Latest Updates
-
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ
ಕುಂಬಳಕಾಯಿ ನಾಲಗೆಗೂ ರುಚಿ ಮುಖದ ಕಾಂತಿಗೂ ಹಿತ!
ಮುಖದ ಕಾಂತಿಯನ್ನು ಹೆಚ್ಚಿಸಲು ಅನೇಕರು ಅನೇಕ ರೀತಿಯ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಾಸಾಯನಿಕ ಸೌಂದರ್ಯವರ್ಧಕಗಳ ಬಳಕೆ ಹೆಚ್ಚಾಗಿ ಅದರಿಂದ ಉಪಯೋಗವಾಗುವ ಬದಲು ದುಷ್ಪರಿಣಾಮಗಳು ಉಂಟಾಗಿ ಮಾನಸಿಕವಾಗಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ತ್ವಚೆಯ ಕಾಂತಿ ಹೆಚ್ಚಿಸಲು ಪ್ರಾಕೃತಿಕವಾಗಿ ಬಂದಂತಹ ನೈಸರ್ಗಿಕ ವಿಧಾನಗಳನ್ನು ಬಳಸಲು ನಾವು ನಿಮಗೆ ಸೂಚಿಸುತ್ತಿದ್ದೇವೆ. ಮುಖದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗುವ ಅನೇಕ ರೀತಿಯ ತರಕಾರಿ ಹಾಗೂ ಹಣ್ಣುಗಳು ನಮಗೆ ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ. ಅದರಲ್ಲಿ ಸೌತೇಕಾಯಿ, ಪಪ್ಪಾಯ, ಸ್ಟ್ರಾಬೆರ್ರಿ, ಮಾವು, ಕ್ಯಾರೆಟ್ ಹೀಗೆ ಈ ತರಕಾರಿಗಳಿಂದ ಅನೇಕ ವಿಧದ ಮುಖದ ಮಾಸ್ಕ್ ಮತ್ತು ಪ್ಯಾಕ್ ಅನ್ನು ತಯಾರಿಸಬಹುದು. ಆರೋಗ್ಯದ ಪಾಲಿನ ಸಂಜೀವಿನಿ-ಸಿಹಿ ಕುಂಬಳಕಾಯಿ

ಹೀಗಿರುವಾಗ, ಕುಂಬಳಕಾಯಿಯನ್ನು ಅನೇಕರು ಸೇವಿಸಲು ಉಪಯೋಗಿಸಿದರೆ ಅದನ್ನು ಮುಖದ ಕಾಂತಿ ಹೆಚ್ಚಿಸಲು ಬಳಸಬಹುದೆಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ಇದೊಂದು ನಿಖರವಾದ ಫೇಸ್ ಪ್ಯಾಕ್ ಎಂದು ಇತ್ತೀಚಿನ ಅಧ್ಯಯನವೊಂದು ಸಾಬೀತುಪಡಿಸಿದೆ. ಇದನ್ನು ಎಲ್ಲ ರೀತಿಯ ಚರ್ಮಗಳಿಗೆ ಉಪಯೋಗಿಸಬಹುದಾಗಿದೆ. ಇದರಲ್ಲಿರುವ ವಿಟಮಿನ್ ಮತ್ತು ಪೌಷ್ಠಿಕಾಂಶದ ಸತ್ವಗಳು ಚರ್ಮದ ಕಾಂತಿಯನ್ನು ಇಮ್ಮಡಿಗೊಳಿಸಿ ಆರೋಗ್ಯವಾಗಿರಿಸುತ್ತದೆ. ಅಲ್ಲದೆ ಇದರಲ್ಲಿರುವ ವಿಶಿಷ್ಟ ಗುಣವು ಚರ್ಮದ ಮೇಲಿರುವ ಸತ್ತ ಜೀವ ಕೋಶಗಳನ್ನು ಹೊರತೆಗೆಯುತ್ತದೆ. ಕುಂಬಳಕಾಯಿಯಿಂದ ಅನೇಕ ರೀತಿಯ ಫೇಸ್ ಪ್ಯಾಕ್ ಅನ್ನು ತಯಾರಿಸಬಹುದಾಗಿದೆ. ಇದರಲ್ಲಿರುವ ಇನ್ನೊಂದು ಗುಣವೆಂದರೆ ಇದನ್ನು ತಲೆಯ ಹೊಟ್ಟಿನ ನಿವಾರಣೆಗೆ ಹಾಗೂ ಕೂದಲು ಉದುರುವಿಕೆಯನ್ನು ತಡೆಯಲು ಸಹ ಬಳಸಬಹುದಾಗಿದೆ.
ಚರ್ಮಕ್ಕೆ ಕುಂಬಳಕಾಯಿಯ ಉಪಯೋಗ
ಚರ್ಮದ ಜೀವಕೊಶಗಳನ್ನು ಹೆಚ್ಚಿಸಲು ಬೇಕಾದಂತಹ ಹಣ್ಣಿನ ಅಂಶದ ಸತ್ವಗಳು ಇದರಲ್ಲಿರುವುದರಿಂದ ಚರ್ಮವು ನಾಜೂಕಾಗಲು ಸಹಕಾರಿಯಾಗಿದೆ. ಚರ್ಮದ ವಯಸ್ಸಾಗುವಿಕೆಯನ್ನು ತಡೆಯಲು ಬೇಕಾದಂತಹ ಕೊಲಾಜೆನ್ ಸತ್ವವು ಉತ್ಪತ್ತಿ ಮಾಡುವ ವಿಟಮಿನ್ ಎ ಮತ್ತು ಎನ್ ಸತ್ವಗಳು ಇದರಲ್ಲಿ ಹೇರಳವಾಗಿದೆ. ಜಿಡ್ಡು ಮತ್ತು ಮೊಡವೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ಬೇಕಾದಂತಹ ಜಿಂಕ್ ಸತ್ವವು ಸಹ ಇದರಲ್ಲಿ ಹೇರಳವಾಗಿದೆ. ಕುಂಬಳಕಾಯಿ ಜ್ಯೂಸ್‌ನಲ್ಲಿ ಅಡಗಿದೆ ಸಕಲ ಸೌಂದರ್ಯದ ರಹಸ್ಯ
ಅದರಲ್ಲೂ ಜಿಡ್ಡಿನ ಚರ್ಮಕ್ಕೆ ಇದು ರಾಮ ಬಾಣವಿದ್ದಂತೆ ಏಕೆಂದರೆ ಇದರ ಬೀಜಗಳಲ್ಲಿ ವಿಟಮಿನ್ ಇ ಮತ್ತು ಅವಶ್ಯ ಆಮ್ಲಗಳು ಹೆಚ್ಚಿದ್ದು, ನಿಜಕ್ಕೂ ಹೆಚ್ಚು ಪರಿಣಾಮಕಾರಿಯಾಗಿದೆ. ಕುಂಬಳಕಾಯಿಯ ಫೇಸ್ ಪ್ಯಾಕ್ ನಿಜಕ್ಕೂ ಮಂದ ಚರ್ಮದ, ಚರ್ಮದ ವಯಸ್ಸಾಗುವಿಕೆ ಮತ್ತು ಕಪ್ಪು ಕಲೆಗಳಿಗೆ ಹೇಳಿಮಾಡಿಸಿದಂತಿದೆ. ಇದರಲ್ಲಿ ಬಿಸಿಲಿನ ಬೇಗೆಯಿಂದಲೂ ಸಹ ಚರ್ಮವನ್ನು ಸಂರಕ್ಷಿಸುವ ಗುಣ ಹೊಂದಿದೆ.
ಕುಂಬಳಕಾಯಿಯ ಪ್ಯೂರೀ ಅಥವಾ ದ್ರವ್ಯವನ್ನು ತಯಾರಿಸುವ ವಿಧಾನ?
ಮೊದಲಿಗೆ ಕುಂಬಳಕಾಯಿಯನ್ನು ಸಣ್ಣದಾಗಿ ಹೋಳುಗಳಾಗಿ ಕತ್ತರಿಸಿಕೊಂಡು, ಕುಕ್ಕರಿನಲ್ಲಿ ಎರಡು ಅಥವಾ ಮೂರು ವಿಸಿಲ್ ಹಾಕಿ, ಬೇಯಿಸಿಕೊಂಡು, ದಪ್ಪ ಪೇಸ್ಟಿನಂತೆ ಮಾಡಿಕೊಳ್ಳಿ.
ತ್ವಚೆಯ ಕಾಂತಿ ಹೆಚ್ಚಿಸಲು
ಎರಡು ಚಮಚ ಕುಂಬಳಕಾಯಿ ದ್ರವ್ಯವನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಅದಕ್ಕೆ ಎರಡು ಚಮಚ ಮಲಾಯಿ ಕ್ರೀಮ್ ಮತ್ತು ಸ್ವಲ್ಪ ಜೇನನ್ನು ಬೆರೆಸಿ. ಮಲಾಯಿ ಕ್ರೀಮ್ ನಲ್ಲಿ ಹೆಚ್ಚು ಸತ್ವಯುಕ್ತ ಆಲ್ಫಾ-ಹೈಡ್ರಾಕ್ಸಿ ಆಮ್ಲವು ಹೇರಳವಾಗಿದ್ದು, ಚರ್ಮಕ್ಕೆ ಒಳಗಿನಿಂದಲೇ ತೇವಾಂಶ ನೀಡಿ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಮೇಲಿನ ಮಿಶ್ರಣಕ್ಕೆ 4 ಚಮಚ ಸಕ್ಕರೆಯನ್ನು ಬೆರೆಸಿ. ಸಕ್ಕರೆಯಲ್ಲಿರುವ ವಿಶಿಷ್ಟ ಗುಣವು ಚರ್ಮದ ಮೇಲಿರುವ ಸತ್ತ ಜೀವ ಕೋಶಗಳನ್ನು ಹೊರಹಾಕುತ್ತದೆ. ಈ ಮಿಶ್ರಣವನ್ನು ಪೇಸ್ಟ್ ಆಗುವವರೆಗೆ ಚೆನ್ನಾಗಿ ಕಲಸಿ ಮುಖಕ್ಕೆ ನಯವಾಗಿ ಹಚ್ಚಿ. ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ.
ಒಣ ಚರ್ಮ ಸಮಸ್ಯೆಗೆ
ಎರಡು ಚಮಚ ಕುಂಬಳಕಾಯಿ ದ್ರವ್ಯಕ್ಕೆ ಒಂದು ಚಮಚ ಜೇನು, ಒಂದು ಚಮಚ ದಾಲ್ಚಿನ್ನಿ ಚೆಕ್ಕೆಯ ಪುಡಿ, ಒಂದು ಚಮಚ ಹಾಲನ್ನು ಬೆರೆಸಿ ಪೇಸ್ಟ್ ಆಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ತದನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ನಯವಾಗಿ ಸ್ವಚ್ಛಗೊಳಿಸಿ ಕನ್ನಡಿಯಲ್ಲಿ ನಿಮ್ಮ ಅಂದವಾದ ಮುಖವನ್ನು ನೋಡಿ ಆನಂದಿಸಿ. ಈ ಫೇಸ್ ಪ್ಯಾಕ್ ಸೂಕ್ಷ್ಮ ಹಾಗೂ ಒಣ ಚರ್ಮದವರಿಗೂ ಹೆಚ್ಚು ಉಪಯುಕ್ತಕರ.



Click it and Unblock the Notifications














