Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಮುಖದ ಅಂದ ಕೆಡಿಸುವ ನೆರಿಗೆಗೆ, ಫಲಪ್ರದ ಮನೆಮದ್ದು
21 ನೇ ಶತಮಾನವು ಆಧುನಿಕ ಸೌಲಭ್ಯಗಳ ಕೊಡುಗೆಗಳನ್ನೆ ನಮ್ಮ ಮುಂದೆ ಇರಿಸಿದೆ. ಒಂದಕ್ಕಿಂತ ಒಂದು ನಮ್ಮ ಜೀವನವನ್ನು ಸುಲಭ ಮಾಡುತ್ತವೆ. ಆದರೂ ಈ ಸುಲಭ ಮಾಡುವ ಪ್ರಕ್ರಿಯೆಯಲ್ಲಿ ದೇಹಕ್ಕೆ ಜಡತ್ವವನ್ನು ನೀಡುವ ಕೆಲಸವನ್ನು ಇವು ಸದ್ದಿಲ್ಲದೆ ಮಾಡುತ್ತಿವೆ. ಜೊತೆಗೆ ನಮಗೆ ಗೊತ್ತಿಲ್ಲದಂತೆ ನಾವು ತಪ್ಪುಗಳನ್ನು ಮಾಡುತ್ತಿರುತ್ತವೆ. ಕಲುಷಿತವಾದ ನೀರನ್ನು ಸೇವಿಸುವುದು, ಅಧಿಕ ಎಣ್ಣೆ ಅಂಶವಿರುವ ಆಹಾರವನ್ನು ಸೇವಿಸುವುದು ಇತ್ಯಾದಿ ತಪ್ಪುಗಳನ್ನು ನಾವು ಮಾಡುತ್ತಿರುತ್ತೇವೆ.

ಇವು ತ್ವಚೆಯನ್ನು ಹಾಳು ಮಾಡುವುದರ ಜೊತೆಗೆ ನಿರ್ಜಲೀಕರಣವನ್ನು ಸಹ ಮಾಡುತ್ತವೆ. ಅಧಿಕ ಪ್ರಮಾಣದ ಎಣ್ಣೆ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ಮುಖದ ಮೇಲೆ ಮೊಡವೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ಒತ್ತಡ, ಪರಿಸರ ಮಾಲಿನ್ಯ, ಪೋಷಕಾಂಶರಹಿತ ಆಹಾರದ ಸೇವನೆ ಮತ್ತು ಧೂಮಪಾನ ಮಾಡುವುದು ಇವೆಲ್ಲವು ನಿಮ್ಮ ತ್ವಚೆಯನ್ನು 10 ವರ್ಷ ವಯಸ್ಸಾದಂತೆ ಕಾಣಿಸುತ್ತದೆ!
ಈ ಎಲ್ಲಾ ಅಂಶಗಳು ನಿಮ್ಮ ಮುಖದಲ್ಲಿ ಮೊಡವೆಗಳು, ಸುಕ್ಕುಗಳು ಮತ್ತು ಕಪ್ಪು ಕಲೆಗಳನ್ನು ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಅಲ್ಲಿಗೆ ಈ ಸಮಸ್ಯೆಗಳು ಹೋಗುವುದಿಲ್ಲ ಎಂದು ಚಿಂತಿಸಬೇಡಿ. ಮೊಡವೆ ಮತ್ತು ಸುಕ್ಕುಗಳನ್ನು ನಿವಾರಿಸಲು ಸ್ವಾಭಾವಿಕ ಮಾರ್ಗಗಳು ಲಭ್ಯವಿದೆ. ಈ ಮನೆ ಮದ್ದುಗಳನ್ನು ತಯಾರಿಸಲು ಕೇವಲ ಐದು ನಿಮಿಷಗಳು ಬೇಕಾಗುತ್ತವೆ. ಇದಕ್ಕೆ ಬೇಕಾದ ಎಲ್ಲಾ ಪದಾರ್ಥಗಳು ನಿಮ್ಮ ಮನೆಯ ಅಡುಗೆ ಮನೆಯಲ್ಲಿಯೇ ದೊರೆಯುತ್ತವೆ. ಈ ಪರಿಹಾರಗಳನ್ನು 10 ನಿಮಿಷದಲ್ಲಿ ನಿಮ್ಮ ಮುಖಕ್ಕೆ ಲೇಪಿಸಬಹುದು.
ಓಹ್, ಹಾಗಾದರೆ ಇವನ್ನು ತಯಾರಿಸಲು ಹಲವಾರು ಪದಾರ್ಥಗಳು ಬೇಕಾಗುತ್ತವೆ ಎಂದು ಭಾವಿಸಬೇಡಿ. ಇದಕ್ಕೆ ಬೇಕಾಗಿರುವುದು ಎರಡೇ ಪದಾರ್ಥ, ಆ ಎರಡು ಪದಾರ್ಥಗಳು ನಿಮ್ಮ ಎಲ್ಲಾ ತ್ವಚೆಯ ಸಮಸ್ಯೆಗಳನ್ನು ನಿವಾರಿಸಿಬಿಡುತ್ತವೆ. ಹಾಲಿನ ಪುಡಿ ಮತ್ತು ಜೇನು ತುಪ್ಪ - ಇವೆರಡೇ ಪದಾರ್ಥಗಳು ಸಾಕು ನಿಮ್ಮ ತ್ವಚೆಗೆ ಸೌಂದರ್ಯವನ್ನು ನೀಡಲು! ಬರೀ ಹತ್ತೇ ದಿನಗಳಲ್ಲಿ ಮುಖದ ಸುಕ್ಕು ಮಂಗಮಾಯ...
ಹಾಲಿನ ಪುಡಿಯನ್ನು ನಿಮ್ಮ ಫೇಸ್ ಮಾಸ್ಕ್ ಆಗಿ ಬಳಸಿದರೆ, ಅದು ತ್ವಚೆಗೆ ಮರು ತೇವಾಂಶವನ್ನು ನೀಡುತ್ತದೆ, ಜೊತೆಗೆ ಇದು ಉತ್ತಮ ಮಾಯಿಶ್ಚರೈಸರ್ ಆಗಿ ಸಹ ಕೆಲಸ ಮಾಡುತ್ತದೆ ಮತ್ತು ತ್ವಚೆಯನ್ನು ಮೃದುಗೊಳಿಸುತ್ತದೆ.ಲ್ಯಾಕ್ಟಿಕ್ ಆಮ್ಲವು ಹಾಲು ಮತ್ತು ಹಾಲಿನ ಪುಡಿ ಎರಡರಲ್ಲೂ ಅಸ್ತಿತ್ವದಲ್ಲಿರುತ್ತದೆ. ಇದು ನಿರ್ಜೀವ ಕೋಶಗಳನ್ನು ಸ್ವಚ್ಛಗೊಳಿಸುವ ಗುಣಗಳನ್ನು ಹೊಂದಿರುತ್ತದೆ. ಕ್ಯಾಲ್ಸಿಯಂ ಅಂಶ, ಜೊತೆಗೆ ಇತರೆ ಪೋಷಕಾಂಶಗಳಿಂದ ಕೂಡಿರುವ ಹಾಲಿನ ಪುಡಿಯು ತ್ವಚೆಯ ಕೋಶಗಳನ್ನು ಸದೃಢಗೊಳಿಸುತ್ತದೆ ಮತ್ತು ಅವುಗಳಿಗೆ ಪುನಃಶ್ಚೇತನ ನೀಡುತ್ತದೆ.
ಜೇನು ತುಪ್ಪವು ಪರಿಣಾಮಕಾರಿ ಆಂಟಿ ಆಕ್ಸಿಡೆಂಟ್. ಇದು ತ್ವಚೆಗೆ ಹೊಳಪನ್ನು ನೀಡುತ್ತದೆ. ಹಾಲಿನ ಪುಡಿಯ ಜೊತೆಗೆ ಜೇನು ತುಪ್ಪವನ್ನು ಸೇರಿಸಿ ಒಂದು ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸುವುದರಿಂದಾಗಿ ತ್ವಚೆಗೆ ಉತ್ತಮ ಕಾಂತಿಯನ್ನು ನೀಡಬಹುದು.
ಹಾಲಿನ ಪುಡಿ ಮತ್ತು ಜೇನು ತುಪ್ಪ ಎರಡನ್ನು ಸೇರಿಸಿ ಒಂದು ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ ಹದಿನೈದು ನಿಮಿಷ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ ಹಾಗು ಮೃದುವಾದ ಬಟ್ಟೆಯಿಂದ ಒರೆಸಿಕೊಳ್ಳಿ. ಇದಕ್ಕೆ ಬದಲಿಯಾಗಿ ಹಾಲಿನ ಕೋಟ್ ಅನ್ನು ನಿಮ್ಮ ಮುಖದ ಮೇಲೆ ಲೇಪಿಸಿಕೊಳ್ಳಬಹುದು. ಇದರಲ್ಲಿರುವ ಕೆನೆಯು 15 ನಿಮಿಷ ನಿಮ್ಮ ಮುಖದ ಮೇಲೆ ಒಣಗುವಂತೆ ಇರಿಸಿಕೊಂಡಲ್ಲಿ, ತ್ವಚೆಗೆ ಉತ್ತಮ ಮೊಯಿಶ್ಚರೈಸರ್ ಜೊತೆಗೆ ಹೊಳಪನ್ನು ಸಹ ನೀಡುತ್ತದೆ. ನಂಟರ ಇದನ್ನು ತೊಳೆಯಿರಿ.
ಈ ಹಾಲು ಒಣಗಲು ಬಿಡುವ ಸಂದರ್ಭದಲ್ಲಿ ಸೌತೆಕಾಯಿಯನ್ನು ನಿಮ್ಮ ಕಣ್ಣಿನ ಮೇಲೆ ಇರಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ. ನಿಮಗೆ ಜಿಡ್ಡಿನಂಶವಿರುವ ತ್ವಚೆಯಿದ್ದಲ್ಲಿ, ಚೆನ್ನಾಗಿ ರುಬ್ಬಿದ ಸೌತೆಕಾಯಿಯ ಜೊತೆಗೆ, ಎರಡು ಟೇಬಲ್ ಸ್ಪೂನ್ ಹಾಲು ಮತ್ತು ಒಂದು ಟೇಬಲ್ ಸ್ಪೂನ್ ಲಿಂಬೆರಸವನ್ನು ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ ಸಮಪ್ರಮಾಣದಲ್ಲಿ ಬೆರೆಸಿ ಲೇಪಿಸಿ. ಹದಿನೈದು ನಿಮಿಷ ಒಣಗಲು ಬಿಟ್ಟು, ನಂತರ ತಣ್ಣೀರಿನಿಂದ ತೊಳೆಯಿರಿ ಮತ್ತು ಒರೆಸಿ.
ಈ ಪರಿಹಾರವನ್ನು ಮಾಡಿದ ನಂತರ ಇದರ ಪರಿಣಾಮವನ್ನು ನೀವೇ ನೋಡಿ ಅಚ್ಚರಿಗೊಳ್ಳುವಿರಿ. ಆದ್ದರಿಂದ ಹಾಲನ್ನು ಕೇವಲ ಆಹಾರ ಪದಾರ್ಥವಾಗಿ ನೋಡದೆ ನಿಮ್ಮ ಸೌಂದರ್ಯ ವರ್ಧಕವಾಗಿ ಸಹ ನೋಡಿ. ಆಗ ಅದರ ಪ್ರಯೋಜನಗಳನ್ನು ನೀವು ನೋಡಬಹುದು. ಈ ಪರಿಹಾರವನ್ನು ನೀವು ಇಂದೇ ಬಳಸುವಿರಲ್ಲವೇ?



Click it and Unblock the Notifications




