Latest Updates
-
ಬಿಸಿಲ ಬೇಗೆಯಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಸಣ್ಣ ಬದಲಾವಣೆಗಳನ್ನು ಮಿಸ್ ಮಾಡ್ಬೇಡಿ! -
ಬಾಡಿಗೆ ಮನೆಯಲ್ಲಿ ಬಿಸಿಲಿನ ಬೇಗೆಯಿಂದ ಪಾರಾಗುವುದು ಹೇಗೆ? ಕರೆಂಟ್ ಬಿಲ್ ಉಳಿಸುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ! -
ಬಿಸಿಲ ಬೇಗೆಯಲ್ಲಿ ಮಧುಮೇಹಿಗಳ ಪರದಾಟ: ಸಕ್ಕರೆ ಮಟ್ಟ ಏರಿಕೆಯಾಗದಂತೆ ತಂಪಾಗಿರಲು ಈ ಪಾನೀಯಗಳೇ ಮದ್ದು! -
ಇಂದೇ ಮ್ಯೂಸಿಯಂಗೆ ಹೋಗಿ: ಉಚಿತ ಪ್ರವೇಶದ ಜೊತೆಗೆ ಫೋಟೋಶೂಟ್ಗೆ ಸಿಗಲಿದೆ ಸುವರ್ಣಾವಕಾಶ, ಮಿಸ್ ಮಾಡ್ಬೇಡಿ! -
ಶಾಖದ ಅಲೆ ಎಚ್ಚರಿಕೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲಿದೆ ಸುರಕ್ಷಿತ ಮಾರ್ಗ! -
ಬಿಸಿಲಿನ ಬೇಗೆಯಲ್ಲೂ ಮದುವೆ ಸಂಭ್ರಮ ಮರೆಯಾಗದಿರಲಿ: ಅತಿಥಿಗಳಿಗಾಗಿ ಈ ಸಣ್ಣ ಬದಲಾವಣೆಗಳನ್ನು ಮಾಡಿ ನೋಡಿ! -
ಉರಿಬಿಸಿಲಿಗೆ ಮನೆ ಕುದಿಯುತ್ತಿದೆಯೇ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಸುವ ಸರಳ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
44°C ಬಿಸಿಲಿನಲ್ಲಿ ಸುಸ್ತಾಗುತ್ತಿದ್ದೀರಾ? ದೇಹವನ್ನು ತಂಪಾಗಿಡಲು ಈ 3 ಪದಾರ್ಥಗಳು ನಿಮ್ಮ ಅಡುಗೆಮನೆಯಲ್ಲೇ ಇವೆ! -
ಇನ್ಸ್ಟಾಗ್ರಾಮ್ನಲ್ಲಿ 90ರ ದಶಕದ ಹಾಡುಗಳದ್ದೇ ಹವಾ: ನಿಮ್ಮ ರೀಲ್ಸ್ ವೈರಲ್ ಮಾಡಲು ಈ ಸೀಕ್ರೆಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ಟಿಪ್ಸ್ ಫಾಲೋ ಮಾಡಿ!
ಕುಂಬಳಕಾಯಿ ಫೇಸ್ ಮಾಸ್ಕ್- ಸೌಂದರ್ಯದ ಕೀಲಿಕೈ
ಮುಖಕ್ಕೆ ಮಾಸ್ಕ್‌ನ ವಿಷಯ ಬಂದಾಗ ಉತ್ತಮವಾದ ಫಲಿತಾಂಶ ಬರಲು ಎಲ್ಲರೂ ಅತ್ಯಂತ ಉತ್ತಮವಾದುದನ್ನು ಬಳಸಲು ಇಚ್ಚಿಸುತ್ತಾರೆ. ಕೆಲವು ಜಾಹೀರಾತುಗಳು ತಮ್ಮ ವಿಧ ವಿಧವಾದ ಹೇಳಿಕೆಗಳಿಂದ ಜನರನ್ನು ಮೂರ್ಖರನ್ನಾಗಿಸುತ್ತವೆ.
ಜಾಹೀರಾತುಗಳಲ್ಲಿ ಬರುವ ಎಲ್ಲಾ ಮಾಸ್ಕ್‌ಗಳನ್ನು ಉಪಯೋಗಿಸಿ ನಿಜವಾದ ಫಲಿತಾಂಶ ಬರದೆ ನಿರಾಶರಾಗುವವರ ಸಂಖ್ಯೆಗೂ ಬರವಿಲ್ಲ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮನೆಯಲ್ಲಿ ನೈಸರ್ಗಿಕವಾಗಿ ಫೇಸ್ ಮಾಸ್ಕ್ ಮಾಡಿದರೆ ಇದರಿಂದ ಉತ್ತಮವಾದ ತ್ವಚೆ ಪಡೆಯುವುದರ ಬಗ್ಗೆ ಸಂಶಯವೇ ಬೇಡ.

ಅರಿಶಿನ, ಜೇನು ಅಥವಾ ಲಿಂಬೆ ಹೀಗೆ ಮಾರುಕಟ್ಟೆಯಲ್ಲಿ ಹೀಗೆ ಹಲವು ವಿಧವಾದ ಫೇಸ್ ಪ್ಯಾಕ್‌ಗಳು ಲಭ್ಯವಿದೆ. ಇಂತಹ ಫೇಸ್ ಪ್ಯಾಕ್‌ಗಳು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಕುಂಬಳಕಾಯಿಯ ಫೇಸ್ ಪ್ಯಾಕ್ ಎನ್ನುವುದರ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ತಿಳಿಸುತ್ತಿದೆ. ಇದರ ಬಳಕೆಯಿಂದ ಹೊಳೆ ಹೊಳೆಯುವ ತ್ವಚೆ ಪಡೆಯುವಲ್ಲಿ ಸಂಶಯವೇ ಇಲ್ಲ. ಕುಂಬಳಕಾಯಿ ಫೇಸ್ ಪ್ಯಾಕ್, ತಾರುಣ್ಯಕ್ಕೆ ಹೊಸ ಲುಕ್
ಈ ವಿಧಾನವನ್ನು ದಿನ ಬಳಕೆಯ ಫೇಸ್ ಪ್ಯಾಕ್ ನಲ್ಲಿ ಬಳಸುವುದು ಉತ್ತಮ. ಉತ್ತಮವಾದ ಕುಂಬಳಕಾಯಿ ಫೇಸ್ ಪ್ಯಾಕ್ ನ ಲಾಭಗಳ ಬಗ್ಗೆ ತಿಳಿದುಕೊಂಡು ಇಂದಿನಿಂದಲೇ ಅದನ್ನು ಪ್ರಯತ್ನಿಸಬಹುದು.
ಎಲ್ಲಾ ತರಹದ ತ್ವಚೆಗಾಗಿ ಕುಂಬಳಕಾಯಿಯ ಫೇಸ್ ಪ್ಯಾಕ್
ಅರ್ಧ ಲೋಟ ಕುಂಬಳಕಾಯಿಯ ಪೇಸ್ಟ್‌ಗೆ ಅರ್ಧ ಟೀ ಚಮಚ ಜೇನು ಮತ್ತು ಹಾಲನ್ನು ಸೇರಿಸಬೇಕು. ಇದಕ್ಕೆ ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಈ ಮಾಸ್ಕನ್ನು ಮುಖದ ಮೇಲೆ ಹಚ್ಚಿ 15 ನಿಮಿಷಗಳ ಕಾಲ ಹಾಗೇ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು.
ಒಣ ತ್ವಚೆಗಾಗಿ ಕುಂಬಳಕಾಯಿಯ ಮಾಸ್ಕ್
ಕುಂಬಳಕಾಯಿಯ ರಸ (ಪ್ಯೂರಿ) ಮತ್ತು ಮಲೈ (ಒಂದು ಬಗೆಯ ದಪ್ಪವಾದ ಹಾಲಿನ ಪದಾರ್ಥ) ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದಕ್ಕೆ ಎರಡು ಟೀ ಚಮಚ ಸಕ್ಕರೆಯನ್ನು ಕೂಡ ಸೇರಿಸಿಕೊಳ್ಳಬೇಕು. ಚೆನ್ನಾಗಿ ಮಿಶ್ರಣ ಮಾಡಿದ ನಂತರ ಇದನ್ನು ಮುಖಕ್ಕೆ ಹಚ್ಚಬೇಕು. ಇದರಿಂದ ತ್ವಚೆಗೆ ಒಂದು ತರಹದ ಹಿತವಾದ ಪರಿಣಾಮ ಉಂಟಾಗುತ್ತದೆ ಮಾತ್ರವಲ್ಲದೆ ತ್ವಚೆಯಲ್ಲಿನ ತೇವಾಂಶವನ್ನು ಕಾಪಾಡುತ್ತದೆ.
ಜಿಡ್ಡಿನ ತ್ವಚೆಗಾಗಿ ಕುಂಬಳಕಾಯಿಯ ಫೇಸ್ ಪ್ಯಾಕ್
ಕುಂಬಳಕಾಯಿಯ ರಸ (ಪ್ಯುರಿ) ಒಂದು ಟೇಬಲ್ ಚಮಚ ಇದಕ್ಕೆ ಒಂದು ಟೀ ಚಮಚ ಸೇಬಿನ ಹಣ್ಣಿನ ಪರಿಮಳವಿರುವ ವಿನೇಗರ್ ಅಥವಾ ನಿಂಬೆ ಹಣ್ಣಿನ ರಸ. ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ನಂತರ ಇದನ್ನು ಮುಖದ ಮೇಲೆ ಹಚ್ಚಬೇಕು. ನಿಂಬೆ ರಸವು ಟೋನರ್ ನಂತೆ ಕಾರ್ಯ ನಿರ್ವಹಿಸುತ್ತದೆ ಇದು ಚರ್ಮದ ಪರಿಚಲನ ಕ್ರಿಯೆಗಳನ್ನು ಉತ್ತೇಜಿಸುತ್ತದೆ ಮತ್ತು ಚರ್ಮದ ಪಿಎಚ್ ಮಟ್ಟವನ್ನು ಹೆಚ್ಚಿಸುತ್ತದೆ.
ಮೊಡವೆಯ ನಿಯಂತ್ರಣಕ್ಕೆ ಕುಂಬಳಕಾಯಿಯ ಫೇಸ್ ಪ್ಯಾಕ್
ಒಂದು ಟೀ ಚಮಚ ಕುಂಬಳಕಾಯಿಯ ಪ್ಯೂರಿಗೆ ಒಂದು ಟೀ ಚಮಚ ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಇದನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಬೇಕು. ನಂತರ 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದರ ಪ್ರಯೋಗದಿಂದ ಗಣನೀಯ ಬದಲಾವಣೆಯನ್ನು ಗಮನಿಸಬಹುದಾಗಿದೆ.



Click it and Unblock the Notifications


