Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುದೀನಾ ಎಣ್ಣೆ ಮಾಡಲಿದೆ ತ್ವಚೆ + ಕೂದಲಿಗೆ ಕಮಾಲಿನ ಮ್ಯಾಜಿಕ್
ಪ್ರತಿಯೊಬ್ಬರೂ ಕೂಡ ತಮ್ಮ ಕೂದಲಿನ ಹಾಗೂ ಸೌಂದರ್ಯದ ಬಗ್ಗೆ ಎಕ್ಸ್ಟ್ರಾ ಕೇರ್ ತೆಗೆದುಕೊಳ್ಳಲೇಬೇಕು. ಅದಕ್ಕಾಗಿ ನೀವು ಬಳಸಬಹುದಾದ ಅತ್ಯಮೂಲ್ಯ ವಸ್ತುವೆಂದರೆ ಪುದೀನಾ.. ಬನ್ನಿ ಇದರ ಮ್ಯಾಜಿಕ್ ಏನೆಂಬುದನ್ನು ಮುಂದೆ ಓದಿ...
ಮಹಿಳೆಯರು ತಮ್ಮ ಸೌಂದರ್ಯಕ್ಕೆ ವಿಷಯಕ್ಕೆ ಬಂದಾಗ ತುಂಬಾ ಜಾಗರೂಕರಾಗಿರುತ್ತಾರೆ. ಅದರಲ್ಲೂ ತಮ್ಮ ಕೂದಲು ಮತ್ತು ತ್ವಚೆಯ ಅಂದಕ್ಕಾಗಿ ತುಂಬಾ ಮುತುವರ್ಜಿಯನ್ನೇ ವಹಿಸುತ್ತಾರೆ. ಒಳ್ಳೆಯ ಸೌಂದರ್ಯ ಉತ್ಪನ್ನಗಳನ್ನೇ ಖರೀದಿಸುತ್ತಾರೆ. ಆದರೆ ನೀವು ಎಷ್ಟೇ ದುಬಾರಿ ಉತ್ಪನ್ನಗಳನ್ನು ಬಳಸಿದರೂ ನೈಸರ್ಗಿಕ ವಿಧಾನಗಳು ನೀಡುವ ಫಲವನ್ನು ಅವುಗಳ ಬಳಕೆಯನ್ನು ಮಾಡಿಯೇ ಅರಿಯಬೇಕು.
ಇಂದು ನಿಮ್ಮ ತ್ವಚೆ ಮತ್ತು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುವ ಪುದೀನಾ ಎಣ್ಣೆ ಮಾಡುವ ಜಾದೂವನ್ನೇ ಇಂದಿಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಪುದೀನಾವನ್ನು ಎಣ್ಣೆಯ ರೂಪದಲ್ಲಿ ಬಳಸಬಹುದಾಗಿದೆ. ಸುವಾಸನೆಯುಕ್ತ ಎಣ್ಣೆ ಇದಾಗಿದ್ದು ಇದನ್ನು ಹಲವಾರು ವಿಧಾನಗಳಲ್ಲಿ ಬಳಕೆ ಮಾಡಬಹುದಾಗಿದೆ. ಇದನ್ನು ಸಂಪೂರ್ಣ ಸುರಕ್ಷಿತವಾಗಿ ತ್ವಚೆಗೆ ಬಳಸಬಹುದಾಗಿದೆ ಹಾಗಿದ್ದರೆ ಬನ್ನಿ ಆ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳೋಣ...

1. ತ್ವಚೆಗೆ ಹೊಳಪನ್ನು ಉಂಟುಮಾಡಲು
ಈ ಎಣ್ಣೆಯಲ್ಲಿರುವ ತಂಪಿನ ಅಂಶಗಳು ಆಯಾಸಗೊಂಡ ಮತ್ತು ದಣಿದ ತ್ವಚೆಯನ್ನು ಆರಾಮಗೊಳಿಸುತ್ತದೆ. ಪ್ರತಿದಿನದ ಲೋಶನ್ಗೆ ಸ್ವಲ್ಪ ಹನಿಗಳನ್ನು ಹಾಕಿ ಮತ್ತು ಜಾದೂವನ್ನು ನೀವೇ ಕಂಡುಕೊಳ್ಳಿ
2.ಕೂದಲಿನ ಬೆಳವಣಿಗೆ
ಕೂದಲಿನ ಬುಡಕ್ಕೆ ರಕ್ತಸಂಚಾರವನ್ನು ಸರಾಗಗೊಳಿಸಿ ಕೂದಲು ಬೆಳೆಯುವಂತೆ ಮಾಡುತ್ತದೆ. ನಿಮ್ಮ ನಿತ್ಯದ ಎಣ್ಣೆಗೆ ಪುದೀನಾ ಎಣ್ಣೆಯ ಕೆಲವು ಹನಿಗಳನ್ನು ಹಾಕಿ ಮತ್ತು ಮಸಾಜ್ ಮಾಡಿ.
3.ಮೊಡವೆ
ಮುಖದ ತ್ವಚೆಯು ಹೆಚ್ಚು ಜಿಡ್ಡುಯುಕ್ತಗೊಳ್ಳುವುದರಿಂದ ಇದು ತಡೆಯುತ್ತದೆ, ತ್ವಚೆಯನ್ನು ನಿರಾಳಗೊಳಿಸಿ ಮತ್ತು ಹೆಚ್ಚಿನ ಹಾನಿಯನ್ನು ತಡೆಗಟ್ಟುತ್ತದೆ. ಮೊಡವೆಗಳನ್ನು ಹೋಗಲಾಡಿಸುತ್ತದೆ.
4.ಫೇಸ್ ಸ್ಕ್ರಬ್
ಬ್ರೌನ್ ಶುಗರ್ ಮತ್ತು ಆಲೀವ್ ಆಯಿಲ್ಗೆ ಕೆಲವು ಹನಿಗಳನ್ನು ಹಾಕಿ ಮತ್ತು ಸ್ಕ್ರಬ್ನಂತೆ ಬಳಸಿ. ನಿಮ್ಮ ತ್ವಚೆಯನ್ನು ಹೊಳಪಾಗಿಸಲು ಈ ಸ್ಕ್ರಬ್ ಸಹಕಾರಿ. ತುಟಿಗೂ ಈ ಸ್ಕ್ರಬ್ ಅನ್ನು ಹಚ್ಚಿಕೊಳ್ಳಬಹುದಾಗಿದೆ.
5.ಟೋನರ್
ಆಪಲ್ ಸೀಡರ್ ವಿನೇಗರ್ಗೆ ಕೆಲವು ಹನಿಗಳಷ್ಟು ಪುದೀನಾ ಎಣ್ಣೆಯನ್ನು ಸೇರಿಸಿ. ಮುಖದ ಪಿಎಚ್ ಮಟ್ಟವನ್ನು ನಿರ್ವಹಿಸಲು ಟೋನರ್ ಸಹಕಾರಿಯಾಗಲಿದ್ದು ಜಿಡ್ಡನ್ನು ನಿವಾರಿಸಲಿದೆ.
6.ಫೇಸ್ ಪ್ಯಾಕ್
ತ್ವರಿತ ಕೂಲಿಂಗ್ ಅನುಭವವನ್ನು ಪಡೆದುಕೊಳ್ಳಲು ಯಾವುದೇ ಫೇಸ್ ಪ್ಯಾಕ್ಗೆ ಎಣ್ಣೆಯನ್ನು ಬಳಸಿಕೊಳ್ಳಿ. ನೀವು ಮುಖವನ್ನು ತೊಳೆದುಕೊಂಡ ನಂತರ ಇನ್ನಷ್ಟು ಪ್ರಖರತೆಯನ್ನು ನೀವು ಮುಖದಲ್ಲಿ ಕಾಣುವಿರಿ.
7.ಒಣ ಕೂದಲು
ಆಲೀವ್ ಆಯಿಲ್ ಅಥವಾ ತೆಂಗಿನೆಣ್ಣೆಯೊಂದಿಗೆ ಪುದೀನಾ ಎಣ್ಣೆಯನ್ನು ಸೇರಿಸಿ ನಿಮ್ಮ ಕೂದಲಿನ ಬುಡ ಮತ್ತು ತುದಿಗೆ ಹಚ್ಚಿಕೊಳ್ಳಿ ಕೂದಲು ಹೊಳೆಯುವುದನ್ನು ನೀವೇ ಗಮನಿಸಿ.



Click it and Unblock the Notifications






