ನೈಸರ್ಗಿಕ ಸೌಂದರ್ಯ ಟಿಪ್ಸ್-ಕಡಿಮೆ ವೆಚ್ಚ, ಅಧಿಕ ಲಾಭ

By Deepak M

ಬೆಳ್ಳಗೆ ನೋಡಲು ಆಕರ್ಷಕವಾಗಿ ಕಾಣಿಸಿಕೊಳ್ಳಬೇಕೆಂಬ ಹಂಬಲ ಯಾರಿಗಿರುವುದಿಲ್ಲ. ನಮ್ಮ ಸೌಂದರ್ಯಕ್ಕೆ ಮೊದಲು ಬೇಕಾಗಿರುವುದು ಹೊಳೆಯುವ ತ್ವಚೆ, ಕಪ್ಪಗಿದ್ದರು ನೋಡಲು ಸುಂದರವಾಗಿ ಇರುತ್ತಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಅವರಲ್ಲಿ ಹೊಳೆಯುವ ತ್ವಚೆ ಇರುತ್ತದೆ ಎಂಬುದಾಗಿರುತ್ತದೆ. ತ್ವಚೆಗೆ ಬಣ್ಣ ಬರಲು ಮುಖ್ಯ ಕಾರಣ ಅದರಲ್ಲಿರುವ ಮೆಲನಿನ್ ಪಿಗ್‌ಮೆಂಟ್. ಯಾರೇ ಆಗಲಿ ಸ್ವಲ್ಪ ಪ್ರಯತ್ನವನ್ನು ಮಾಡುವ ಮೂಲಕ ತ್ವಚೆಗೆ ಸ್ವಲ್ಪ ಮಟ್ಟಿಗೆ ಮೆರಗನ್ನು ನೀಡುವ ಕೆಲಸವನ್ನು ಮಾಡಬಹುದು.

ಇದಕ್ಕಾಗಿ ನಾವು ಯಾವಾಗಲು ಕಾಸ್ಮೆಟಿಕ್‌ಗಳನ್ನು ಬಳಸುತ್ತೇವೆ. ಏಕೆಂದರೆ ಅವುಗಳು ನಾವು ಬೆಳ್ಳಗೆ ಆಗಲು ಬೇಕಾದ ಶೀಘ್ರ ಫಲಿತಾಂಶಗಳನ್ನು ನೀಡುತ್ತದೆ. ಆದರೆ ಈ ರಾಸಾಯನಿಕಯುಕ್ತ ಸೌಂದರ್ಯ ಉತ್ಪನ್ನಗಳನ್ನು ನೀವು ಬಳಸಿದರೆ, ಅತಿ ಕಡಿಮೆ ಅವಧಿಯಲ್ಲಿಯೇ ನಿಮ್ಮ ತ್ವಚೆ ಹಾಳಾಗುವುದರಲ್ಲಿ ಎರಡು ಮಾತಿಲ್ಲ.

ಅಂತಹದರಲ್ಲಿ ಈ ಸೌಂದರ್ಯ ಉತ್ಪನ್ನಗಳನ್ನು ತುಂಬಾ ಕಾಲ ಬಳಸಿದರೆ ಏನಾಗಬಹುದು ಎಂದು ನೀವೇ ಆಲೋಚಿಸಿ. ಯಾರಿಗೆ ಹೊಳೆಯುವ ತ್ವಚೆ ಬೇಕೋ ಅವರು ಇದಕ್ಕಾಗಿ ಸ್ವಾಭಾವಿಕ ಮಾರ್ಗಗಳನ್ನು ಹಾಯ್ದುಕೊಳ್ಳುವುದು ಒಳ್ಳೆಯದು. ಇವು ತ್ವಚೆಯನ್ನು ಬೆಳ್ಳಗೆ ಮಾಡುತ್ತವೆ ಮತ್ತು ಅದೇ ಸಮಯದಲ್ಲಿ ಆರೋಗ್ಯವನ್ನು ಸಹ ನೀಡುತ್ತವೆ. ಇವುಗಳು ಫಲಿತಾಂಶವನ್ನು ನೀಡಲು ಸಮಯವನ್ನು ತೆಗೆದುಕೊಳ್ಳುತ್ತವೆಯಾದರೂ, ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಬನ್ನಿ ಈ ಅಂಕಣದಲ್ಲಿ ಬೆಳ್ಳಗೆ ಆಗಲು ಇರುವ ಸ್ವಾಭಾವಿಕ ಮಾರ್ಗಗಳು, ಬಳಸಬೇಕಾದ ಉತ್ಪನ್ನಗಳ ಕುರಿತಾಗಿ ನಿಮಗೆ ತಿಳಿಸಿಕೊಡುತ್ತೇವೆ...

ಜೇನು ತುಪ್ಪ

ಜೇನು ತುಪ್ಪ

ಒಂದು ವೇಳೆ ನೀವು ಸ್ವಾಭಾವಿಕವಾಗಿ ನಿಮ್ಮ ತ್ವಚೆಯ ಬಣ್ಣವನ್ನು ಸುಧಾರಿಸಿಕೊಳ್ಳಬೇಕು ಎಂದುಕೊಂಡಲ್ಲಿ, ನೀವು ಜೇನು ತುಪ್ಪವನ್ನು ಪಟ್ಟಿಯಲ್ಲಿ ಇರಿಸಿಕೊಳ್ಳದೆ ಇರಲು ಸಾಧ್ಯವೇ ಇಲ್ಲ ಬಿಡಿ. ಜೇನು ತುಪ್ಪವು ಒಳ್ಳೆಯ ಸೌಂದರ್ಯದ ಉತ್ಪನ್ನವಾಗಿರುತ್ತದೆ. ಇದು ಮೊಡವೆಗಳನ್ನು ನಿವಾರಿಸುತ್ತದೆ ಮತ್ತು ಅವುಗಳ ಕಲೆಗಳನ್ನು ಸಹ ನಿವಾರಿಸುತ್ತದೆ. ಪ್ರತಿದಿನ ಜೇನು ತುಪ್ಪವನ್ನು ಬಳಸುವುದರಿಂದ ತ್ವಚೆಯ ಬಣ್ಣವನ್ನು ಸಹ ಸುಧಾರಿಸಿಕೊಳ್ಳಬಹುದು. ಇದಕ್ಕಾಗಿ ಮುಖದ ಮೇಲೆ ಜೇನುತುಪ್ಪವನ್ನು ಲೇಪಿಸಿಕೊಂಡು ಮೃದುವಾಗಿ ಮಸಾಜ್ ಮಾಡಿ. ನಂತರ ಸ್ವಲ್ಪ ಹೊತ್ತಿನ ನಂತರ ತಣ್ಣೀರಿನಿಂದ ತೊಳೆಯಿರಿ.

ಅಲೋವಿರಾ

ಅಲೋವಿರಾ

ಅಲೋವಿರಾವು ಸಹ ತ್ವಚೆಯ ಮತ್ತು ಕೂದಲಿನ ಸೌಂದರ್ಯವನ್ನು ವೃದ್ಧಿಸುವ ಜೊತೆಗೆ ಅವುಗಳಲ್ಲಿ ಕಂಡು ಬರುವ ಸಮಸ್ಯೆಗಳಿಗೆ ರಾಮಬಾಣದಂತೆ ವರ್ತಿಸುತ್ತದೆ. ಇದು ಕಪ್ಪು ಕಲೆಗಳನ್ನು, ಹೈಪರ್

ಪಿಗ್‌ಮೆಂಟೇಶನ್ ನಿವಾರಿಸುತ್ತದೆ ಮತ್ತು ಒಟ್ಟಾರೆಯಾಗಿ ಆರೋಗ್ಯಕರ ತ್ವಚೆಯನ್ನು ಹೊಂದಲು ಬೇಕಾದ ಅಂಶಗಳನ್ನು ಇದು ಒದಗಿಸುತ್ತದೆ. ಇದಕ್ಕಾಗಿ ಮುಖದ ಮೇಲೆ ಅಲೋವಿರಾ ಜೆಲ್ ಅನ್ನು ಲೇಪಿಸಿ ಮಸಾಜ್ ಮಾಡಿ, ಸ್ವಲ್ಪ ಹೊತ್ತಿನ ನಂತರ ತೊಳೆಯಿರಿ. ಈ ವಿಧಾನವನ್ನು ಒಂದು ತಿಂಗಳ ಕಾಲ ಮಾಡಿರಿ, ಆಗ ಅದರ ಫಲಿತಾಂಶವನ್ನು ನೀವೇ ನೋಡಬಹುದು.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಪರಂಗಿ ಹಣ್ಣು ಒಂದು ಅದ್ಭುತವಾದ ಹಣ್ಣಾಗಿದ್ದು, ಇದು ತ್ವಚೆಗೆ ಬೇಕಾದ ಉತ್ತಮ ಅಂಶಗಳನ್ನು ಒದಗಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಕಪ್ಪು ಕಲೆಗಳನ್ನು ನಿವಾರಿಸುತ್ತದೆ ಮತ್ತು ಮೊಡವೆಗಳನ್ನು ಸಹ ಇಲ್ಲವಾಗಿಸುತ್ತದೆ. ಇದಕ್ಕಾಗಿ ನಿಮ್ಮ ಮುಖಕ್ಕೆ ಪರಂಗಿಹಣ್ಣನ್ನು ನಿಮ್ಮ ಮುಖಕ್ಕೆ ಜೆಲ್ ರೀತಿ ಮಾಡಿಕೊಂಡು ಲೇಪಿಸಿ, ಸ್ವಲ್ಪ ಸಮಯ ಬಿಟ್ಟು ತೊಳೆದುಕೊಳ್ಳಿ.

ಅರಿಶಿನ

ಅರಿಶಿನ

ಅರಿಶಿನದಲ್ಲಿರುವ ಆರೋಗ್ಯಕಾರಿ ಆಂಟಿಆಕ್ಸಿಡೆಂಟ್‌ಗಳು, ತ್ವಚೆಯನ್ನು ಸುಧಾರಿಸುವ ಮತ್ತು ಆರೋಗ್ಯವನ್ನು ವೃದ್ಧಿಸುವ ಅಂಶಗಳನ್ನು ಹೊಂದಿರುತ್ತವೆ. ಇದನ್ನು ಹಾಲಿನ ಕೆನೆಯ ಜೊತೆಗೆ ಬಳಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಇದಕ್ಕಾಗಿ ಹಾಲಿನ ಕೆನೆಯಲ್ಲಿ ಅರಿಶಿನವನ್ನು ಹಾಕಿ ಮುಖಕ್ಕೆ ಲೇಪಿಸಿ. ನಂತರ ಸ್ವಲ್ಪ ಸಮಯ ಇದನ್ನು ಬಿಟ್ಟು, ನಂತರ ತೊಳೆದುಕೊಳ್ಳಿ.

ಮೊಸರು

ಮೊಸರು

ಮೊಸರಿನಲ್ಲಿ ರುವ ಲ್ಯಾಕ್ಟಿಕ್ ಆಮ್ಲವು ಒಳ್ಳೆಯ ತ್ವಚೆ-ಬ್ಲೀಚಿಂಗ್ ಅಂಶಗಳನ್ನು ತನ್ನಲ್ಲಿ ಹೊಂದಿರುತ್ತದೆ. ಸ್ವಲ್ಪ ಮೊಸರು ಅನ್ನು ನಿಮ್ಮ ತ್ವಚೆಯ ಮೇಲೆ ಲೇಪಿಸುವುದರಿಂದ, ಒಳ್ಳೆಯ ಫಲಿತಾಂಶವನ್ನು ನಿಮ್ಮದಾಗಿಸಿಕೊಳ್ಳಬಹುದು. ಯೋಗರ್ಟ್ ತ್ವಚೆಗೆ ಮೊಯಿಶ್ಚರೈಸ್ ಒದಗಿಸುತ್ತದೆ. ಆಗ ತ್ವಚೆಯು ಹೊಳೆಯುತ್ತದೆ.

English summary

Herbal Ways To Get Bright Skin

The melanin pigment plays an important role in giving the skin its colour. But, we can make an attempt to slightly improve our skin shade to one shade higher. One can attain bright skin by using certain homemade packs on a daily basis. We often turn to cosmetics to make our skin appear lighter and brighter. In this article, we have listed out some of the natural ways to get a brighter skin tone. Take a look
X
Desktop Bottom Promotion