂಟಿರುವ ಧೂಳಿನ ಅಂಶಗಳನ್ನು ಹೊರತೆಗೆದು ಶುಚಿಯಾಗಿರಿಸಲು ಇದು ಉತ್ತಮ ಸಾಧನವಾಗಿದೆ. ಕುಂಬಳಕಾಯಿ ನಾಲಗೆಗೂ ರುಚಿ ಮುಖದ ಕಾಂತಿಗೂ ಹಿತ!
ಉಪಯೋಗಿಸುವ ವಿಧಾನ?
*ಒಂದು ಪೂರ್ಣವಾದ ಮೊಟ್ಟೆಯನ್ನು ಹೊಡೆದು ಒಂದು ಬಟ್ಟಲಿಗೆ ಅದರ ಸತ್ವವನ್ನು ಹಾಕಿ ಇಟ್ಟುಕೊಳ್ಳಿ.
*ಇದಕ್ಕೆ ಅರ್ಧ ಕಪ್ ಕುಂಬಳಕಾಯಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮೊಟ್ಟೆಯ ಬಿಳಿ ಅಂಶವು ಚರ್ಮಕ್ಕೆ ಬಿಗಿಗೊಳಿಸಲಿದ್ದು, ಅದರ ಭಂಡಾರ ಅಂಶವು ಚರ್ಮಕ್ಕೆ ಆರೈಕೆ ನೀಡುತ್ತದೆ.
*ಒಂದು ವೇಳೆ ನಿಮ್ಮ ಚರ್ಮವನ್ನು ಒಣ ಚರ್ಮವಿದ್ದಲ್ಲಿ ಈ ಮಿಶ್ರಣಕ್ಕೆ 2 ರಿಂದ 3 ಚಮಚ ಜೇನನ್ನು ಬೆರೆಸಿ. ಜೇನು ಚರ್ಮಕ್ಕೆ ಒಳಗಿನಿಂದಲೇ ತೇವಾಂಶ ನೀಡಿ ಚರ್ಮ ಒಡೆಯುವದನ್ನು ತಪ್ಪಿಸುತ್ತದೆ ಏಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾ ನಿರೋಧಕ ಗುಣವು ಹೇರಳವಾಗಿದೆ.
*ಒಂದು ವೇಳೆ ನಿಮ್ಮ ಚರ್ಮವು ಜಿಡ್ಡಿನ ಚರ್ಮವಿದ್ದಲ್ಲಿ 1 ರಿಂದ 2 ಚಮಚ ಸೇಬು ಮಿಶ್ರಿತ ವಿನೇಗರ್ ರಸವನ್ನು ಈ ಮಿಶ್ರಣಕ್ಕೆ ಬೆರೆಸಿಕೊಳ್ಳಿ. ಇದು ನಿಮ್ಮ ಚರ್ಮಕ್ಕೆ ಒಳಗಿನಿಂದಲೇ ತೇವಾಂಶ ನೀಡಿ ಹೆಚ್ಚು ಮೃದುಗೊಳಿಸುತ್ತದೆ.
*ಈ ಮಿಶ್ರಣವನ್ನು ನಿಮ್ಮ ತ್ವಚೆಗೆ ನಯವಾಗಿ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಂಪಾದ ನೀರಿನಿಂದ ಸ್ವಚ್ಛಗೊಳಿಸಿ. ಇದು ನಿಮ್ಮ ಚರ್ಮಕ್ಕೆ ಸದೃಢತೆಯನ್ನು ನೀಡಿ, ಕಾಂತಿಯನ್ನು ಇಮ್ಮಡಿಗೊಳಿಸಿ ಚರ್ಮವನ್ನು ಹೆಚ್ಚು ನಾಜೂಕಾಗಿಸುತ್ತದೆ. ಇದರಿಂದ ಹೆಚ್ಚಿನ ಫಲಿತಾಂಶ ಹೊಂದಲು ಈ ಪ್ರಕ್ರಿಯೆಯನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಅನುಸರಿಸಿ.



Click it and Unblock the Notifications
