Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮದುವೆಯ ಸಿಂಗಾರಕ್ಕೆ ಈ ಪೇಸ್ಟ್ ನಿಜಕ್ಕೂ ಬಂಗಾರ..
ಮದುವೆ ಎಂದಾಕ್ಷಣ ವಿಶೇಷವಾಗಿ ವಧುವಿಗೆ ಎಲ್ಲಿಲ್ಲದ ಸಂಭ್ರಮ. ಇನ್ನು ಆಕೆಯ ಸೌಂದರ್ಯದ ವಿಷಯದಲ್ಲಂತೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಒಂದು ಸಂಭ್ರಮದ ಅಭ್ಯಾಸವೇ ಸರಿ. ಅದರಲ್ಲಿಯೂ ಆಕೆಯ ಸೌಂದರ್ಯಕ್ಕೆ ಕಿಂಚಿತ್ತು ಧಕ್ಕೆಯಾದರೂ ಆಕೆ ಆತಂಕಗೊಂಡು ಮನನೊಂದುಕೊಳ್ಳುವುದು ಸಹಜವಾಗಿ ಬಿಟ್ಟಿದೆ, ಈ ನಿಟ್ಟಿನಲ್ಲಿ ಮದುವೆ ಸಮೀಪಿಸುತ್ತಿದ್ದಂತೆ ಸೌಂದರ್ಯದ ಕಡೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.
ನಿಮ್ಮ ಮದುವೆಯು ಸಮೀಪದಲ್ಲಿದ್ದು, ಅರಿಶಿನ ಹಚ್ಚುವ ಕಾರ್ಯಕ್ರಮದಿಂದ ನಿಮ್ಮ ಮುಖವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಮೊಡವೆ ಉಂಟು ಮಾಡುತ್ತದೆಂದು ಚಿಂತಿಸುತ್ತಿದ್ದೀರಾ? ಈ ಸಮಸ್ಯೆಗೆ ಇಲ್ಲಿದೆ ರಾಮಬಾಣ. ಹೌದು! ಕೆಲವು ಹುಡುಗಿಯರಿಗೆ ಮದುವೆಯಲ್ಲಿ ಅರಿಶಿನ ಹಚ್ಚುವ ಕಾರ್ಯದಿಂದ ಮೊಡವೆಗಳಾಗುತ್ತವೆಂಬ ಆತಂಕ ಇರುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಇದರಿಂದ ವಧುಗಳು ಇದರಿಂದ ಹೆಚ್ಚು ಆತಂಕಗೊಂಡು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಯನ್ನು ಸುಲಭವಾಗಿ ಬಗಹರಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ ಮುಂದೆ ಓದಿ... ವಧುವಿನ ಕೂದಲ ಆರೈಕೆಗೆ ಕೆಲ ಟಿಪ್ಸ್

ವಿಧಾನ
*ಒಂದು ಚಮಚ ಅರಿಶಿನಕ್ಕೆ ಎರಡು ಚಮಚ ಹೆಸರುಕಾಳಿನ ಪುಡಿಯನ್ನು ಬೆರೆಸಿ.
*ಈಗ ಇದಕ್ಕೆ 10 ತುಳಸಿ ಎಲೆ ಮತ್ತು ಪುದೀನ ಎಲೆಗಳು ಮತ್ತು ಅರ್ಧ ಹೆಚ್ಚಿದ ಸೌತೆಕಾಯಿಯನ್ನು ಸೇರಿಸಿ.
*ಈ ಮಿಶ್ರಣವನ್ನು ಪೇಸ್ಟ್ ರೂಪದಲ್ಲಿ ಆಗುವವರೆಗೆ ಚೆನ್ನಾಗಿ ರುಬ್ಬಿಕೊಳ್ಳಿ.
*ತದನಂತರ ಮುಖಕ್ಕೆ ಮತ್ತು ಕತ್ತಿನ ಭಾಗಕ್ಕೆ ಸಮಪ್ರಮಾಣದಲ್ಲಿ ಹಚ್ಚಿಕೊಳ್ಳಿ
*ಇನ್ನು ಸರಿಸುಮಾರು 5 ರಿಂದ 10 ನಿಮಿಷದ ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ
ನಿಮಗೆ ಬೇಕಾದಲ್ಲಿ, ಅರಿಶಿನ ಹಚ್ಚುವ ಬದಲು ಈ ಪೇಸ್ಟನ್ನೇ ಮದುವೆಯ ಸಂದರ್ಭದಲ್ಲಿ ಬಳಸಬಹುದು. ಹಾಗಿದ್ದಲ್ಲಿ, ನಿಮಗೆ ಅವಶ್ಯಕತೆಗೆ ಅನುಗುಣವಾಗಿ ಮುಖಕ್ಕೆ, ಕೈಗಳಿಗೆ ಮತ್ತು ಕಾಲುಗಳಿಗೆ ಬೇಕಾಗುವಷ್ಟು ಪೇಸ್ಟನ್ನು ತಯಾರಿಸಿಕೊಳ್ಳಬೇಕಾಗುತ್ತದೆ. ಈ ಪೇಸ್ಟ್ ನಿಜಕ್ಕೂ ಮೊಡವೆ ಬರದಂತೆ ತಡೆಗಟ್ಟಿ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುವುದಲ್ಲದೆ ಅರಿಶಿನದ ಬಣ್ಣ ಬರದಂತೆ ನೋಡಿಕೊಳ್ಳುತ್ತದೆ. ಈ ಪೇಸ್ಟ್ ನಿಂದ ನೈಜ ಸೌಂದರ್ಯವನ್ನು ಹೆಚ್ಚಿಸಿ ಆನಂದದಿಂದ ಸಂಭ್ರಮಿಸಿ.



Click it and Unblock the Notifications

