Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಅಷ್ಟಕ್ಕೂ ದಿನಕ್ಕೆಷ್ಟು ಬಾರಿ ಮುಖ ತೊಳೆಯಬೇಕು?
ದಿನಕ್ಕೆಷ್ಟು ಬಾರಿ ಮುಖ ತೊಳೆಯಬೇಕು? ಈ ಪ್ರಶ್ನೆಗೆ ಪ್ರತಿ ವ್ಯಕ್ತಿಯಿಂದ ಬೇರೆ ಬೇರೆ ಉತ್ತರ ದೊರಕಬಹುದು. ಆದರೆ ಸೌಂದರ್ಯತಜ್ಞರು ಒಂದೇ ಪದದಲ್ಲಿ ಉತ್ತರ ನೀಡುವುದಿಲ್ಲ. ಬದಲಿಗೆ ಚರ್ಮದ ಆರೈಕೆಗೆ ಅಗತ್ಯವಿರುವ ಕೆಲವು ಕ್ರಮಗಳನ್ನು ಅನುಸರಿಸುವಂತೆ ಸೂಚಿಸುತ್ತಾರೆ. ಈ ಸೂಚನೆಗಳಲ್ಲಿ ದಿನದಲ್ಲಿ ಕೆಲವು ಬಾರಿ ಮುಖವನ್ನು ತೊಳೆಯುವುದೂ ಒಂದಾಗಿದೆಯೇ ಹೊರತು ಕೇವಲ ಮುಖನ್ನು ದಿನವಿಡೀ ತೊಳೆಯುತ್ತಾ ಇರುವುದೂ ಅಪಾಯಕಾರಿ. ಮುಖ ತೊಳೆಯುವಾಗ ಮಾಡಬಾರದ ತಪ್ಪು ಯಾವುದು?
ಕಾಂತಿಯುಕ್ತ, ನೆರಿಗೆಗಳಿಲ್ಲದ, ಸೌಮ್ಯ ಮತ್ತು ಆರೋಗ್ಯವಂತ ತ್ವಚೆ ಬೇಕೆಂದರೆ ತಿಂಗಳಿಗೊಂದು ಬಾರಿಯಾದರೂ ವೃತ್ತಿಪರ ಸೇವೆ ಪಡೆಯುವುದು ಅಗತ್ಯ ಹಾಗೂ ದಿನದಲ್ಲಿ ಸೂಕ್ತ ಆಹಾರ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಮತ್ತು ಇತರ ದ್ರವಾಹಾರಗಳನ್ನು ಸೇವಿಸುವುದೂ ಅಗತ್ಯವಾಗಿದೆ. ಈ ದ್ರವಾಹಾರಗಳಲ್ಲಿ ಸಾಧ್ಯವಾದಷ್ಟು ಹಣ್ಣಿನ ರಸಗಳಿರಲಿ, ಮತ್ತು ಅನಾರೋಗ್ಯಕರ ಪೇಯಗಳಾದ ಬುರುಗುಬರುವ ಲಘುಪಾನೀಯಗಳನ್ನು ತ್ಯಜಿಸುವುದೇ ಉತ್ತಮ ಏಕೆಂದರೆ ತಾಜಾ ಹಣ್ಣಿನ ರಸ ಮತ್ತು ಸ್ವಚ್ಛವಾದ ನೀರು ಚರ್ಮಕ್ಕೆ ಅಗತ್ಯವಾದ ದ್ರವ ನೀಡುವುದರೊಂದಿಗೇ ಸೂಕ್ಷ್ಮರಂಧ್ರಗಳನ್ನು ತೆರೆದು ಕಲ್ಮಶಗಳು ಹೊರಹೋಗುವಂತೆ ಮಾಡುತ್ತದೆ. ಲಘುಪಾನೀಯಗಳಲ್ಲಿರುವ ಕಣಗಳು ಸೂಕ್ಷ್ಮರಂಧ್ರಗಳು ಮುಚ್ಚುವಂತೆ ಮಾಡಿ ಕಲ್ಮಶಗಳನ್ನು ಒಳಗೇ ಇರುವಂತೆ ಮಾಡುತ್ತವೆ. ಇದು ಮೊಡವೆ ಮತ್ತಿತರ ತೊಂದರೆಗಳಿಗೆ ಕಾರಣವಾಗುತ್ತದೆ.
ಇದುವರೆಗೆ ತಮ್ಮ ಚರ್ಮದ ಬಗ್ಗೆ ಹೆಚ್ಚಿನ ಅರಿವಿಲ್ಲದೇ ಇರುವವರು ದಿನಕ್ಕೆ ಹಲವಾರು ಬಾರಿ ತೊಳೆದುಕೊಳ್ಳುವುದರಿಂದ ಸೌಂದರ್ಯ ಹೆಚ್ಚುತ್ತದೆ ಎಂಬ ಭಾವನೆ ಹೊಂದಿದ್ದರು. ಅದರಲ್ಲೂ ಎಣ್ಣೆಚರ್ಮದವರು ಘಂಟೆಗೊಂದು ಬಾರಿಯಾದರೂ ತೊಳೆದುಕೊಳ್ಳುತ್ತಿರುವುದನ್ನು ಗಮನಿಸಬಹುದು. ಆದರೆ ಒಂದು ವೇಳೆ ನಿಮ್ಮ ಚರ್ಮ ಒಣಚರ್ಮವಾಗಿದ್ದರೆ ದಿನಕ್ಕೆ ನಾಲ್ಕು ಬಾರಿ ಮುಖ ತೊಳೆಯುವುದು ಆರೋಗ್ಯಕರವಲ್ಲ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಅದರಲ್ಲೂ ಎಣ್ಣೆಚರ್ಮದವರು ಗರಿಷ್ಠ ಮೂರು ಬಾರಿ ಮಾತ್ರ ತೊಳೆದುಕೊಳ್ಳುವುದು ಹಿತಕರ, ಇದಕ್ಕಿಂತಲೂ ಹೆಚ್ಚು ಬಾರಿ ತೊಳೆಯುವುದು ಹಾನಿಕರ ಎನ್ನುತ್ತಾರೆ. ಯಾವ ಫೇಸ್ ವಾಶ್ ತ್ವಚೆಗೆ ಒಳ್ಳೆಯದು?
ಒಂದು ವೇಳೆ ಇತರ ಕಾರಣಗಳಿಂದ ಇದಕ್ಕೂ ಹೆಚ್ಚು ಬಾರಿ ತೊಳೆದುಕೊಳ್ಳಲೇಬೇಕಾಗಿದ್ದರೆ ಗರಿಷ್ಠ ನಾಲ್ಕು ಬಾರಿ ಬರೆಯ ನೀರಿನಿಂದ, ಸೋಪು ಲೋಷನ್ ಏನನ್ನೂ ಉಪಯೋಗಿಸದೇ ಮುಖ ತೊಳೆದುಕೊಳ್ಳಬಹುದು. ಈ ಬಗ್ಗೆ ತಜ್ಞರು ಕೆಲವು ಕ್ರಮಗಳನ್ನು ಸೂಚಿಸಿದ್ದು ವಿಶೇಷವಾಗಿ ಬೇಸಿಗೆಯ ಬೆವರಿನ ಈ ಸಮಯದಲ್ಲಿ ಮುಖದ ತ್ವಚೆಯ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ವಿಶೇಷವಾಗಿ ಬೆವರಿನ ಗ್ರಂಥಿಗಳ ಮೂಲಕ ಸ್ರಾವಿಕೆಯ ಮೂಲಕ ಎದುರಾಗುವ ತುರಿಕೆಯನ್ನು, ತನ್ಮೂಲಕ ಎದುರಾಗುವ ಬೆವರುಸಾಲೆಯನ್ನು ತಡೆಯಲು ಕೆಳಗಿನ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯವೂ ಆಗಿದೆ...

ಬೆಳಿಗ್ಗೆ
ಬೆಳಿಗ್ಗೆ ನಿದ್ದೆಯಿಂದೆದ್ದಾಕ್ಷಣ ಮೊತ್ತ ಮೊದಲು ನಿಮ್ಮ ಮುಖವನ್ನು ಕೇವಲ ತಣ್ಣೀರಿನಿಂದ ತೊಳೆದುಕೊಂಡು ಹಲ್ಲುಗಳನ್ನೂ ಸ್ವಚ್ಛಗೊಳಿಸಿ. ಬಳಿಕವೇ ಮೊಡವೆ ನಿವಾರಕ ದ್ರಾವಣ ಅಥವಾ ಸೌಮ್ಯವಾದ ಮುಖಕ್ಕೆ ಉಪಯೋಗಿಸುವ ಸೋಪು ಅಥವಾ ಫೇಸ್ ವಾಶ್ ಮಾತ್ರವೇ ಬಳಸಿ. ಇದರಿಂದ ರಾತ್ರಿಯ ವೇಳೆ ಮುಖದ ಗ್ರಂಥಿಗಳಿಂದ ಸ್ರವಿಸಿದ್ದ ಕಲ್ಮಶಗಳು ನಿವಾರಣೆಯಾಗುತ್ತವೆ. ವಿಶೇಷವಾಗಿ ತೆರೆದಿರುವ ಸೂಕ್ಷ್ಮರಂಧ್ರಗಳು ಸ್ವಚ್ಛಗೊಂಡು ಇಡಿಯ ದಿನ ತಾಜಾತನ ಅನುಭವಿಸಲು ಸಾಧ್ಯವಾಗುತ್ತದೆ.

ಮಧ್ಯಾಹ್ನ
ಒಂದು ವೇಳೆ ನಿಮ್ಮ ಚರ್ಮ ಎಣ್ಣೆಚರ್ಮವಾಗಿದ್ದರೆ ಮದ್ಯಾಹ್ನ ಉಪಯೋಗಿಸಲು ಯಾವ ಸೋಪು ಅಥವಾ ದ್ರಾವಣ ಅಗತ್ಯ ಎಂದು ಚರ್ಮವೈದ್ಯರಿಂದ ಸಲಹೆ ಪಡೆದು ಖರೀದಿಸಿರುವ ಪ್ರಸಾದನವನ್ನು ಬಳಸಿ ಮುಖ ತೊಳೆದುಕೊಳ್ಳಿ. ಇದು ಎಣ್ಣೆಯ ಪಸೆಯ ಪ್ರಮಾಣ ಹೆಚ್ಚಿದ್ದರೆ ಮಾತ್ರ. ಇಲ್ಲದಿದ್ದರೆ ಬರೆಯ ತಣ್ಣೀರು ಮಾತ್ರ ಸಾಕು. ಇದರಿಂದ ಮುಖದ ಮೇಲಿದ್ದ ಎಣ್ಣೆಯ ಪಸೆ ನಿವಾರಣೆಯಾಗುತ್ತದೆ. ವಿಶೇಷವಾಗಿ ಮೂಗಿನ ಪಕ್ಕ ಮತ್ತು ಹಣೆಯ ಕೆಳಭಾಗದಲ್ಲಿ ಎಣ್ಣೆಯ ಪಸೆ ಹೆಚ್ಚಾಗಿದ್ದು ಇಲ್ಲಿ ಕೊಂಚ ಹೆಚ್ಚಾಗಿ ತೊಳೆದುಕೊಳ್ಳುವುದು ಅಗತ್ಯವಾಗಿದೆ. ಉಳಿದ ಬಗೆಯ ಚರ್ಮದವರು ಕೇವಲ ಕೊಂಚವೇ ಪ್ರೋಕ್ಷಳಿಸಿಕೊಂಡರೆ ಸಾಕು.

ಸಂಜೆ
ಸಂಜೆ ಕೆಲಸದಿಂದ ಮನೆಗೆ ಹಿಂದಿರುಗಿದ ಬಳಿಕ ಸ್ನಾನ ಮಾಡಿ ಮುಖವನ್ನು ಒದ್ದೆಯಾಗಿಸಿಕೊಳ್ಳಿ. ನಿಮ್ಮ ಚರ್ಮಕ್ಕೆ ಸೂಕ್ತವಾದ ಪ್ರಸಾದನ ಬಳಸಿ ಮುಖದ ಕೊಳೆಯನ್ನೆಲ್ಲಾ ತೊಳೆದುಕೊಳ್ಳಿ. ಬಳಿಕ ಮನೆಯಲ್ಲಿಯೇ ತಯಾರಿಸಿದ ಅಥವಾ ಸೂಕ್ತವಾದ ನೈಸರ್ಗಿಕ ಸಾಮಾಗ್ರಿಗಳಿರುವ ಮುಖಲೇಪ ಹಚ್ಚಿ ಕೊಂಚ ಹೊತ್ತು ಬಿಟ್ಟು ನಿವಾರಿಸಿಕೊಳ್ಳಿ. ಈ ಮೂಲಕ ದಿನವಿಡೀ ನಿಮ್ಮ ಮುಖ ತಾಜಾತನವನ್ನು ಉಳಿಸಿಕೊಳ್ಳುತ್ತದೆ.

ಕೆಲವು ಅಗತ್ಯ ಸಲಹೆಗಳು
*ಇನ್ನೂ ಚೆನ್ನಾಗಿ ಕಾಣುವಂತಹ ಚರ್ಮಕ್ಕಾಗಿ: ಮುಖವನ್ನು ತೊಳೆದುಕೊಳ್ಳಲು ಪ್ರತಿಬಾರಿಯೂ ಫೇಸ್ ವಾಶ್ ಬಳಸಬೇಡಿ, ಏಕೆಂದರೆ ಇದರಲ್ಲಿರುವ ರಾಸಾಯನಿಕಗಳು ಕೊಳೆಯ ಜೊತೆಗೇ ಚರ್ಮಕ್ಕೆ ಆರ್ದ್ರತೆ ನೀಡುವ ತೈಲಗಳನ್ನೂ ಸೆಳೆದುಕೊಳ್ಳುವ ಮೂಲಕ ಚರ್ಮವನ್ನು ಒಣದಾಗಿಸುತ್ತದೆ. ಇದು ಚರ್ಮವನ್ನು ನಿಸ್ತೇಜವಾಗಿಸುತ್ತದೆ.
*ಒಂದು ವೇಳೆ ಎಣ್ಣೆ ಪಸೆ ಹೆಚ್ಚಾಗಿದ್ದರೆ: ಫೇಸ್ ವಾಶ್ ಬದಲು ಟೋನರ್ ದ್ರಾವಣವನ್ನು ಬಳಸಿ. ಬಳಿಕ ಕೇವಲ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.
ಒಂದು ವೇಳೆ ಸೂಕ್ಷ್ಮಸಂವೇದಿ ಚರ್ಮವಾಗಿದ್ದರೆ ಉಗುರುಬೆಚ್ಚನೆಯ ನೀರು ಬಳಸಿ ಮಕ್ಕಳಿಗೆ ಉಪಯೋಗಿಸುವ ಬೇಬಿ ಸೋಪ್ ಬಳಸಿ ಮುಖವನ್ನು ತೊಳೆದುಕೊಳ್ಳಿ.

ಕೆಲವು ಅಗತ್ಯ ಸಲಹೆಗಳು
ಎರಡು ನಿಮಿಷಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳದಿರಿ: ನಮ್ಮ ದೇಹದಲ್ಲಿ ಮುಖದ ಚರ್ಮವೇ ಅತ್ಯಂತ ಹೆಚ್ಚು ಸಂವೇದಿಯಾಗಿರುವ ಕಾರಣ ಹೆಚ್ಚಿನ ಹೊತ್ತು ತೊಳೆದುಕೊಳ್ಳುವ ಮೂಲಕ ಇದು ಒಳ್ಳೆಯದು ಮಾಡುವ ಬದಲಿಗೆ ಕೆಟ್ಟದ್ದನ್ನೇ ಮಾಡಬಹುದು. ತಜ್ಞರ ಪ್ರಕಾರ ಮುಖ ತೊಳೆಯಲು ಎರಡು ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು.

ಕೆಲವು ಅಗತ್ಯ ಸಲಹೆಗಳು
ಟವೆಲ್ ಒತ್ತಿಕೊಳ್ಳಿ, ಉಜ್ಜಬೇಡಿ: ಮುಖ ತೊಳೆದ ಬಳಿಕ ಕೆಲವರು ಟವೆಲ್ ನಿಂದ ಗಸಗಸ ಉಜ್ಜಿ ಒರೆಸಿಕೊಳ್ಳುತ್ತಾರೆ. ಇದರಿಂದ ಮುಖದ ಚರ್ಮದ ಜೀವಕೋಶಗಳು ಕಿತ್ತು ಬರುತ್ತವೆ. ಬದಲಿಗೆ ಕೇವಲ ಒತ್ತಿಕೊಂಡು ಮುಖ ಒರೆಸಿಕೊಳ್ಳಿ.



Click it and Unblock the Notifications











