Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಚುಮು ಚುಮು ಚಳಿಯಲ್ಲಿ ಚರ್ಮದ ಆರೈಕೆ ಹೀಗಿರಲಿ
ಚುಮು ಚುಮು ಚಳಿಗಾಲದಲ್ಲಿ ನಮ್ಮ ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ ಸಾಲದು. ಹೌದು! ಚಳಿಗಾಲ ಎಂದಾಕ್ಷಣ ಚರ್ಮವು ಬೂದು ಬಣ್ಣಕ್ಕೆ ತಿರುಗಿ ಒಡೆಯಲು ಪ್ರಾರಂಭಿಸುತ್ತದೆ. ತ್ವಚೆ, ತುಟಿಗಳು ಮತ್ತು ಚರ್ಮದ ಸ್ಥಳಗಳಲ್ಲಿ ಸುಲಿಯುವಿಕೆ ಪ್ರಾರಂಭವಾಗಿ ಉರಿಯನ್ನು ಉಂಟು ಮಾಡುತ್ತದೆ. ಇದರ ಬಗ್ಗೆ ಸಾಕಷ್ಟು ಜನರಿಗೆ ಅರಿವಿದೆ. ಆದರೆ ಅವರೆಲ್ಲರೂ ರಾಸಾಯನಿಕ ಪದ್ಧತಿಗಳತ್ತ ಮುಖಮಾಡುತ್ತಿದ್ದಾರೆ.
ತಮ್ಮ ಮನೆಯಲ್ಲಿಯೇ ಸುಲಭವಾಗಿ ಸಿಗುವ ನೈಸರ್ಗಿಕ ವಸ್ತುಗಳಿಂದ ಚರ್ಮ ಸುಲಿಯುವಿಕೆ ಮತ್ತು ಒಡೆಯುವುದನ್ನು ತಡೆಯಬಹುದೆಂಬ ಅರಿವು ಸಾಕಷ್ಟು ಜನರಿಗೆ ತಿಳಿದಿಲ್ಲ. ವಿಶೇಷವಾಗಿ ಚಳಿಗಾಲದಲ್ಲಿ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿವಹಿಸುವ ಅಗತ್ಯವಿದೆ. ಪ್ರಸ್ತುತ ಚಳಿಗಾಲವಿರುವುದರಿಂದ ಚರ್ಮವು ಒಡೆಯುವ ಲಕ್ಷಣಗಳು ಹೆಚ್ಚಿರುತ್ತದೆ. ಈ ಚಳಿಯಿಂದ ನಿಮ್ಮ ಕೈಗಳ ಸೂಕ್ಷ್ಮವಾದ ಚರ್ಮ, ಪಾದ ಮತ್ತು ಕೆನ್ನೆಗಳು ಪೇಲವವಾಗಿ ಹೆಚ್ಚು ಒಡೆಯುತ್ತವೆ. ಚರ್ಮವು ಒಣಗಲು ಪ್ರಾರಂಭಿಸಿ ಸುಕ್ಕು ಹೆಚ್ಚಾಗುತ್ತದೆ. ಇದು ಕೆಲವೊಂದು ಸಂದರ್ಭದಲ್ಲಿ ನೋವುಂಟು ಮಾಡುತ್ತದೆ. ಹಾಗಾಗಿ ನಿಮ್ಮ ಕೈಗಳ ತ್ವಚೆಯು ಸದಾಕಾಲ ಮೃದುವಾಗಿರುವಂತೆ ಮಾಡಲು ನೆರವಾಗುವ ವಿಶಿಷ್ಟ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ, ಮುಂದೆ ಓದಿ...

ತುಪ್ಪ
ಭಾರತೀಯರ ಎಲ್ಲ ಮನೆಗಳಲ್ಲೂ ತುಪ್ಪ ಇದ್ದೇ ಇರುತ್ತದೆ. ನಿಮ್ಮ ಕೈಗಳ ಚರ್ಮಕ್ಕೆ ಒಳಗಿನಿಂದ ತೇವಾಂಶ ನೀಡುವ ಗುಣ ಇದರಲ್ಲಿದೆ. ಅಪ್ಪಟ ತುಪ್ಪದಿಂದ ನಿಮ್ಮ ಬೆರಳುಗಳು ಮತ್ತು ಕೈಗಳ ಚರ್ಮಕ್ಕೆ ತಿಕ್ಕಿ.ಹಚ್ಚಿರುವ ತುಪ್ಪವು ಪೂರ್ಣವಾಗಿ ಹೀರುವವರೆಗೆ ಕೈಗಳಿಗೆ ಮತ್ತು ಕೆನ್ನೆಗೆ ನಯವಾಗಿ ತಿಕ್ಕಿ. ಇದನ್ನು ಪ್ರತಿ ರಾತ್ರಿ ಅನುಸರಿಸಿ, ಬೆಳಗ್ಗೆಯಾಗುವಷ್ಟರಲ್ಲಿ ಕೈಗಳು ಮೃದುಗೊಂಡಿರುತ್ತವೆ.

ತೆಂಗಿನ ಎಣ್ಣೆ
ತುಪ್ಪವು ನಿಮಗೆ ಅಪ್ರಿಯವಾಗಿದ್ದರೆ, ತೆಂಗಿನ ಎಣ್ಣೆಯನ್ನು ಬಳಸಬಹುದು. ಇದು ನಿಮ್ಮ ಚರ್ಮಕ್ಕೆ ತೇವಾಂಶ ನೀಡಿ, ಸದಾಕಾಲ ಮೃದು ಮತ್ತು ನಾಜೂಕಾಗಿರುವಂತೆ ನೋಡಿಕೊಳ್ಳುತ್ತದೆ. ನಿಮ್ಮ ಕೈಗಳಿಗೆ ತೆಂಗಿನ ಎಣ್ಣೆಯಿಂದ ಪ್ರತಿ ರಾತ್ರಿ ತಿಕ್ಕಿಗೊಳ್ಳಿ. ಇದು ನಿಮ್ಮ ಚರ್ಮ ಒಡೆದು ಸುಲಿಯುವುದನ್ನು ನಿಯಂತ್ರಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ಪೆಟ್ರೋಲಿಯಂ ಜೆಲ್ಲಿ
ಇದೊಂದು ರಕ್ಷಣಾತ್ಮಕ ವಿಧಾನ. ಇದನ್ನು ನಿಮ್ಮ ಕೈಗಳಿಗೆ ಮತ್ತು ಪಾದಗಳಿಗೆ ಮಲಗುವ ಮುನ್ನ ಹಚ್ಚಿಕೊಂಡು ಕೈಚೀಲ ಮತ್ತು ಕಾಲ್ಚೀಲ (ಸಾಕ್ಸ್)ವನ್ನು ಧರಿಸಿ ಮಲಗಿಕೊಳ್ಳಿ. ತೇವಾಂಶ ನೀಡುವಿಕೆಗೆ ಪೆಟ್ರೋಲಿಯಂ ಜೆಲ್ಲಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ದಿನ ಪೂರ್ತಿ ನಿಮ್ಮ ಚರ್ಮವು ಆರೋಗ್ಯವಾಗಿರುವಂತೆ ಕಾಪಾಡುತ್ತದೆ.

ಓಟ್ ಮೀಲ್ ನಿಂದ ಸ್ನಾನ
ವಿಶೇಷವಾಗಿ ಚಳಿಗಾಲದಲ್ಲಿ ಚರ್ಮವು ಸುಲಿಯುವುದರಿಂದ ತುರಿಕೆ ಉಂಟಾಗಿ ನವೆಯು ಹೆಚ್ಚಾಗುತ್ತದೆ. ಓಟ್ಸ್ ಅನ್ನು ಬಿಸಿ ನೀರಿನೊಂದಿಗೆ ಬೆರೆಸಿ ಹಾಲಿನ ರೂಪ ಬಂದ ಮೇಲೆ, ಇದರ 2 ಕಪ್ ಮಿಶ್ರಣವನ್ನು ನಿಮ್ಮ ಸ್ನಾನದ ನೀರಿಗೆ ಬೆರೆಸಿಕೊಳ್ಳಿ. ಈ ನೀರಿನಲ್ಲಿ ನಿಮ್ಮ ಕೈಗಳು ಮತ್ತು ಪಾದವನ್ನು ಕನಿಷ್ಠ 15 ನಿಮಿಷಗಳ ಕಾಲ ಅದ್ದಿ. ಈ ಅಭ್ಯಾಸವನ್ನು ಕ್ರಮವಾಗಿ ಅನುಸರಿಸಿದರೆ ಚರ್ಮದ ತುರಿಕೆ ವಾಸಿಯಾಗಿ ಚರ್ಮ ಸುಲಿಯುವಿಕೆ ನಿವಾರಣೆಯಾಗುತ್ತದೆ.

ನೀರನ್ನು ಹೆಚ್ಚು ಕುಡಿಯಿರಿ
ಸಾಮಾನ್ಯವಾಗಿ ಚಳಿಗಾಲದಲ್ಲಿ ಕಡಿಮೆ ನೀರನ್ನು ಸೇವಿಸುತ್ತೇವೆ. ಇದರಿಂದ ಚರ್ಮದ ಸುಲಿಯುವಿಕೆಯು ಹೆಚ್ಚಾಗಿ ಚರ್ಮವು ಒರಟಾಗುದಲ್ಲದೆ ಒಣಗಲು ಪ್ರಾರಂಭಿಸುತ್ತದೆ. ಕನಿಷ್ಠ ಏಳರಿಂದ ಎಂಟು ಲೋಟ ನೀರನ್ನು ದಿನಕ್ಕೆ ಸೇವಿಸಲು ಮರೆಯದಿರಿ. ಇದಕ್ಕೆ ಅವಶ್ಯಕವಿದ್ದಲ್ಲಿ ನೀರನ್ನು ಆಗಾಗ ಕುಡಿಯಲು ನಿಮ್ಮ ಮೊಬೈಲ್ ನಲ್ಲಿ ಪ್ರತಿ ಗಂಟೆಗೊಮ್ಮೆ ಜ್ಞಾಪಕದ ಧ್ವನಿ ಬರುವಂತೆ ಯೋಜಿಸಿಕೊಳ್ಳಿ.



Click it and Unblock the Notifications
