Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸುಕೋಮಲ ತ್ವಚೆಗಾಗಿ ಮನೆಯಲ್ಲೇ ಮಾಡಿ, ಜೇನಿನ ಫೇಸ್ ಪ್ಯಾಕ್!
ಮುಖದ ಸೌಂದರ್ಯವೆಂಬುದು ಎಲ್ಲರಿಗೂ ವರವಾಗಿರುವುದಿಲ್ಲ ಆದರೆ ಕೆಲವೊಂದು ಫಲಪ್ರದ ಮನೆಮದ್ದುಗಳನ್ನು ಅನುಸರಿಸುವುದರ ಮೂಲಕ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಸುಂದರ ಸುಕೋಮಲ ತ್ವಚೆ ಎಂದರೆ ಮೊಡವೆ ಮತ್ತು ಕಲೆ ರಹಿತ ಮುಖಾರವಿಂದವಾಗಿದೆ. ಇಂತಹ ಮನೆಮದ್ದಿನ ಪಟ್ಟಿಯಲ್ಲಿರುವ ಸಾಮಾಗ್ರಿಯಾಗಿದೆ ಜೇನು. ನಿಮ್ಮ ತ್ವಚೆಯನ್ನು ಆರೋಗ್ಯಯುತ ಮತ್ತು ಮೃದುವಾಗಿಸುವ ಗುಣವನ್ನು ಹೊಂದಿದೆ.
ಉತ್ಕರ್ಷಣ ನಿರೋಧಿ ಅಂಶಗಳು, ಬ್ಯಾಕ್ಟೀರಿಯಾ ವಿರೋಧಿಯಾಗಿರುವ ಜೇನು ಆದಷ್ಟು ಉತ್ತಮವಾದ ರೀತಿಯಲ್ಲೇ ತ್ವಚೆಯನ್ನು ಮೃದುಗೊಳಿಸುತ್ತದೆ. ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವುದು ಜೇನು ಮತ್ತು ಇತರ ಸಾಮಾಗ್ರಿಯನ್ನು ಬಳಸಿಕೊಂಡು ತಯಾರಿಸಿರುವ ಫೇಸ್ ಪ್ಯಾಕ್ ಕುರಿತಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ಫೇಸ್‌ವಾಶ್‌ಗಳು ರಾಸಾಯನಿಕಯುಕತವಾಗಿರುವುದು ನಾವು ಸಾಕಷ್ಟು ಬಾರಿ ನಮ್ಮ ತಾಣದಲ್ಲಿ ತಿಳಿಸಿದ್ದೇವೆ. ಹಾಗಾಗಿ ಇವೆಲ್ಲದರ ಸಹವಾಸ ತೊರೆದು, ಮನೆಯಲ್ಲಿಯೇ ಜೇನು ಮತ್ತು ಇತರ ಸಾಮಾಗ್ರಿಗಳನ್ನು ಬೆರೆಸಿ ತಯಾರಿಸುವ ಫೇಸ್ ಪ್ಯಾಕ್ ಬಗ್ಗೆ ಈ ಲೇಖನದಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ...

ತೆಂಗಿನೆಣ್ಣೆ ಮತ್ತು ಕ್ಯಾಸ್ಟೈಲ್ ಸೋಪನ್ನು ಜೇನಿನ ಜೊತೆಗೆ ಬಳಸಿ ಈ ಫೇಸ್‌ಪ್ಯಾಕ್ ಅನ್ನು ತಯಾರಿಸಲಾಗುತ್ತಿದ್ದು, ಇವು ಮೂರರ ಅಂಶಗಳು ನಿಮ್ಮ ತ್ವಚೆಯನ್ನು ಸುಕೋಮಲ ಮತ್ತು ಹೊಳೆಯುವಂತೆ ಮಾಡುವಲ್ಲಿ ನೆರವಾಗಿದೆ. ತೆಂಗಿನೆಣ್ಣೆ ನೈಸರ್ಗಿಕ ಮಾಯಿಶ್ಚರೈಸರ್ ಎಂದೆನಿಸಿದ್ದು ತ್ವಚೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಕ್ಯಾಸ್ಟೈಲ್ ಸೋಪಿನಲ್ಲಿ ವೆಜಿಟೇಬಲ್ ಎಣ್ಣೆ ಇದ್ದು ಮೊಡವೆ, ಕಲೆಗಳು ಮತ್ತು ತ್ವಚೆಯ ಇತರ ಸಮಸ್ಯೆಗಳನ್ನು ನಿವಾರಿಸುವಲ್ಲಿ ನೆರವನ್ನು ನೀಡುತ್ತದೆ.
ಹಾಗಿದ್ದರೆ ಈ ಫೇಸ್‌ಪ್ಯಾಕ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಇದನ್ನು ನೀವು ಪ್ರಯತ್ನಿಸಿ ಹೊಳೆಯುವ ಸುಕೋಮಲ ತ್ವಚೆಯನ್ನು ತ್ವರಿತವಾಗಿ ಪಡೆದುಕೊಳ್ಳಬಹುದಾಗಿದೆ
ಬೇಕಾಗುವ ಸಾಮಾಗ್ರಿಗಳು
*3 ಚಮಚಗಳಷ್ಟು ಜೇನು
*1 ಚಮಚ ತೆಂಗಿನೆಣ್ಣೆ
*1 ಚಮಚ ದ್ರವರೂಪದ ಗಟ್ಟಿ ಸೋಪು
*5-10 ಹನಿಗಳಷ್ಟು ನಿಮ್ಮ ಇಷ್ಟದ ಎಣ್ಣೆ
ಬಳಸುವ ವಿಧಾನ
*ಬೌಲ್‌ನಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಬೆರೆಸಿ ಹ್ಯಾಂಡ್ ಬ್ಲೆಂಡರ್ ಉಪಯೋಗಿಸಿ ಇದನ್ನು ಮಿಶ್ರ ಮಾಡಿಕೊಳ್ಳಿ
*ಪೇಸ್ಟ್ ಮಾಡಿಕೊಳ್ಳಲು ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ
*ಈ ಪೇಸ್ಟ್ ಬಳಸಿ ನಿಮ್ಮ ಮುಖವನ್ನು ತೊಳೆದುಕೊಳ್ಳಿ, ಸಾಮಾನ್ಯ ಫೇಸ್ ಕ್ಲೀನರ್ ಬಳಸಿ ನೀವು ಮಾಡುವಂತೆಯೇ ಇದನ್ನು ಮಾಡಿ
*ಚೆನ್ನಾಗಿ ಮುಖವನ್ನು ತೊಳೆದುಕೊಳ್ಳಿ. ಅಂಟುವಿಕೆ ನಿವಾರಣೆಯಾಗಲಿ, ತದನಂತರ ಮೃದುವಾದ ನೈಸರ್ಗಿಕ ಮಾಯಿಶ್ಚರೈಸರ್ ಬಳಸಿ
ದಿನಕ್ಕೆರಡು ಬಾರಿ ಈ ನೈಸರ್ಗಿಕ ಫೇಸ್‌ವಾಶ್ ಅನ್ನು ಬಳಸಿ ನಿಮ್ಮ ಮುಖವನ್ನು ತೊಳೆದುಕೊಳ್ಳಬಹುದಾಗಿದೆ.



Click it and Unblock the Notifications


